newsics.com | ನ್ಯೂಸಿಕ್ಸ್
ಟೆಹ್ರಾನ್/ವಾಷಿಂಗ್ಟನ್: ಇರಾನ್ ಜತೆಗಿನ ಕದನ ವಿರಾಮ ಅಂತ್ಯವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಘೋಷಿಸಿದ್ದಾರೆ.
ಹಾರ್ಮುಜ್ ಜಲಸಂಧಿಯಲ್ಲಿ (Hormuz Strait) ಮೂರು ವಾಣಿಜ್ಯ ಹಡಗುಗಳ ಮೇಲೆ ಅಮೆರಿಕ ಪಡೆ ಪ್ರತೀಕಾರದ ದಾಳಿ ನಡೆಸಿದ ಕೆಲವೇ ಗಂಟೆಗಳಲ್ಲಿ ಟ್ರಂಪ್ ಪ್ರತಿಕ್ರಿಯಿಸಿದ್ದಾರೆ. ಟರ್ಕಿಯಲ್ಲಿ ನಡೆದ ನ್ಯಾಟೋ ಶೃಂಗಸಭೆಯಲ್ಲಿ ಈ ಬಗ್ಗೆ ಮಾತನಾಡಿದ ಟ್ರಂಪ್, ಸಂಘರ್ಷವನ್ನು ಕೊನೆಗೊಳಿಸಲು ಇರಾನ್ ಜೊತೆಗೆ ಸಹಿ ಹಾಕಲಾಗಿದ್ದ ಮಧ್ಯಂತರ ಶಾಂತಿ ಒಪ್ಪಂದ ಮುಗಿದಿದೆ ಎಂದಿದ್ದಾರೆ.
3 ವಾರಗಳ ಹಿಂದೆ ಇರಾನ್‌ನೊಂದಿಗೆ ಸಹಿ ಹಾಕಿದ ತಿಳುವಳಿಕೆ ಒಪ್ಪಂದದ (MoU) ಬಗ್ಗೆ ಕೇಳಿದಾಗ, ಟ್ರಂಪ್ ಅದನ್ನು ಸ್ಪಷ್ಟವಾಗಿ ಹೇಳಿದರು. ನನ್ನ ಪ್ರಕಾರ ಶಾಂತಿ ಒಪ್ಪಂದ ಅನ್ನೋದು ಮುಗಿದ ಅಧ್ಯಾಯ. ನಾನಿನ್ನು ಇರಾನಿಯನ್ನರೊಂದಿಗೆ ವ್ಯವಹರಿಸಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ರಾನಿಯನ್ನರು ನಾಲಾಯಕ್ ಜನರು, ವಿಕೃತ ಹಾಗೂ ಕೊಳಕು ಮನಸ್ಸಿನವರು. ಕ್ರೂರಿಗಳೂ ಕೂಡ ಹೌದು. ಅವರನ್ನ ಮುನ್ನಡೆಸುವವರು ಸಹ ವಿಕೃತ ಮನಸ್ಸು ಹೊಂದಿದವರೇ ಆಗಿದ್ದಾರೆ. ಅವರ ಬಳಿ ಪರಮಾಣು ಶಸ್ತ್ರಾಸ್ತ್ರ ಇದ್ದಿದ್ದರೆ ಅದನ್ನ ಬಳಸುತ್ತಿದ್ದರು. ಇನ್ನೂ ಇರಾನ್ ಜೊತೆಗೆ ಮಾತುಕತೆ ನಡೆಸುವುದರಿಂದ ಸಮಯ ವ್ಯರ್ಥ ಎಂದು ಟ್ರಂಪ್ ವಾಗ್ದಾಳಿ ನಡೆಸಿದ್ದಾರೆ.
ಹಾರ್ಮುಜ್ ಜಲಸಂಧಿಯಲ್ಲಿ ಮೂರು ತೈಲ ಟ್ಯಾಂಕರ್‌ಗಳ (Oil Tanker) ಮೇಲೆ ಕ್ಷಿಪಣಿ ದಾಳಿ ನಡೆದ ನಂತರ ಅಮೆರಿಕ ಇರಾನ್‌ಗೆ ತೈಲ ಮಾರಾಟ ಮಾಡಲು ನೀಡಿದ್ದ ಪರವಾನಗಿಯನ್ನ ರದ್ದುಗೊಳಿಸಿದೆ.
ಇದಕ್ಕೂ ಮುನ್ನ ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ವಾಣಿಜ್ಯ ಹಡಗುಗಳ ಮೇಲೆ ಇರಾನ್ (Iran) ಪಡೆಗಳು ನಡೆಸಿದ ದಾಳಿಗೆ ಪ್ರತೀಕಾರವಾಗಿ, ಅಮೆರಿಕ (USA) ಮಿಲಿಟರಿ ಇರಾನ್‌ನ ಇತಿಹಾಸದಲ್ಲೇ ಅತ್ಯಂತ ಭೀಕರ ಎನ್ನಲಾದ ವಾಯುದಾಳಿಗಳನ್ನು (Air Strike) ನಡೆಸಿತು.
ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ನೀಡಿರುವ ಮಾಹಿತಿ ಪ್ರಕಾರ, ಈ ಬಾರಿ ಇರಾನ್ ಒಳಗಿರುವ ಕನಿಷ್ಠ 80ಕ್ಕೂ ಹೆಚ್ಚು ಆಯಕಟ್ಟಿನ ಮಿಲಿಟರಿ ತಾಣಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ. ಇದು ಕಳೆದ ಜೂನ್‌ನಲ್ಲಿ ನಡೆದ ದಾಳಿಗಿಂತ 8 ಪಟ್ಟು ಹೆಚ್ಚು ತೀವ್ರ ಮತ್ತು ದೊಡ್ಡದಾಗಿದೆ ಎಂದು ಅಮೆರಿಕದ ಹಿರಿಯ ರಕ್ಷಣಾ ಅಧಿಕಾರಿಗಳು ತಿಳಿಸಿದರು.
ಇರಾನ್ ಇತ್ತೀಚೆಗೆ ಹಾರ್ಮುಜ್ ಜಲಸಂಧಿಯಲ್ಲಿ ಸಂಚರಿಸುತ್ತಿದ್ದ ಕತಾರ್, ಸೌದಿ ಅರೇಬಿಯಾ ಸೇರಿದಂತೆ ಮೂರು ಪ್ರಮುಖ ವಾಣಿಜ್ಯ ತೈಲ ಹಡಗುಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿತ್ತು. ಇರಾನ್ ಮತ್ತು ಅಮೆರಿಕ ನಡುವೆ ಕಳೆದ ತಿಂಗಳಷ್ಟೇ ಏರ್ಪಟ್ಟಿದ್ದ ತಾತ್ಕಾಲಿಕ ಕದನ ವಿರಾಮ ಒಪ್ಪಂದವನ್ನು ಇರಾನ್ ಸಂಪೂರ್ಣವಾಗಿ ಉಲ್ಲಂಘಿಸಿದೆ ಎಂದು ಅಮೆರಿಕ ಆರೋಪಿಸಿತ್ತು.
ಎಲ್ಲೆಲ್ಲಿ ದಾಳಿ?
ಅಮೆರಿಕದ ಯುದ್ಧ ವಿಮಾನಗಳು ಮತ್ತು ಕ್ಷಿಪಣಿಗಳು ಇರಾನ್‌ನ ದಕ್ಷಿಣ ಕರಾವಳಿ ಭಾಗಗಳನ್ನು ಧ್ವಂಸಗೊಳಿಸುತ್ತಿದೆ. ಏರ್ ಡಿಫೆನ್ಸ್ ಸಿಸ್ಟಮ್ಸ್ (ವಾಯು ರಕ್ಷಣಾ ವ್ಯವಸ್ಥೆಗಳು), ಕರಾವಳಿ ಕಾವಲು ರಾಡಾರ್ ಕೇಂದ್ರಗಳು, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನ 60 ಕ್ಕೂ ಹೆಚ್ಚು ಸಣ್ಣ ಯುದ್ಧ ಬೋಟ್‌ಗಳು, ಡ್ರೋನ್ ಉಡಾವಣಾ ಕೇಂದ್ರಗಳು ಮತ್ತು ಆಂಟಿ-ಶಿಪ್ ಕ್ರೂಸ್ ಕ್ಷಿಪಣಿ ನೆಲೆಗಳು, ಬಂದರು ನಗರಗಳಾದ ಬಂದರ್ ಅಬ್ಬಾಸ್ ಮತ್ತು ಸಿರಿಕ್ ಮೇಲೆ ದಾಳಿ ನಡೆದಿದೆ.