newsics.com/ನ್ಯೂಸಿಕ್ಸ್
ಡಿಕೆ ಶಿವಕುಮಾರ್ ಒಂದು ದಿನ ಕರ್ನಾಟಕದ ಮುಖ್ಯಮಂತ್ರಿ ಆಗಬೇಕು, ಆಗುತ್ತಾರೆ ಎಂದು ಅವರ ಪುತ್ರ ಐಶ್ವರ್ಯಾ ಅವರು ಈ ಹಿಂದೆ ಮಾತನಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ನಮ್ಮ ಅಪ್ಪ ಯಾಕೆ ಸಿಎಂ ಆಗಬೇಕು ಎಂದು ಪುತ್ರ ವಿವರಿಸಿದ್ದಾರೆ.
ಜತೆಗೆ ಭಾನುವಾರ ಒಂದು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.
ಈ ಹಿಂದೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಐಶ್ವರ್ಯಾ ಮಾತನಾಡಿದ್ದಾರೆ. ” ನನ್ನ ತಂದೆ ಸುಮ್ಮನೆ ಎಲ್ಲೋ ಒಂದು ಸಿಎಂ ಆಗಬೇಕು ಎಂದು ನಾನು ಹೇಳುತ್ತಿಲ್ಲ. ಪಕ್ಷಕ್ಕಾಗಿ, ಜನರಿಗಾಗಿ ಅವರು ಪಟ್ಟಿರುವ ಕಷ್ಟಕ್ಕೆ, ಅವರ ಫ್ಯಾಮಿಲಿ ಮಾಡಿರುವ ತ್ಯಾಗಕ್ಕೆ ಆ ಸ್ಥಾನ ಸಿಗಬೇಕು ” ಎಂದಿದ್ದಾರೆ.
ಅಪ್ಪ ಜೈಲಿನಿಂದ ಬಂದಾಗ 2 ದಿನ ಮಾತನಾಡಿರಲಿಲ್ಲ
“ನಮ್ಮ ಅಪ್ಪ ಜೈಲಿನಂದ ಹೊರ ಬಂದಾಗ ನಾನು 2 ದಿನ ಅವರ ಜತೆ ಮಾತನಾಡಿರಲಿಲ್ಲ. ಅದಕ್ಕೆ ಕಾರಣ, ಹೊರಬಂದಾಗ ಮೊದಲು ನಮ್ಮ ಕುಟುಂಬವನ್ನು ನೋಡಲು ಬರಲಿಲ್ಲ. ಜನರನ್ನು ನೋಡಬೇಕು ಎಂದು ಹೋದರು. ಇದಕ್ಕೋಸ್ಕರವಾದರೂ ಒಂದು ದಿನ ನನ್ನ ತಂದೆ ರಾಜ್ಯದ ಮುಖ್ಯಮಂತ್ರಿ ಆಗಬೇಕು, ಆಗುತ್ತಾರೆ ಎಂಬ ಭಾವನೆ ಇಟ್ಟುಕೊಂಡು ಜೀವನ ಮಾಡುತ್ತಿದ್ದೇವೆ. ಹಲವು ವರ್ಷಗಳಿಂದ ನಮ್ಮಪ್ಪ ಯಾವತ್ತೂ ಒಂದು ಮೋಜಿನ ಪ್ರವಾಸ ಹೋಗಿಲ್ಲ. ಕುಟುಂಬವನ್ನೂ ಕರೆದುಕೊಂಡು ಹೋಗಿಲ್ಲ” ಎಂದು ವಿವರಿಸಿದ್ದಾರೆ.
ಜನರ ಮೇಲಿನ ಪ್ರೀತಿ ನನಗೆ ಅರ್ಥವಾಯಿತು
“ನನಗೋಸ್ಕರ ಎಷ್ಟೋ ಜನ ಚಪ್ಪಲಿಯನ್ನೂ ಹಾಕಿಕೊಳ್ಳದೇ ಟ್ರೈನ್ ಹತ್ತಿಕೊಂಡು ದೆಹಲಿಯ ಜೈಲಿನ ಬಳಿ ಬಂದಿದ್ದಾರೆ. ಎಷ್ಟೋ ದಿನ ಊಟ ಇಲ್ಲದೇ ಜೈಲಿನಿಂದ ಆಚೆ ನಿಂತು ಕಾದಿದ್ದಾರೆ. ಅವರಿಗೋಸ್ಕರ ನಾನು ಹೋಗದೇ, ನನ್ನ ಕುಟುಂಬ ನೋಡಬೇಕು ಎಂದು ಹೇಗೆ ಓಡಿಬರಲಿ ಹೇಳು? ಎಂದು ನನಗೆ ಕೇಳಿದರು. ಆಗ ನನಗೆ ಅವರಿಗೆ ಜನರ ಮೇಲಿನ ಪ್ರೀತಿ ಅರ್ಥ ಆಯಿತು ” ಎಂದು ಐಶ್ವರ್ಯಾ ನುಡಿದಿದ್ದಾರೆ.
ಅಪ್ಪನ ಬಗ್ಗೆ ಐಶ್ವರ್ಯಾ ಹೇಳಿದ ಇತರೆ ಮಾತುಗಳೂ ವೈರಲ್
ಇವತ್ತು ಜನ ಬಂಡೆ ಎಂದು ಕರೆಯಬಹುದು. ಆದರೆ, ಆ ಬಂಡೆ ರೂಪುಗೊಳ್ಳುವುದಕ್ಕೆ ಎಷ್ಟು ಸಮಯ ತೆಗೆದುಕೊಂಡಿದೆ ಅಂತಾ ನಾವು ಚಿಕ್ಕ ವಯಸ್ಸಿನಿಂದ ನೋಡಿದ್ದೇವೆ.
ಮುಂದಿನ ದಿನಗಳಲ್ಲಿ ನಮ್ಮ ಅಪ್ಪ ಏನು ಮಾಡುತ್ತಾರೋ? ಏನೆಲ್ಲಾ ಬದಲಾವಣೆ ತರುತ್ತಾರೋ ಎಂದು ನಾವೆಲ್ಲಾ ಕುತೂಹಲದಿಂದ ಕಾಯುತ್ತಿದ್ದೇವೆ.
ನಮ್ಮ ಅಪ್ಪ ಯಾವಾಗಲೂ ಒಂದು ಮಾತು ಹೇಳುತ್ತಿರುತ್ತಾರೆ, ಮಗಳೇ ದೇವರು ವರನೂ ಕೊಡಲ್ಲ, ಶಾಪನೂ ಕೊಡಲ್ಲ. ಅವಕಾಶಗಳನ್ನು ಮಾತ್ರ ಕೊಡ್ತಾನೆ.
ನಮ್ಮ ಅಪ್ಪ ದೊಡ್ಡ ಮಹತ್ವಾಕಾಂಕ್ಷೆಯ, ಧ್ಯೇಯ ಹೊಂದಿರುವ ವ್ಯಕ್ತಿ. ಜನಗಳಿಗಾಗಿ ಏನು ಮಾಡಬೇಕು ಎಂಬುದು ಅವರಿಗೆ ಗೊತ್ತು. ಅವರ ಮುಂದಿನ ಹಾದಿ ಸುಗಮವಾಗಿರಲಿ. ಲವ್ ಯು ಅಪ್ಪ.
https://www.instagram.com/reel/DY_PCA2PNPr/?igsh=NGk3bnkzd3NqbjZt