newsics.com| ನ್ಯೂಸಿಕ್ಸ್
ಶಿಕ್ಷಕರು ಮತ್ತು ಮಕ್ಕಳ ಅನುಕೂಲಕ್ಕಾಗಿ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಶನಿವಾರದ ದಿನಕ್ಕೆ ಮಾತ್ರ ಅನ್ವಯಿಸುವಂತೆ ಶಾಲಾ ಸಮಯದ ಬದಲಾವಣೆ ಮಾಡಲಾಗಿದ್ದು, ಇಂದಿನಿಂದಲೇ ಜಾರಿಗೊಳ್ಳಲಿದೆ.
ಬೆಳಗ್ಗೆ 8.30ರಿಂದ ಶಾಲೆ ಆರಂಭವಾಗಿ ಮಧ್ಯಾಹ್ನ 12. 30ರವರೆಗೆ ತರಗತಿ ನಡೆಸಲು ಶಿಕ್ಷಣ ಇಲಾಖೆ ಏಕರೂಪದ ಸಮಯ ನಿಗದಿಪಡಿಸಿದೆ. ಇದು ಜೂ.27ರ ಶನಿವಾರದಿಂದಲೇ ಜಾರಿಯಾಗುತ್ತದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ರಾಜ್ಯಾದ್ಯಂತ ಪ್ರಾದೇಶಿಕವಾರು ಬೇರೆ ಬೇರೆ ಶಾಲಾ ಸಮಯವನ್ನು ಪಾಲಿಸಲಾಗುತ್ತಿದೆ. ಕೆಲವೆಡೆ ಬೆಳಗ್ಗೆ 7.30ರಿಂದ 11.30, ಇನ್ನು ಕೆಲವೆಡೆ ಬೆಳಗ್ಗೆ 8ರಿಂದ 12 ಗಂಟೆ ಹೀಗೆ ಬೇರೆ ಬೇರೆ ಸಮಯ ಪಾಲನೆ ಆಗುತ್ತಿದೆ. ಇದರ ಬದಲು ವಿದ್ಯಾರ್ಥಿ ಹಾಗೂ ಶಿಕ್ಷಕ ಸ್ನೇಹಿಯಾಗಿ ರಾಜ್ಯಾದ್ಯಂತ ಒಂದೇ ಸಮಯ ನಿಗದಿಪಡಿಸಿ ಅದನ್ನು ಅನುಸರಿಸಲು ಸೂಚಿಸಲಾಗಿದೆ.
ರಾಜ್ಯ ಸರ್ಕಾರ ದೇಶದಲ್ಲಿಯೇ ಮೊದಲ ಬಾರಿಗೆ ಸರ್ಕಾರಿ ನೌಕರರಿಗೆ ಕರ್ತವ್ಯ ಮೊಬೈಲ್ ಅಪ್ಲಿಕೇಷನ್ ಮೂಲಕ ಎಐ ಆಧಾರಿತ ಡಿಜಿಟಲ್ ಹಾಜರಾತಿ ಜಾರಿಗೊಳಿಸಿದೆ. ಈವರೆಗೆ ಶಿಕ್ಷಕರ ಹಾಜರಾತಿ ಪುಸ್ತಕದಲ್ಲಿ ಅವರ ಹಾಜರಿ ದಾಖಲಾಗುತ್ತಿತ್ತು. ಶನಿವಾರ ಬಸ್ ಸಿಗದಿರುವುದು ಸೇರಿದಂತೆ ಬೇರೆ ಕಾರಣಗಳಿಂದ ಶಿಕ್ಷಕರು ತಡವಾಗಿ ಬಂದರೂ ಸಮಸ್ಯೆ ಆಗುತ್ತಿರಲಿಲ್ಲ. ಆದರೆ, ಈಗ ಒಂದು ನಿಮಿಷ ತಡವಾದರೂ ಗೈರು ಹಾಜರಾತಿ ಆಗುತ್ತದೆ. ಗ್ರಾಮೀಣ ಭಾಗದಲ್ಲಿ ಸರ್ಕಾರಿ ಸಾರಿಗೆಯನ್ನೇ ನಂಬಿರುವ ವಿದ್ಯಾರ್ಥಿಗಳಿಗೂ ತೊಂದರೆಯಾಗುತ್ತಿದೆ. ಹಾಗಾಗಿ ಶನಿವಾರ ಶಾಲಾ ಸಮಯ ಬದಲಾವಣೆ ಮಾಡಬೇಕೆಂಬ ಅಭಿಪ್ರಾಯ ಶಿಕ್ಷಕರ ವಲಯದಲ್ಲಿ ಕೇಳಿಬಂದಿತ್ತು. ಹಾಗಾಗಿ ಸಮಯ ತಿದ್ದುಪಡಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Richest CEO Shankh ಈ ವ್ಯಕ್ತಿಯ ದಿನದ ಸಂಬಳ 21 ಕೋಟಿ! ಎಲ್ಲೆಲ್ಲೂ ಈಗ ಇವರದೇ ಚರ್ಚೆ… ಯಾರಿವರು?
Women living alone ಮದುವೆ ಬಳಿಕವೂ ಒಂಟಿ ಜೀವನ ನಡೆಸುವ ಮಹಿಳೆಯರ ಪ್ರಮಾಣ ಗಣನೀಯ ಹೆಚ್ಚಳ! ಟಾಪ್ 3ನಲ್ಲಿ ಕರ್ನಾಟಕ
Ayodhya scam ರಾಮನಿಗೆ ಭಕ್ತರು ಅರ್ಪಿಸಿದ ಚಿನ್ನಾಭರಣಗಳನ್ನೂ ದೋಚಿದ ಖದೀಮರು! ಮಾಸ್ಟರ್‌ಮೈಂಡ್ ಯಾರು?