Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > War atmosphere ಇರಾನ್‌ ದಾಳಿಗೆ ಅಮೆರಿಕ ಪ್ರತಿದಾಳಿ: ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧ ವಾತಾವರಣ
ಪ್ರಮುಖವಿದೇಶ

War atmosphere ಇರಾನ್‌ ದಾಳಿಗೆ ಅಮೆರಿಕ ಪ್ರತಿದಾಳಿ: ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧ ವಾತಾವರಣ

Share
2 Min Read
SHARE

newsics.com| ನ್ಯೂಸಿಕ್ಸ್

ವಾಷಿಂಗ್ಟನ್: ಹಾರ್ಮುಜ್ ಜಲಸಂಧಿಯಲ್ಲಿ ಸರಕು ಸಾಗಣೆ ಹಡಗಿನ ಮೇಲೆ ನಡೆದ ಡ್ರೋನ್ ದಾಳಿಗೆ ಪ್ರತಿಯಾಗಿ ಅಮೆರಿಕ ಶುಕ್ರವಾರ ಇರಾನ್‌ನ ಕ್ಷಿಪಣಿ ಮತ್ತು ಡ್ರೋನ್ ನೆಲೆಗಳ ಮೇಲೆ ವಾಯುದಾಳಿ ನಡೆಸಿದೆ.

ಕಳೆದ ವಾರವೇ ಯುದ್ಧ ಅಂತ್ಯಗೊಳಿಸಲು ಹಾಗೂ ಹಾರ್ಮುಜ್ ಜಲಸಂಧಿಯನ್ನು ಮತ್ತೆ ಸಂಪೂರ್ಣವಾಗಿ ತೆರೆಯಲು ಉಭಯ ದೇಶಗಳ ನಡುವೆ ಮಧ್ಯಂತರ ಒಪ್ಪಂದವಾಗಿದ್ದರೂ, ಈ ದಾಳಿ ಹಿನ್ನಡೆಯುಂಟು ಮಾಡಿದಂತಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸರಕು ಹಡಗಿನ ಮೇಲಿನ ಡ್ರೋನ್ ದಾಳಿ ಕದನ ವಿರಾಮದ ಸ್ಪಷ್ಟ ಉಲ್ಲಂಘನೆ ಎಂದು ಆರೋಪಿಸಿದ್ದಾರೆ.

ನಿನ್ನೆ ಅವರು ನಾಲ್ಕು ಬಾರಿ ದಾಳಿ ನಡೆಸಿರುವುದು ನನಗೆ ಇಷ್ಟವಾಗಲಿಲ್ಲ,” ಎಂದು ಶ್ವೇತಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದ ಟ್ರಂಪ್, ಅಮೆರಿಕ ಪ್ರತಿದಾಳಿ ನಡೆಸುತ್ತದೆಯೇ ಎಂಬ ಪ್ರಶ್ನೆಗೆ ಮೊದಲು “ನಿಮಗೇ ಗೊತ್ತಾಗುತ್ತದೆ” ಎಂದು ಉತ್ತರಿಸಿದ್ದರು.

ಈ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಇರಾನ್‌ನಲ್ಲಿರುವ ಕ್ಷಿಪಣಿ ಉಡಾವಣಾ ಕೇಂದ್ರಗಳು, ಡ್ರೋನ್ ತಾಣಗಳು ಹಾಗೂ ಕರಾವಳಿ ರಾಡಾರ್ ವ್ಯವಸ್ಥೆಗಳ ಮೇಲೆ ನಿಖರ ವಾಯುದಾಳಿ ನಡೆಸಿರುವುದಾಗಿ ಘೋಷಿಸಿದೆ. ಸುಮಾರು ಒಂದು ಗಂಟೆಯೊಳಗೆ ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕ ಮತ್ತು ಇರಾನ್ ನಡುವಿನ ಮಧ್ಯಂತರ ಒಪ್ಪಂದದ ಪ್ರಕಾರ, ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸುರಕ್ಷಿತ ಸಂಚಾರ, ಇರಾನ್‌ನ ಅಧಿಕ ಪ್ರಮಾಣದಲ್ಲಿ ಸಂಸ್ಕರಿಸಿದ ಯುರೇನಿಯಂ ಸಂಗ್ರಹ ಸೇರಿದಂತೆ ಹಲವು ವಿಷಯಗಳಲ್ಲಿ 60 ದಿನಗಳೊಳಗೆ ಅಂತಿಮ ಒಪ್ಪಂದಕ್ಕೆ ಬರಬೇಕಿದೆ. ಆದರೆ, ಇತ್ತೀಚಿನ ಬೆಳವಣಿಗೆಗಳಿಂದ ಮಾತುಕತೆಗಳ ಭವಿಷ್ಯದ ಬಗ್ಗೆ ಮತ್ತೆ ಅನುಮಾನಗಳು ಮೂಡಿವೆ.

ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತಾ ಸಮಿತಿಯ ಅಧ್ಯಕ್ಷ ಇಬ್ರಾಹಿಂ ಅಜೀಜಿ, ಟ್ರಂಪ್ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ತಿರುಗೇಟು ನೀಡಿ, “ಹಾರ್ಮುಜ್ ಜಲಸಂಧಿಯ ನಿಯಂತ್ರಣ ಇರಾನ್‌ನಲ್ಲಿದೆ. ನಿಯಮಗಳನ್ನು ಗೌರವಿಸಿ. ನಿಯಂತ್ರಣವನ್ನು ಕದನ ವಿರಾಮ ಉಲ್ಲಂಘನೆ ಎಂದು ತಪ್ಪಾಗಿ ಅರ್ಥೈಸಬೇಡಿ. ಇದು ಕದನ ವಿರಾಮದ ಉಲ್ಲಂಘನೆಯಲ್ಲ, ಕದನ ವಿರಾಮದ ನಿರ್ವಹಣೆ” ಎಂದು ಹೇಳಿದ್ದಾರೆ.

ಸಮುದ್ರ ಮಾಹಿತಿ ಸಂಸ್ಥೆ ವಿಂಡ್‌ವಾರ್ಡ್ ಪ್ರಕಾರ, ಘಟನೆ ಬಳಿಕವೂ 43 ಹಡಗುಗಳು ಜಲಸಂಧಿಯನ್ನು ದಾಟಿದರೂ, ಸಹಜ ಸ್ಥಿತಿಗೆ ಮರಳುವ ಪ್ರಕ್ರಿಯೆ ನಿಧಾನಗೊಂಡಿದೆ. ಯುದ್ಧ ಆರಂಭಕ್ಕೂ ಮುನ್ನ ಪ್ರತಿದಿನ ಸರಾಸರಿ 130ಕ್ಕೂ ಹೆಚ್ಚು ಹಡಗುಗಳು ಸಂಚರಿಸುತ್ತಿದ್ದರೆ, ಬುಧವಾರ 78 ಹಡಗುಗಳು ಸಂಚರಿಸಿದ್ದವು. ಆದರೆ ದಾಳಿಯ ಬಳಿಕ ಕನಿಷ್ಠ ಎರಡು ತೈಲ ಟ್ಯಾಂಕರ್‌ಗಳು ಮಾರ್ಗ ಮಧ್ಯದಲ್ಲೇ ಹಿಂದಿರುಗಿವೆ ಎಂದು ತಿಳಿಸಿದೆ.

Clouds Disappear ಭಾರತದಲ್ಲಿ ಮಳೆ ಮೋಡಗಳೇ‌ ಮಾಯ! ಉಪಗ್ರಹ ಚಿತ್ರಗಳಲ್ಲಿ ಮುಂಗಾರು ಆತಂಕ ತೀವ್ರ

Cancer medicine ಭಾರತಕ್ಕೆ ಎಂಟ್ರಿ ಕೊಟ್ಟ ಅತ್ಯಾಧುನಿಕ ಕ್ಯಾನ್ಸರ್ ಔಷಧ

Ayodhya scam ರಾಮನಿಗೆ ಭಕ್ತರು ಅರ್ಪಿಸಿದ ಚಿನ್ನಾಭರಣಗಳನ್ನೂ ದೋಚಿದ ಖದೀಮರು! ಮಾಸ್ಟರ್‌ಮೈಂಡ್ ಯಾರು?

TAGGED:#iran #amarica #war #hormuj #attack #news #newsics
Share This Article
Facebook Twitter Copy Link Print
Previous Article School time change ಶನಿವಾರದ ಶಾಲಾ ಸಮಯ ಬದಲು: ಇಂದಿನಿಂದಲೇ ಜಾರಿ
Next Article Layoffs ಫೋಕ್ಸ್‌ವ್ಯಾಗನ್ ಕಂಪನಿಯಲ್ಲಿ 1 ಲಕ್ಷ ನೌಕರರ ವಜಾ! 4 ಪ್ರಮುಖ ಕಾರ್ಖಾನೆ ಬಂದ್?

Popular Posts

High court order| ಖಾತೆಯಲ್ಲಿ ಕನಿಷ್ಠ ಠೇವಣಿ ಕಾಯ್ದಿರಿಸದ ಗ್ರಾಹಕರಿಗೆ ಬ್ಯಾಂಕ್​ ವಿಧಿಸುವ ದಂಡಕ್ಕೆ ಜಿಎಸ್​ಟಿ ಅನ್ವಯವಾಗುವುದಿಲ್ಲ :​ ಹೈಕೋರ್ಟ್

2 Min Read

Adventure trip SSLC ಬಾಲಕಿ ಜತೆ 2 PUC ಹುಡುಗರು ಎಸ್ಕೇಪ್! ಕಾಡಿನ ಮಧ್ಯೆ ಟೆಂಟ್ ಹಾಕಿ ಮಾಡಿದ್ದೇನು?

3 Min Read

Danger swimming pool ಡ್ಯಾನ್ಸ್ ಮಾಡುತ್ತಾ ರೆಸಾರ್ಟ್ ಈಜುಕೊಳಕ್ಕೆ ಧುಮುಕಿದ ಯುವಕ ಮೃತಪಟ್ಟಿದ್ದು ಹೇಗೆ? ವಿಡಿಯೋ ನೋಡಿ

1 Min Read

Ayodhya scam ಅಯೋಧ್ಯೆ ದೇಣಿಗೆ ಹಣ ಲೂಟಿಗೆ ಚಂಪತ್‌ರಾಯ್, ಮಿಶ್ರಾ ಸಹಕಾರ! ಎಸ್ಐಟಿ ವರದಿ ಹೇಳ್ತಿರೋದೇನು?

2 Min Read

You Might Also Like

ಕರ್ನಾಟಕಪ್ರಮುಖ

Linganamakki Dam ಲಿಂಗನಮಕ್ಕಿ ಜಲಾಶಯದಲ್ಲಿ ನೀರಿಲ್ಲ: ವಿದ್ಯುತ್ ಉತ್ಪಾದನೆ ಸ್ಥಗಿತ

1 Min Read
filmಕರ್ನಾಟಕಪ್ರಮುಖ

Kichcha Sudeep: 6.5 ಕೋಟಿ ರೂ. ಬೆಲೆಯ ಕ್ಯಾರವನ್ ಖರೀದಿಸಿದ ಕಿಚ್ಚ ಸುದೀಪ್

1 Min Read
ಕರ್ನಾಟಕಪ್ರಮುಖ

Lover kidnapped ಪ್ರೇಯಸಿ ಕಿಡ್ನ್ಯಾಪ್ ಮಾಡಿದ್ದಾಗಲೇ ಜಗಳ! ಚಾಕು ಇರಿತ, ಕಾರು ಸ್ಫೋಟಿಸಿ ಪ್ರಿಯಕರ ಆತ್ಮ*ಹ*ತ್ಯೆ, ಬೆಂಗಳೂರು ಯುವತಿ ಪಾರು

1 Min Read
ಕರ್ನಾಟಕಪ್ರಮುಖಮನರಂಜನೆ

Heart attack ಚಿತ್ರ ನಿರ್ಮಾಪಕ‌ ಬಾ‌ ಮಾ ಹರೀಶ್ ಮಗ ಉಲ್ಲಾಸ್ ಗೌಡ ಇನ್ನಿಲ್ಲ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?