ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿರುವ ಡಿ.ಕೆ. ಶಿವಕುಮಾರ್, ತಮಗಿರುವ ಅಲರ್ಜಿಯ ಕಾರಣ ಹೂವಿನ ಹಾರಗಳನ್ನು ನಿಷೇಧಿಸಿದ್ದಾರೆ. ತಮ್ಮ ಈ ಗೆಲುವನ್ನು ಪಕ್ಷದ ಕಾರ್ಯಕರ್ತರಿಗೆ ಅರ್ಪಿಸಿ, ಪ್ರಮಾಣವಚನಕ್ಕೆ ಹೆಚ್ಚು ಜನ ಸೇರದೆ ತಮ್ಮ ಜಿಲ್ಲೆಗಳಲ್ಲೇ ಸಂಭ್ರಮಿಸುವಂತೆ ಅವರು ಮನವಿ ಮಾಡಿದ್ದಾರೆ.
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಡಿ.ಕೆ. ಶಿವಕುಮಾರ್ ಅವರು ತಮ್ಮ ಬೆಂಬಲಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರಿಗೆ ಒಂದು ವಿಶೇಷ ಹಾಗೂ ಕಟ್ಟುನಿಟ್ಟಿನ ಮನವಿ ಮಾಡಿದ್ದಾರೆ. ಸಂಭ್ರಮಾಚರಣೆಯ ಸಂದರ್ಭದಲ್ಲಿ ತಮಗೆ ಹೂವಿನ ಹಾರಗಳನ್ನು ಹಾಕದಂತೆ ಕೋರಿಕೊಂಡಿದ್ದಾರೆ.
ತಮಗೆ ಹೂವಿನ ಹಾರಗಳಿಂದ ಅಲರ್ಜಿ ಉಂಟಾಗುವ ಬಗ್ಗೆ ಡಿ.ಕೆ. ಶಿವಕುಮಾರ್ ಬಹಿರಂಗಪಡಿಸಿದ್ದಾರೆ. ‘ನನಗೆ ಹೂವಿನ ಹಾರಗಳನ್ನು ಹಾಕಬೇಡಿ. ವಿಶೇಷವಾಗಿ ಹಾರಗಳಲ್ಲಿ ಬಳಸುವ ‘ಸುಗಂಧರಾಜ’ ಹೂವು ಎಂದರೆ ನನಗೆ ಅಲರ್ಜಿ. ಆ ಹೂವು ಮೈಗೆ ತಗುಲಿದರೆ ತೀವ್ರವಾದ ತುರಿಕೆ ಆರಂಭವಾಗುತ್ತದೆ.
ಈ ಕಾರಣದಿಂದಲೇ ನಾನು ಹೂವಿನ ಹಾರಗಳನ್ನು ನಿಷೇಧಿಸಿದ್ದೇನೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕಾರ್ಯಕರ್ತರು ತಮ್ಮ ಪ್ರೀತಿಯನ್ನು ಹೂವಿನ ಹಾರಗಳ ಬದಲಿಗೆ ಹಾರೈಕೆಗಳ ಮೂಲಕ ವ್ಯಕ್ತಪಡಿಸಬೇಕೆಂದು ಡಿ.ಕೆ.ಶಿವಕುಮಾರ್ ವಿನಂತಿಸಿದ್ದಾರೆ.
ಡಿಕೆ ಶಿವಕುಮಾರ್ ಬಗ್ಗೆ ಪುತ್ರಿ ಐಶ್ವರ್ಯಾ ಮಾತನಾಡಿರುವ ವಿಡಿಯೋ ವೈರಲ್