newsics.com | ನ್ಯೂಸಿಕ್ಸ್
ಮುಂಬೈ: ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಮಾಲ್ವಣ್ ತಾಲೂಕಿನ ವಾಯರಿ ಎಂಬಲ್ಲಿನ ರೆಸಾರ್ಟ್ ಒಂದರಲ್ಲಿ ಆಘಾತಕಾರಿ ದುರಂತ ಸಂಭವಿಸಿದೆ.
25 ವರ್ಷದ ಶ್ರೇಣಿಕ್ ಮಿಲಿಂದ್ ಟಾಕಳೆ ಎಂಬ ಯುವಕ ಪ್ರವಾಸಕ್ಕೆಂದು ಬಂದು ಪ್ರಾಣಕಳೆದುಕೊಂಡಿದ್ದಾನೆ.
ಶ್ರೇಣಿಕ್ ತನ್ನ ಸ್ನೇಹಿತರೊಂದಿಗೆ ಮಾಲ್ವಣ್ಗೆ ಪ್ರವಾಸಕ್ಕೆ ಬಂದಿದ್ದನು. ರೆಸಾರ್ಟ್ನ ಈಜುಕೊಳದ ಒಂದು ಭಾಗ ಕೇವಲ 4 ಅಡಿ ಆಳ ಹೊಂದಿತ್ತು ಈಜುಕೊಳದ ಆಳದ ಬಗ್ಗೆ ಸರಿಯಾದ ಅಂದಾಜು ಇಲ್ಲದೆ, ಶ್ರೇಣಿಕ್ ಸುಮಾರು 8 ರಿಂದ 10 ಅಡಿ ಎತ್ತರದಿಂದ ನೇರವಾಗಿ ಆ 4 ಅಡಿ ಆಳದ ನೀರಿಗೆ ಧುಮುಕಿದ್ದಾನೆ.
ನೀರು ತೀರಾ ಕಡಿಮೆ ಆಳವಿದ್ದ ಕಾರಣ, ಆತ ಧುಮುಕಿದ ತಕ್ಷಣ ಆತನ ತಲೆ ಅತ್ಯಂತ ವೇಗವಾಗಿ ಈಜುಕೊಳದ ತಳಭಾಗಕ್ಕೆ ಬಲವಾಗಿ ಅಪ್ಪಳಿಸಿದೆ. ಪರಿಣಾಮವಾಗಿ ಆತನ ತಲೆ ಮತ್ತು ಕುತ್ತಿಗೆಗೆ ಗಂಭೀರವಾದ ಆಂತರಿಕ ಗಾಯಗಳಾಗಿ, ಸ್ಥಳದಲ್ಲೇ ಪ್ರಾಣಪಕ್ಷಿ ಹಾರಿಹೋಗಿದೆ. ಸ್ನೇಹಿತರು ತಕ್ಷಣ ಗ್ರಾಮೀಣ ಆಸ್ಪತ್ರೆಗೆ ಕರೆದೊಯ್ದರಾದರೂ ಅಷ್ಟರಲ್ಲೇ ತಡವಾಗಿತ್ತು. ಮಾಲ್ವಣ್ ಪೊಲೀಸರು ಇದನ್ನು ಆಕಸ್ಮಿಕ ಸಾವು ಎಂದು ದಾಖಲಿಸಿಕೊಂಡಿದ್ದಾರೆ.
वायरी (ता. मालवण) येथील एका रिसॉर्टमधील जलतरण तलावात उंचावरून उडी मारताना २५ वर्षीय युवकाचा दुर्दैवी मृत्यू झाला. या दुर्घटनेचा व्हिडिओ सोशल मीडियावर व्हायरल होत आहे.#sakal #malvanresort #swimmingpoolaccident #sanglitourist pic.twitter.com/rxoZRP56DJ
— SakalMedia (@SakalMediaNews) June 27, 2026
Ayodhya scam ಅಯೋಧ್ಯೆ ದೇಣಿಗೆ ಹಣ ಲೂಟಿಗೆ ಚಂಪತ್ರಾಯ್, ಮಿಶ್ರಾ ಸಹಕಾರ! ಎಸ್ಐಟಿ ವರದಿ ಹೇಳ್ತಿರೋದೇನು?
Linganamakki Dam ಲಿಂಗನಮಕ್ಕಿ ಜಲಾಶಯದಲ್ಲಿ ನೀರಿಲ್ಲ: ವಿದ್ಯುತ್ ಉತ್ಪಾದನೆ ಸ್ಥಗಿತ
https://www.newsics.com/2026/06/27/kichcha-sudeep-6