newsics.com
ಚೀನಾ : ಚೀನಾದ ಜಗದೇಕ ಗವರ್ನರ್ ಚಾಂಗ್ ಯಾಂಗ್ಗೆ 13 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1 ಕೋಟಿ ರೂಪಾಯಿಗೂ ಅಧಿಕ ದಂಡ ವಿಧಿಸಲಾಗಿದೆ.
ಜಗತ್ತಿನಲ್ಲಿಯೇ ‘ಬ್ಯೂಟಿಫುಲ್ ಗವರ್ನರ್ ಎಂಬ ಖ್ಯಾತಿಯನ್ನೆ ಪಡೆದಿದ್ದರು.ಈ ನೈರುತ್ಯ ಚೀನಾದ ರಾಜ್ಯಪಾಲೆಯಾಗಿ ಮತ್ತು ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಚಾಂಗ್ ಯಾಂಗ್ ಈಗ ಕಂಬಿ ಹಿಂದೆ ಹೋಗಿದ್ದಾರೆ.
1 ಲಕ್ಷ 70 ಸಾವಿರ ಸ್ಕೇರ್ ಮೀಟರ್ ಜಾಗವನ್ನು ತಮಗೆ ಅತ್ಯಂತ ಆತ್ಮೀಯರಾಗಿದ್ದ ಉದ್ಯಮಿಯೊಬ್ಬರಿಗೆ ನೀಡಲು ಒಪ್ಪಿಗೆ ನೀಡಿದ್ದು ಹಾಗೂ ಆ ಡೀಲಿಂಗ್ನಲ್ಲಿ ಚಾಂಗ್ ಲಂಚ ಪಡೆದಿದ್ದರು ಅನ್ನೋ ಆರೋಪ ಸದ್ಯ ಅವರ ಮೇಲಿದೆ.
ತಮ್ಮದೇ ಕಚೇರಿಯಲ್ಲಿ ಕೆಳ ಅಧಿಕಾರಿಯೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ ಆರೋಪವು ಕೂಡ ಚಾಂಗ್ ಮೇಲೆ ಬಂದಿದ್ದು ಸದ್ಯ ಅವರಿಗೆ 13 ವರ್ಷ ಕಾರಾಗೃಹ ಶಿಕ್ಷೆಯ ಜೊತೆಗೆ 1 ಕೋಟಿ 63 ಲಕ್ಷ ಭಾರತೀಯ ರೂಪಾಯಿಯಷ್ಟು ದಂಡ ವಿಧಿಸಲಾಗಿದೆ