Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Viral News ಮನೆ ಕ್ಲೀನ್ ಮಾಡುವಾಗ ಸಿಕ್ತು ತಾತನ ಹಳೆಯ SBI ಪಾಸ್‌ಬುಕ್; ಖಾತೆಯಲ್ಲಿದ್ದ ಬ್ಯಾಲೆನ್ಸ್ ನೋಡಿ ಶಾಕ್ ಆದ ಕುಟುಂಬಸ್ಥರು
ಪ್ರಮುಖದೇಶವೈರಲ್

Viral News ಮನೆ ಕ್ಲೀನ್ ಮಾಡುವಾಗ ಸಿಕ್ತು ತಾತನ ಹಳೆಯ SBI ಪಾಸ್‌ಬುಕ್; ಖಾತೆಯಲ್ಲಿದ್ದ ಬ್ಯಾಲೆನ್ಸ್ ನೋಡಿ ಶಾಕ್ ಆದ ಕುಟುಂಬಸ್ಥರು

Share
2 Min Read
SHARE

newsics.com | ನ್ಯೂಸಿಕ್ಸ್

ನವದೆಹಲಿ: ಗೃಹ ಬಳಕೆ ವಸ್ತುಗಳನ್ನು ಸ್ವಚ್ಛಗೊಳಿಸುವಾಗ ಹಳೆಯ ಕಾಲದ ಕಾಗದ-ಪತ್ರಗಳು ಸಿಗುವುದು ಹೊಸದೇನಲ್ಲ. ಆದರೆ, ಇಲ್ಲೊಬ್ಬ ವ್ಯಕ್ತಿಗೆ ಮನೆ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ದೊರೆತ ಎರಡು ದಶಕಗಳಿಗೂ ಹಳೆಯದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಪಾಸ್‌ಬುಕ್ ಇಡೀ ಕುಟುಂಬವೇ ಅಚ್ಚರಿಗೊಳ್ಳುವಂತೆ ಮಾಡಿದೆ. ಮರಣ ಹೊಂದಿರುವ ತಾತನ ಹೆಸರಿನಲ್ಲಿದ್ದ ಈ ಖಾತೆಯಲ್ಲಿ ಭಾರಿ ಮೊತ್ತದ ಹಣ ಪತ್ತೆಯಾಗಿದ್ದು, ಇದನ್ನು ವಾಪಸ್ ಪಡೆಯುವುದು ಹೇಗೆ ಎಂಬ ಕುರಿತು ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆ ಮುಂಚೂಣಿಗೆ ಬಂದಿದೆ.

ಎಕ್ಸ್ ತಾಣದಲ್ಲಿ ನೆರವಿಗಾಗಿ ಮನವಿ

ಪೂಜಾ ಹೆಸರಿನ ಯೂಸರ್ ಒಬ್ಬರು ಮಣ್ಣು ಹಿಡಿದಿದ್ದ ಹಳೆಯ ಬ್ಯಾಂಕ್ ಪಾಸ್‌ಬುಕ್‌ನ ಫೋಟೋವನ್ನು ಸಾಮಾಜಿಕ ಮಾಧ್ಯಮ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

“ವರ್ಷಗಳ ಹಿಂದೆ ನಿಷ್ಕ್ರಿಯಗೊಂಡಿರುವ ಈ ಖಾತೆಯಲ್ಲಿರುವ ಹಣವನ್ನು ಈಗಿನ ನಿಯಮಗಳ ಪ್ರಕಾರ ಹಿಂಪಡೆಯಲು ಸಾಧ್ಯವೇ ಅಥವಾ ಈ ಉಳಿತಾಯ ನಮ್ಮ ಕೈ ತಪ್ಪಿದಂತೆಯೇ?” ಎಂದು ಅವರು ನೆಟ್ಟಿಗರ ಮುಂದೆ ಪ್ರಶ್ನೆ ಇಟ್ಟಿದ್ದಾರೆ.

ಮನೆಯ ಮೂಲೆಯೊಂದರಲ್ಲಿ ಸಿಕ್ಕ ಸುಮಾರು 20 ರಿಂದ 24 ವರ್ಷಗಳಷ್ಟು ಹಳೆಯದಾದ ಈ ಪಾಸ್‌ಬುಕ್ ಅನ್ನು ಮನೆಯವರು ಮೊದಲು ಕಸ ಎಂದು ಭಾವಿಸಿದ್ದರು. ಆದರೆ, ಕುತೂಹಲಕ್ಕೆ ಅದರ ಒಳಗಿನ ಪುಟಗಳನ್ನು ತಿರುವಿ ನೋಡಿದಾಗ ತಂದೆಗೆ ಅದು ತನ್ನ ತಂದೆಯ (ತಾತನ) ಖಾತೆ ಎಂಬುದು ನೆನಪಾಗಿದೆ. ಅದಕ್ಕಿಂತಲೂ ಮಿಗಿಲಾಗಿ, ಆ ಖಾತೆಯಲ್ಲಿ 1 ಲಕ್ಷ ರೂಪಾಯಿಗಿಂತಲೂ ಅಧಿಕ ಬ್ಯಾಲೆನ್ಸ್ ಇರುವುದು ದಾಖಲಾಗಿತ್ತು. ಇದನ್ನು ಕಂಡು ಇಡೀ ಕುಟುಂಬಕ್ಕೆ ಒಂದು ಕ್ಷಣ ಏನು ಮಾಡಬೇಕೆಂದೇ ತೋಚಲಿಲ್ಲ.

ಈ ಪೋಸ್ಟ್ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗಿದ್ದು, ಈಗಾಗಲೇ 1 ಲಕ್ಷಕ್ಕೂ ಅಧಿಕ ಮಂದಿ ಇದನ್ನು ವೀಕ್ಷಿಸಿದ್ದಾರೆ. ಹಲವು ಬ್ಯಾಂಕಿಂಗ್ ನುರಿತರು ಈ ನಿಷ್ಕ್ರಿಯ ಹಣವನ್ನು ಮರಳಿ ಪಡೆಯಲು ಇರುವ ಕಾನೂನಾತ್ಮಕ ದಾರಿಗಳನ್ನು ಹಂಚಿಕೊಂಡಿದ್ದಾರೆ. ಖಾತೆಯಲ್ಲಿ ಹಣ ಹಾಗೇ ಇರುವುದರಿಂದ ಮೊದಲು ಆಯಾ ಎಸ್‌ಬಿಐ ಹೋಮ್ ಬ್ರಾಂಚ್‌ಗೆ ಅಗತ್ಯ ದಾಖಲೆಗಳೊಂದಿಗೆ ತೆರಳಬೇಕು. ಖಾತೆದಾರರು ಮೃತಪಟ್ಟಿರುವುದರಿಂದ ಅವರ ಡೆತ್ ಸರ್ಟಿಫಿಕೇಟ್, ಒರಿಜಿನಲ್ ಐಡಿ ಪ್ರೂಫ್ ಹಾಗೂ ವಾರಸುದಾರರ ಪತ್ರವನ್ನು ಒದಗಿಸಬೇಕಾಗುತ್ತದೆ. ಖಾತೆಗೆ ನಾಮಿನಿ ಹೆಸರನ್ನು ನಮೂದಿಸದೇ ಇದ್ದಲ್ಲಿ, ಕಾನೂನುಬದ್ಧವಾಗಿ ಹಣ ಬಿಡುಗಡೆ ಮಾಡಲು ಬ್ಯಾಂಕ್ ಅಧಿಕಾರಿಗಳು ಉತ್ತರಾಧಿಕಾರ ಪ್ರಮಾಣಪತ್ರವನ್ನು (Succession Certificate) ಕೇಳುವ ಸಾಧ್ಯತೆ ಇರುತ್ತದೆ.

ಇಷ್ಟು ದೀರ್ಘಾವಧಿಯವರೆಗೆ ಯಾವುದೇ ವಹಿವಾಟು ನಡೆಸದಿದ್ದರೂ ಸಹ ಗ್ರಾಹಕರ ಹಣ ಸುರಕ್ಷಿತವಾಗಿರುತ್ತದೆ. ಹೀಗಾಗಿ ಆತಂಕಪಡದೇ ಸೂಕ್ತ ದಾಖಲಾತಿಗಳೊಂದಿಗೆ ಬ್ಯಾಂಕ್ ಸಂಪರ್ಕಿಸಿದರೆ ತಾತನ ದುಡಿಮೆಯ ಹಣ ಖಂಡಿತ ಕೈಸೇರಲಿದೆ ಎಂದು ನೆಟ್ಟಿಗರು ತಿಳಿಸಿದ್ದಾರೆ.

HD Devegowda Wife ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಆಸ್ಪತ್ರೆಗೆ ದಾಖಲು

TAGGED:#Viral #SBI Pass Book #unclaimed #news #newsics
Share This Article
Facebook Twitter Copy Link Print
Previous Article HD Devegowda Wife ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಆಸ್ಪತ್ರೆಗೆ ದಾಖಲು
Next Article Tollywood ಪ್ರಭಾಸ್ ನಟನೆಯ ‘ಫೌಜಿ’ ಬಿಡುಗಡೆಗೆ ಮುಹೂರ್ತ ಫಿಕ್ಸ್

Popular Posts

Hydrogen Train ನಾಳೆ ದೇಶದ ಮೊದಲ ಹೈಡ್ರೋಜನ್ ರೈಲಿಗೆ ಚಾಲನೆ; ಏನಿದರ ವಿಶೇಷತೆ? ಇಲ್ಲಿದೆ ವಿವರ

1 Min Read

Good News ಗೃಹಲಕ್ಷ್ಮಿ ಯೋಜನೆಯ 31ನೇ ಕಂತಿನ ಹಣ ಬಿಡುಗಡೆ: ಮನೆ ಯಜಮಾನಿಯರ ಖಾತೆಗೆ ₹2,000 ಜಮೆ

1 Min Read

Cancer Facts ಗ್ಯಾಸ್ ಉರಿ ಮೇಲೆ ಚಪಾತಿ ಸುಟ್ಟರೆ ಕ್ಯಾನ್ಸರ್ ಬರುತ್ತಾ? ಇಲ್ಲಿದೆ ನೋಡಿ ಅಸಲಿ ಸತ್ಯ

2 Min Read

Health Tips ಟೀ-ಕಾಫಿಗೆ ಸಕ್ಕರೆ ಹಾಕೋ ಮುನ್ನ ಯೋಚಿಸಿ; ಕೇವಲ ಎರಡು ವಾರ ಸಿಹಿ ತ್ಯಜಿಸಿದರೆ ಬದಲಾಗುತ್ತೆ ನಿಮ್ಮ ಆರೋಗ್ಯ

2 Min Read

You Might Also Like

ಪ್ರಮುಖದೇಶ

ISRO ಇಸ್ರೋ ವಿಜ್ಞಾನಿಗಳ ರಾಜೀನಾಮೆಗೆ ಕೇಂದ್ರದ ಕಠಿಣ ಬ್ರೇಕ್; ಹೊಸ ನಿಯಮ ಜಾರಿ

1 Min Read
ಪ್ರಮುಖವಿದೇಶವೈರಲ್

Viral News ‘ನಾವು ಡೊನಾಲ್ಡ್ ಟ್ರಂಪ್‌ನನ್ನು ಕೊಲ್ಲುತ್ತೇವೆ’: ಇರಾನ್‌ನಲ್ಲಿ ಟ್ರಂಪ್‌ ಶವಪೆಟ್ಟಿಗೆಯ ಪೋಸ್ಟರ್ ಪ್ರತ್ಯಕ್ಷ

1 Min Read
ಪ್ರಮುಖದೇಶ

Puri Jaganath ಜಗನ್ನಾಥ ರಥಯಾತ್ರೆಯಲ್ಲಿ ನೂಕುನುಗ್ಗಲು; 33 ಭಕ್ತರು ಅಸ್ವಸ್ಥ, ಆಸ್ಪತ್ರೆಗೆ ದಾಖಲು

1 Min Read
ಪ್ರಮುಖಕರ್ನಾಟಕ

Rain ರಾಜಧಾನಿಯಲ್ಲಿ ದಿಢೀರ್ ವರ್ಷಧಾರೆ; ಇಲ್ಲಿದೆ ಹವಾಮಾನ ಇಲಾಖೆಯ ಮುನ್ಸೂಚನೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?