newsics.com
ಬೆಂಗಳೂರು: ಖಾಸಗಿ ಕಾಲೇಜಿನ ಮಹಿಳೆಯರ ಟಾಯ್ಲೆಟ್ ರೂಮ್‌ನಲ್ಲಿ ಮೊಬೈಲ್ ಇಟ್ಟು ವಿಡಿಯೋ ಚಿತ್ರೀಕರಣ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿದ್ಯಾರ್ಥಿಯೊಬ್ಬನನ್ನು ಬಂಧಿಸಲಾಗಿದೆ.
ಕಾಲೇಜಿನ ಲೇಡೀಸ್ ಟಾಯ್ಲೆಟ್ ರೂಮ್‌ನಲ್ಲಿ ಅದೇ ಕಾಲೇಜಿನ ವಿದ್ಯಾರ್ಥಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ. ಈ ವೇಳೆ ವಿದ್ಯಾರ್ಥಿನಿಯೊಬ್ಬಳು ಇದನ್ನು ಗಮನಿಸಿದ್ದಾಳೆ.
ಟಾಯ್ಲೆಟ್ ಒಳಗಡೆ ಕ್ಯಾಮೆರಾ ಇರುವುದನ್ನು ನೋಡಿ ವಿದ್ಯಾರ್ಥಿನಿ ಗಾಬರಿಯಿಂದ ಹೊರಗೆ ಓಡಿ ಬಂದಿದ್ದಾಳೆ. ಈ ವೇಳೆ ಕ್ಯಾಮೆರಾ ಇಟ್ಟ ಕುಶಾಲ್ ಎಂಬ ವಿದ್ಯಾರ್ಥಿಯನ್ನು ಇತರ ವಿದ್ಯಾರ್ಥಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಮೈಸೂರು ರಸ್ತೆಯಲ್ಲಿರುವ ಖಾಸಗಿ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆದಿದೆ.
ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಕುಂಬಳಗೂಡು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದ್ದಾರೆ.
ಕುಶಾಲ್ ಸಿಸಿಟಿವಿ ಮಾದರಿಯ ಕ್ಯಾಮರಾ ಇಟ್ಟಿದ್ದ ಎಂದು ಹೇಳಲಾಗುತ್ತಿದೆ. ಅದೇ ಕಾಲೇಜಿನ (ACS) ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಕುಶಾಲ್ ಓದುತ್ತಿದ್ದು, ಆತನಿಂದಲೇ ಈ ಕೃತ್ಯ ನಡೆದಿದೆ ಎಂದು ಆರೋಪ ಮಾಡಿದ ಬಳಿಕ, ಕ್ಯಾಮೆರಾ ಇಟ್ಟಿದ್ದ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಯ ಬಳಿ ವಿದ್ಯಾರ್ಥಿನಿಯರ ಒಟ್ಟು 8 ಸಾವಿರ ವಿಡಿಯೋ ಕ್ಲಿಪ್‌ಗಳಿವೆ ಎಂದು ಹೇಳಲಾಗುತ್ತಿದೆ. ಕೆಲ ತಿಂಗಳಿಂದ ವೀಡಿಯೋ ರೆಕಾರ್ಡ್ ಮಾಡಲಾಗುತ್ತಿತ್ತು ಎನ್ನಲಾಗಿದೆ.
ಈ ಘಟನೆಯಿಂದ ವಿದ್ಯಾರ್ಥಿನಿಯರು ಆತಂಕದಲ್ಲಿದ್ದಾರೆ. ಘಟನೆಯ ಬಗ್ಗೆ ಪೋಷಕರಿಗೂ ವಿದ್ಯಾರ್ಥಿನಿಯರು ಮಾಹಿತಿ ನೀಡಿದ್ದಾರೆ.
ಮಹಿಳೆ ಬಗ್ಗೆ ಲಘುವಾಗಿ ಮಾತಾಡಿದ ಹೈಕೋರ್ಟ್ ಜಡ್ಜ್‌ಗೆ ಸುಪ್ರೀಂ ತರಾಟೆ, ವರದಿಗೆ ಸೂಚನೆ
ಮಾವ ನನ್ನನ್ನು ಅಸಭ್ಯವಾಗಿ ಮುಟ್ಟಿದ! ಸೊಸೆಯ ದೂರಿನ ಮೇರೆಗೆ ಪ್ರಧಾನ ಅರ್ಚಕ ಅಮಾನತು