Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Gold cash plan ಮನೇಲಿರೋ ಚಿನ್ನದಿಂದಲೂ ಸಿಗಲಿದೆ‌ ಆದಾಯ! ಏನಿದು‌ ಕೇಂದ್ರ ಸರ್ಕಾರದ ಹೊಸ ಯೋಜನೆ? ಈ‌ ಸುದ್ದಿ ಓದಿ
ಕರ್ನಾಟಕದೇಶಪ್ರಮುಖ

Gold cash plan ಮನೇಲಿರೋ ಚಿನ್ನದಿಂದಲೂ ಸಿಗಲಿದೆ‌ ಆದಾಯ! ಏನಿದು‌ ಕೇಂದ್ರ ಸರ್ಕಾರದ ಹೊಸ ಯೋಜನೆ? ಈ‌ ಸುದ್ದಿ ಓದಿ

Share
3 Min Read
SHARE

newsics.com | ನ್ಯೂಸಿಕ್ಸ್

ನವದೆಹಲಿ: ಮನೆಯಲ್ಲಿರುವ ಹಳೆಯ ಚಿನ್ನದಿಂದಲೂ ಸುಲಭವಾಗಿ ಆದಾಯ ಪಡೆಯುವ ಯೋಜನೆಯೊಂದನ್ನು ಕೇಂದ್ರ ಸರ್ಕಾರ ರೂಪಿಸುತ್ತಿದೆ.

‘ಚಿನ್ನ ನಗದೀಕರಣ ಯೋಜನೆ’ ಎಂದು ಹೇಳಲಾಗುವ ಈ ಯೋಜನೆಯನ್ನು ಶೀಘ್ರದಲ್ಲೇ ಅಧಿಕೃತವಾಗಿ ಘೋಷಿಸಲು ಸಿದ್ಧತೆಗಳು ನಡೆಯುತ್ತಿವೆ.

ದೇಶದಲ್ಲಿ ಚಿನ್ನದ ಬೇಡಿಕೆಗೆ ಸಮಸ್ಯೆಯಾಗದಂತೆ ಹಾಗೂ ಆಭರಣ ಉದ್ಯಮದಲ್ಲಿ ತೊಡಗಿ ಕೊಂಡಿರುವ ಲಕ್ಷಾಂತರ ಕಾರ್ಮಿಕರ ಜೀವನೋಪಾಯಕ್ಕೆ ಧಕ್ಕೆಯೂ ಆಗದಂತೆ ಚಿನ್ನದ ಆಮದು ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತ ಆಭರಣ ಮತ್ತು ಅಕ್ಕಸಾಲಿಗಳ ಒಕ್ಕೂಟ (ಎಐಜೆಜಿಎಫ್) ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಆ ಬಳಿಕವೇ ಕೇಂದ್ರ ಸರ್ಕಾರವು ಚಿನ್ನದ ಆಮದು ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೊಳಿಸಲು ಮುಂದಾಗಿದೆ. ಭಾರತೀಯರ ಮನೆಗಳಲ್ಲಿ ಇರುವ ಚಿನ್ನದ ಪೈಕಿ ಸ್ವಲ್ಪ ಚಿನ್ನ ಮಾರಕಟ್ಟೆಗೆ ಬಂದರೂ, ಆಮದು ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ ಎನ್ನುವುದು ಕೇಂದ್ರದ ಲೆಕ್ಕಾಚಾರ. ಮೂಲಗಳ ಪ್ರಕಾರ, ಯೋಜನೆಯ ನಿಯಮಾವಳಿಗಳನ್ನು ರೂಪಿಸಲಾಗುತ್ತಿದ್ದು, ಎರಡು ವಾರಗಳಲ್ಲಿ ಬಹಿರಂಗಪಡಿಸುವ ನಿರೀಕ್ಷೆ ಇದೆ.

ಗಳಿಕೆ ಹೇಗೆ?

ಚಿನ್ನದ ವ್ಯಾಪಾರಿಗಳನ್ನು ಚಿನ್ನ ಸಂಗ್ರಹಿಸುವ ಪಾಲುದಾರ ಎಂದು ಈ ಯೋಜಯಲ್ಲಿ ತೊಡಗಿಸಿಕೊಳ್ಳಲಾಗುತ್ತದೆ. ಗ್ರಾಹಕರು ತಮ್ಮ ಮನೆಯ ಬಳಿ ಇರುವ ಇಂತಹ ಮಾನ್ಯತೆ ಪಡೆದ ಅಥವಾ ಅಧಿಕೃತ ಚಿನ್ನ ಸಂಗ್ರಾಹಕರ ಬಳಿ ತಮ್ಮ ಚಿನ್ನವನ್ನು ಠೇವಣಿ ಇಡಬಹುದು. ಅದಕ್ಕೆ ವಾರ್ಷಿಕವಾಗಿ ಶೇ.2.25 ರಿಂದ ಶೇ.2.50ರವರೆಗೆ ಬಡ್ಡಿ ಸಿಗಲಿದೆ. ಒಂದು ಸಂಗತಿ ನೆನಪಿರಲಿ. ಠೇವಣಿ ಅವಧಿ ಮುಗಿದ ಬಳಿಕ, ನಿಮ್ಮ ಚಿನ್ನ ನೀವು ಠೇವಣಿ ಇಟ್ಟ ರೂಪದಲ್ಲಿಯೇ ಮರಳಿ ಸಿಗುವುದಿಲ್ಲ. ಬದಲಾಗಿ ಬಂಗಾರದ ಗಟ್ಟಿಯಾಗಿ ನಿಮಗೆ ಸಿಗುತ್ತದೆ. ಅದರ ಜತೆಗೆ ಚಿನ್ನದ ಮೌಲ್ಯದ ಮೇಲೆ ಬಡ್ಡಿಯೂ ಸಿಗಲಿದೆ.

ಗ್ರಾಹಕರಿಗೆ ಚಿನ್ನ ಇಡುವಾಗಲೇ ಈ ಕುರಿತು ತಿಳಿಹೇಳಿ, ಅಧಿಕೃತ ಕರಾರು ಮಾಡಲಾಗುತ್ತದೆ. ನೀವು 100 ಗ್ರಾಂ ಒಡವೆ ಕೊಟ್ಟರೆ, ಅದನ್ನು ಕರಗಿಸಿ ಅದರಲ್ಲಿರುವ 90 ಗ್ರಾಂ ‘ಶುದ್ದ ಚಿನ್ನ’ವನ್ನು ಮಾತ್ರ ಬಾಂಡ್‌ನಲ್ಲಿ ನಮೂದಿಸಲಾಗುತ್ತದೆ. ಠೇವಣಿ ಅವಧಿ ಮುಗಿದ ಬಳಿಕ ಬಡ್ಡಿ ಮೊತ್ತದ ಜತೆಗೆ, 90 ಗ್ರಾಂ ತೂಕದ ಹೊಸ ಚಿನ್ನದ ಬಿಸ್ಕತ್ ಆಥವಾ ನಾಣ್ಯ ಅಥವಾ ಅದಕ್ಕೆ ಸಮನಾದ ಮೊತ್ತವನ್ನು ನೀಡಲಾಗುತ್ತದೆ.

ಈಗಿರುವ ನಿಯಮಗಳ ಅನುಸಾರ ಬ್ಯಾಂಕುಗಳಿಗೆ ಮಾತ್ರ ಜನರಿಂದ ಚಿನ್ನವನ್ನು ಸಂಗ್ರಹಿಸಲು ಅನುಮತಿ ನೀಡಲಾಗುತ್ತದೆ. ಆದರೆ, ಹೊಸ ನಿಯಮದಂತೆ ದೇಶಾದ್ಯಂತ ಇರುವ ಚಿನ್ನದ ವರ್ತಕರು ಚಿನ್ನಸಂಗ್ರಹಿಸಬಹುದು. ಗ್ರಾಹಕರು ತಮ್ಮಮನೆ ಹತ್ತಿರದ, ನಂಬಿಕಸ್ಥ ಜುವೆಲರಿ ಅಂಗಡಿಗಳಲ್ಲೇ ನೇರವಾಗಿ ಚಿನ್ನವನ್ನು ಜಮಾ ಮಾಡಬಹುದು.

ಈ ಯೋಜನೆಯಿಂದ ಗ್ರಾಹಕರಿಗೇನು ಲಾಭ?

ಆದಾಯ: ಮನೆಯಲ್ಲಿ ಸುಮ್ಮನೆ ಚಿನ್ನ ಇಟ್ಟುಕೊಳ್ಳುವ ಬದಲು ವರ್ಷಕ್ಕೆ ಶೇ. 2.25 ರಿಂದ ಶೇ. 2.5 ರಷ್ಟು ಬಡ್ಡಿ ಗಳಿಸಬಹುದು
ಭಯವಿಲ್ಲ: ಚಿನ್ನವನ್ನು ಮನೆಯಲ್ಲಿಟ್ಟು ಕೊಂಡರೆ ಕಳ್ಳತನದ ಭಯ, ಬ್ಯಾಂಕ್ ನಲ್ಲಿಟ್ಟರೆ ಲಾಕ‌ರ್ ಶುಲ್ಕ ನೀಡಬೇಕು ಎಂಬ ಚಿಂತೆಗೆ ಮುಕ್ತಿ
ಆಯ್ಕೆ ಅವಕಾಶ: ಠೇವಣಿ ಅವಧಿ ಮುಗಿದ ಬಳಿಕ ನಗದು ಅಥವಾ ಶುದ್ಧ ಚಿನ್ನದ ರೂಪದಲ್ಲಿ ಹಿಂಪಡೆಯುವ ಅವಕಾಶ.

ದಾಖಲೆಗಳ ಕಿರಿಕಿರಿ ಇಲ್ಲ: ಹೊಸ ಯೋಜನೆಯಲ್ಲಿ ಗ್ರಾಹಕರು ಹಳೆಯ ಚಿನ್ನಕ್ಕೆ ದಾಖಲೆಗಳನ್ನು ನೀಡುವ, ಖರೀದಿಸಿದ ಚಿನ್ನಕ್ಕೆ ಬಿಲ್‌ ಇಲ್ಲ ಎಂಬ ಚಿಂತೆ ಇಲ್ಲ

ವಿನ್‌-ವಿನ್ ಸೂತ್ರವಿದು

ಇದು ಯಾರಿಗೂ ನಷ್ಟವಿಲ್ಲದ ‘ವಿನ್‌-ವಿನ್’ ಸೂತ್ರ. ಜನರಿಗೆ ಮನೆಯಲ್ಲೇ ಚಿನ್ನ ಇರಿಸಿಕೊಳ್ಳುವ ಬದಲು ಠೇವಣಿ ಇಟ್ಟರೆ ಬಡ್ಡಿ ಸಿಗುತ್ತದೆ. ಆಭರಣ ವ್ಯಾಪಾರಿಗಳಿಗೆ ಸುಲಭವಾಗಿ ಚಿನ್ನ ಸಿಗುತ್ತದೆ, ಅಲ್ಲದೇ ವ್ಯಾಪಾರ ವೃದ್ಧಿಗೂ ದಾರಿಯಾಗುತ್ತದೆ. ಸರ್ಕಾರಕ್ಕೆ ಆಮದು ಕಡಿಮೆಯಾಗುವುದರಿಂದ ವಿದೇಶಿ ವಿನಿಮಯ ಶುಲ್ಕದಲ್ಲಿ ಭಾರಿ ಉಳಿತಾಯವಾಗುತ್ತದೆ.

ಈ ಯೋಜನೆಯ ಹಿಂದಿನ ಉದ್ದೇಶ

*‌ 1,000‌ ಟನ್- ಭಾರತೀಯರ ಮನೆಗಳಲ್ಲಿರುವ ಇಷ್ಟು ಮೊತ್ತದ ಚಿನ್ನ ಚಲಾವಣೆಗೆ ಬರಬಹುದು ಎಂಬುದು ಕೇಂದ್ರ ಸರ್ಕಾರದ ನಿರೀಕ್ಷೆ.
* 25,000-35,000 ಟನ್- ಚಿನ್ನ ಭಾರತೀಯರ ಮನೆಗಳಲ್ಲಿ ಇದೆ ಎಂದು ಅಂದಾಜಿಸಲಾಗಿದೆ.
* 8.57 ಲಕ್ಷ ಕೋಟಿ- ಭಾರತೀಯ ಕುಟುಂಬಗಳ ಬಳಿ ಇರುವ ಚಿನ್ನದ ಪೈಕಿ ಕೇವಲ ಶೇ.5 ರಷ್ಟು ಚಿನ್ನ ಈ ಯೋಜನೆಯಡಿ ಮಾರುಕಟ್ಟೆಗೆ ಬಂದರೂ, ಸುಮಾರು 8.57 ಲಕ್ಷ ಕೋಟಿ ರೂ. ನಗದು ಹರಿವು ಬರಲಿದೆ ಎಂದು ಅಂದಾಜಿಸಲಾಗಿದೆ.

Dubai ಬುರ್ಜ್ ಖಲೀಫಾದಲ್ಲಿ AI ಕಂಪನಿ ಸ್ಥಾಪಿಸಿದ 14 ವರ್ಷದ ಹುಡುಗ!

E20 ಪೆಟ್ರೋಲ್ ಬಳಸಿದರೆ ವಾಹನದ ಮೈಲೇಜ್ ಕಡಿಮೆಯಾಗುತ್ತಾ? ಸರ್ಕಾರ ಹೇಳಿದ್ದೇನು

Bollywood ಬೆಂಗಳೂರು ಬೆಡಗಿ ಜೊತೆ ಸಪ್ತಪದಿ ತುಳಿಯಲಿದ್ದಾರೆ ‘ಮಿಸ್ಟರ್ ಪರ್ಫೆಕ್ಟ್’ ಅಮೀರ್ ಖಾನ್

Vaibhav ಮ್ಯಾಂಚೆಸ್ಟರ್‌ನಲ್ಲಿ ವೈಭವ್ ಸೂರ್ಯವಂಶಿ ಪದಾರ್ಪಣೆ: ಸಚಿನ್ ದಾಖಲೆ ಅಳಿಸಿದ ಬಾಲಕ!

TAGGED:#oldgold #uniongovernment #goldcashplan #income #news #newsics
Share This Article
Facebook Twitter Copy Link Print
Previous Article Leopard attack ಮನೆಯೆದುರು ಕುಳಿತಿದ್ದ ಅಜ್ಜಿ, ಮೊಮ್ಮಗಳ‌ ಮೇಲೆ ಚಿರತೆ ಭೀಕರ ದಾಳಿ: ಬದುಕಿದ್ದೇ ಪವಾಡ
Next Article Ketan grandfather dies ಕೇತನ್ ಸಾವಿನ ಚಿಂತೆ, ಹೃದಯಾಘಾತದಿಂದ ತಾತ ದೇವಿಚಂದ್ ಸಾವು!

Popular Posts

Tirupati 116ರ ಅಜ್ಜಿಗೆ ರಾಷ್ಟ್ರಪತಿ ಮಾದರಿಯ ‘ವಿಶೇಷ ವಿಐಪಿ ಬ್ರೇಕ್ ದರ್ಶನ’ ನೀಡಿದ ಟಿಟಿಡಿ

3 Min Read

Egg & Chicken Price Hike ಮಾಂಸ ಪ್ರಿಯರಿಗೆ ಶಾಕ್ : ಚಿಕನ್ ಮೊಟ್ಟೆ ಬೆಲೆಯಲ್ಲಿ ಏರಿಕೆ

1 Min Read

Tender coconut trouble ಎಳನೀರಿನಿಂದ‌ ನಿಯಂತ್ರಣ ತಪ್ಪಿದ ಕಾರು! ಖ್ಯಾತ ಅರ್ಚಕ ಸೇರಿ ಇಬ್ಬರ ಸಾವು

1 Min Read

Ayodhye ರಾಮಮಂದಿರದ ಹುಂಡಿ ಹಣ ದುರುಪಯೋಗ : ಗರ್ಲ್ ಫ್ರೆಂಡ್ ಗೆ ಐಫೋನ್, ಮನೆ, ಕಾರು ಖರೀದಿಸಿದ ಆರೋಪಿ

2 Min Read

You Might Also Like

ಕರ್ನಾಟಕದೇಶಪ್ರಮುಖ

Mobile ಆ್ಯಪ್ ಮೂಲಕ ಆನ್ಲೈನ್ ನಲ್ಲಿ ಮಾಡಿಕೊಳ್ಳಬಹುದು SIR: ಇಲ್ಲಿವೆ 4 ಸರಳ ಹಂತಗಳು

3 Min Read
ಕರ್ನಾಟಕದೇಶಪ್ರಮುಖ

Ayodhye ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣ: ಚಂಪತ್‌ ರಾಯ್‌ ರಾಜೀನಾಮೆ ಅಂಗೀಕರಿಸಿದ ಟ್ರಸ್ಟ್

1 Min Read
ದೇಶಪ್ರಮುಖ

Love story ಪ್ರೀತಿಗಾಗಿ 8 ಲಕ್ಷ ರೂ.ಸಾಲ ಮಾಡಿ ಲಿಂಗ ಪರಿವರ್ತಿಸಿದ ರಾಖಿ, ಈಗ ರಾಹುಲ್ ಆಗಿ ಪರಿವರ್ತನೆ

3 Min Read
ಕರ್ನಾಟಕದೇಶಪ್ರಮುಖ

Kalaburgi ‘ನಾನು ಸಚಿವನಾಗಿ ಇರುವ ತನಕ ರಾಜ್ಯದಲ್ಲಿ RSS ಪಥಸಂಚಲನಕ್ಕೆ ನನ್ನ ಅನುಮತಿ ಕಡ್ಡಾಯ’ – ಪ್ರಿಯಾಂಕ್ ಖರ್ಗೆ ವಾರ್ನಿಂಗ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?