Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ASTRO ನಾಳೆ ಸಂಜೆ ತಪ್ಪದೇ ಈ‌ ಪೂಜೆ ಮಾಡಿ, ಲಕ್ಷ್ಮೀ ಕೃಪೆ ನಿಶ್ಚಿತ
ಪಂಚಾಂಗಈ ದಿನಜ್ಯೋತಿಷ್ಯಪ್ರಮುಖ

ASTRO ನಾಳೆ ಸಂಜೆ ತಪ್ಪದೇ ಈ‌ ಪೂಜೆ ಮಾಡಿ, ಲಕ್ಷ್ಮೀ ಕೃಪೆ ನಿಶ್ಚಿತ

Share
2 Min Read
SHARE

newsics.com/ನ್ಯೂಸಿಕ್ಸ್

ಅಧಿಕ ಮಾಸದ ಹುಣ್ಣಿಮೆ ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ, ಮಹತ್ವದ ದಿನವಾಗಿದೆ. ಈ ವರ್ಷ, ಮೇ 30ರಂದು ಜ್ಯೇಷ್ಠ ಅಧಿಕ ಮಾಸದ ಹುಣ್ಣಿಮೆ. ಈ ದಿನ ತಾಯಿ ಲಕ್ಷ್ಮಿಯನ್ನು ಪೂಜಿಸುವುದು ಸೇರಿದಂತೆ ಕೆಲ ವಿಧಿ ವಿಧಾನಗಳು ನಿಮ್ಮ ಕುಟುಂಬದ ಸಂಪತ್ತು, ಸಮೃದ್ಧಿಯನ್ನು ಹೆಚ್ಚಿಸುತ್ತದೆ.

ಅಧಿಕ ಮಾಸವನ್ನು ಪುರುಷೋತ್ತಮ ಮಾಸ ಎಂದೂ ಕರೆಯುತ್ತಾರೆ. ಇದು ವಿಷ್ಣುವಿಗೆ ತುಂಬಾ ಪ್ರಿಯವಾದದ್ದು. ಈ ತಿಂಗಳ ಹುಣ್ಣಿಮೆಯಂದು ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಆರ್ಥಿಕ ಅಡೆತಡೆಗಳು ದೂರವಾಗುತ್ತವೆ. ಮನೆಗೆ ಸಕಾರಾತ್ಮಕ ಶಕ್ತಿ ಬರುತ್ತದೆ. ಈ ದಿನದಂದು ಮಾಡುವ ದಾನಗಳು, ಜಪಗಳು ಮತ್ತು ಪರಿಹಾರಗಳು ವರ್ಷವಿಡೀ ಫಲ ನೀಡುತ್ತವೆ.

ಅಧಿಕ ಮಾಸದ ಪೂರ್ಣಿಮೆ ಸಂಜೆ ಲಕ್ಷ್ಮಿ ದೇವಿಯನ್ನು ಪೂಜಿಸಿ. ಪೂಜೆಯ ಸಮಯದಲ್ಲಿ ದೇವಿಗೆ 11 ಹಳದಿ ಕವಡೆಯನ್ನು ತಾಯಿಗೆ ಅರ್ಪಿಸಿ. ಪೂಜೆ ಮುಗಿದ ನಂತರ ಈ ಎಲ್ಲ ಕವಡೆಗಳನ್ನು ಕೆಂಪು ಅಥವಾ ಹಳದಿ ರೇಷ್ಮೆ ಬಟ್ಟೆಯಲ್ಲಿ ಕಟ್ಟಿ ರಾತ್ರಿಯಿಡೀ ಲಕ್ಷ್ಮಿ ದೇವಿಯ ಪಾದದ ಬಳಿ ಇಡಿ. ಮರುದಿನ ಬೆಳಿಗ್ಗೆ ಇದನ್ನು ಕಪಾಟಿನಲ್ಲಿ ಇಡಬೇಕು. ಆರ್ಥಿಕ ವೃದ್ಧಿಗೆ ತಾಯಿ ಲಕ್ಷ್ಮಿಯನ್ನು ಪ್ರಾರ್ಥಿಸಬೇಕು. ಇದು ನಿಮ್ಮ ಮನೆ ಸಂಪತ್ತನ್ನು ಹೆಚ್ಚಿಸುತ್ತದೆ. ಲಕ್ಷ್ಮಿಯ ಆಶೀರ್ವಾದ ನಿಮಗೆ ಲಭಿಸುತ್ತದೆ.

ತಮ್ಮ ವೃತ್ತಿ ಅಥವಾ ವ್ಯವಹಾರದಲ್ಲಿ ಅಡೆತಡೆಗಳನ್ನು ಎದುರಿಸುತ್ತಿರುವವರು ಈ ದಿನ 7 ಕವಡೆಯನ್ನು ತೆಗೆದುಕೊಂಡು ಲಕ್ಷ್ಮಿ ದೇವಿಯ ಮಂತ್ರ ಜಪಿಸಬೇಕು. ಓಂ ಶ್ರೀಂ ಹ್ರೀಂ ಕ್ಲೀಂ ಶ್ರೀಂ ಸಿದ್ಧ ಲಕ್ಷ್ಮಿಯೇ ನಮಃ ಮಂತ್ರವನ್ನು 108 ಬಾರಿ ಜಪಿಸಬೇಕು. ಜಪಿಸಿದ ನಂತರ, ಈ ಕವಡೆಯನ್ನು ತಮ್ಮ ಅಂಗಡಿ ಅಥವಾ ಲಾಕರ್‌ನ ಹಣ ಇಡುವ ಜಾಗದಲ್ಲಿ ಇಡಬೇಕು.

ಮನೆಯಲ್ಲಿ ನಕಾರಾತ್ಮಕತೆ ಶಕ್ತಿ ಮನೆ ಮಾಡಿದ್ರೆ, ಬಡತನ ನಿಮ್ಮನ್ನು ಕಾಡ್ತಿದ್ರೆ, ಮನೆಯಲ್ಲಿ ಶಾಂತಿ ಭಂಗವಾಗಿದ್ದರೆ ಗೋವಿನ ಮೂರ್ತಿಯಿಂದ ಪರಿಹಾರ ಕಂಡ್ಕೊಳ್ಬಹುದು. ಹುಣ್ಣಿಮೆಯ ರಾತ್ರಿ ಒಂಬತ್ತು ಗೋವುಗಳ ಮೂರ್ತಿಯನ್ನು ಅರಿಶಿನ-ಕೇಸರಿ ದ್ರಾವಣದಲ್ಲಿ ನೆನೆಸಿ. ನಂತರ ಅವುಗಳನ್ನು ಶುದ್ಧ ಬಟ್ಟೆಯಲ್ಲಿ ಕಟ್ಟಿ ಮುಖ್ಯ ದ್ವಾರದಲ್ಲಿ ನೇತುಹಾಕಿ. ಈ ಪರಿಹಾರವು ಮನೆಯಲ್ಲಿರುವ ದುಷ್ಟ ಶಕ್ತಿಗಳನ್ನು ತೆಗೆದುಹಾಕುತ್ತದೆ. ಲಕ್ಷ್ಮಿ ದೇವಿ ಸಂತೋಷಗೊಳ್ತಾಳೆ. ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯ ಹರಿವು ಹೆಚ್ಚಾಗುತ್ತದೆ.

ಅಧಿಕ ಮಾಸದ ಹುಣ್ಣಿಮೆಯ ಸಂಜೆ,ಲಕ್ಷ್ಮಿ-ನಾರಾಯಣರ ಪೂಜೆಯನ್ನು ಮಾಡಬೇಕು. ಪೂಜೆಯ ಸಮಯದಲ್ಲಿ ಬಿಳಿ ಹೂವುಗಳು, ಸಿಹಿತಿಂಡಿಗಳು ಮತ್ತು 21 ಗೋವಿನ ಮೂರ್ತಿಗಳನ್ನು ಅರ್ಪಿಸಿ. ಪೂಜೆಯ ನಂತರ, ಎಲ್ಲಾ ಕುಟುಂಬ ಸದಸ್ಯರಿಗೆ ಪ್ರಸಾದವನ್ನು ವಿತರಿಸಿ. ಈ ಪೂಜೆಯು ಕುಟುಂಬದಲ್ಲಿನ ಅಪಶ್ರುತಿಯನ್ನು ಕಡಿಮೆ ಮಾಡುತ್ತದೆ ಮತ್ತು ಕುಟುಂಬ ಸದಸ್ಯರಲ್ಲಿ ಪ್ರೀತಿಯನ್ನು ಹೆಚ್ಚಿಸುತ್ತದೆ.

ಹುಣ್ಣಿಮೆಯ ದಿನದಂದು, ಮನೆಯ ಈಶಾನ್ಯ ಮೂಲೆಯಲ್ಲಿ ಒಂದು ಸಣ್ಣ ಮಣ್ಣಿನ ಪಾತ್ರೆಯನ್ನು ಇಡಿ. ಅದರಲ್ಲಿ 11 ಗೋವುಗಳ ಮೂರ್ತಿ, ಅಕ್ಕಿ ಮತ್ತು ಅರಿಶಿನವನ್ನು ಇರಿಸಿ ಮುಚ್ಚಳ ಮುಚ್ಚಿ. ಈ ಪಾತ್ರೆ ಎಂದಿಗೂ ಖಾಲಿಯಾಗಲು ಬಿಡಬೇಡಿ. ಇದು ಸಮೃದ್ಧಿ ಹೆಚ್ಚಿಸುತ್ತದೆ.

TAGGED:If you perform this puja tomorrow eveningthe grace of Goddess Lakshmi is certain.
Share This Article
Facebook Twitter Copy Link Print
Previous Article ಕಾಯ್ದಿರಿಸಿದ ತೀರ್ಪು 3 ತಿಂಗಳೊಳಗೆ ಪ್ರಕಟಿಸುವಂತೆ ದೇಶಾದ್ಯಂತದ ಎಲ್ಲಾ ಹೈಕೋರ್ಟ್‌ ಗಳಿಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ
Next Article ಬೆಂಗಳೂರಲ್ಲಿ IPL ಸಂಭ್ರಮಾಚರಣೆಗೆ ಬ್ರೇಕ್ : ಈ ಮಾರ್ಗಸೂಚಿ ಪಾಲನೆ ಕಡ್ಡಾಯ

Popular Posts

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read

You Might Also Like

ಪ್ರಮುಖ

ಐಪಿಎಲ್ ಹಗರಣ; ಹಿರಿಯ ರಾಜಕೀಯ ನಾಯಕರ ಹೆಸರು ಬಾಯ್ಬಿಟ್ಟ ಲಲಿತ್ ಮೋದಿ

3 Min Read
ಪ್ರಮುಖಮನರಂಜನೆ

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು?

1 Min Read
ಪ್ರಮುಖಕರ್ನಾಟಕ

ಯತೀಂದ್ರ ಸಿದ್ದರಾಮಯ್ಯಗೆ ಮಂತ್ರಿಗಿರಿ; ಕೈ ಪಾಳಯದಲ್ಲಿ ಅಸಮಾಧಾನ?

2 Min Read
ಪ್ರಮುಖಕರ್ನಾಟಕ

ನನ್ನ ಹಿಂದೆ ಫೋಟೋಗೆ ಪೋಸ್ ಕೊಟ್ಕೊಂಡು ಯಾರೂ ಕೂತ್ಕೋಬಾರ್ದು: ಡಿಕೆ ಶಿವಕುಮಾರ್ ಗರಂ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?