Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > ಪ್ರಮುಖ > ಭಾರತದಲ್ಲಿರುವ ಈ ಬೀಚ್ ಏಷ್ಯಾದಲ್ಲೇ ಭಾರೀ ಬೆಸ್ಟ್!
ಪ್ರಮುಖದೇಶ

ಭಾರತದಲ್ಲಿರುವ ಈ ಬೀಚ್ ಏಷ್ಯಾದಲ್ಲೇ ಭಾರೀ ಬೆಸ್ಟ್!

Share
2 Min Read
SHARE

newsics.com/ನ್ಯೂಸಿಕ್ಸ್

ಭಾರತದಲ್ಲಿ ವಿಶ್ವದರ್ಜೆಯ ಬೀಚ್ ಇದೆ. ಅಂಡಮಾನ್‌ನ ಸ್ವರಾಜ್ ದ್ವೀಪದಲ್ಲಿ (ಹಿಂದಿನ ಹ್ಯಾವ್ಲಾಕ್ ದ್ವೀಪ) ಇರುವ ಈ ಬೀಚ್, ತನ್ನ ಮೃದುವಾದ ಬಿಳಿ ಮರಳು ಮತ್ತು ತಿಳಿ ನೀಲಿ ಬಣ್ಣದ ಸಮುದ್ರಕ್ಕೆ ಹೆಸರುವಾಸಿಯಾಗಿದೆ.

https://www.instagram.com/reel/DYrMG5SRxIn/?igsh=dWRpYmFkaXh6Yndo

ಹೌದು.ಈ ಬೀಚ್‌ ಹೆಸರು ರಾಧಾನಗರ. ಇತ್ತೀಚೆಗೆ ರಾಧಾನಗರ ಬೀಚ್‌ನಲ್ಲಿ ನೀರಿನ ಅಡಿಯಲ್ಲಿ (Underwater) ಭಾರತದ ರಾಷ್ಟ್ರಧ್ವಜವನ್ನು ಪ್ರದರ್ಶಿಸುವ ಮೂಲಕ ‘ಗಿನ್ನೆಸ್ ವಿಶ್ವ ದಾಖಲೆ’ ನಿರ್ಮಿಸಲಾಗಿದೆ. ಈ ಅಪರೂಪದ ಸಾಧನೆಯಿಂದಾಗಿ ಈ ಸುಂದರ ಪ್ರವಾಸಿ ತಾಣವು ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಸುದ್ದಿಯಾಗಿದ್ದು, ಪ್ರಪಂಚದಾದ್ಯಂತ ಎಲ್ಲರ ಗಮನ ಸೆಳೆಯುತ್ತಿದೆ. ಹಾಗಾದರೆ ಬನ್ನಿ, ಈ ಬೀಚ್‌ನ ವಿಶೇಷತೆ ಏನೆಂದು ತಿಳೊಯೋಣ..

ಏನಿದರ ವಿಶೇಷತೆ?

‘ಬೀಚ್ ನಂಬರ್ 7’ ಎಂದೂ ಕರೆಯಲ್ಪಡುವ ರಾಧಾನಗರ ಬೀಚ್, 2004 ರಲ್ಲಿ ಟೈಮ್ (TIME) ಮ್ಯಾಗಜಿನ್‌ನಿಂದ ‘ಏಷ್ಯಾದ ಅತ್ಯುತ್ತಮ ಬೀಚ್’ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಅಂದಿನಿಂದ ಇಂದಿನವರೆಗೂ ಈ ಬೀಚ್ ತನ್ನ ಅಪ್ಪಟ ನೈಸರ್ಗಿಕ ಸೌಂದರ್ಯವನ್ನು ಕಿಂಚಿತ್ತೂ ಮಸಕಾಗದಂತೆ ಉಳಿಸಿಕೊಂಡು ಬಂದಿದೆ. ಇದಲ್ಲದೆ, ಇದು ಪ್ರತಿಷ್ಠಿತ ‘ಬ್ಲೂ ಫ್ಲ್ಯಾಗ್’ (Blue Flag) ಪ್ರಮಾಣಪತ್ರವನ್ನು ಪಡೆದಿದೆ. ಪರಿಸರ ಸಂರಕ್ಷಣೆ, ಸ್ವಚ್ಛತೆ, ಸುರಕ್ಷತೆ ಮತ್ತು ಸುಸ್ಥಿರ ಪ್ರವಾಸೋದ್ಯಮವನ್ನು ಕಾಪಾಡಿಕೊಳ್ಳುವ ಬೀಚ್‌ಗಳಿಗೆ ಮಾತ್ರ ಡೆನ್ಮಾರ್ಕ್‌ನ ಈ ಅಂತರಾಷ್ಟ್ರೀಯ ಪ್ರಶಸ್ತಿ ನೀಡಲಾಗುತ್ತದೆ.

ರಾಧಾನಗರ ಬೀಚ್‌ನ ಪ್ರಮುಖ ಆಕರ್ಷಣೆಗಳು ಮತ್ತು ಪ್ರವಾಸಿ ಚಟುವಟಿಕೆಗಳು

ಇಲ್ಲಿ ಸಾಹಸಕ್ಕಿಂತ ಹೆಚ್ಚಾಗಿ ಮನಸ್ಸಿಗೆ ಶಾಂತಿ ನೀಡುವ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗಿದೆ..
ಈಜು ಮತ್ತು ಬಿಸಿಲ ಸ್ನಾನ: ಇಲ್ಲಿ ಸಮುದ್ರದ ಆಳ ಕ್ರಮೇಣ ಹೆಚ್ಚಾಗುವುದರಿಂದ ಈಜಲು ತುಂಬಾ ಸುರಕ್ಷಿತವಾಗಿದೆ.
ಸೂರ್ಯಾಸ್ತದ ವೀಕ್ಷಣೆ: ಇಲ್ಲಿನ ಸೂರ್ಯಾಸ್ತದ ದೃಶ್ಯ ಜಗತ್ಪ್ರಸಿದ್ಧ. ಸಂಜೆ 4 ಗಂಟೆಗೆ ಇಲ್ಲಿ ತಲುಪಿದರೆ ಸುಂದರ ನೋಟವನ್ನು ಕಣ್ತುಂಬಿಕೊಳ್ಳಬಹುದು.
ಫೋಟೋಗ್ರಫಿ: ಎತ್ತರದ ಉಷ್ಣವಲಯದ ಮರಗಳು ಮತ್ತು ಬಿಳಿ ಮರಳು ಛಾಯಾಗ್ರಹಣಕ್ಕೆ ಹೇಳಿ ಮಾಡಿಸಿದಂತಿದೆ. (ಡ್ರೋನ್ ಕ್ಯಾಮೆರಾ ಬಳಸಲು ಪೂರ್ವಾನುಮತಿ ಅಗತ್ಯ).
ಪಿಕ್ನಿಕ್: ಆಹಾರದ ಮಳಿಗೆಗಳು ಇಲ್ಲಿ ಕಡಿಮೆ ಇರುವುದರಿಂದ, ಪ್ರವಾಸಿಗರು ಲಘು ಉಪಾಹಾರ ಮತ್ತು ನೀರನ್ನು ಜೊತೆಯಲ್ಲಿ ಕೊಂಡೊಯ್ಯುವುದು ಉತ್ತಮ.

ಭೇಟಿ ನೀಡಲು ಸೂಕ್ತ ಸಮಯ

ಅಕ್ಟೋಬರ್‌ನಿಂದ ಮೇ ತಿಂಗಳವರೆಗೆ ಇಲ್ಲಿಗೆ ಭೇಟಿ ನೀಡಲು ಅತ್ಯುತ್ತಮ ಸಮಯ. ಸಮುದ್ರ ಶಾಂತವಾಗಿರುತ್ತದೆ ಮತ್ತು ಹವಾಮಾನವು ಆಹ್ಲಾದಕರವಾಗಿರುತ್ತದೆ.

ಹತ್ತಿರದ ಇತರ ಪ್ರೇಕ್ಷಣೀಯ ಸ್ಥಳಗಳು

ಎಲಿಫೆಂಟ್ ಬೀಚ್: ಸ್ನಾರ್ಕ್ಲಿಂಗ್ ಮತ್ತು ಜೆಟ್ ಸ್ಕೀಯಿಂಗ್‌ನಂತಹ ಜಲಕ್ರೀಡೆಗಳಿಗೆ ಇದು ಪ್ರಸಿದ್ಧ.
ನೀಲ್ಸ್ ಕೋವ್ (Neil’s Cove): ರಾಧಾನಗರ ಬೀಚ್‌ನಿಂದ ಸ್ವಲ್ಪ ದೂರದಲ್ಲೇ ಇರುವ ಸುಂದರವಾದ ಲಗೂನ್ (ಖಾರಿ).
ಕಲಾ ಪತ್ತರ್ ಬೀಚ್: ಕಪ್ಪು ಜ್ವಾಲಾಮುಖಿ ಬಂಡೆಗಳಿಗೆ ಈ ಬೀಚ್ ಹೆಸರುವಾಸಿ.

ತಲುಪುವುದು ಹೇಗೆ?

ವಿಮಾನದ ಮೂಲಕ: ದೆಹಲಿ, ಮುಂಬೈ, ಬೆಂಗಳೂರು ಅಥವಾ ಚೆನ್ನೈನಿಂದ ಪೋರ್ಟ್ ಬ್ಲೇರ್‌ನ ವೀರ್ ಸಾವರ್ಕರ್ ವಿಮಾನ ನಿಲ್ದಾಣಕ್ಕೆ ನೇರ ವಿಮಾನಗಳಿವೆ.
ನೌಕೆಯ ಮೂಲಕ: ಪೋರ್ಟ್ ಬ್ಲೇರ್‌ನಿಂದ ಹ್ಯಾವ್ಲಾಕ್ ದ್ವೀಪಕ್ಕೆ ಖಾಸಗಿ ಅಥವಾ ಸರ್ಕಾರಿ ಫೆರ್ರಿಗಳ (ದೋಣಿ) ಮೂಲಕ 90 ನಿಮಿಷಗಳಿಂದ 3 ಗಂಟೆಗಳಲ್ಲಿ ತಲುಪಬಹುದು.
ಸ್ಥಳೀಯ ಸಾರಿಗೆ: ಹ್ಯಾವ್ಲಾಕ್ ಜೆಟ್ಟಿಯಿಂದ ರಾಧಾನಗರ ಬೀಚ್ 12 ಕಿ.ಮೀ ದೂರದಲ್ಲಿದೆ. ಇಲ್ಲಿ ಟ್ಯಾಕ್ಸಿ, ಸ್ಕೂಟರ್ ಅಥವಾ ಆಟೋ ರಿಕ್ಷಾಗಳ ಮೂಲಕ 20 ನಿಮಿಷಗಳಲ್ಲಿ ತಲುಪಬಹುದು.

ಪಾಸ್‌ಪೋರ್ಟ್ ಅಗತ್ಯವಿಲ್ಲದೆಯೇ ವಿದೇಶಿ ಬೀಚ್‌ಗಳ ಅನುಭವ ನೀಡುವ ಈ ತಾಣ, ಭಾರತೀಯ ಪ್ರವಾಸಿಗರಿಗೆ ನಿಜಕ್ಕೂ ಸ್ವರ್ಗದಂತಿದೆ.

ಮಾಡೆಲ್​ ತ್ವಿಷಾ ಶರ್ಮಾ ಸಾಯುವ ಕೆಲವೇ ಗಂಟೆಗಳ ಮುನ್ನ ಸಲೂನ್‌ಗೆ ಭೇಟಿ ನೀಡಿದ ವಿಡಿಯೋ ವೈರಲ್

 

TAGGED:it's amazing to look at!This beach in India is the best in Asia
Share This Article
Facebook Twitter Copy Link Print
Previous Article ಮಾಡೆಲ್​ ತ್ವಿಷಾ ಶರ್ಮಾ ಸಾಯುವ ಕೆಲವೇ ಗಂಟೆಗಳ ಮುನ್ನ ಸಲೂನ್‌ಗೆ ಭೇಟಿ ನೀಡಿದ ವಿಡಿಯೋ ವೈರಲ್
Next Article ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ಹುದ್ದೆಗೆ ತುಳಸಿ ಗಬ್ಬಾರ್ಡ್ ರಾಜೀನಾಮೆ

Popular Posts

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read

You Might Also Like

ಪ್ರಮುಖದೇಶವೈರಲ್

Viral Video ಮದ್ಯದಂಗಡಿಗೆ ಎಂಟ್ರಿ ಕೊಟ್ಟ ಚಿರತೆ; ಮೂವರ ಮೇಲೆ ದಾಳಿ-ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

Transgender attack ಹಣ ಕೊಡದ ಯುವಕನ ಮೇಲೆ ಮಂಗಳಮುಖಿಯರಿಂದ ರೈಲಿನಲ್ಲೇ ಹಲ್ಲೆ, ಅಸಭ್ಯ ವರ್ತನೆ, ವಿಡಿಯೋ ನೋಡಿ

1 Min Read
ಪ್ರಮುಖದೇಶಮನರಂಜನೆ

Jana Nayagan ಸಿಎಂ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’ ರಿಲೀಸ್‌ಗೆ ಕೌಂಟ್‌ಡೌನ್‌; ಅಭಿಮಾನಿಗಳಿಗೆ ಡಬಲ್ ಧಮಾಕಾ

2 Min Read
ಪ್ರಮುಖಕರ್ನಾಟಕದೇಶ

Gold Price ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ, ಇಂದಿನ ದರ ವಿವರ ಇಲ್ಲಿದೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?