newsics.com| ನ್ಯೂಸಿಕ್ಸ್
ರಾಜ್ಯದಲ್ಲಿ ಚಿಕನ್ ಮತ್ತು ಮೊಟ್ಟೆ ದರ ಏರಿಕೆಗೊಂಡಿದ್ದು, ಇದು ಮಾಂಸ ಪ್ರಿಯರಿಗೆ ದೊಡ್ಡ ಆಘಾತವನ್ನು ನೀಡಿದೆ.
ಕೆಲವೇ ದಿನಗಳ ಹಿಂದೆ 250 ರೂಪಾಯಿ ಆಸುಪಾಸಿನಲ್ಲಿದ್ದ ಸ್ಕಿನ್ಲೆಸ್ ಚಿಕನ್ ಬೆಲೆ, ಈಗ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ಬರೋಬ್ಬರಿ 340 ರಿಂದ 350 ರೂಪಾಯಿ ಗಡಿ ದಾಟಿದೆ. ಇನ್ನು ವಿತ್ ಸ್ಕಿನ್ ಚಿಕನ್ 320 ರೂ. ಹಾಗೂ ಜೀವಂತ ಕೋಳಿ ಬೆಲೆ ಕೆಜಿಗೆ 210 ರೂ. ದಾಟಿದೆ. ಇದು ಚಿಕನ್ ಕಥೆಯಾದರೆ, ಬಡವರ ಪ್ರೊಟೀನ್ ಎಂದೇ ಕರೆಯಲ್ಪಡುವ ಮೊಟ್ಟೆ ಕಥೆ ಇನ್ನಷ್ಟು ರೋಚಕ. ಕೇವಲ 80 ರೂಪಾಯಿಗೆ ಸಿಗುತ್ತಿದ್ದ ಒಂದು ಡಜನ್ ಮೊಟ್ಟೆ ಈಗ 90 ರಿಂದ 100 ರೂ. ತಲುಪಿದೆ. ರಿಟೇಲ್ ಅಂಗಡಿಗಳಲ್ಲಿ ಒಂದು ಬಿಡಿ ಮೊಟ್ಟೆಗೆ 8.50 ಯಿಂದ 10 ರೂಪಾಯಿವರೆಗೂ ಮಾರಾಟವಾಗುತ್ತಿದೆ! ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ (NECC) ದತ್ತಾಂಶದ ಪ್ರಕಾರವೇ, ಮೇ ತಿಂಗಳಲ್ಲಿ 100 ಮೊಟ್ಟೆಗೆ 598.5 ರೂ. ಇದ್ದ ಹೋಲ್ ಸೇಲ್ ರೇಟ್, ಜೂನ್ನಲ್ಲಿ 671.7 ರೂ.ಗೆ ಏರಿ, ಈಗ ಜುಲೈನಲ್ಲಿ 710 ರೂ.ಗೆ ಮುಟ್ಟಿದೆ.
Mobile ಆ್ಯಪ್ ಮೂಲಕ ಆನ್ಲೈನ್ ನಲ್ಲಿ ಮಾಡಿಕೊಳ್ಳಬಹುದು SIR: ಇಲ್ಲಿವೆ 4 ಸರಳ ಹಂತಗಳು