newsics.com| ನ್ಯೂಸಿಕ್ಸ್
ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಎಸ್‌ಐಆರ್ ಪ್ರಕ್ರಿಯೆಯನ್ನು ನೀವು ಆನ್‌ಲೈನ್‌ನಲ್ಲಿಯೇ ಮಾಡಬಹುದಾಗಿದೆ.
ಆನ್‌ಲೈನ್‌ನಲ್ಲಿ ಮತದಾರರ ಗಣತಿ ಸಲ್ಲಿಸುವ ವಿಧಾನ ಅತ್ಯಂತ ಸರಳವಾಗಿದ್ದು, 4 ಸರಳ ಹಂತಗಳನ್ನು ಅನುಸರಿಸಿದರೆ ಸಾಕು. ಮತದಾರರು ಮತದಾನದ ಹಕ್ಕು ಕಳೆದುಕೊಳ್ಳಬಾರದು ಎನ್ನುವ ಉದ್ದೇಶದಿಂದ ಗಣತಿ ಅರ್ಜಿ ಸಲ್ಲಿಕೆಗೆ ಆನ್‌ಲೈನ್ ಅವಕಾಶ ಕಲ್ಪಿಸಲಾಗಿದೆ.
ದೇಶದಾದ್ಯಂತ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ನಡೆದಿದ್ದು, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸರಿಯಾಗಿ ಪಾಲ್ಗೊಳ್ಳದ ಹಲವು ಮತದಾರರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ. ಗಣತಿ ಅರ್ಜಿ ಮಿಸ್ ಆಗಿದ್ದರೆ ಅಥವಾ ಸಿಗದೆ ಇದ್ದರೆ ನೀವು ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಕೆ ಮಾಡಬಹುದು.
https://voters.eci.gov.in/ ಆನ್‌ಲೈನ್‌ನಲ್ಲಿ ಭರ್ತಿ ಮಾಡಿ ಮತ್ತು ಸಲ್ಲಿಸಿ.
ನಿಮ್ಮ ಗಣತಿ ನಮೂನೆ ಆನ್‌ಲೈನ್‌ನಲ್ಲಿ ಸಲ್ಲಿಸಲು 4 ಸುಲಭ ಹಂತಗಳನ್ನು ಅನುಸರಿಸಿ
ಹಂತ 1:
“Fill Enumeration Form” ಆಯ್ಕೆಯನ್ನು ಕ್ಲಿಕ್ ಮಾಡಿ.
ಗಣತಿ ನಮೂನೆ ಭರ್ತಿ ಮಾಡಿ – SIR- 2026 ಪುಟದಲ್ಲಿ “ಗಣತಿ ನಮೂನೆಯನ್ನು ಭರ್ತಿ ಮಾಡಿ” ಎಂಬುವುದನ್ನು ಕ್ಲಿಕ್ ಮಾಡಿ.
ಹಂತ 2:
“ಸೈನ್ – ಆಪ್” ಮೊಬೈಲ್ ಸಂಖ್ಯೆ ಮತ್ತು OTP ದಾಖಲಿಸಿ. “ಸೈನ್ – ಅಪ್” ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ಸಂಖ್ಯೆ ಅಥವಾ EPIC (Voter ID) ಸಂಖ್ಯೆ ನಮೂದಿಸಿ. ಕ್ಯಾಪ್ಷನ್ ಭರ್ತಿ ಮಾಡಿ ಮತ್ತು OTP ಗಾಗಿ ವಿನಂತಿಸಿ.
ಹಂತ 3:
ಮತದಾರರ ವಿವರಗಳನ್ನು ಪಡೆಯಲು ರಾಜ್ಯವನ್ನು ಆಯ್ಕೆ ಮಾಡಿ ಮತ್ತು EPIC ಸಂಖ್ಯೆಯನ್ನು ನಮೂದಿಸಿ. ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ, ನಿಮ್ಮ EPIC ಸಂಖ್ಯೆಯನ್ನು ನಮೂದಿಸಿ ಮತ್ತು ನಿಮ್ಮ ವಿವರಗಳನ್ನು ಹುಡುಕಿ. ಕೇಳಲಾಗುವ ವೈಯಕ್ತಿಕ ಹಾಗೂ ಮತದಾರರ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ.
ಹಂತ 4:
2022ರ ಮತದಾರರ ಪಟ್ಟಿಯಲ್ಲಿ ನಮೂದನ್ನು ಹುಡುಕಿ, ನಮೂದಿಸಿದ ನಂತರ ಗಣತಿ ನಮೂನೆಯನ್ನು ಭರ್ತಿ ಮಾಡಿ ಗಣತಿ ನಮೂನೆಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ ವಿವರಗಳನ್ನು ಪರಿಶೀಲಿಸಿ ಮತ್ತು ಆನ್‌ಲೈನ್‌ನಲ್ಲಿ ಸಲ್ಲಿಸಿ. ಎಲ್ಲಾ ವಿವರಗಳನ್ನು ಪರಿಶೀಲಿಸಿದ ಬಳಿಕ Submit ಬಟನ್ ಒತ್ತಿ ಅರ್ಜಿ ಸಲ್ಲಿಸಿ.
ಗಮನಿಸಬೇಕಾದ ಅಂಶಗಳು :
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 29 ಜುಲೈ 2026
ಪರ್ಯಾಯ ವಿಧಾನ:
ನಿಮ್ಮ ಬೂತ್ ಮಟ್ಟದ ಅಧಿಕಾರಿ (BLO) ಅವರಿಗೆ ನೇರವಾಗಿ Enumeration Form ಸಲ್ಲಿಸಬಹುದು.
ಮೊಬೈಲ್ ಆ್ಯಪ್:
ECINET App ಮೂಲಕವೂ ಇದೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
ನಮ್ಮಂತೆ ಯಾರೂ ಎಸ್‌ಐಆರ್ ಸಹಕಾರ ನೀಡಿಲ್ಲ: ಸಿಎಂ
ಕರ್ನಾಟಕದಂತೆ ಬೇರೆ ಯಾವುದೇ ರಾಜ್ಯದಲ್ಲೂ ಎಸ್‌ಐಆರ್ ಪ್ರಕ್ರಿಯೆಗೆ ಸಹಕಾರ ನೀಡಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಅಭಿಪ್ರಾಯಪಟ್ಟಿದ್ದಾರೆ. ಎಸ್‌ಐಆರ್ ವಿಚಾರವಾಗಿ ಕುಮಾರಸ್ವಾಮಿ ಹಾಗೂ ಪ್ರಹ್ಲಾದ್ ಜೋಷಿ ಅವರು ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಿರುವ ಬಗ್ಗೆ ಕೇಳಿದಾಗ, “ಎಸ್‌ಐಆರ್ ವಿಚಾರದಲ್ಲಿ ನಮ್ಮದೇ ಆದ ಭಿನ್ನಾಭಿಪ್ರಾಯವಿದೆ.
ನಾವು ಕೋರ್ಟ್ ನಲ್ಲಿ ನಮ್ಮ ವಾದ ಸಲ್ಲಿಸಿದ್ದು, ನ್ಯಾಯಾಲಯ ಈ ವಿಚಾರವಾಗಿ ತೀರ್ಪು ನೀಡಿದ್ದಾರೆ. ಈ ಪ್ರಕ್ರಿಯೆ ವೇಳಾಪಟ್ಟಿ ಬಗ್ಗೆ ನಮಗೆ ಅಸಮಾಧಾನವಿದ್ದು, ಅದರ ವಿರುದ್ಧವೂ ಕೋರ್ಟ್ ಮೊರೆ ಹೋಗುತ್ತೇವೆ. ನಾವು ಎಲ್ಲರಿಗೂ ಮತದಾನದ ಹಕ್ಕು ರಕ್ಷಣೆ ಮಾಡಬೇಕು ಎಂದು ನಮ್ಮ ಸರ್ಕಾರ ಚುನಾವಣಾ ಆಯೋಗದ ಜೊತೆ ಕೈ ಜೋಡಿಸಿದೆ. ನಮ್ಮಂತೆ ಬೇರೆ ಯಾವುದೇ ರಾಜ್ಯದಲ್ಲಿ ಈ ರೀತಿ ಸಹಕಾರ ನೀಡಿಲ್ಲ. ನಿಮ್ಮ ಮತದಾನದ ಹಕ್ಕು, ಬದುಕಿನ ಹಕ್ಕು ಎಂದು ಹೇಳುವ ಮೂಲಕ ಜನರಿಗೆ ಮತದಾನದ ಹಕ್ಕು ಉಳಿಸಿಕೊಳ್ಳಲು ಸರ್ಕಾರ ಜಾಗೃತಿ ಮೂಡಿಸುತ್ತಿದ್ದೇವೆ” ಎಂದಿದ್ದಾರೆ.
Love story ಪ್ರೀತಿಗಾಗಿ 8 ಲಕ್ಷ ರೂ.ಸಾಲ ಮಾಡಿ ಲಿಂಗ ಪರಿವರ್ತಿಸಿದ ರಾಖಿ, ಈಗ ರಾಹುಲ್ ಆಗಿ ಪರಿವರ್ತನೆ