Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಚಳ್ಳಕೆರೆ ತಹಸೀಲ್ದಾರ್ ಜೀಪ್‌ಗೆ ಬೆಂಕಿಯಿಟ್ಟ ಯುವಕ: ತಾಯಿಯನ್ನು ನಿಂದಿಸಿದ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹ
ಕರ್ನಾಟಕ

ಚಳ್ಳಕೆರೆ ತಹಸೀಲ್ದಾರ್ ಜೀಪ್‌ಗೆ ಬೆಂಕಿಯಿಟ್ಟ ಯುವಕ: ತಾಯಿಯನ್ನು ನಿಂದಿಸಿದ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹ

Share
2 Min Read
SHARE

newsics.com

ಚಿತ್ರದುರ್ಗ: ಇತ್ತೀಚೆಗೆ ವಿಧಾನಸೌಧದ ಮುಂದೆ ಬೈಕ್ ಒಂದಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದ ಕಿಡಿಗೇಡಿ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಪೃಥ್ವಿ ಎಂಬಾತ ಮತ್ತೆ ಹುಚ್ಚಾಟ ಮೆರೆದಿದ್ದಾನೆ.

ನಾನು ಟೆರರಿಸ್ಟ್ ಆಗುತ್ತೇನೆ ನನ್ನನ್ನು ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಸೆಲ್‌ನ ಪಕ್ಕದ ಸೆಲ್‌ಗೆ ಹಾಕಿ ಎಂದು ಪೃಥ್ವಿ ಹುಚ್ಚಾಟ ನಡೆಸಿದ್ದಾನೆ.

ಚಳ್ಳಕೆರೆ ತಾಲೂಕು ಕಚೇರಿ ಬಳಿ ನಿಲ್ಲಿಸಿದ್ದ ತಹಸೀಲ್ದಾರ್ ಜೀಪ್‌ಗೆ ಬೆಂಕಿ ಹಂಚಿ ವಿಕೃತಿ ಮೆರೆದಿದ್ದಾನೆ. ಈತ ಚಳ್ಳಕೆರೆ ಪಟ್ಟಣದ ಗಾಂಧಿನಗರದ ನಿವಾಸಿ. ಇತ್ತೀಚೆಗೆ ಕೆಲ ದಿನಗಳ ಹಿಂದೆ ಬೆಂಗಳೂರಿನ ವಿಧಾನಸೌಧ ಬಳಿ ಬೈಕ್‌ಗೆ ಬೆಂಕಿಯಿಟ್ಟಿದ್ದ. ಆಗ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ನಾನು ಪ್ರತಿಭಟನೆ ಮಾಡುವ ಉದ್ದೇಶದಿಂದ ಬೈಕ್‌ಗೆ ಬೆಂಕಿ ಹಚ್ಚಿದ್ದೇನೆ ಎಂದು ಹೇಳಿದ್ದ. ಆಗ ಪೊಲೀಸರು ಈತನಿಗೆ ನಾಲ್ಕು ಬಾರಿಸಿ ಬುದ್ಧಿ ಹೇಳಿ, ಮುಚ್ಚಳಿಕೆ ಬರೆಸಿಕೊಂಡು ಬೆಂಗಳೂರಿನಿಂದ ಊರಿಗೆ ಕಳಿಸಿದ್ದರು.

ಆದರೆ, ಇಷ್ಟಕ್ಕೆ ಸುಮ್ಮನಾಗಲೇ ಈಗ ಚಳ್ಳಕೆರೆಯ ತಹಶೀಲ್ದಾರ್ ಕಚೇರಿ ಮುಂದೆ ನಿಲ್ಲಿಸಿದ್ದ ಜೀಪಿಗೆ ಬೆಂಕಿ ಹಚ್ಚಿದ್ದಾನೆ.

ಕೆಲವು ದಿನಗಳ ಹಿಂದೆ ಪೃಥ್ವಿರಾಜ್ ಮೂರ್ನಾಲ್ಕು ದಿನಗಳಿಂದ ಕಾಣೆಯಾಗಿದ್ದಾನೆ ಎಂದು ಈತನ ತಾಯಿ ಮಗ ಕಾಣೆಯಾದ ದೂರು ಕೊಡಲು ಹೋಗಿದ್ದಾಗ ಚಳ್ಳಕೆರೆ ಪೊಲೀಸರು ತನ್ನ ತಾಯಿಗೆ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದ್ದು, ಈ ಸಿಟ್ಟಿನಿಂದಲೇ ಹೀಗೆಲ್ಲ ಮಾಡುತ್ತಿರುವುದಾಗಿ ಹೇಳಿದ್ದಾನೆ.

ನನ್ನ ತಾಯಿಗೆ ನಿಂದನೆ ಮಾಡಿರುವ ಪೊಲೀಸರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇ ತನ್ನ ತಾಯಿಗೆ ಅವಮಾನ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಕೂಡ ಮಾಡಿದ್ದ. ಇದಕ್ಕೆ ಯಾರೂ ಸ್ಪಂದಿಸದ ಹಿನ್ನೆಲೆಯಲ್ಲಿ ನಾನು ಟೆರರಿಸ್ಟ್ ಆಗುತ್ತೇನೆ, ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಆರೋಪಿಯಾಗಿ ಜೈಲು ಸೇರಿರುವ ನಟ ದರ್ಶನ್ ಪಕ್ಕದ ಸೆಲ್‌ಗೆ ನನ್ನನ್ನೂ ಹಾಕಿ ಎಂದು ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ.

ನಂತರ ಬೆಂಗಳೂರಿನ ವಿಧಾನಸೌಧದ ಮುಂದೆ ಬೈಕಿಗೆ ಬೆಂಕಿ ಹಚ್ಚಿ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದ. ಈಗ ತಹಸೀಲ್ದಾರ ಜೀಪಿಗೂ ಬೆಂಕಿ ಹಚ್ಚಿದ್ದಾನೆ. ಈ ಘಟನೆಯ ಬೆನ್ನಲ್ಲಿಯೇ ಸ್ಥಳೀಯರು ಪೃಥ್ವಿಯನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಾನ್ವಿ ಬಳಿ ಶಾಲಾ ವಾಹನ, KSRTC ಬಸ್ ಡಿಕ್ಕಿ: ಇಬ್ಬರು ವಿದ್ಯಾರ್ಥಿಗಳ ಸಾವು, 12 ಮಕ್ಕಳಿಗೆ ಗಾಯ

ಮಳೆಗಾಲದಲ್ಲಿ ಮಕ್ಕಳ ಆರೋಗ್ಯದ ಕಾಳಜಿ ಹೇಗೆ…?

ಯುವಜನರಲ್ಲಿ ಹೆಚ್ಚಿದ ಅಂಗಾಂಗ ವೈಫಲ್ಯ: ರಾಜ್ಯದಲ್ಲಿ ಕಿಡ್ನಿ,‌ ಲಿವರ್‌ಗೆ ಭಾರೀ ಬೇಡಿಕೆ

TAGGED:Youth set fire to Challakere tehsildar's jeep: Demand action against cops for abusing mother
Share This Article
Facebook Twitter Copy Link Print
Previous Article ಮಾನ್ವಿ ಬಳಿ ಶಾಲಾ ವಾಹನ, KSRTC ಬಸ್ ಡಿಕ್ಕಿ: ಇಬ್ಬರು ವಿದ್ಯಾರ್ಥಿಗಳ ಸಾವು, 12 ಮಕ್ಕಳಿಗೆ ಗಾಯ
Next Article ರೇಣುಕಾಸ್ವಾಮಿ ಮೇಲೆ ಮತ್ತೆ ಮತ್ತೆ ಹಲ್ಲೆ ನಡೆಸಿದ್ದ ದರ್ಶನ್, ಮಾನವೀಯತೆಯನ್ನೆ ಮರೆತಿದ್ದ ನಟ

Popular Posts

ಸುಚೇಂದ್ರ ಪ್ರಸಾದ್‌ಗೂ ಮುನ್ನ ಮಗಳಿಗಾದ ಅನ್ಯಾಯ ಬಿಚ್ಚಿಟ್ಟ ಪವಿತ್ರಾ ಲೋಕೇಶ್ ತಾಯಿ

2 Min Read

ಬರೀ 11 ಸಾವಿರ ಇದ್ರೆ ಸಾಕು, ಮನೆಗೆ ಬರುತ್ತೆ ಟಾಟಾದ ಹೊಚ್ಚ ಹೊಸ ಇವಿ ಕಾರು!

2 Min Read

ನೀವು ಬಿಟ್ಟು ಹೋಗುವಾಗ ಕರ್ನಾಟಕ ಶ್ರೇಷ್ಠವಾಗಿರಲಿ: ಡಿಕೆಶಿಗೆ ನಟ ರಮೇಶ್ ಅರವಿಂದ್ ಟ್ವೀಟ್

2 Min Read

ಪ್ರಮಾಣ ವಚನ ಬಳಿಕ ಪರಮೇಶ್ವರ್, ಎಂಬಿ ಪಾಟೀಲ್ ಗೆ ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದು ಯಾಕೆ?

1 Min Read

You Might Also Like

ಕರ್ನಾಟಕಪ್ರಮುಖ

ಬರ್ತಡೇಯಂದು ಕೇಕ್ ಕಟ್‌ ಮಾಡಿಸಿ, ಪತ್ನಿಯನ್ನೇ ಕತ್ತರಿಸಿದ ಪಾಪಿ ಪತಿ

2 Min Read
ಕರ್ನಾಟಕಪ್ರಮುಖಮನರಂಜನೆ

New Big Boss ಶೀಘ್ರದಲ್ಲೇ ಬರಲಿದೆ ಹೊಸ ಬಿಗ್ ಬಾಸ್!

2 Min Read
ಕರ್ನಾಟಕದೇಶಪ್ರಮುಖ

DK announcement ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ನೂತನ ಸಿಎಂ ಡಿಕೆ 6 ಭರ್ಜರಿ ಘೋಷಣೆ

3 Min Read
ಪ್ರಮುಖಕರ್ನಾಟಕ

ಮನೆ ನಿರ್ಮಾಣ,ಮೊದಲ ಸುದ್ದಿಗೋಷ್ಠಿಯಲ್ಲಿ ಸಿಎಂ ಡಿಕೆಶಿ ಮಹತ್ವದ 6 ಘೋಷಣೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?