newsics.com/ನ್ಯೂಸಿಕ್ಸ್
ಕಾರವಾರ: ಮಳೆಗಾಲದ ಆರಂಭ ಹಾಗೂ ಸಮುದ್ರದಲ್ಲಿನ ಪ್ರಕ್ಷುಬ್ಧ ವಾತಾವರಣದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ನಾಳೆಯಿಂದ (ಜೂನ್ 1) ಅನ್ವಯವಾಗುವಂತೆ ಮುಂದಿನ ಮೂರು ತಿಂಗಳ ಕಾಲ ಎಲ್ಲಾ ರೀತಿಯ ಜಲಸಾಹಸ ಕ್ರೀಡೆಗಳನ್ನು (Water Sports) ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಮಳೆಗಾಲದಲ್ಲಿ ಪ್ರವಾಸಿಗರ ಹಾಗೂ ಸಾರ್ವಜನಿಕರ ಪ್ರಾಣ ರಕ್ಷಣೆಯ ದೃಷ್ಟಿಯಿಂದ ಈ ನಿಯಮವನ್ನು ಜಾರಿಗೊಳಿಸಲಾಗಿದೆ.
ಜೂನ್ 1 ರಿಂದ ಆಗಸ್ಟ್ 31 ರವರೆಗೆ ಜಿಲ್ಲೆಯ ಯಾವುದೇ ಭಾಗದಲ್ಲಿ ಜಲಸಾಹಸ ಕ್ರೀಡೆಗಳನ್ನು ನಡೆಸುವಂತಿಲ್ಲ. ಅರಬ್ಬಿ ಸಮುದ್ರ ಸೇರಿದಂತೆ ಜಿಲ್ಲೆಯ ಪ್ರಮುಖ ನದಿಗಳು ಹಾಗೂ ಇತರೆ ನೀರಿನ ಆಕರಗಳಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳಿಗೂ ಈ ನಿಷೇಧ ಅನ್ವಯಿಸಲಿದೆ.
ಈ ಆದೇಶದ ಅನ್ವಯ ನೇರ ಪ್ರವಾಸಿ ಆಕರ್ಷಣೆಗಳಾದ ಅರಬ್ಬಿ ಸಮುದ್ರದಲ್ಲಿನ ಪ್ರಸಿದ್ಧ ಸ್ಕೂಬಾ ಡೈವಿಂಗ್ (Scuba Diving), ಶರಾವತಿ ನದಿಯಲ್ಲಿನ ಬೋಟಿಂಗ್ (Boating) ಹಾಗೂ ದಾಂಡೇಲಿ ಭಾಗದ ಕಾಳಿ ನದಿಯಲ್ಲಿ ನಡೆಯುವ ಸಾಹಸಮಯ ವೈಟ್‌ವಾಟರ್ ರ‌್ಯಾಫ್ಟಿಂಗ್ (Rafting) ಸೇರಿದಂತೆ ಎಲ್ಲಾ ಬಗೆಯ ಕಮರ್ಷಿಯಲ್ ಜಲಸಾಹಸ ಕ್ರೀಡೆಗಳನ್ನು ಕಡ್ಡಾಯವಾಗಿ ಸ್ಥಗಿತಗೊಳಿಸಬೇಕು ಎಂದು ಡಿಸಿ ಸೂಚಿಸಿದ್ದಾರೆ.
ನಾಳೆಯಿಂದ ಜಿಲ್ಲೆಯ ಯಾವುದೇ ಕಡಲತೀರ ಅಥವಾ ನದಿ ತೀರಗಳಲ್ಲಿ ನಿಯಮ ಮೀರಿ ಜಲಸಾಹಸ ಕ್ರೀಡೆಗಳನ್ನು ಆಯೋಜಿಸುವುದು ಕಂಡುಬಂದರೆ, ಅಂತಹ ಸಂಸ್ಥೆಗಳು ಮತ್ತು ವ್ಯಕ್ತಿಗಳ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಮೊಬೈಲ್‌ನಲ್ಲಿ ಸದಾ ಸ್ಕ್ರೋಲಿಂಗ್ ಮಾಡುವುದರಿಂದ ಯುವಜನರಲ್ಲಿ ಟೆಕ್ಸ್ಟ್ ನೆಕ್ ಕಾಯಿಲೆ : ವೈದ್ಯರ ಎಚ್ಚರಿಕೆ
KAAMS app for teachers ಇನ್ಮುಂದೆ ಶಿಕ್ಷಕರಿಗೆ ಡಿಜಿಟಲ್ ಹಾಜರಾತಿ : ಫೇಸ್, ಲೊಕೇಶನ್ ಹಾಜರಾತಿ ಕಡ್ಡಾಯ
ಗಾಳಿ ಮಳೆ ಮುನ್ಸೂಚನೆಯಿಂದ ಹಲವೆಡೆ ಆರೇಂಜ್ ಅಲರ್ಟ್, ಕೇದಾರನಾಥ ಯಾತ್ರೆ ರದ್ದು