Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > ಪ್ರಮುಖ > ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ಹುದ್ದೆಗೆ ತುಳಸಿ ಗಬ್ಬಾರ್ಡ್ ರಾಜೀನಾಮೆ
ವಿದೇಶಪ್ರಮುಖ

ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ಹುದ್ದೆಗೆ ತುಳಸಿ ಗಬ್ಬಾರ್ಡ್ ರಾಜೀನಾಮೆ

Share
2 Min Read
SHARE

newsics.com/ನ್ಯೂಸಿಕ್ಸ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಅವರ ಸಂಪುಟದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ಹುದ್ದೆಗೆ ತುಳಸಿ ಗಬ್ಬಾರ್ಡ್ ರಾಜೀನಾಮೆ ನೀಡಿದ್ದಾರೆ. ಪತಿಯ ಅನಾರೋಗ್ಯದ ಕಾರಣ ನೀಡಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರ ಪತಿ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವುದರಿಂದ ಈ ತೀರ್ಮಾನ ತೆಗೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ. ಈ ಮೂಲಕ ಟ್ರಂಪ್ ಅವರ ಎರಡನೇ ಅಧ್ಯಕ್ಷಾವವಧಿಯಲ್ಲಿ ನಿರ್ಗಮಿಸಿದ ನಾಲ್ಕನೇ ಕ್ಯಾಬಿನೆಟ್ ಅಧಿಕಾರಿಯಾಗಿದ್ದಾರೆ.

https://www.instagram.com/reel/DYrMG5SRxIn/?igsh=dWRpYmFkaXh6Yndo

ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಅವರು, ಟ್ರಂಪ್ ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ತುಳಸಿ ಗಬ್ಬಾರ್ಡ್ ಅವರು ಜೂನ್ 30 ರಂದು ಅಧಿಕಾರ ತೊರೆಯುವುದಾಗಿ ತಿಳಿಸಿದ್ದಾರೆ. ತಮ್ಮ ಪತಿಗೆ ಇತ್ತೀಚೆಗೆ ಅಪರೂಪದ ಮೂಳೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಹೀಗಾಗಿ ಅವರು ಮುಂಬರುವ ದಿನಗಳಲ್ಲಿ ಸವಾಲುಗಳನ್ನು ಎದುರಿಸಲಿದ್ದಾರೆ. ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಅವರನ್ನು ತಾನು ನೋಡಿಕೊಳ್ಳಬೇಕಾಗಿದೆ ಎಂಬುದಾಗಿ ಅವರು ಹೇಳಿದರು.

ಪತಿಯ ಅನಾರೋಗ್ಯದ ಸಮಯದಲ್ಲಿ ಪತ್ನಿಯಾದವಳು ಅವರ ಜೊತೆ ಇರಬೇಕಾದುದು ತನ್ನ ಕರ್ತವ್ಯ. ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ತಾನು ಅವರಿಗೆ ಸದಾ ಬೆಂಬಲವಾಗಿರಬೇಕು. ಹೀಗಾಗಿ ಸಾರ್ವಜನಿಕ ಸೇವೆಯಿಂದ ದೂರ ಸರಿಯಲು ನಿರ್ಧರಿಸಿದ್ದಾಗಿ ಅವರು ಪತ್ರದಲ್ಲಿ ಬರೆದಿದ್ದಾರೆ.

ಇನ್ನು ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಡೊನಾಲ್ಡ್ ಟ್ರಂಪ್, ತುಳಸಿ ಉತ್ತಮ ಕೆಲಸವನ್ನೇ ಮಾಡಿದ್ದಾರೆ. ನಾವು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ ಎಂದು ಅವರ ರಾಜೀನಾಮೆ ಬಗ್ಗೆ ತಿಳಿಸಿದರು. ತುಳಸಿ ಅವರ ಸ್ಥಾನಕ್ಕೆ ಆರನ್ ಲುಕಾಸ್ ರಾಷ್ಟ್ರೀಯ ಗುಪ್ತಚರ ವಿಭಾಗದ ಹಂಗಾಮಿ ನಿರ್ದೇಶಕರಾಗಿ ಸೇವೆ ಸಲ್ಲಿಸಲಿದ್ದಾರೆ ಎಂದು ಅವರು ಹೇಳಿದರು.

ಟ್ರಂಪ್ ಅವರ ಮೊದಲ ಅಧ್ಯಕ್ಷಾವಧಿಯಲ್ಲಿ, ಲುಕಾಸ್ ಅವರು 2020 ರಲ್ಲಿ ರಾಷ್ಟ್ರೀಯ ಗುಪ್ತಚರದ ಹಂಗಾಮಿ ನಿರ್ದೇಶಕ ರಿಕ್ ಗ್ರೆನೆಲ್ ಅವರಿಗೆ ಗುಪ್ತಚರ ಸಹಾಯಕರಾಗಿ ಸೇವೆ ಸಲ್ಲಿಸಿದ್ದರು.

ಅಂದಹಾಗೆ, ಅಮೆರಿಕದ ಸಮೋವಾದಲ್ಲಿ ಜನಿಸಿದ 44 ವರ್ಷದ ತುಳಸಿ ಗಬ್ಬಾರ್ಡ್, ಹವಾಯಿಯಲ್ಲಿ ಬೆಳೆದರು. ಫಿಲಿಪೈನ್ಸ್‌ನಲ್ಲಿ ತನ್ನ ಒಂದು ವರ್ಷ ಬಾಲ್ಯವನ್ನು ಕಳೆದರು. ರಾಜಕೀಯ ಕ್ಷೇತ್ರಕ್ಕೆ ಅವರು ಬಹಳ ಚಿಕ್ಕ ವಯಸ್ಸಿನಲ್ಲೇ ಪ್ರವೇಶಿಸಿದರು. ಹವಾಯಿಯ ಪ್ರತಿನಿಧಿಗಳ ಸದನಕ್ಕೆ 21 ವರ್ಷದವಳಿದ್ದಾಗ ಆಯ್ಕೆಯಾದರು. ಆದರೆ ಮೊದಲ ಅವಧಿಯಲ್ಲೇ ಅವರು ಹುದ್ದೆಯಿಂದ ಹೊರಬರಬೇಕಾಯಿತು.

ಅಮೆರಿಕ ಸಂಸತ್ತಿನ ಇತಿಹಾಸದಲ್ಲೇ ಮೊದಲ ಹಿಂದೂ ಸದಸ್ಯೆಯಾಗಿದ್ದ ಅವರು, ಕಾಂಗ್ರೆಸ್ ಸದಸ್ಯೆಯಾಗಿ ಪ್ರಮಾಣವಚನ ಸ್ವೀಕರಿಸುವಾಗ ಹಿಂದೂ ಧಾರ್ಮಿಕ ಗ್ರಂಥವಾದ ಭಗವದ್ಗೀತೆ ಮೇಲೆ ಇಟ್ಟು ಪ್ರಮಾಣವಚನ ಸ್ವೀಕರಿಸಿದ್ದರು.

ಭಾರತದಲ್ಲಿರುವ ಈ ಬೀಚ್ ಏಷ್ಯಾದಲ್ಲೇ ಭಾರೀ ಬೆಸ್ಟ್!

 

TAGGED:Tulsi Gabbard resigns as America's Director of National Intelligence
Share This Article
Facebook Twitter Copy Link Print
Previous Article ಭಾರತದಲ್ಲಿರುವ ಈ ಬೀಚ್ ಏಷ್ಯಾದಲ್ಲೇ ಭಾರೀ ಬೆಸ್ಟ್!
Next Article ಸ್ಪೇನ್‌ನಲ್ಲಿ ಅನಿರುದ್ದ್ ಹಾಗೂ ಕಾವ್ಯಾ ಮಾರನ್ ಮದುವೆ?

Popular Posts

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read

You Might Also Like

ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read
ವಿದೇಶಮನರಂಜನೆ

Avengers film update ಅವೆಂಜರ್ಸ್: ಡೂಮ್ಸ್‌ಡೇ’ ಚಿತ್ರದ ಟ್ರೈಲರ್ ಬಿಡುಗಡೆ

2 Min Read
ಅನಾವರಣಪ್ರಮುಖವಿದೇಶವೈರಲ್

Human Fridge ವಿಪರೀತ ಸೆಕೆಯೆನಿಸಿದರೆ ಅಂದುಕೊಂಡಂತೆ ನೀವು ಫ್ರಿಡ್ಜ್‌ನಲ್ಲೇ ಕೂಲ್ ಆಗಬಹುದು! ಬಂದಿದೆ ಹ್ಯೂಮನ್ ಫ್ರಿಡ್ಜ್!

2 Min Read
ವಿದೇಶ

England New Prime Minister: ಆಂಡಿ ಬರ್ನ್‌ಹ್ಯಾಮ್ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ – ಯಾರು ಈ ನಾಯಕ? ಬ್ರಿಟನ್ ಮುಂದೆ ಇರುವ ಸವಾಲುಗಳೇನು?

3 Min Read

Social Networks

Facebook-f Instagram Twitter
Welcome Back!

Sign in to your account

Lost your password?