newsics.com
ಚಿತ್ರದುರ್ಗ: ಅಳಿಯನೇ ತನ್ನ ಅತ್ತೆ, ಮಾವನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ತಾಲ್ಲೂಕಿನ ಬೊಮ್ಮಕ್ಕನಹಳ್ಳಿಯಲ್ಲಿ ನಡದಿದೆ.
ಹನುಮಂತಪ್ಪ ಹಾಗೂ ಆತನ ಪತ್ನಿ ತಿಪ್ಪಮ್ಮ ಕೊಲೆಯಾದವರು. ಅವರದೇ ಜಮೀನಿನಲ್ಲಿ ಹತ್ಯೆ ಮಾಡಲಾಗಿದೆ. ಹನುಮಂತಪ್ಪ ಹಾಗೂ ಪತ್ನಿ ತಿಪ್ಪಮ್ಮ ಗುರುವಾರ ರಾತ್ರಿ ಜಮೀನಿಗೆ ತೆರಳಿದ್ದರು. ಜಮೀನಿನಲ್ಲಿನ ಈರುಳ್ಳಿ ಬೆಳೆಗೆ ನೀರು ಹಾಯಿಸಲು ಹೋಗಿದ್ದಾಗ ಹತ್ಯೆ ಮಾಡಲಾಗಿದೆ. ಅಳಿಯ ಮಂಜುನಾಥ ಜೋಡಿ ಕೊಲೆ ಆರೋಪಿ.
ಒಂದು ವರ್ಷದ ಹಿಂದೆ ಪುತ್ರಿ ಹರ್ಷಿತಾಳನ್ನು ಅದೇ ಗ್ರಾಮದ ತಮ್ಮ ಸಂಬಂಧಿ ಮಂಜುನಾಥ್ ಎಂಬಾತನಿಗೆ ಕೊಟ್ಟು ವಿವಾಹ ಮಾಡಿದ್ದರು. ಪಿಯುಸಿ ವ್ಯಾಸಂಗ ಮಾಡಿದ್ದ ಹರ್ಷಿತಾ ಓದಿನ ಕಡೆಗೆ ಹೆಚ್ಚಿನ ಆಸಕ್ತಿ ಹೊಂದಿದ್ದರು. ಹಾಗಾಗಿ ಹೊಲ ಮನೆ ಕೆಲಸದ ಬಗ್ಗೆ ಗಮನ ನೀಡುತ್ತಿರಲಿಲ್ಲ ಎಂದು ಪತಿ ಮಂಜುನಾಥ್ ಆಗಾಗ ಜಗಳ ಮಾಡುತ್ತಿದ್ದ.
ಇದೇ ವಿಚಾರವಾಗಿ ಮಂಜುನಾಥ್ ತನ್ನ ಪತ್ನಿ ಹರ್ಷಿತಾಗೆ ಪದೇ ಪದೇ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಬೇಸತ್ತ ದಂಪತಿ ತಮ್ಮ ಪುತ್ರಿ ಹರ್ಷಿತಾಳನ್ನು ತವರುಮನೆಗೆ ಕರೆತಂದಿದ್ದರು. ಇದರಿಂದ ಸಿಟ್ಟಿಗೆದ್ದ ಮಂಜುನಾಥ್ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಖಾಸಗಿ ಕಾಲೇಜು ಲೇಡೀಸ್ ಟಾಯ್ಲೆಟ್‌ನಲ್ಲಿ ವಿಡಿಯೋ ಚಿತ್ರೀಕರಣ: 8 ಸಾವಿರ ಕ್ಲಿಪಿಂಗ್ಸ್ ಹೊಂದಿದ್ದವನ ಬಂಧನ
ಮಹಿಳೆ ಬಗ್ಗೆ ಲಘುವಾಗಿ ಮಾತಾಡಿದ ಹೈಕೋರ್ಟ್ ಜಡ್ಜ್‌ಗೆ ಸುಪ್ರೀಂ ತರಾಟೆ, ವರದಿಗೆ ಸೂಚನೆ