newsics.com | ನ್ಯೂಸಿಕ್ಸ್
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಭಾರಿ ಆಕ್ರೋಶ ಮೂಡಿಸಿದ್ದ 11 ವರ್ಷದ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಎನ್‌ಕೌಂಟರ್ ಮಾಡಿ ಹೊಡೆದುರುಳಿಸಿದ್ದಾರೆ. ಮೃತನನ್ನು ಪ್ರವಾಶ್ ಮೊಂಡಲ್ ಎಂದು ಗುರುತಿಸಲಾಗಿದೆ.
ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನ
ಕೆಲವು ದಿನಗಳ ಹಿಂದೆ ಬಾರುಯಿಪುರದಲ್ಲಿ ಶಾಲಾ ಬಾಲಕಿಯೊಬ್ಬಳ ಮೇಲೆ ಕ್ರೂರವಾಗಿ ಅತ್ಯಾಚಾರ ನಡೆಸಿ, ಕೊಲೆ ಮಾಡಲಾಗಿತ್ತು. ಈ ಕೇಸ್‌ನಲ್ಲಿ ಪೊಲೀಸರು ಪ್ರವಾಶ್ ಮೊಂಡಲ್ ಸೇರಿದಂತೆ ನಾಲ್ವರನ್ನು ಬಂಧಿಸಿದ್ದರು. ತಡರಾತ್ರಿ ಸಾಕ್ಷ್ಯ ಕಲೆಹಾಕಲು ಆರೋಪಿ ಪ್ರವಾಶ್‌ನನ್ನು ಘಟನಾ ಸ್ಥಳಕ್ಕೆ ಕರೆದೊಯ್ದಾಗ, ಆತ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಓಡಿಹೋಗಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಆರೋಪಿ ಸಾವನ್ನಪ್ಪಿದ್ದಾನೆ.
ಇಬ್ಬರು ಆರೋಪಿಗಳಿಂದ ತಪ್ಪು ಒಪ್ಪಿಗೆ
ಬಾಲಕಿಯ ಶವವನ್ನು ಚೀಲದಲ್ಲಿ ತುಂಬಿ ಕೊಳಕ್ಕೆ ಎಸೆಯಲಾಗಿತ್ತು. ಈ ಭೀಕರ ಕೃತ್ಯದ ವಿರುದ್ಧ ಇಡೀ ರಾಜ್ಯಾದ್ಯಂತ ತೀವ್ರ ಪ್ರತಿಭಟನೆಗಳು ನಡೆದಿದ್ದವು. ಸದ್ಯ ಇದೇ ಪ್ರಕರಣದಲ್ಲಿ ಬಂಧಿತರಾಗಿರುವ ಆನಂದ ಸರ್ದಾರ್ ಮತ್ತು ದಿಬಾಕರ್ ಸರ್ದಾರ್ ಎಂಬ ಇತರ ಇಬ್ಬರು ಆರೋಪಿಗಳು ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Monsoon Alert ಶಿರಾಡಿ ಘಾಟಿಯಲ್ಲಿ ರಸ್ತೆ ಕುಸಿತದ ಭೀತಿ, ಹೋಂ ಸ್ಟೇ-ರೆಸಾರ್ಟ್‌ಗಳಿಗೆ ಕಠಿಣ ನಿಯಮ ಜಾರಿ