newsics.com
ರಾಜಸ್ಥಾನ: ಐ ಲವ್ ಯೂ’ ಎಂದು ಹೇಳಿ ಮತ್ತು ಉಚಿತ ರೀಚಾರ್ಜ್ ಪಡೆಯಿರಿ.’ ಇದನ್ನು ಕೇಳಿದ್ರೆ ಸಾಕು ಎಲ್ಲಿ, ಏನು ಎಂಬ ಕುತೂಹಲ ಬರೋದ ಸಹಕ. ಇದೇ ರೀತಿಯ ಆಫರ್ನಿಂದಾಗಿ ಇಲ್ಲೊಬ್ಬ ಸಾರ್ವಜನಿಕವಾಗಿ ಹುಡುಗಿಯರಿಂದ ಪೆಟ್ಟು ತಿಂದಿದ್ದಾರೆ.
ಒಬ್ಬ ಅಂಗಡಿಯವನು ಯುವತಿಯೊಬ್ಬಳು ತನ್ನ ಅಂಗಡಿಗೆ ರೀಚಾರ್ಜ್ ಮಾಡಲೆಂದು ಬಂದಾಗ, ಐ ಲವ್ ಯೂ ಹೇಳು, ಆ ನಂತರ ರೀಚಾರ್ಜ್ ಮಾಡು ಎಂದು ಚುಡಾಯಿಸಿದ್ದಾನೆ ಎಂದು ಹೇಳಲಾಗಿದೆ.
ಕೋಪಗೊಂಡ ಯುವತಿ ಆ ಅಂಗಡಿಯವನಿಗೆ ತಕ್ಕ ಪಾಠ ಕಲಿಸಿದ್ದಾಳೆ. ಅದೇನೆಂದರೆ ಸಾರ್ವಜನಿಕವಾಗಿ ಆತನನ್ನು ಮೆರವಣಿಗೆ ಮಾಡಿಸಿ, ಎಲ್ಲರ ಮುಂದೆ ಕಪಾಲಮೋಕ್ಷ ಮಾಡಿದ್ದಾಳೆ ಎನ್ನಲಾಗಿದೆ. ಸದ್ಯ ಈ ಘಟನೆಯ ವಿಡಿಯೋ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ, ವ್ಯಕ್ತಿಯೊಬ್ಬನ ಸುತ್ತ ಮಹಿಳೆಯರು ನಿಂತಿರುವುದನ್ನು ನೋಡಿರಬಹುದು. ಅದರಲ್ಲೊಬ್ಬಳು ಆತನ ಕಪಾಳಮೋಕ್ಷವನ್ನೂ ಮಾಡುವುದನ್ನು ನೋಡಬಹುದು. ಇನ್ನು ಈ ಘಟನೆ ರಾಜಸ್ಥಾನದ ಕುಚ್ಮನ್ ನಗರದಲ್ಲಿದೆ ನಡೆದಿದೆ ಎಂದು ಹೇಳಲಾಗುತ್ತಿದೆ.
https://twitter.com/priyarajputlive/status/1830261350389485795