newsics.com | ನ್ಯೂಸಿಕ್ಸ್
ಟೆಹ್ರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಗುರಿಯಾಗಿಸಿಕೊಂಡು ಇರಾನ್ ಕ್ರಾಂತಿಕಾರಿ ಪಡೆಗಳು ತೀವ್ರ ಸಂಚು ರೂಪಿಸುತ್ತಿರುವ ಬೆನ್ನಲ್ಲೇ, ಆಘಾತಕಾರಿ ಪೋಸ್ಟರ್ಗಳು ಪ್ರತ್ಯಕ್ಷವಾಗಿವೆ. ರಾಜಧಾನಿ ಟೆಹ್ರಾನ್ನ ಇಂಗೇಲಾಬ್ ವೃತ್ತದಲ್ಲಿ ಅಮೆರಿಕದ ಅಧ್ಯಕ್ಷರು ಶವಪೆಟ್ಟಿಗೆಯಲ್ಲಿ ಮಲಗಿರುವ ಚಿತ್ರದ ಪೋಸ್ಟರ್ ಅಳವಡಿಸಲಾಗಿದ್ದು, ಅದರ ಕೆಳಗೆ ‘ನಾವು ಡೊನಾಲ್ಡ್ ಟ್ರಂಪ್ ಕೊಲ್ಲುತ್ತೇವೆ’ ಎಂಬ ಭಯಾನಕ ಬರಹ ಬರೆಯಲಾಗಿದೆ. ಈ ಫೋಟೋಗಳು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.
ಇರಾನ್ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಸೇನೆ ಇತ್ತೀಚೆಗೆ ಶಪಥ ಮಾಡಿತ್ತು. ಇದರ ಬೆನ್ನಲ್ಲೇ ಈ ರೀತಿಯ ಬಹಿರಂಗ ಬೆದರಿಕೆ ಫಲಕಗಳು ಕಾಣಿಸಿಕೊಂಡಿರುವುದು ಗಡಿಯಲ್ಲಿ ಯುದ್ಧದ ಭೀತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಇರಾನ್ ವಿರುದ್ಧ ಅಮೆರಿಕ ಹಾಗೂ ಇಸ್ರೇಲಿ ಮೈತ್ರಿಕೂಟದ ಯುದ್ಧ ತೀವ್ರಗೊಂಡ ಬಳಿಕ, ಅಮೆರಿಕ ಅಧ್ಯಕ್ಷರನ್ನು ಪ್ರಮುಖವಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ.
Puri Jaganath ಜಗನ್ನಾಥ ರಥಯಾತ್ರೆಯಲ್ಲಿ ನೂಕುನುಗ್ಗಲು; 33 ಭಕ್ತರು ಅಸ್ವಸ್ಥ, ಆಸ್ಪತ್ರೆಗೆ ದಾಖಲು