newsics.com/ನ್ಯೂಸಿಕ್ಸ್
ಚಾಮರಾಜನಗರ : ಇಂದು ಬೆಳಿಗ್ಗೆ ತಾನೇ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿರತೆ ಒಂದನ್ನು ಅರಣ್ಯ ಅಧಿಕಾರಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.
ಇದೀಗ ಮಲೆ ಮಹದೇಶ್ವರ ಬೆಟ್ಟದ ನಾಗಮಲೆಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದೆ. ಹಾಡಿ ಜನತೆ ಮತ್ತು ಮಾದಪ್ಪ ಭಕ್ತರಲ್ಲಿ ಮತ್ತೆ ಚಿರತೆ ದಾಳಿಯ ಆತಂಕ ಶುರುವಾಗಿದೆ.
ಬೆಳಿಗ್ಗೆ ಮೇಕೆಗೆ ಸೊಪ್ಪು ತರಲು ಹೋಗಿದ್ದ ನಾಗಮಲೆ ಹಾಡಿ ನಿವಾಸಿ. ಹಾಡಿ ನಿವಾಸಿ ಬೆನ್ನಟ್ಟಿ ಚಿರತೆ ಬಂದಿತ್ತು. ಆ ವ್ಯಕ್ತಿ ಜೋರಾಗಿ ಕೂಗಿದ್ದಾರೆ. ವ್ಯಕ್ತಿಯ ಕೂಗಾಟದಿಂದ ಚಿರತೆ ಕಾಡಿನಲ್ಲಿ ಮರೆಯಾಗಿದೆ. ಚಿರತೆ ದಾಳಿಯಿಂದ ವ್ಯಕ್ತಿ ಇದೀಗ ಬಚಾವ್ ಆಗಿದ್ದಾರೆ.
Jayam Ravi ಜಯಂ ರವಿ ಪತ್ನಿ ಜೊತೆಗಿನ ಫೋಟೋ ಹಂಚಿಕೊಂಡ ಖುಷ್ಬೂ! ನನ್ನ ಫ್ಯಾಮಿಲಿ ಅಂದಿದ್ಯಾಕೆ?