newsics.com
ಬೆಂಗಳೂರು: ಮಹಿಳಾ ಸಾಂತ್ವನ ಸಹಾಯವಾಣಿ ಸಕ್ರಿಯವಾಗಿದ್ಯಾ ಇಲ್ಲವಾ ಎಂಬುದನ್ನು ತಿಳಿದುಕೊಳ್ಳಲು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರಿಯಾಲಿಟಿ ಚೆಕ್ ಮಾಡಿದರು.
ತುಮಕೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲೇ ಜಿಲ್ಲಾಧಿಕಾರಿ ಫೋನ್‌ನಿಂದ ಕರೆ ಮಾಡಿ ಸಹಾಯವಾಣಿ ಕಾರ್ಯಕ್ಷಮತೆ ಪರಿಶೀಲಿಸಿದರು.
ಮಹಿಳಾ ಸಾಂತ್ವನ ಸಹಾಯವಾಣಿಗೆ ಕರೆ ಮಾಡಿ, ಸರ್ ನಾನು ಶಿರಾದಿಂದ ಕಾಲ್ ಮಾಡ್ತಿದ್ದೀನಿ. ನಮ್ಮ ಅತ್ತೆ ಹೊಡೆದಿದ್ದಾರೆ. ಸಹಾಯ ಮಾಡ್ತೀರಾ ಎಂದು ಕೇಳಿದರು. ಆಗ ಅತ್ತ ಸಹಾಯವಾಣಿ ಸಿಬ್ಬಂದಿ, ಬೆಳಗ್ಗೆ ಬಂದಿದ್ದವ್ರಾ ನೀವು ಎಂದು ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಕೇಳಿದ್ದಾರೆ. ಇಲ್ಲ ನಾನು ಈಗಷ್ಟೇ ಕಾಲ್ ಮಾಡಿದ್ದೇನೆ ಎಂದ ಸಚಿವೆ ಉತ್ತರಿಸಿದರು.
ಕೊನೆಗೆ ಕರೆ ಸ್ವೀಕರಿಸಿದ ಸಿಬ್ಬಂದಿಗೆ ನಾನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಎಂದು ಪರಿಚಯ ಹೇಳಿಕೊಂಡರು. ಅಲ್ಲದೇ ಸಹಾಯವಾಣಿ ಸಕ್ರಿಯವಾಗಿದ್ದಕ್ಕೆ ಅಭಿನಂದನೆ ತಿಳಿಸಿದರು.