newsics.com/ನ್ಯೂಸಿಕ್ಸ್
ಕಾರವಾರ : ಕಪ್ಪೆ ಚಿಪ್ಪು ತೆಗೆಯಲು ಹೋಗಿ ಎಂಟು ಮಂದಿ ನೀರುಪಾಲಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ನಡೆದಿದೆ.
ಒಂದೇ ಕುಟುಂಬದ 8 ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ನೀರುಪಾಲಾದವರು ಭಟ್ಕಳದ ಶಿರಾಲಿ ಮೂಲದವರಾಗಿದ್ದಾರೆ. ಎಲ್ಲ ಒಂದೇ ಕುಟುಂಬದವರಾಗಿದ್ದು, 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ಕಾರವಾರ:ಹೊಳೆಯಲ್ಲಿ ಕಪ್ಪೆಚಿಪ್ಪು ಆರಿಸಲು ಹೋದಾಗ ಈ ದುರಂತ ಸಂಭವಿಸಿದೆ. ನೀರಿನ ಸೆಳೆತಕ್ಕೆ 8 ಜನರು ಕೊಚ್ಚಿಹೋಗಿದ್ದು,
ಭಟ್ಕಳ ತಾಲೂಕಿನ ಶಿರಾಲಿ ಅಳಿವೆಕೋಡಿ ಬಳಿ ಈ ದುರಂತ ಸಂಭವಿಸಿದೆ.
ಮೃತರಲ್ಲಿ ಏಳು ಜನ ಮಹಿಳೆಯರಾಗಿದ್ದು ಇವರೆಲ್ಲ ಪ್ರತಿದಿನದಂತೆ ಕಳಿನಟ್ಟಿ ಹೊಳೆಯಲ್ಲಿ ಕಪ್ಪೆ ಚಿಪ್ಪು ಆರಿಸಲು ನೀರಿಗಿಳಿದಿದ್ದರು.
ರಾತ್ರಿಯಿಡಿ ಮಳೆ ಸುರಿದ ಕಾರಣ ಹೊಳೆಯಲ್ಲಿ ನೀರಿನ ಸೆಳೆತ ಹೆಚ್ಚಾಗಿದ್ದು ಇದರಿಂದಾಗಿ ಪರಸ್ಪರ ಕೈ ಹಿಡಿದು ನೀರಿಗಿಳಿದ ಎಲ್ಲರೂ ನೀರಿನಲ್ಲಿ ಕೊಚ್ಚಿಹೋಗಿ ಆಳ ಪ್ರದೇಶದಲ್ಲಿ ನೀರಿನಲ್ಲಿ ಮುಳುಗಿರುವುದಾಗಿ ತಿಳಿದು ಬಂದಿದೆ.
ಎಲ್ಲಾ 8 ಮೃತದೇಹಗಳು ಅಳಿವೆಕೋಡಿ ಬಳಿ ಪತ್ತೆಯಾಗಿದ್ದು
ಮೃತರನ್ನು ಬೇಂಗ್ರೆಯ ಲಕ್ಷ್ಮೀ ಮಾದೇವ ನಾಯ್ಕ (42)
ಶಾರದಹೊಳೆಯ ಉಮೇಶ ನಾಯ್ಕ(30) ಲಕ್ಷ್ಮೀ ಅಣ್ಣಪ್ಪ ನಾಯ್ಕ(60) ಲಕ್ಷ್ಮೀ ಶಿವರಾಮ ನಾಯ್ಕ(49) ಜ್ಯೋತಿನಾಯ್ಕ(34),
ಮಾಲತಿ ನಾಯ್ಕ(38) ಮಾಸ್ತಮ್ಮ ನಾಯ್ಕ, ಲಕ್ಷ್ಮೀ ನಾಯ್ಕ ಎಂದು ಗುರುತಿಸಲಾಗಿದೆ.
ನೀರಿನ ಸೆಳೆತಕ್ಕೆ ಸಿಲುಕ್ಕಿದ್ದ ನಾಗರತ್ನ ಮತ್ತು ಮಹಾದೇವಿ ಎನ್ನುವವರನ್ನು ರಕ್ಷಣೆ ಮಾಡಲಾಗಿದ್ದು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ, ಇನ್ನೂ ಕೆಲವರು ನೀರಿನಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆ ಇದೆ.
ಒಂದು ಚಿರತೆ ಸೆರೆ ಬೆನ್ನಲ್ಲೆ, ಮತ್ತೊಂದು ಚಿರತೆ ಪ್ರತ್ಯಕ್ಷ : ಭಕ್ತರಲ್ಲಿ ಆತಂಕ!