newsics.com
ನಮೀಬಿಯಾ: ಭೀಕರ ಬರಗಾಲಕ್ಕೆ ಸಿಲುಕಿ ತತ್ತರಿಸಿರುವ ನಮೀಬಿಯಾ ಜನರ ಹಸಿವು ನೀಗಿಸಲು ಆನೆ ಸೇರಿದಂತೆ 723 ಕಾಡುಪ್ರಾಣಿಗಳ ಹತ್ಯೆಗೆ ನಮೀಬಿಯಾ ಸರ್ಕಾರ ಮುಂದಾಗಿದೆ.
ದೇಶದ 1.4 ಮಿಲಿಯನ್ ಜನರ ಹಸಿವು ನೀಗಿಸುವುದೇ ಕಷ್ಟಕರವಾಗಿ ಪರಿಣಮಿಸಿರುವುದರಿಂದ 83 ಆನೆ ಸೇರಿದಂತೆ 723 ವನ್ಯಜೀವಿಗಳ ಮಾಂಸಕ್ಕೆ ಮೊರೆಹೋಗಲು ನಿರ್ಧರಿಸಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಮಾಂಸಕ್ಕಾಗಿ ವನ್ಯಜೀವಿಗಳ ಹತ್ಯೆಯನ್ನು ನಮೀಬಿಯಾದ ಪರಿಸರ, ಅರಣ್ಯ ಹಾಗೂ ಪ್ರವಾಸೋದ್ಯಮ ಇಲಾಖೆ ಸಮರ್ಥಿಸಿಕೊಂಡಿದ್ದು, ಈಗಿನ ಯೋಜನೆ ಪ್ರಕಾರ 300 ಜೀಬ್ರಾ, 50 ಇಂಪಾಲಾ, 60 ಎಮ್ಮೆ, 30 ಹಿಪ್ಪೋ, 100 ನೀಲಿ ವೈಲ್ಡ್ ಬೀಸ್ಟ್, 100 ಎಲ್ಯಾಂಡ್ಸ್‌ಗಳನ್ನು ಕಡಿಯಲು ನಿರ್ಧರಿಸಿದೆ.
ನಮೀಬಿಯಾದ ಒಟ್ಟೂ ಆಹಾರ ಸಂಪನ್ಮೂಲಗಳಲ್ಲಿ ಈಗಾಗಲೇ ಶೇ.84ರಷ್ಟು ಖಾಲಿಯಾಗಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ.