newsics.com/ನ್ಯೂಸಿಕ್ಸ್
ದಕ್ಷಿಣ ಭಾರತದ ಖ್ಯಾತ ನಟ ರವಿ ಮೋಹನ್ ತಮ್ಮ ವೈಯಕ್ತಿಕ ಬದುಕಿನ ಕಾರಣದಿಂದಾಗಿ ದೀರ್ಘಕಾಲದಿಂದ ಸುದ್ದಿಯಲ್ಲಿದ್ದು, ಪತ್ನಿ ಆರತಿ ಜೊತೆಗಿನ ವಿಚ್ಛೇದನ ತೀವ್ರ ಚರ್ಚೆಗೆ ಗ್ರಾಸವಾಗಿದೆ. ತನಗೆ ಯಾವುದೇ ಮಾಹಿತಿ ನೀಡದೆ ರವಿ ಸಾಮಾಜಿಕ ಜಾಲತಾಣಗಳಲ್ಲಿ ವಿಚ್ಛೇದನ ಘೋಷಿಸಿದ್ದಾರೆ ಎಂದು ಆರತಿ ಆರೋಪಿಸಿದ್ದಾರೆ.
ಇಂದಿಗೂ ಗಂಡ-ಹೆಂಡತಿ ನಡುವೆ ಜಗಳ ಮುಂದುವರಿದೇ ಇದೆ. 2024 ರಲ್ಲಿ ಇಬ್ಬರ ದಾಂಪತ್ಯದಲ್ಲಿ ಬಿರುಗಾಳಿ ಎಬ್ಬಿತು. ಆ ಸಮಯದಲ್ಲಿ ಪತ್ನಿ ಆರತಿ ವಿರುದ್ಧ ಸಂಚಲನ ಮೂಡಿಸುವಂತಹ ಆರೋಪಗಳನ್ನು ಮಾಡಿದ್ದ ಜಯಂ ರವಿ, ಆರತಿ ನನ್ನ ಸಂಪೂರ್ಣ ಹಣವನ್ನು ದೋಚಿದ್ದಾಳೆ, ನನ್ನ ವಯಸ್ಸಾದ ಪೋಷಕರಿಗೆ ತೀವ್ರ ಮುಜುಗರ ಉಂಟುಮಾಡಿದ್ದಾಳೆ ಹಾಗೂ ನನ್ನ ಮಕ್ಕಳನ್ನು ನನ್ನಿಂದ ದೂರ ಇಟ್ಟಿದ್ದಾಳೆ ಎಂದು ದೂರಿದರು.
ಜೊತೆಗೆ ನನ್ನ ಸಂಸಾರ ಹಾಳಾಗಲು ಆ ಇಡ್ಲಿ ನಟಿಯೇ ಕಾರಣ ಎಂದು ನಟ ಜಯಂ ರವಿ ಹೇಳಿಕೊಂಡಿದ್ದರು.
ಈ ಎಲ್ಲಾ ವಿವಾದದ ಮಧ್ಯೆಯೇ ಖುಷ್ಬು, ಆರತಿ ರವಿ ಮತ್ತು ಅವರ ಮಕ್ಕಳು ಸೇರಿದಂತೆ ಹಲವರೊಂದಿಗೆ ತೆಗೆಸಿಕೊಂಡಿರುವ ಒಂದು ಚಿತ್ರವನ್ನು ಹಂಚಿಕೊಂಡಿದ್ದಾರೆ. ಅದರೊಂದಿಗೆ ಅವರು ಇದು ‘ನನ್ನ ಫ್ಯಾಮಿಲಿ’ ಎಂಬ ಶೀರ್ಷಿಕೆ ನೀಡಿ, ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ . ನಟ ಜಯಂ ರವಿಯೊಂದಿಗೆ ನಡೆಯುತ್ತಿರುವ ಸಾರ್ವಜನಿಕ ವಿವಾದದ ನಡುವೆಯೂ ಆರತಿ ರವಿಗೆ ಬೆಂಬಲ ಸೂಚಿಸಿದ ಖುಷ್ಬು ನನ್ನ ನಿಲುವು ಇದೇ ಎಂದು ಮತ್ತೊಮ್ಮೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ತಮ್ಮ ಮೇಲಿನ ಆರೋಪ, ಅಪಪ್ರಚಾರ ಮತ್ತು ಸಾಮಾಜಿಕ ಜಾಲತಾಣದ ಜಾಲತಾಣಗಳಲ್ಲಿ ವೈರಲ್ ಆಗುತಿದ್ದ ವಿಷಯಗಳನ್ನು ಗಮನಿಸಿ ನಟಿ ಖುಷ್ಟು ಕೊನೆಗೂ ಮೌನ ಮುರಿದರು. ಕೆಲವರು ತಮ್ಮ ಡಿಎನ್ಎಯನ್ನು ಸಾಬೀತುಪಡಿಸಲು ಗರಿಷ್ಠ ಪ್ರಯತ್ನ ಮಾಡುತ್ತಾರೆ. ನಾನು ಸರಿ ಎಂದು ಸಾಬೀತು ಪಡಿಸಿದ್ದಕ್ಕೆ ಧನ್ಯವಾದಗಳು ಎಂದು ತಿರುಗೇಟು ನೀಡಿದ್ದರು.
https://www.instagram.com/p/DYrQbwlx7Ij/?igsh=Z24yNTNvYWNvaWZu
ಅರಬ್ಬಿ ಸಮುದ್ರದಲ್ಲಿ ಗಾಳಿಯ ಅಬ್ಬರ : ಕಾರವಾರ ಕಡಲ ತೀರದಲ್ಲಿ ಪ್ರವಾಸಿಗರಿಗೆ ನಿರ್ಬಂಧ