newsics.com/ನ್ಯೂಸಿಕ್ಸ್
ಬಿಗ್ ಬಾಸ್ ಕನ್ನಡ ಸೀಸನ್ 13′ ಶೋನಲ್ಲಿ ಜನ ಸಾಮಾನ್ಯರು ಕೂಡ ಭಾಗವಹಿಸಬಹುದು. ಅದಕ್ಕಾಗಿ ಆಡಿಷನ್ ಕರೆಯಲಾಗಿದೆ. ಯಾವ ರೀತಿ ಆಡಿಷನ್ ನೀಡಬೇಕು ಎಂಬುದನ್ನು ಈ ವಿಡಿಯೋ ಮೂಲಕ ವಿವರಿಸಲಾಗಿದೆ.
‘ಕಲರ್ಸ್ ಕನ್ನಡ’ ವಾಹಿನಿಯು ಈ ವಿಡಿಯೋ ಹಂಚಿಕೊಂಡಿದೆ. ನಿಮ್ಮಲ್ಲಿ ಪ್ರತಿಭೆ ಇದ್ದರೆ, ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಸಬೇಕು ಎಂಬ ಆಸೆ ಇದ್ದರೆ ಮೂರು ನಿಮಿಷದ ವಿಡಿಯೋವನ್ನು ‘colorskannada.jiostar.com’ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಬೇಕು. ಯಾವ ರೀತಿ ಅಪ್ಲೋಡ್ ಮಾಡಬೇಕು ಎಂಬುದನ್ನು ಈ ವಿಡಿಯೋದಲ್ಲಿ ಹಂತ ಹಂತವಾಗಿ ವಿವರಿಸಲಾಗಿದೆ. ಈ ಆಡಿಷನ್ ಮೂಲಕ ಆಯ್ಕೆ ಆದವರಿಗೆ ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಸುವ ಚಾನ್ಸ್ ಸಿಗಲಿದೆ. ಅಂತಿಮವಾಗಿ ಯಾರು ಆಯ್ಕೆ ಆಗುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಕಿಚ್ಚ ಸುದೀಪ್ ಅವರೇ ಈ ಸಲ ಕೂಡ ಬಿಗ್ ಬಾಸ್ ಶೋ ನಡೆಸಿಕೊಡಲಿದ್ದಾರೆ.