Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Student’s mysterious death ಖಾಸಗಿ ವಸತಿ ಶಾಲೆ ವಿದ್ಯಾರ್ಥಿ ಅನುಮಾನಾಸ್ಪದ ಸಾವು: ಪೋಷಕರ ಪ್ರತಿಭಟನೆ, ಲಘು ಲಾಠಿ ಪ್ರಹಾರ, ವಾರ್ಡನ್, ದೈಹಿಕ ಶಿಕ್ಷಕ ಅರೆಸ್ಟ್
ಕರ್ನಾಟಕಪ್ರಮುಖ

Student’s mysterious death ಖಾಸಗಿ ವಸತಿ ಶಾಲೆ ವಿದ್ಯಾರ್ಥಿ ಅನುಮಾನಾಸ್ಪದ ಸಾವು: ಪೋಷಕರ ಪ್ರತಿಭಟನೆ, ಲಘು ಲಾಠಿ ಪ್ರಹಾರ, ವಾರ್ಡನ್, ದೈಹಿಕ ಶಿಕ್ಷಕ ಅರೆಸ್ಟ್

Share
2 Min Read
SHARE

newsics.com | ನ್ಯೂಸಿಕ್ಸ್

ಚಿಕ್ಕಬಳ್ಳಾಪುರ: ಉತ್ತರ ತಾಲೂಕಿನ ಕಾಡಯರಪ್ಪನಹಳ್ಳಿ ಬಳಿಯ ಖಾಸಗಿ ವಸತಿ ಶಾಲೆಯಲ್ಲಿ 12 ವರ್ಷದ ವಿದ್ಯಾರ್ಥಿ  ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ  ನಡೆದಿದೆ.

ಮಗನ ಸಾವಿಗೆ ಶಾಲೆಯ ದೈಹಿಕ ಶಿಕ್ಷಕರ ಹಲ್ಲೆ ಹಾಗೂ ಅತಿಯಾದ ಒತ್ತಡವೇ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಯಲಹಂಕ ತಾಲೂಕಿನ ಸುಬೇದಾರ್ ಪಾಳ್ಯದ ಗುರುಕಿರಣ್ ಮೃತ ವಿದ್ಯಾರ್ಥಿ. ಆತ ಕಾಡಯರಪ್ಪನಹಳ್ಳಿ ಬಳಿಯ ಸ್ಟರ್ಲಿಂಗ್ ಇಂಗ್ಲಿಷ್ ವಸತಿ ಶಾಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.

ಬುಧವಾರ (ಜು.8) ಬೆಳಗ್ಗೆ ಗುರುಕಿರಣ್‌ಗೆ ಆರೋಗ್ಯ ಸರಿಯಿಲ್ಲ ಎಂದು ಶಾಲೆಯ ಶಿಕ್ಷಕರು ಪೋಷಕರಿಗೆ ಕರೆ ಮಾಡಿ ಆಸ್ಪತ್ರೆಗೆ ಕರೆತಂದಿರುವುದಾಗಿ ತಿಳಿಸಿದ್ದಾರೆ. ಆದರೆ ಪೋಷಕರು ಆಸ್ಪತ್ರೆಗೆ ತಲುಪುವಷ್ಟರಲ್ಲಿ ಬಾಲಕ ಮೃತಪಟ್ಟಿದ್ದಾನೆ.

ಬೆಳಗ್ಗೆ ಜಾಗಿಂಗ್ ವೇಳೆ ಶೌಚಾಲಯಕ್ಕೆ ಹೋಗಿ ಕೆಲ ನಿಮಿಷ ತಡವಾಗಿ ಬಂದಿದ್ದ ಗುರುಕಿರಣ್‌ಗೆ ದೈಹಿಕ ಶಿಕ್ಷಕ ನಾರಾಯಣ್ ಕತ್ತು ಬಗ್ಗಿಸಿ ಹೊಡೆದು ಹಲ್ಲೆ ನಡೆಸಿದ್ದಾನೆ. ಬಳಿಕ ಎರಡು ಸುತ್ತು ಓಡುವಂತೆ ಒತ್ತಾಯಿಸಿದ್ದಾನೆ. ಓಡಿ ಬಂದ ಕೆಲವೇ ಕ್ಷಣಗಳಲ್ಲಿ ಗುರುಕಿರಣ್ ಕುಸಿದು ಬಿದ್ದು ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ವಿದ್ಯಾರ್ಥಿ ಸಾವಿನ ಬಳಿಕ ಶಾಲೆಯ ಎದುರು ಜಮಾಯಿಸಿದ ಪೋಷಕರು ಹಾಗೂ ಸಂಬಂಧಿಕರು ಪ್ರತಿಭಟನೆ ನಡೆಸಿ, ಶಾಲೆಗೆ ಮುತ್ತಿಗೆ ಹಾಕಿದ್ದಾರೆ. ಆಕ್ರೋಶಗೊಂಡ ಸಂಬಂಧಿಕರು ವಾರ್ಡನ್‌ನನ್ನು ಎಳೆದಾಡಿ, ಆತನ ಮೇಲೆ ಹಲ್ಲೆ ನಡೆಸಿದ್ದಾರೆ.

ಪೊಲೀಸರ ಮುಂದೆಯೇ ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದೇ ವೇಳೆ ದೈಹಿಕ ಶಿಕ್ಷಕ ನಾರಾಯಣ್‌ನನ್ನೂ ಪೊಲೀಸರು ವಶಕ್ಕೆ ಪಡೆಯಲು ಯತ್ನಿಸಿದಾಗ, ಆತನ ಮೇಲೂ ಹಲ್ಲೆ ನಡೆಸಲಾಗಿದೆ. ಕೊನೆಗೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ.

ಘಟನಾ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಡಿಸಿಪಿ, ಎಸಿಪಿ ಸೇರಿದಂತೆ ನೂರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಯಿತು. ಈ ವೇಳೆ ಮೃತ ಬಾಲಕನ ತಂದೆ ಪೊಲೀಸ್ ವಾಹನದ ಮುಂದೆ ಮಲಗಿ, ನನ್ನ ಮಗನನ್ನು ಹೊಡೆದು ಸಾಯಿಸಿದ್ದಾರೆ, ನ್ಯಾಯ ಬೇಕು ಎಂದು ಕಣ್ಣೀರಿಟ್ಟಿದ್ದಾರೆ

ಬಾಗಲೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಲಕನ ಸಾವಿಗೆ ನಿಖರ ಕಾರಣ ಏನು ಎಂಬುದು ಮರಣೋತ್ತರ ಪರೀಕ್ಷೆ ವರದಿ ಬಳಿಕ ತಿಳಿಯಬೇಕಿದ್ದು, ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

 

Trump- Iran ಇರಾನಿಯನ್ನರು‌ ಭಾರೀ‌ ಕೆಟ್ಟವರು, ಇರಾನ್ ಜತೆಗಿನ‌ ಕದನ‌ ವಿರಾಮ‌ ಅಂತ್ಯ: ಟ್ರಂಪ್ ಘೋಷಣೆ

TAGGED:physical teacher arrestedPrivate residential school student's suspicious death: Parents protestwardenಹ
Share This Article
Facebook Twitter Copy Link Print
Previous Article Trump- Iran ಇರಾನಿಯನ್ನರು‌ ಭಾರೀ‌ ಕೆಟ್ಟವರು, ಇರಾನ್ ಜತೆಗಿನ‌ ಕದನ‌ ವಿರಾಮ‌ ಅಂತ್ಯ: ಟ್ರಂಪ್ ಘೋಷಣೆ
Next Article groom ran, bride chased ಮದುವೆ ಮಂಟಪದಿಂದ ಓಡಿದ ವರ, ಬೆನ್ನತ್ತಿದ ವಧು… ರಸ್ತೆಯಲ್ಲೇ ಹೈಡ್ರಾಮಾ, ಅಷ್ಟಕ್ಕೂ ಆದದ್ದೇನು? ವೈರಲ್ ವಿಡಿಯೋ ನೋಡಿ

Popular Posts

Pak plane missing ಪಾಕ್‌ನ ಬೋಯಿಂಗ್ ಕಾರ್ಗೋ‌ ವಿಮಾನ ನಾಪತ್ತೆ: ಎರಡು ದಿನವಾದರೂ ಸುಳಿವಿಲ್ಲ!

2 Min Read

groom ran, bride chased ಮದುವೆ ಮಂಟಪದಿಂದ ಓಡಿದ ವರ, ಬೆನ್ನತ್ತಿದ ವಧು… ರಸ್ತೆಯಲ್ಲೇ ಹೈಡ್ರಾಮಾ, ಅಷ್ಟಕ್ಕೂ ಆದದ್ದೇನು? ವೈರಲ್ ವಿಡಿಯೋ ನೋಡಿ

1 Min Read

Student’s mysterious death ಖಾಸಗಿ ವಸತಿ ಶಾಲೆ ವಿದ್ಯಾರ್ಥಿ ಅನುಮಾನಾಸ್ಪದ ಸಾವು: ಪೋಷಕರ ಪ್ರತಿಭಟನೆ, ಲಘು ಲಾಠಿ ಪ್ರಹಾರ, ವಾರ್ಡನ್, ದೈಹಿಕ ಶಿಕ್ಷಕ ಅರೆಸ್ಟ್

2 Min Read

Trump- Iran ಇರಾನಿಯನ್ನರು‌ ಭಾರೀ‌ ಕೆಟ್ಟವರು, ಇರಾನ್ ಜತೆಗಿನ‌ ಕದನ‌ ವಿರಾಮ‌ ಅಂತ್ಯ: ಟ್ರಂಪ್ ಘೋಷಣೆ

2 Min Read

You Might Also Like

ಪ್ರಮುಖCrimeಕರ್ನಾಟಕ

Road Mishap ಯಮನ ದವಡೆಯಿಂದ ಪಾರಾದ ವಿದ್ಯಾರ್ಥಿನಿ: ಲಾರಿ ಅಡಿಗೆ ಸಿಲುಕಿದ್ರೂ ವಿದ್ಯಾರ್ಥಿನಿ ಬಚಾವ್

1 Min Read
ಪ್ರಮುಖಕರ್ನಾಟಕ

Tech Tips ಮಳೆಗೆ ಫೋನ್ ಒದ್ದೆಯಾದ್ರೆ ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ, ಫೋನ್ ಡೆಡ್ ಆಗದಂತೆ ತಡೆಯಲು ತಕ್ಷಣ ಹೀಗೆ ಮಾಡಿ

2 Min Read
ಪ್ರಮುಖCrimeದೇಶ

Crime Case 11 ವರ್ಷದ ಬಾಲಕಿ ಅತ್ಯಾಚಾ*ರ, ಕೊ*ಲೆ ಆರೋಪಿ ಎನ್‌ಕೌಂಟರ್

1 Min Read
ಪ್ರಮುಖಕರ್ನಾಟಕ

Monsoon Alert ಶಿರಾಡಿ ಘಾಟಿಯಲ್ಲಿ ರಸ್ತೆ ಕುಸಿತದ ಭೀತಿ, ಹೋಂ ಸ್ಟೇ-ರೆಸಾರ್ಟ್‌ಗಳಿಗೆ ಕಠಿಣ ನಿಯಮ ಜಾರಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?