newsics.com
ಕೇರಳ: ಓಣಂ ಆಚರಣೆ ಪ್ರಯುಕ್ತ ನಡೆದ ಇಡ್ಲಿ ತಿನ್ನುವ ಸ್ಪರ್ಧೆಯ ಸಮಯದಲ್ಲಿ ಉಸಿರುಗಟ್ಟಿ 49 ವರ್ಷದ ಸುರೇಶ್ ಮೃತಪಟ್ಟ ಘಟನೆ ಕೇರಳದ ವಾಲಯಾರ್‌ನಲ್ಲಿ ನಡೆದಿದೆ.
ಸ್ಥಳೀಯ ಕ್ಲಬ್ ಒಂದು ಇಡ್ಲಿ ತಿನ್ನುವ ಸ್ಪರ್ಧೆ ಆಯೋಜಿಸಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸುರೇಶ್, ಇಡ್ಲಿ ತಿನ್ನುವಾಗ ಗಂಟಲಲ್ಲಿ ಸಿಕ್ಕಿಹಾಕಿಕೊಂಡು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಸ್ಥಳದಲ್ಲಿದ್ದ ಸಂಘಟಕರು ಹಾಗೂ ನೋಡುಗರು ಸುರೇಶ್ ಗಂಟಲಲ್ಲಿ ಸಿಕ್ಕಿಕೊಂಡಿದ್ದ ಇಡ್ಲಿಯನ್ನು ಹೊರತೆಗೆಯಲು ಯತ್ನಿಸಿದ್ದಾರೆ. ಆದರೆ ಪ್ರಯತ್ನ ಯಶಸ್ವಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳದಲ್ಲಿ ಕುಸಿದು ಬಿದ್ದ ಸುರೇಶ್ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಪ್ರಯೋಜನವಾಗಿಲ್ಲ. ಘಟನೆ ಸಂಬಂಧ ವಾಲಯಾರ್ ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿದ್ದಾರೆ.
ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ನಾಲ್ಕು ಜನರು ಭಾಗವಹಿಸಿದ್ದರು. ಯಾವುದೇ ಸಾಂಬಾರ್ ಅಥವಾ ಸೈಡ್ ಡಿಶ್ ಇಲ್ಲದೆ ಸಾದಾ ಇಡ್ಲಿ ತಿನ್ನುವ ಸ್ಪರ್ಧೆ ಇದಾಗಿತ್ತು. ಇತರ ಸ್ಪರ್ಧಿಗಳು ಆರಂಭದಲ್ಲಿ ಒಂದು ಇಡ್ಲಿಯನ್ನು ಮಾತ್ರ ತಿನ್ನುವ ಮೂಲಕ ಸ್ಪರ್ಧೆಯನ್ನು ಆರಂಭಿಸಿದರು. ಆದರೆ ಸುರೇಶ್ ಒಂದೇ ಬಾರಿಗೆ ಮೂರು ಇಡ್ಲಿ ತಿನ್ನಲು ಯತ್ನಿಸಿದರು. ಈ ವೇಳೆ ಉಸಿರುಗಟ್ಟಿದಂತಾಗಿ ಕುಸಿದುಬಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ನಟ ದರ್ಶನ್ ಅವ್ರು ಜೈಲು ಸೇರಿದ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು ಗೊತ್ತಾ?
ಗಣೇಶನ ದರ್ಶನಕ್ಕೆ ಬಂದಿದ್ದ ಹೀರೋಯಿನ್ ಮೇಲೆ ಹಲ್ಲೆ.! ಭಾವನಾತ್ಮಕ ಪೋಸ್ಟ್ ಮಾಡಿದ ನಟಿ
ವಿದ್ಯಾರ್ಥಿನಿಯರ ಖಾಸಗಿ ಅಂಗಾಂಗ ಮುಟ್ಟಿ ದೌರ್ಜನ್ಯ: ಚಿಕ್ಕೋಡಿ ಸರ್ಕಾರಿ ಶಾಲೆಯ ಶಿಕ್ಷಕನ ಬಂಧನ