Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವಿದೇಶ > ಮಾಡೆಲ್​ ತ್ವಿಷಾ ಶರ್ಮಾ ಸಾಯುವ ಕೆಲವೇ ಗಂಟೆಗಳ ಮುನ್ನ ಸಲೂನ್‌ಗೆ ಭೇಟಿ ನೀಡಿದ ವಿಡಿಯೋ ವೈರಲ್
ವಿದೇಶ

ಮಾಡೆಲ್​ ತ್ವಿಷಾ ಶರ್ಮಾ ಸಾಯುವ ಕೆಲವೇ ಗಂಟೆಗಳ ಮುನ್ನ ಸಲೂನ್‌ಗೆ ಭೇಟಿ ನೀಡಿದ ವಿಡಿಯೋ ವೈರಲ್

Share
2 Min Read
SHARE

newsics.com/ನ್ಯೂಸಿಕ್ಸ್

ನೋಯ್ಡಾ ಮಾಡೆಲ್ ತ್ವಿಷಾ ಶರ್ಮಾ ಅವರ ನಿಗೂಢ ಸಾವು ಹಲವು ತಿರುವುಗಳನ್ನು ಪಡೆದಿದೆ.

https://www.instagram.com/reel/DYrMG5SRxIn/?igsh=dWRpYmFkaXh6Yndo

ಈಗ ಅವರು ಸಾವನ್ನಪ್ಪುವ ಕೇವಲ ಕೆಲವು ಗಂಟೆಗಳ ಮೊದಲು ಬ್ಯೂಟಿ ಸಲೂನ್‌ (beauty salon)ಗೆ ಭೇಟಿ ನೀಡಿದ್ದಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಕೆಲವು ಆಘಾತಕಾರಿ ಸಂಗತಿಗಳು ಮುನ್ನೆಲೆಗೆ ಬಂದಿವೆ.

ವರದಕ್ಷಿಣೆಗಾಗಿ ಪತಿ ಮತ್ತು ಮಾಜಿ ಜಡ್ಜ್ ಅತ್ತೆಯೇ ಕೊಲೆ ಮಾಡಿದ್ದಾರೆಂದು ಕುಟುಂಬ ಆರೋಪಿಸಿದ್ದು, ಪತಿಯನ್ನು ಬಂಧಿಸಲಾಗಿದೆ. ಸಾವಿಗೂ ಮುನ್ನ ಸ್ಪಾಗೆ ಹೋಗಿದ್ದ ತ್ವಿಷಾಳ ವಿಡಿಯೋ ಆತ್ಮಹತ್ಯೆಯ ವಾದ ಅಲ್ಲಗಳೆಯುತ್ತಿದೆ.

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರೋ ನೋಯ್ಡಾ ಮೂಲದ 33 ವರ್ಷದ ನಟಿ, ಮಾಡೆಲ್​, ಮಿಸ್​ ಪುಣೆ ತ್ವಿಷಾ ಶರ್ಮಾ ಸಾವು ದಿನದಿಂದ ದಿನಕ್ಕೆ ಟ್ವಿಸ್ಟ್​ ಮೇಲೆ ಟ್ವಿಸ್ಟ್​ ಪಡೆಯುತ್ತಿದೆ. ಮದುವೆಯಾದ ಐದೇ ತಿಂಗಳಿನಲ್ಲಿ ಈಕೆ ನಿಗೂಢ ಸಾವನ್ನಪ್ಪಿದ್ದಾರೆ. ಮಾಜಿ ಜಡ್ಜ್​ ಅತ್ತೆ, ವಕೀಲ ಗಂಡನ ಕೈಯಲ್ಲಿ ತ್ವಿಷಾ ಕೊ*ಲೆಯಾಗಿರುವುದು ಇದಾಗಲೇ ಬಹುತೇಕ ತನಿಖೆಯಿಂದ ತಿಳಿದುಬಂದಿದೆ.

ಇದರ ಹೊರತಾಗಿಯೂ ಅವರು ತ್ವಿಷಾ ಅವರು ಡ್ರಗ್​ ವ್ಯಸನಿ ಆಗಿದ್ಲು, ಅಫೇರ್​ ಇಟ್ಟುಕೊಂಡಿದ್ಲು ಅಂದೆಲ್ಲಾ ಸಬೂಬು ಹೇಳುತ್ತಲೇ ಆ*ತ್ಮಹತ್ಯೆಯ ಲೇಪ ಹಚ್ಚಲು ನೋಡುತ್ತಿದ್ದಾರೆ. ಹೇಳಿ ಕೇಳಿ ಮಾಜಿ ನ್ಯಾಯಾಧೀಶೆ ಈ ಅತ್ತೆ. ಸೊಸೆ ಸತ್ತ ಮೇಲೂ ಇನಿತೂ ಬೇಸರ ಇಲ್ಲದೇ ಸೊಸೆಗೆ ಗಿಡಗಳಿಗೆ ನೀರು ಹಾಕುವುದು ಇಷ್ಟವಿರಲಿಲ್ಲ. ಅಡುಗೆ ಮಾಡುವುದು ಇಷ್ಟವಿರಲಿಲ್ಲ, ಮಕ್ಕಳು ಎಂದರೆ ಇಷ್ಟವಿರಲಿಲ್ಲ ಎಂದು ಮಾಧ್ಯಮಗಳ ಮುಂದೆ ಹೇಳುವಾಗಲೇ ತ್ವಿಷಾನ ಸಾವು ಯಾವ ರೀತಿ ಆಗಿರಬಹುದು ಎಂದು ಎಂಥವರೂ ಊಹಿಸಲು ಸಾಧ್ಯವಾಗಿದೆ.

ಇದರ ಬೆನ್ನಲ್ಲೇ ತ್ವಿಷಾ ಅವರ ಸಾವಿಗೂ ಕೆಲವೇ ಗಂಟೆ ಮೊದಲು ಸಿಸಿಟಿವಿಯಲ್ಲಿ ದಾಖಲಾಗಿರುವ ವಿಡಿಯೋ ವೈರಲ್​ ಆಗಿದೆ. ಅದರಲ್ಲಿ ತ್ವಿಷಾ ಅವರು ಸ್ಪಾನಲ್ಲಿ ಫ್ರೆಷಪ್​ ಆಗುತ್ತಿರುವುದನ್ನು ನೋಡಬಹುದು. ತಲೆಗೆ ಮಸಾಜ್​ ಮಾಡಿಸಿಕೊಳ್ಳುತ್ತಿರುವುದು ಕಾಣಿಸುತ್ತದೆ. ಯಾರಾದರೂ ಆ*ತ್ಮಹತ್ಯೆ ಮಾಡಿಕೊಳ್ಳುವ ಒಂದೆರಡು ಗಂಟೆ ಮೊದಲು ಹೀಗೆಲ್ಲಾ ಮಾಡಿಕೊಳ್ಳಲು ಸಾಧ್ಯವೇ ಎನ್ನುವುದಾಗಿ ಎಲ್ಲರೂ ಪ್ರಶ್ನಿಸುತ್ತಿದ್ದಾರೆ. ಅಷ್ಟಕ್ಕೂ ತ್ವಿಷಾ ಅವರ ಮೈಮೇಲೆ ಗಾಯದ ಗುರುತುಗಳೂ ಪತ್ತೆಯಾಗಿದ್ದರೂ, ಇದುವರೆಗೆ ಅತ್ತೆಯನ್ನು ಬಂಧಿಸದೇ ಇರುವುದು ಹಲವರ ಅಸಮಾಧಾನಕ್ಕೆ ಗುರಿಯಾಗಿದೆ. ಘಟನೆ ನಡೆದ ತಕ್ಷಣ ಗಂಡ ಸಮರ್ಥ್ ಸಿಂಗ್ (Samarth Singh) ತಪ್ಪಿಸಿಕೊಂಡು ಓಡಿಹೋಗಿದ್ದ. 10 ದಿನಗಳ ಬಳಿಕ ಆತನ ಬಂಧನವಾಗಿದೆ.

ಘಟನೆಯ ನಂತರ ಸಮರ್ಥ್ ನಾಪತ್ತೆಯಾಗಿದ್ದರಿಂದ ಪೊಲೀಸರು ಆತನ ಬಗ್ಗೆ ಮಾಹಿತಿ ನೀಡಿದವರಿಗೆ 30,000 ರೂಪಾಯಿ ಬಹುಮಾನ ಘೋಷಿಸಿದ್ದರು. ಅಲ್ಲದೆ, ಆತ ವಿದೇಶಕ್ಕೆ ಪರಾರಿಯಾಗದಂತೆ ಪಾಸ್‌ಪೋರ್ಟ್ ರದ್ದುಗೊಳಿಸುವ ಪ್ರಕ್ರಿಯೆಯನ್ನೂ ಸಹ ಆರಂಭಿಸಲಾಗಿತ್ತು. ಅವನ ನಿರೀಕ್ಷಣಾ ಜಾಮೀನು ವಜಾಗೊಂಡಿತ್ತು. ಆದ್ದರಿಂದ ಜಬಲ್ಪುರ್ ನ್ಯಾಯಾಲಯದಲ್ಲಿ (Jabalpur Court) ಹಾಜರಾಗುವ ನಾಟವಾಡಿದ್ದ. ಅವನನ್ನು ಅರೆಸ್ಟ್​ ಮಾಡಲಾಗಿದೆ ಮಾತ್ರವಲ್ಲದೇ ವಕೀಲಿ ವೃತ್ತಿ ನಡೆಸಲು ಬೇಕಾಗಿರುವ ಸನದನ್ನು ಬಾರ್​ ಕೌನ್ಸಿಲ್​ ಆಫ್​ ಇಂಡಿಯಾ ಅಮಾನತು ಮಾಡಿದೆ.

33 ವರ್ಷದ ತ್ವಿಷಾ ಶರ್ಮಾ ಮೇ 12ರಂದು ಭೋಪಾಲ್‌ನ ಅರೆರಾ ಕಾಲೋನಿಯಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಮೃತರ ಕುಟುಂಬಸ್ಥರು ಇದೊಂದು ವ್ಯವಸ್ಥಿತ ಕೊಲೆ ಎಂದು ಆರೋಪಿಸಿದ್ದು, ವರದಕ್ಷಿಣೆಗಾಗಿ ಕಿರುಕುಳ ನೀಡಲಾಗುತ್ತಿತ್ತು ಎಂದು ದೂರಿದ್ದಾರೆ. ಆದರೆ, ತಮಗೆ ಕೈಕೊಂದು ಕಾಲಿಗೊಂದು ಆಳು ಇದ್ದಾರೆ. ನಮಗ್ಯಾಕೆ ದುಡ್ಡು ಬೇಕು ಎಂದು ಅತ್ತೆ ಗಿರಿಬಾಲಾ ಸಿಂಗ್ ಹೇಳಿದ್ದಾರೆ.

ಮ್ಯಾನೇಜರ್ ವಿರುದ್ಧ ಯುವತಿ ವಾಗ್ದಾಳಿ

Share This Article
Facebook Twitter Copy Link Print
Previous Article ಮ್ಯಾನೇಜರ್ ವಿರುದ್ಧ ಯುವತಿ ವಾಗ್ದಾಳಿ
Next Article ಭಾರತದಲ್ಲಿರುವ ಈ ಬೀಚ್ ಏಷ್ಯಾದಲ್ಲೇ ಭಾರೀ ಬೆಸ್ಟ್!

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read
ವಿದೇಶಮನರಂಜನೆ

Avengers film update ಅವೆಂಜರ್ಸ್: ಡೂಮ್ಸ್‌ಡೇ’ ಚಿತ್ರದ ಟ್ರೈಲರ್ ಬಿಡುಗಡೆ

2 Min Read
ಅನಾವರಣಪ್ರಮುಖವಿದೇಶವೈರಲ್

Human Fridge ವಿಪರೀತ ಸೆಕೆಯೆನಿಸಿದರೆ ಅಂದುಕೊಂಡಂತೆ ನೀವು ಫ್ರಿಡ್ಜ್‌ನಲ್ಲೇ ಕೂಲ್ ಆಗಬಹುದು! ಬಂದಿದೆ ಹ್ಯೂಮನ್ ಫ್ರಿಡ್ಜ್!

2 Min Read
ವಿದೇಶ

England New Prime Minister: ಆಂಡಿ ಬರ್ನ್‌ಹ್ಯಾಮ್ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ – ಯಾರು ಈ ನಾಯಕ? ಬ್ರಿಟನ್ ಮುಂದೆ ಇರುವ ಸವಾಲುಗಳೇನು?

3 Min Read

Social Networks

Facebook-f Instagram Twitter
Welcome Back!

Sign in to your account

Lost your password?