Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಪ್ರಮುಖ > Ketan-Siya Case ಪುಣೆ ಉದ್ಯಮಿ ಕೇತನ್ ಕೊ*ಲೆ ಕೇಸ್: ಸಿಯಾಳ ಮೇಲೆ ಅನುಮಾನವಿತ್ತು, ತಂದೆ ಮುಂದೆ ಕಣ್ಣೀರಿಟ್ಟಿದ್ದ ಮೃತ ಯುವಕ!
ಪ್ರಮುಖCrimeದೇಶಪ್ರಮುಖ

Ketan-Siya Case ಪುಣೆ ಉದ್ಯಮಿ ಕೇತನ್ ಕೊ*ಲೆ ಕೇಸ್: ಸಿಯಾಳ ಮೇಲೆ ಅನುಮಾನವಿತ್ತು, ತಂದೆ ಮುಂದೆ ಕಣ್ಣೀರಿಟ್ಟಿದ್ದ ಮೃತ ಯುವಕ!

Share
2 Min Read
SHARE

newsics.com| ನ್ಯೂಸಿಕ್ಸ್

ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್‌ವಾಲ್ ಕೊಲೆ ಪ್ರಕರಣಕ್ಕೆ (Pune Murder) ಸಂಬಂಧಿಸಿದಂತೆ ದಿನಕ್ಕೊಂದು ಆತಂಕಕಾರಿ ಮಾಹಿತಿ ಬಹಿರಂಗವಾಗುತ್ತಿದೆ. ಸಿಯಾ ಗೋಯಲ್ ಬೇರೆಯವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನವನ್ನು ಕೇತನ್ ಕೊಲೆಗೆ ಕೆಲವೇ ದಿನಗಳ ಮುಂಚೆ ತನ್ನ ತಂದೆಯ ಬಳಿ ವ್ಯಕ್ತಪಡಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ತನಿಖೆಯ ಪ್ರಕಾರ, ಕೇತನ್ ತನ್ನ ತಂದೆ ವಿಶಾಲ್ ಅಗರ್‌ವಾಲ್ ಅವರ ಬಳಿ ಸಿಯಾಳ ನಡವಳಿಕೆ, ಆಕೆಯ ಫೋನ್ ಯಾವಾಗಲೂ ಬ್ಯುಸಿ ಇರುತ್ತಿದ್ದ ವಿಚಾರ ಹಾಗೂ ಮಾತುಕತೆಯ ವೇಳೆ ಆಕೆ ಚೇತನ್ ಚೌಧರಿ ಎಂಬ ಯುವಕನ ಹೆಸರನ್ನು ಆಗಾಗ ಉಲ್ಲೇಖಿಸುತ್ತಿದ್ದ ಬಗ್ಗೆ ಹಲವು ಬಾರಿ ಹೇಳಿಕೊಂಡು ಆತಂಕ ವ್ಯಕ್ತಪಡಿಸಿದ್ದನು.

'ಪ್ರೀ-ವೆಡ್ಡಿಂಗ್ ಟೂರ್' ಕ್ಯಾನ್ಸಲ್ ಆದಾಗಲೇ ಶುರುವಾಗಿತ್ತು ಅಸಲಿ ಜಗಳ!

ಜೂನ್ 6 ರಂದು ಇಂಡೋನೇಷ್ಯಾದ ಬಾಲಿಗೆ ಹೋಗಬೇಕಿದ್ದ ಪ್ರವಾಸ ಕಾರಣಾಂತರಗಳಿಂದ ರದ್ದಾಗಿತ್ತು. ಇದಾದ ನಂತರ ಸಿಯಾ ಸಣ್ಣ-ಪುಟ್ಟ ವಿಚಾರಕ್ಕೂ ಕೇತನ್ ಜೊತೆ ಜಗಳ ಮಾಡತೊಡಗಿದ್ದಾಳೆ ಎಂದು ಕೇತನ್ ತನ್ನ ತಂದೆಗೆ ತಿಳಿಸಿದ್ದನು. ಆದರೆ ಇದಕ್ಕೆ ಪ್ರತಿಕ್ರಿಯಿಸಿದ್ದ ತಂದೆ ವಿಶಾಲ್, “ಅವಳು ಇನ್ನೂ ಚಿಕ್ಕವಳು. ಮದುವೆ ಹತ್ತಿರ ಬರುತ್ತಿರುವ ಕಾರಣ ಮಾನಸಿಕ ಒತ್ತಡದಿಂದ ಹೀಗೆ ವರ್ತಿಸುತ್ತಿರಬಹುದು. ನಾವು ಅವರ ಪೋಷಕರ ಜೊತೆ ಮಾತನಾಡಿ ತಿಳಿ ಹೇಳುತ್ತೇವೆ” ಎಂದು ಮಗನನ್ನು ಸಮಾಧಾನಪಡಿಸಿದ್ದರು.

ಕೇತನ್‌ನ ಅನುಮಾನಗಳ ನಡುವೆಯೂ, ಸಿಯಾ ಕುಟುಂಬವು ತಮಗೆ ಆಪ್ತ ಸಂಬಂಧಿಕರ ಮೂಲಕವೇ ಪರಿಚಯವಿದ್ದ ಕಾರಣ ಆತಂಕಪಡುವ ಅಗತ್ಯವಿಲ್ಲ ಎಂದು ಕುಟುಂಬ ಸದಸ್ಯರು ಕೇತನ್‌ಗೆ ಧೈರ್ಯ ತುಂಬಿದ್ದರು. ಆದರೆ, ಕುಟುಂಬಸ್ಥರ ಮಾತು ಕೇಳಿ ಸುಮ್ಮನಾದ ಕೇತನ್‌ಗೆ ಮುಂದಿನ ದಿನಗಳಲ್ಲಿ ಕಂಟಕ ಕಾದಿದೆ ಎಂಬ ಸಣ್ಣ ಸುಳಿವು ಸಹ ಸಿಕ್ಕಿರಲಿಲ್ಲ.

ಪ್ರೇಮಪಾಶಕ್ಕೆ ಬಲಿಯಾದ ಉದ್ಯಮಿ; ತನಿಖೆ ವೇಳೆ ಮುಖವಾಡ ಕಳಚಿದ ಪ್ರೇಮಿಗಳು!

ಪೊಲೀಸರ ಪ್ರಕಾರ, ಜೂನ್ 18 ರಂದು ಪುಣೆ ಸಮೀಪದ ಲೋಹಗಢ ಕೋಟೆಗೆ ಪ್ರವಾಸಕ್ಕೆ ತೆರಳಿದ್ದ ವೇಳೆ ಕೇತನ್ ಅಗರ್‌ವಾಲ್ ಅವರನ್ನು 20 ವರ್ಷದ ನಿಶ್ಚಿತಾರ್ಥದ ಯುವತಿ ಸಿಯಾ ಗೋಯಲ್ ಹಾಗೂ ಆಕೆಯ ಪ್ರಿಯಕರನೆಂದು ಆರೋಪಿಸಲಾಗಿರುವ 22 ವರ್ಷದ ಚೇತನ್ ಚೌಧರಿ ಸೇರಿ ಕಣಿವೆಗೆ ತಳ್ಳಿ ಕೊಲೆ ಮಾಡಿದ್ದಾರೆ.

ಮದುವೆಯಾಗಬೇಕಿದ್ದ ಯುವಕನನ್ನೇ ಪ್ರಿಯಕರನೊಂದಿಗೆ ಸೇರಿ ಯುವತಿ ಕೊಲೆ ಮಾಡಿರುವ ಈ ಘಟನೆ ಪುಣೆಯಲ್ಲಿ ತೀವ್ರ ಸಂಚಲನ ಮೂಡಿಸಿದೆ. ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಯಾ ಮತ್ತು ಚೇತನ್ ಇಬ್ಬರನ್ನೂ ಪೊಲೀಸರು ಬಂಧಿಸಿದ್ದು, ನ್ಯಾಯಾಲಯವು ಜುಲೈ 3 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಪ್ರಕರಣದ ಮುಂದಿನ ತನಿಖೆ ಚುರುಕಿನಿಂದ ಸಾಗಿದೆ.

 

Large crowd ತಿರುಪತಿಯಲ್ಲಿ ಮಿತಿಮೀರಿದ ಭಕ್ತರು: ಇಂದಿನಿಂದ ಸರ್ವ ದರ್ಶನ ಟಿಕೆಟ್ ವಿತರಣೆ ರದ್ದು, ಟಿಟಿಡಿ ಹೇಳಿದ್ದೇನು?

TAGGED:#KetanAgrawal #SiyaGoyal #PuneMurderCase #LohagadFort #CrimeNews #MurderInvestigation #BreakingNews #IndiaNews #WeddingTragedy #ViralNews #CrimeReport #JusticeForKetan #Pune #TrendingNews #KannadaNews
Share This Article
Facebook Twitter Copy Link Print
Previous Article Large crowd ತಿರುಪತಿಯಲ್ಲಿ ಮಿತಿಮೀರಿದ ಭಕ್ತರು: ಇಂದಿನಿಂದ ಸರ್ವ ದರ್ಶನ ಟಿಕೆಟ್ ವಿತರಣೆ ರದ್ದು, ಟಿಟಿಡಿ ಹೇಳಿದ್ದೇನು?
Next Article VB G RAM G ವಿಬಿ ಜಿ ರಾಮ್ ಜಿ ಇಂದಿನಿಂದ ಜಾರಿ, ಕೂಲಿ ದಿನ,‌ ದರ ಎಲ್ಲವೂ ಹೆಚ್ಚಳ!

Popular Posts

Highcourt Order ಶಾಲಾ ಬಸ್‌ನಲ್ಲಿ ಮಗು ಪೋಷಕರ ಕೈಸೇರುವವರೆಗೂ ಶಾಲೆಯದ್ದೇ ಜವಾಬ್ದಾರಿ: ಹೈಕೋರ್ಟ್ ಆದೇಶ

3 Min Read

Robbery attempt ಮೈಸೂರು‌- ಬೆಂಗಳೂರು ಹೆದ್ದಾರಿಯಲ್ಲಿ ದರೋಡೆಗೆ ಯತ್ನ, ಗುಂಡು ಹಾರಿಸಿದ ಮುಸುಕುಧಾರಿಗಳು: ಕೂದಲೆಳೆ ಅಂತರದಲ್ಲಿ ಟ್ರಕ್ ಚಾಲಕ‌ ಪಾರು

1 Min Read

Youtuber Dhanya ನಾನೇನೂ ಜೈಲಿಗೆ ಹೋಗಿಲ್ಲ, ತಂದೆ- ತಾಯಿಗೆ‌ ಕಾಟ ಕೊಡಬೇಡಿ ಎಂದ ಕಾಸರಗೋಡು ಯೂಟ್ಯೂಬರ್ ಧನ್ಯ!

1 Min Read

Life saver nurses ಕಾರಿನಲ್ಲೇ ಹೃದಯಾಘಾತ: ಚಲಿಸುತ್ತಿದ್ದ ಬಸ್‌ನಿಂದ ಜಿಗಿದು ಜೀವ ಉಳಿಸಿದ ಇಬ್ಬರು ನರ್ಸ್‌ಗಳಿಗೆ ಭಾರೀ ಶ್ಲಾಘನೆ!

1 Min Read

You Might Also Like

ಕರ್ನಾಟಕಪ್ರಮುಖ

Bellary ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ: ಕಾಮುಕ ಉಪನ್ಯಾಸಕನ ಬಂಧನ

1 Min Read
ದೇಶಪ್ರಮುಖವಿದೇಶವೈರಲ್

Stress job ಕಾರ್ಪೊರೇಟ್ ಕಂಪನಿ‌ ಸ್ಟ್ರೆಸ್ ತಾಳಲಾರದೆ ದೊಡ್ಡ ಸ್ಯಾಲರಿಯ ಜಾಬ್ ಬಿಟ್ಟು ವೇಟ್ರಸ್ ಆದ ಯುವತಿ! ವಿಡಿಯೋ ನೋಡಿ

3 Min Read
ಕರ್ನಾಟಕಪ್ರಮುಖ

Karnataka government| ಪ್ರಜಾಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ಹರ್ಷಗುಪ್ತ ನೇಮಕ

1 Min Read
ಕರ್ನಾಟಕದೇಶಪ್ರಮುಖ

Youtuber| ಕುಡಿದು ಕಾರ್ ಚಲಾಯಿಸಿದ ಖ್ಯಾತ ಯೂಟ್ಯೂಬರ್ – ಪ್ರಕರಣ ದಾಖಲು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?