newsics.com
ಪ್ರೀತಿಸುವ ಹುಡುಗನು ಮೊದಲ ಬಾರಿಗೆ ಹುಡುಗಿಯನ್ನು ಸ್ಪರ್ಶಿಸಿದಾಗ ಮೈಜುಮ್ಮ್ ಎನ್ನುವ ಅನುಭವದೊಂದಿಗೆ ಖುಷಿ ಮಿಶ್ರಿತವಾದ ಭಯವು ಕಾಡುತ್ತದೆ. ಈ ವೇಳೆಯಲ್ಲಿ ಆಕೆಯ ಮನಸ್ಸಿನಲ್ಲಿ ಯಾರು ಕೂಡ ಊಹೆ ಮಾಡದ ಪ್ರಶ್ನೆಗಳು ಹಾಗೂ ಆಲೋಚನೆಗಳು ಓಡಾಡುತ್ತವೆ. ಆದರೆ ಆ ಬಗ್ಗೆ ಯಾರ ಬಳಿಯೂ ಹುಡುಗಿ ಹೇಳಿಕೊಳ್ಳುವುದಿಲ್ಲ.
ಪ್ರೀತಿಸುವ ಹುಡುಗನು ಮೊದಲ ಬಾರಿಗೆ ಹುಡುಗಿಯನ್ನು ಸ್ಪರ್ಶಿಸಿದಾಗ ಆಕೆಯ ತಲೆಯಲ್ಲಿ ನಾನಾ ರೀತಿಯ ಯೋಚನೆಗಳು ಬರುತ್ತದೆ. ಹುಡುಗಿಯ ತಲೆಯಲ್ಲಿ ನಾನು ತಪ್ಪು ಮಾಡಿಲ್ಲ ಅಲ್ವಾ ಎನ್ನುವ ಯೋಚನೆಯೇ ಮೊದಲು ಬರುತ್ತದೆ. ಬಾಯ್ ಫ್ರೆಂಡ್ ನನ್ನ ಬಗ್ಗೆ ಏನಂದುಕೊಂಡಿರಬಹುದು ಎನ್ನುವುದು ಎನ್ನುವ ಪ್ರಶ್ನೆಯೂ ಆಕೆಯಲ್ಲಿ ಮೂಡುತ್ತದೆ.
ತಾನು ಪ್ರೀತಿಸುವ ಹುಡುಗನು ಮೊದಲ ಬಾರಿಗೆ ಕೈಹಿಡಿದಾಗ ಖುಷಿಯ ಅನುಭವದೊಂದಿಗೆ ಒಮ್ಮೆ ಭಯ ಪಡುತ್ತಾಳೆ. ತದನಂತರದಲ್ಲಿ ಆಕೆಯು ತನ್ನ ಕೈಯನ್ನು ಸದಾ ಹೀಗೆಯೇ ಹಿಡಿದಿರಲಿ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾಳೆ.
ಪ್ರೀತಿಸುವ ಹುಡುಗನು ಮೊದಲ ಬಾರಿಗೆ ಸ್ಪರ್ಶಿಸಿದಾಗ ಈತನು ತನ್ನೊಂದಿಗೆ ಹೀಗೆಯೇ ಜೀವನ ಪರ್ಯಂತ ಇರುತ್ತಾನಾ ಎನ್ನುವ ಪ್ರಶ್ನೆಯೂ ಹುಟ್ಟುತ್ತದೆಯಂತೆ. ಈತನು ತನಗೆ ಮೋಸ ಮಾಡಿ ಕೈ ಕೊಟ್ಟರೆ ಏನು ಮಾಡುವುದು ಎಂದು ಯೋಚಿಸುತ್ತಾಳೆ. ಈ ಬಗ್ಗೆ ಆತನ ಬಳಿಯೂ ಹೇಳಿಕೊಳ್ಳದೇ ಮುಚ್ಚಿಡುತ್ತಾಳೆ.
ಎಲ್ಲರ ಮುಂದೆ ತನ್ನ ಕೈಯನ್ನು ತಾನು ಪ್ರೀತಿಸುವ ಹುಡುಗ ಹಿಡಿದುಕೊಂಡರೆ ಆತನ ವ್ಯಕ್ತಿತ್ವವನ್ನು ಹೇಗೆ ಎನ್ನುವುದನ್ನು ನಿರ್ಣಯಿಸುತ್ತಾಳೆ. ಕೊನೆಗೆ ಈತನು ತುಂಬಾ ಒಳ್ಳೆಯವನು ಎನ್ನುವ ತೀರ್ಮಾನಕ್ಕೆ ಬಂದು ಪ್ರೇಮಿಯ ಕೈಯನ್ನು ಗಟ್ಟಿ ಹಿಡಿದುಕೊಳ್ಳುತ್ತಾಳೆ. ಈ ವ್ಯಕ್ತಿಯೂ ನನ್ನ ಬದುಕಿನೊಳಗೆ ಬಂದದ್ದು ನನ್ನ ಅದೃಷ್ಟ ಎಂದು ಮನಸ್ಸಿನಲ್ಲಿ ಅಂದುಕೊಳ್ಳತ್ತಾಳಂತೆ.
ರಸ್ತೆ ದಾಟುವಾಗ ಹುಡುಗನು ಹುಡುಗಿಯ ಕೈಯನ್ನು ಹಿಡಿದರೆ ಆತನಲ್ಲಿ ಕಾಳಜಿ ವಹಿಸುವ ಹಾಗೂ ಆರೈಕೆ ಮಾಡುವ ಗುಣವಿದೆ ಎಂದು ಅರ್ಥೈಸಿಕೊಳ್ಳುತ್ತಾಳೆ. ಕಷ್ಟದ ಸಮಯದಲ್ಲಿ ಈತನು ನನ್ನ ಕೈ ಬಿಡಲಾರ ಎಂದು ಭಾವಿಸುತ್ತಾಳೆ.
ಯಾವ ಸಮಯಕ್ಕೆ ಕಾಂಡೋಮ್ ಬದಲಿಸಬೇಕು? ಸನ್ ಟ್ಯಾಬ್ಲಾಯ್ಡ್ ಅಧ್ಯಯನ ಹೇಳ್ತಿರೋದೇನು?
ಚಂದ್ರನ ಮೇಲೆ ಚೀನಾ ಕಣ್ಣು! ಈ ಯೋಜನೆ ಬಗ್ಗೆ ತಿಳ್ಕೊಂಡ್ರೆ ಬೆಚ್ಚಿ ಬೀಳ್ತೀರಾ!