Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > KAAMS app for teachers ಇನ್ಮುಂದೆ ಶಿಕ್ಷಕರಿಗೆ ಡಿಜಿಟಲ್‌ ಹಾಜರಾತಿ : ಫೇಸ್‌, ಲೊಕೇಶನ್‌ ಹಾಜರಾತಿ ಕಡ್ಡಾಯ
ಕರ್ನಾಟಕಪ್ರಮುಖ

KAAMS app for teachers ಇನ್ಮುಂದೆ ಶಿಕ್ಷಕರಿಗೆ ಡಿಜಿಟಲ್‌ ಹಾಜರಾತಿ : ಫೇಸ್‌, ಲೊಕೇಶನ್‌ ಹಾಜರಾತಿ ಕಡ್ಡಾಯ

Share
1 Min Read
SHARE

newsics.com/ನ್ಯೂಸಿಕ್ಸ್

ಇನ್ನು ಮುಂದೆ ಸರಕಾರಿ ಶಾಲೆ ಶಿಕ್ಷಕರು, ಸಿಬ್ಬಂದಿ ಯವರಿಗೆ ರಾಜ್ಯ ಶಿಕ್ಷಣ ಇಲಾಖೆ ಹೊಸ ಆಪ್‌ವೊಂದನ್ನು ರೂಪಿಸಿದೆ. ಈ ಮೂಲಕ ರಾಜ್ಯದ ಎಲ್ಲಾ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರಿಗೆ ಲೊಕೇಶನ್‌, ಫೇಸ್‌ ಆಧರಿತ ಹಾಜರಾತಿ ವ್ಯವಸ್ಥೆ ಅಳವಡಿಸಿದೆ. ನಿರ್ದಿಷ್ಟ ಸಮಯ ಮೀರಿ ಶಾಲೆಗೆ ಹಾಜರಾದರೆ ಆ ದಿನ ಆಕಸ್ಮಿಕ ರಜೆಯೆಂದೇ ಪರಿಗಣಿಸಲು ನಿರ್ಧರಿಸಲಾಗಿದೆ. ಕರ್ನಾಟಕ ಅಡ್ವಾನ್ಸ್‌ ಅಟೆಂಡೆನ್ಸ್‌ ಮ್ಯಾನೇಜ್‌ಮೆಂಟ್‌ ಸಿಸ್ಟಮ್‌ ಆಪನ್ನು ರೂಪಿಸಲಾಗಿದೆ.

ಶುಕ್ರವಾರದಿಂದಲೇ ರಾಜ್ಯಾದ್ಯಂತ ಈ ನಿಯಮ ಜಾರಿಗೊಂಡಿದೆ. ಇನ್ಮುಂದೆ ಸರ್ಕಾರಿ ಶಾಲೆ ಶಿಕ್ಷಕರು ನಿರ್ದಿಷ್ಟ ಅವಧಿಯೊಳಗೆ ಶಾಲೆಗೆ ಹಾಜರಾಗಿ ದಿನಕ್ಕೆರೆಡು ಬಾರಿ ಲೊಕೇಶನ್, ಫೇಸ್ ಆಧರಿತ ಹಾಜರಾತಿ ಹಾಕಬೇಕಾಗಿದೆ. ಸರ್ಕಾರದ ಈ ನಿಲುವನ್ನು ಪೋಷಕರು, ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವ ಶಿಕ್ಷಕರ ವಲಯ ಸ್ವಾಗತಿಸಿದೆ. ಇನ್ನೊಂದು ತಿಂಗಳಲ್ಲಿ ವಿದ್ಯಾರ್ಥಿಗಳಿಗೂ ಎಐ ಆಧಾರಿತ ಹಾಜರಾತಿ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ.

ಸರ್ಕಾರಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರ ಪೈಕಿ ಕೆಲವರು ಶಾಲೆಗೆ ಹಾಜರಾಗದೆ ಹಾಜರಾತಿ ಪಡೆದುಕೊಂಡು ಸಂಬಳ ಮಾಡಿಕೊಳ್ಳುತ್ತಿದ್ದರು. ಕೆಲವರು ಮುಖ್ಯಗುರುಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಹಾಜರಾತಿ ಪಡೆದುಕೊಂಡರೆ, ಇನ್ನು ಕೆಲವರು ಸಂಘಟನೆ ಹೆಸರಿನಲ್ಲಿ ಓಡಾಡಿಕೊಂಡು ಶಾಲೆಗೆ ಗೈರಾಗುತ್ತಿದ್ದರು. ಶಾಲೆಗೆ ಗೈರಾಗುವುದನ್ನೇ ಕಾಯಕ ಮಾಡಿಕೊಂಡ ಅನೇಕ ಶಿಕ್ಷಕರು ಶಾಲೆಯ ಮುಖ ನೋಡುವುದೇ ಅಪರೂಪ ಎನ್ನುವಂತಾಗಿತ್ತು.

ಶಿಕ್ಷಕರ ಕಡ್ಡಾಯ ಹಾಜರಾತಿ ಸಂಬಂಧ ಕೈಗೊಂಡ ತಂತ್ರಜ್ಞಾನ ಆಧರಿತ ಹಾಜರಾತಿ ಬಗ್ಗೆ ನಿರ್ಲಕ್ಷಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ವಹಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ನಿಗದಿತ ಶಾಲಾ ಅವಧಿ ಮುಗಿಯುವ ಮುನ್ನವೇ ಚೆಕ್‌ಔಟ್ ಆದಲ್ಲಿ ಆರಂಭಿಕ ನಿರ್ಗಮನ ಎಂದು ಪರಿಗಣಿಸಿ, ಅದನ್ನು ಕರ್ತವ್ಯದ ಅವಗಣನೆ ಅಥವಾ ಕರ್ತವ್ಯ ಲೋಪ ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ ಅರ್ಧ ದಿನದ ರಜೆ ಕಡಿತವಾಗಲಿದೆ.

ಶಾಲೆ ಆವರಣದ 100 ಮೀಟರ್‌ ಅಂತರದಲ್ಲಿ ಮಾತ್ರ ಹಾಜರಾತಿ ನೋಂದಣಿ ಜಿಪಿಎಸ್‌ ಸೌಲಭ್ಯ ಇರಲಿದೆ. ಶಿಕ್ಷಕರು ಎಲ್ಲಿಂದ ಹಾಜರಾತಿ ಹಾಕಿದ್ದಾರೆ ಎಂಬುದು ತಿಳಿಯಲಿದ್ದು, ಇನ್ಮುಂದೆ ಕೆಲ ಶಿಕ್ಷಕರು ತಡವಾಗಿ ಬಂದಲ್ಲಿ ಅಥವಾ ಮಧ್ಯಾಹ್ನದ ಸಮಯ ಮುಗಿಯುವ ಮುನ್ನವೇ ಬೇಗ ಹೋದಲ್ಲಿ ಗೈರು ಬೀಳಲಿದೆ.

CM Vijay -Trisha ತ್ರಿಶಾ ಜೊತೆಯಲ್ಲೇ ಬಂದು ಅಜಿತ್ ತಾಯಿಯ ಅಂತಿಮ ದರ್ಶನ ಪಡೆದ ಸಿಎಂ ವಿಜಯ್ : ವಿಡಿಯೋ ನೋಡಿ

TAGGED:Digital attendance for teachers from now on: Facelocation attendance mandatory
Share This Article
Facebook Twitter Copy Link Print
Previous Article CM Vijay -Trisha ತ್ರಿಶಾ ಜೊತೆಯಲ್ಲೇ ಬಂದು ಅಜಿತ್ ತಾಯಿಯ ಅಂತಿಮ ದರ್ಶನ ಪಡೆದ ಸಿಎಂ ವಿಜಯ್ : ವಿಡಿಯೋ ನೋಡಿ
Next Article RCB vs GT ಸಂಜೆ ಆರ್‌ಸಿಬಿ vs ಜಿಟಿ ಫೈನಲ್ : ಯಾರ ಪಾಲಾಗಲಿದೆ ಕಪ್?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?