newsics.com/ನ್ಯೂಸಿಕ್ಸ್
ರೇಣುಕಾಸ್ವಾಮಿ ಕೊಲೆ ಆರೋಪದ ಮೇಲೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ (Actor Darshan) ತೀರಾ ಸೊರಗಿಹೋಗಿದ್ದಾರೆಯೇ?
ಜೈಲಿನಲ್ಲೇ ಇರಬೇಕಾದ ಅನಿವಾರ್ಯತೆಯಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿದ್ದರೆಂಬ ವದಂತಿ ಬೆನ್ನಲ್ಲೇ ದರ್ಶನ್ ಅವರದ್ದು ಎನ್ನಲಾದ ಫೋಟೋವೊಂದು ವೈರಲ್ ಆಗಿದ್ದು, ಡಿ ಬಾಸ್ ಅಭಿಮಾನಿಗಳನ್ನು ಚಿಂತೆಗೀಡುಮಾಡಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿರುವ ದರ್ಶನ್ ಸುಪ್ರೀಂ ಕೋರ್ಟ್‌ವರೆಗೆ ಹೋದರೂ ಜಾಮೀನು ಸಿಗಲಿಲ್ಲ. ಹೀಗಾಗಿ ತಮ್ಮ ಹಿಂದಿನ ಎಲ್ಲಾ ವರ್ಚಸ್ಸು, ದೇಹದಾರ್ಢ್ಯತೆಗಳನ್ನು ಕಳೆದುಕೊಂಡಂತೆ ಕಾಣುತ್ತಿರುವ ನಟ ದರ್ಶನ್, ವೈರಲ್ ಆಗಿರುವ ಫೋಟೋದಲ್ಲಿ ತೀವ್ರವಾಗಿ ಸೊರಗಿದಂತೆ ಕಾಣಿಸಿದ್ದಾರೆ.

ನಟ ದರ್ಶನ್ ಅವರಿಗೆ ಜೈಲಿನಲ್ಲಿ ಮೂಲ ಸೌಲಭ್ಯಗಳನ್ನೂ ನೀಡಲಾಗುತ್ತಿಲ್ಲ ಎಂದು ಆರೋಪಿಸಿ ದರ್ಶನ್ ಪರ ವಕೀಲರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಒಂದು ವರ್ಷದೊಳಗೆ ಪ್ರಕರಣದ ವಿಚಾರಣೆ ಮುಗಿಸುವಂತೆ ತೀರ್ಪು ನೀಡಿದ್ದು, ಇನ್ನೂ ವರ್ಷ ಕಾಲ ಜೈಲಿನಲ್ಲೇ ಇರಬೇಕಾಗಿದೆ.
ನಟ ದರ್ಶನ್ ಜೈಲಿನಲ್ಲಿ ಐಷಾರಾಮಿ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ ಎಂದೂ ಸಹ ಆರೋಪಿಸಲಾಗಿತ್ತು. ಇದಕ್ಕೆ ಪೂರಕವಾಗಿ ವಿಡಿಯೋ, ಫೋಟೋಗಳೂ ಹರಿದಾಡಿದ್ದವು. ರೌಡಿಶೀಟರ್ ಜತೆಯಲ್ಲಿ ಕುಳಿತು ಕಾಫಿ, ಸಿಗರೇಟು ಸೇವಿಸುತ್ತಿರುವ ದೃಶ್ಯಗಳು ವೈರಲ್ ಆಗಿತ್ತು. ಜತೆಯಲ್ಲೇ ನಟ ದರ್ಶನ್ ಜೈಲಿನಲ್ಲಿ ವಿಡಿಯೋ ಕಾಲ್ ಮಾಡಲು ಸ್ಮಾರ್ಟ್ ಫೋನ್ ಬಳಸುತ್ತಿದ್ದ ವಿಷಯವೂ ಸಹ ಹೊರಬಿದ್ದಿತ್ತು.
ನನ್ನ ಗರ್ಭಪಾತಕ್ಕೆ ಸಿಎಂ ವಿಜಯ್ ಅವರೇ ಕಾರಣ: ಬಿಗ್ ಬಾಸ್ ಖ್ಯಾತಿಯ ನಟಿ ಜೂಲಿ ಗಂಭೀರ ಆರೋಪ!
Peddi First Review ಪೆದ್ದಿ ಫಸ್ಟ್ ರಿವ್ಯೂ : ರಾಮ್ ಚರಣ್-ಶಿವಣ್ಣ ಕಾಂಬಿನೇಷನ್ ಹೇಗಿದೆ?