Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ರಾಜ್ಯ ಸರ್ಕಾರಿ ನೌಕರರ ವಾರ್ಷಿಕ ವೇತನ ಬಡ್ತಿ’ ಬಗ್ಗೆ ಸರ್ಕಾರದ ಮಹತ್ವದ ಆದೇಶ
ಕರ್ನಾಟಕಪ್ರಮುಖ

ರಾಜ್ಯ ಸರ್ಕಾರಿ ನೌಕರರ ವಾರ್ಷಿಕ ವೇತನ ಬಡ್ತಿ’ ಬಗ್ಗೆ ಸರ್ಕಾರದ ಮಹತ್ವದ ಆದೇಶ

Share
2 Min Read
SHARE

newsics.com/ನ್ಯೂಸಿಕ್ಸ್

ರಾಜ್ಯ ಸರ್ಕಾರಿ ನೌಕರರಿಗೆ ಕರ್ನಾಟಕ ಸರ್ಕಾರ ಮಹತ್ವದ ಸಿಹಿ ಸುದ್ದಿ ನೀಡಿದ್ದು, ವಾರ್ಷಿಕ ವೇತನ ಬಡ್ತಿ ಪಡೆಯುವ ದಿನಾಂಕಕ್ಕಿಂತ ಒಂದು ದಿನ ಮುಂಚಿತವಾಗಿ ನಿವೃತ್ತಿಯಾಗುವ ನೌಕರರಿಗೂ ಕಾಲ್ಪನಿಕ ವಾರ್ಷಿಕ ವೇತನ ಬಡ್ತಿ ಮಂಜೂರು ಮಾಡುವ  ಆದೇಶ ಹೊರಡಿಸಿದೆ.

ಸರ್ಕಾರದ ಈ ನಿರ್ಧಾರದಿಂದಾಗಿ ನಿವೃತ್ತಿ ಹೊಂದುತ್ತಿರುವ ಸಾವಿರಾರು ನೌಕರರ ಮಾಸಿಕ ಪಿಂಚಣಿ ಹೆಚ್ಚಳವಾಗಲಿದ್ದು, ನಿವೃತ್ತ ನೌಕರರ ವಲಯದಲ್ಲಿ ಹರ್ಷ ವ್ಯಕ್ತವಾಗಿದೆ.

ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮ 51(1) ರ ಪ್ರಕಾರ, ವಾರ್ಷಿಕ ವೇತನ ಬಡ್ತಿಯು “ಅದನ್ನು ಗಳಿಸಿದ ದಿನದ ಮರುದಿನದಿಂದ” ಜಾರಿಗೆ ಬರುತ್ತದೆ. ಇದರಿಂದಾಗಿ ಒಂದು ವರ್ಷದ ಅರ್ಹತಾದಾಯಕ ಸೇವೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರೂ, ವೇತನ ಬಡ್ತಿ ಸಿಗುವ ಹಿಂದಿನ ದಿನವೇ ವಯೋನಿವೃತ್ತಿ ಹೊಂದುವ ನೌಕರರು ಕೇವಲ ಒಂದು ದಿನದ ತಾಂತ್ರಿಕತೆಯ ಆಧಾರದ ಮೇಲೆ ತಮಗೆ ಸಿಗಬೇಕಾದ ಕೊನೆಯ ವೇತನ ಬಡ್ತಿಯ ಲಾಭದಿಂದ ವಂಚಿತರಾಗುತ್ತಿದ್ದರು. ಇದು ಅವರ ಒಟ್ಟಾರೆ ಪಿಂಚಣಿ ಲೆಕ್ಕಾಚಾರದ ಮೇಲೂ ಭಾರಿ ನಕಾರಾತ್ಮಕ ಪರಿಣಾಮ ಬೀರುತ್ತಿತ್ತು.

ಈ ತಾರತಮ್ಯದ ವಿರುದ್ಧ ಸುಪ್ರೀಂ ಕೋರ್ಟ್ ಹಾಗೂ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ (KSAT) ನೀಡಿದ್ದ ಮಹತ್ವದ ತೀರ್ಪುಗಳನ್ನು ಪುರಸ್ಕರಿಸಿರುವ ರಾಜ್ಯ ಸರ್ಕಾರ, ಪ್ರಸಕ್ತ ಸಾಲಿನ ಜೂನ್ 4ರಂದು (ಆದೇಶ ಸಂಖ್ಯೆ: ಆಇ 3 ಎಸ್‌ಆರ್‌ಎಸ್ 2026) ಈ ಐತಿಹಾಸಿಕ ಆದೇಶವನ್ನು ಹೊರಡಿಸಿದೆ.

ಸರ್ಕಾರದ ಆದೇಶದಂತೆ, ವಾರ್ಷಿಕ ವೇತನ ಬಡ್ತಿ ಪಡೆಯುವ ದಿನಾಂಕದ ಹಿಂದಿನ ದಿನ ನಿವೃತ್ತಿಯಾಗುವ ಅರ್ಹ ನೌಕರರಿಗೆ ಒಂದು ಕಾಲ್ಪನಿಕ ವೇತನ ಬಡ್ತಿ ನೀಡಲಾಗುತ್ತದೆ. ಈ ಬಡ್ತಿಯನ್ನು ಕೊನೆಯ ವೇತನಕ್ಕೆ ಸೇರಿಸಿ ಮಾಸಿಕ ಪಿಂಚಣಿ ಲೆಕ್ಕಾಚಾರ ಮಾಡಲಾಗುತ್ತದೆ.

 

ಆದರೆ, ಈ ಸೌಲಭ್ಯವು ಕೇವಲ ಪಿಂಚಣಿ ಲೆಕ್ಕಾಚಾರಕ್ಕೆ ಮಾತ್ರ ಅನ್ವಯವಾಗಲಿದ್ದು, ನಿವೃತ್ತಿ ಉಪದನ , ಪರಿವರ್ತಿತ ಪಿಂಚಣಿ , ಗಳಿಕೆ ರಜೆ ನಗದೀಕರಣ ಸೇರಿದಂತೆ ಇತರ ಯಾವುದೇ ಸೇವಾಂತ್ಯ ಸೌಲಭ್ಯಗಳ ಲೆಕ್ಕಾಚಾರಕ್ಕೆ ಅನ್ವಯಿಸುವುದಿಲ್ಲ.

 

ಬಾಕಿ ಹಣ ಇಲ್ಲ

ಈ ಆದೇಶದ ಆರ್ಥಿಕ ಪ್ರಯೋಜನಗಳು ಭವಿಷ್ಯವರ್ತಿಯಾಗಿ ಮಾತ್ರ ಜಾರಿಯಾಗಲಿವೆ. ಹೀಗಾಗಿ ಹಿಂದಿನ ಅವಧಿಗೆ ಸಂಬಂಧಿಸಿದ ಯಾವುದೇ ಬಾಕಿ ಹಣ (Arrears) ಪಾವತಿಯಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

 

ಅರ್ಹ ಪಿಂಚಣಿದಾರರು ಮೃತಪಟ್ಟಿದ್ದಲ್ಲಿ, ಅವರ ಕುಟುಂಬ ಪಿಂಚಣಿದಾರರಿಗೂ ಈ ಸೌಲಭ್ಯ ದೊರೆಯಲಿದೆ.

 

 

ಯಾರಿಗೆ ಅನ್ವಯಿಸುವುದಿಲ್ಲ?

ಸೇವೆಯಲ್ಲಿದ್ದಾಗ ಮೃತಪಟ್ಟ ನೌಕರರಿಗೆ, ಕಡ್ಡಾಯ ನಿವೃತ್ತಿಯ ಶಿಕ್ಷೆಗೆ ಒಳಗಾದವರಿಗೆ ಹಾಗೂ ಸ್ಥಗಿತ ವೇತನ ಬಡ್ತಿ (Stagnation Increment) ಪ್ರಕರಣಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ಸರ್ಕಾರ ತಿಳಿಸಿದೆ.

ಹೊಸ ಆದೇಶದ ಅನುಷ್ಠಾನಕ್ಕೆ ಅನುಗುಣವಾಗಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳಿಗೆ ಅಗತ್ಯ ತಿದ್ದುಪಡಿಗಳನ್ನು ಶೀಘ್ರದಲ್ಲೇ ತರಲಾಗುವುದು. ಇನ್ಮುಂದೆ ಪಿಂಚಣಿ ಮಂಜೂರಾತಿ ಪ್ರಾಧಿಕಾರಗಳು ಹಾಗೂ ಮಹಾಲೇಖಪಾಲರ ಕಚೇರಿ ಈ ಹೊಸ ನಿಯಮದ ಅನ್ವಯವೇ ಪಿಂಚಣಿ ನಿಗದಿಪಡಿಸಲಿವೆ ಎಂದು ಸರ್ಕಾರ ತಿಳಿಸಿದೆ.

ಮಳೆಗಾಲ ಮುಕ್ತಾಯದವರೆಗೆ ಕೊಡಗು ಜಿಲ್ಲೆಯಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧ

 

TAGGED:Important government order regarding annual salary hike of state government employees
Share This Article
Facebook Twitter Copy Link Print
Previous Article ಮಳೆಗಾಲ ಮುಕ್ತಾಯದವರೆಗೆ ಕೊಡಗು ಜಿಲ್ಲೆಯಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧ
Next Article ₹6,000 ಸಂಬಳಕ್ಕೆ ಸೇರಿದ ಸರ್ಕಾರಿ ಇಂಜಿನಿಯರ್‌ ಆಸ್ತಿ ಮೌಲ್ಯ ಕಂಡು ದಂಗಾದ ಅಧಿಕಾರಿಗಳು

Popular Posts

ಎಳನೀರಿಗೆ ನಿಂಬೆ ರಸ ಹಿಂಡಿ ಕುಡಿದರೆ ಏನಾಗುತ್ತೆ ?

1 Min Read

ಬಿಗ್ ಬಾಸ್ ಶೋಗೆ ಆಡಿಷನ್ ಕೊಡೋದು ಹೇಗೆ? ಈ ವಿಡಿಯೋ ನೋಡಿ

1 Min Read

₹6,000 ಸಂಬಳಕ್ಕೆ ಸೇರಿದ ಸರ್ಕಾರಿ ಇಂಜಿನಿಯರ್‌ ಆಸ್ತಿ ಮೌಲ್ಯ ಕಂಡು ದಂಗಾದ ಅಧಿಕಾರಿಗಳು

2 Min Read

ರಾಜ್ಯ ಸರ್ಕಾರಿ ನೌಕರರ ವಾರ್ಷಿಕ ವೇತನ ಬಡ್ತಿ’ ಬಗ್ಗೆ ಸರ್ಕಾರದ ಮಹತ್ವದ ಆದೇಶ

2 Min Read

You Might Also Like

ಕರ್ನಾಟಕಪ್ರಮುಖ

ಮಳೆಗಾಲ ಮುಕ್ತಾಯದವರೆಗೆ ಕೊಡಗು ಜಿಲ್ಲೆಯಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧ

1 Min Read
ದೇಶಪ್ರಮುಖ

ಪ್ಲೇಯರ್ ಜತೆ ಮದುವೆ, ಸ್ನೇಹಿತನೊಂದಿಗೆ ಸರಸ! ಮುಂದಾಗಿದ್ದೇನು?

2 Min Read
ಕರ್ನಾಟಕಪ್ರಮುಖ

ಮದುವೆ ಆಗೋದಾಗಿ ಹೇಳಿ ಯುವಕನಿಗೆ 35 ಲಕ್ಷ ರೂ ವಂಚಿಸಿದ ಯುವತಿ

1 Min Read
ಕರ್ನಾಟಕಪ್ರಮುಖ

ಹೆತ್ತ ತಂದೆ, ಒಡಹುಟ್ಟಿದ ಅಕ್ಕನನ್ನ ಕೊಂದ ಪಾಪಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?