Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > GOOD MORNING | Today’s Horoscope ಇಂದಿನ ಪಂಚಾಂಗ/ ರಾಶಿ ಭವಿಷ್ಯ, 20-05-2026, ಬುಧವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ಪಂಚಾಂಗ/ ರಾಶಿ ಭವಿಷ್ಯ, 20-05-2026, ಬುಧವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

Share
5 Min Read
SHARE

newsics.com/ನ್ಯೂಸಿಕ್ಸ್

ಶುಭೋದಯ

ಇಂದಿನ ಪಂಚಾಂಗ/ ರಾಶಿ ಭವಿಷ್ಯ

20-05-2026, ಬುಧವಾರ

ಪರಾಭವ ನಾಮ ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ಅಧಿಕ ಜ್ಯೇಷ್ಠ ಮಾಸ ಶುಕ್ಲಪಕ್ಷ ಚತುರ್ಥಿ.

—-

ಶಾಲಿವಾಹನ ಶಕೆ 1949ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಅಧಿಕ ಜ್ಯೇಷ್ಠ, ಸೌರ ಮಾಸ : ವೃಷಭ, ಮಹಾನಕ್ಷತ್ರ : ಕೃತ್ತಿಕಾ, ವಾರ : ಬುಧ, ಪಕ್ಷ : ಶುಕ್ಲ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಆರ್ದ್ರಾ / ಪುನರ್ವಸು, ಯೋಗ : ಧೃತಿ, ಕರಣ : ಬವ, ಸೂರ್ಯೋದಯ – 05 – 57 am, ಸೂರ್ಯಾಸ್ತ – 06 – 44 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:21 – 13:57, ಯಮಗಂಡ ಕಾಲ 07:33 – 09:09, ಗುಳಿಕ ಕಾಲ 10:45 – 12:21

========

ರಾಶಿ‌ ಭವಿಷ್ಯ

ಮೇಷ

ಬಂಧುಗಳ ಸಹಾಯದಿಂದ ಈ ಯೋಜನೆಗಳನ್ನು ಪ್ರಾರಂಭಿಸುವಿರಿ. ವಿವಾಹಕ್ಕೆ ಸಂಬಂಧಿಸದಂತೆ ಖರೀದಿಗಳು ಆಗಲಿವೆ. ಪ್ರೇಮ ಸಂಬಂಧ ಕಟ್ಟುವ ಉತ್ತಮ ಸಮಯ. ಪ್ರೀತಿಯ ಶಕ್ತಿ ನಿಮ್ಮನ್ನು ಭಾವುಕಗೊಳಿಸುತ್ತದೆ. ಕಾರ್ಯಕ್ಷೇತ್ರದಲ್ಲಿ ವಿರೋಧಿಗಳಿಂದ ಸಹಕಾರ ಸಿಗಲಿದೆ. ಸ್ನೇಹಿತರ ಕೆಲವು ವರ್ತನೆಗಳು ನಿಮಗೆ ಇಷ್ಟವಾಗದೇ ಇರಬಹುದು. ಸಮಯದ ನಿರೀಕ್ಷೆಯಲ್ಲಿ ಇರಿ. ನಿಮ್ಮ ರಹಸ್ಯವು ಬೆಳಕಿಗೆ ಬರಬಬಹುದು ಎಂಬ ಭೀತಿಯು ಇರಲಿದೆ. ಇಂದಿನ ಕೆಲವು ಸಮಯವನ್ನು ಮನೆಯವರಿಗೆ ಮೀಸಲಿಡಿ.

ವೃಷಭ 

ಖರೀದಿಯಲ್ಲಿ ಹಣದ ಜಾಗರೂಕತೆ ವಹಿಸುವುದು ಅಗತ್ಯ. ಕುಟುಂಬದೊಂದಿಗೆ ಸಮಯ ಕಳೆದರೆ ಆತ್ಮತೃಪ್ತಿ ಲಭಿಸುತ್ತದೆ. ನಿಮ್ಮ ಸ್ನೇಹಿತರು ನಿಮಗೆ ಸಮಯಕೊಡಲಾರರು. ಕೆಲಸದ ನಿಟ್ಟಿನಲ್ಲಿ ಹೊಸ ಯೋಜನೆಗಳು ಆರಂಭವಾಗುತ್ತವೆ. ಪ್ರಪಂಚಜ್ಞಾನದ ಅಗತ್ಯತೆ ಹೆಚ್ಚಿವಿರುವಂತೆ ತೋರುತ್ತದೆ. ಮುನ್ನುಗ್ಗಲು ನಿಮಗೆ ಸ್ಥೈರ್ಯ ಸಾಲದು. ವಾಹನ ಚಾಲನೆಯಲ್ಲಿ ಉತ್ಸಾಹ ಹೆಚ್ಚಿರುವುದು. ಕಳೆದುಕೊಂಡಿದ್ದನ್ನು ಪಡೆಯುವ ಛಲವು ಬರಬಹುದು.

ಮಿಥುನ 

ಇಂದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಕ್ರಿಯವಾಗಿ ಭಾಗಿ. ಯೋಜನೆಗಳ ಬಗ್ಗೆ ಹಿರಿಯರೊಂದಿಗೆ ಚರ್ಚಿಸಿ. ಸುಳ್ಳನ್ನು ಸತ್ಯದಂತೆ ಹೇಳುವಿರಿ. ಏಕಪಕ್ಷದ ಪ್ರೇಮದಿಂದ ಎಚ್ಚರಿಕೆ ಅಗತ್ಯ. ಹೊಸ ಯೋಜನೆ ಆರಂಭಕ್ಕೆ ಉತ್ತಮ ದಿನ. ಕೆಲಸದಲ್ಲಿ ಹೆಚ್ಚು ಸಡಿಲತೆ ಇಟ್ಟುಕೊಳ್ಳಿ. ಕುಟುಂಬದೊಂದಿಗೆ ಹೊರಗಿನ ಪ್ರವಾಸ ಯೋಜನೆ ರೂಪಿಸುವಿರಿ. ಕಾನೂನಾತ್ಮಕ ವಿಚಾರಕ್ಕೆ ಮಾತ್ರ ನಿಮ್ಮ ಬೆಂಬಲವು ಇರಲಿ. ಸಂಗಾತಿಯ ಜೊತೆ ಒಡನಾಟವು ಹೆಚ್ಚಿರಲಿದೆ. ತಂದೆಯ ಶ್ರಮವನ್ನು ಕಂಡು ಮಕ್ಕಳಿಗೆ ನೋವಾಗಬಹುದು.

ಕರ್ಕಾಟಕ 

ಸಾಮಾಜಿಕ ವ್ಯವಸ್ಥೆಗೆ ಹೊಂದಿಕೊಳ್ಳಬೇಕು. ನಿಮ್ಮನ್ನು ಆರೋಗ್ಯವಂತರನ್ನಾಗಿ ಸಂಗಾತಿ ಮಾಡುವಳು. ಇಂದು ನೀವು ದೈವಕ್ಕಿಂತ ಪುರುಷಪ್ರಯತ್ನವೇ ಹೆಚ್ಚು ಪ್ರಭಾವೀ ಎಂದು ಅನ್ನಿಸಬಹುದು. ಹಣದ ಅವಶ್ಯಕತೆ ನಿಮಗೆ ಹಣದ ಮೌಲ್ಯ ತಿಳಿಸುತ್ತದೆ. ಮನಸ್ಸು ಹಾಗೂ ಮಾತುಗಳಲ್ಲಿ ಸ್ಥಿರತೆ ಇರಲಿ. ಸಂಗಾತಿಯ ಕಡೆಯಿಂದ ನಿಮಗೆ ಅಚ್ಚರಿ ಇರುವುದು. ಏನನ್ನಾದರೂ ಸಾಧಿಸಬೇಕು ಎಂಬ ಹಂಬಲವು ಹುಟ್ಟಿಕೊಂಡೀತು. ಕೋಪಕ್ಕೆ ಮಿತಿ‌ ಇರಲಿ. ಇನ್ನೊಬ್ಬರ ಜೊತೆ ಸಂಬಂಧವನ್ನು ಬಯಸಿ, ಬೆಳೆಸುವಿರಿ.

ಸಿಂಹ 

ಏನೇ ಆದರೂ ನಿಮ್ಮ ಆಲೋಚನೆಗಳನ್ನು ಸಕಾರಾತ್ಮಕವಾಗಿ ಇರಲಿ. ಸಂತೋಷವನ್ನು ಹಂಚಿಕೊಳ್ಳುವಿರಿ. ಹಣದ ವ್ಯವಹಾರ ಒಳ್ಳೆಯ ದಿನ. ಸಂಗಾತಿಯೊಂದಿಗೆ ಗೌಪ್ಯ ವಿಷಯ ಹಂಚಿಕೆ ವೇಳೆ ಎಚ್ಚರಿಕೆ ಇರಲಿ. ಪ್ರೇಮವು ಸತ್ಯವೆಂದು ತಿಳಿದುಕೊಳ್ಳಿ. ಮಕ್ಕಳಿಂದ ನೀವು ದೂರಾಗುವ ಸಾಧ್ಯತೆ ಇದೆ. ಭೂ ವ್ಯವಹಾರದಲ್ಲಿ ಮನಸ್ತಾಪ ಬರಬಹುದು. ಯಾವುದೇ ನಿಬಂಧನೆಗಳನ್ನು ಇಟ್ಟುಕೊಳ್ಳದೇ ಒಪ್ಪಿಕೊಳ್ಳಿ. ನಿಮ್ಮ ಸಮಯ ಬಂದಾಗ ಅದನ್ನು ಚರ್ಚಿಸಲು ಅವಕಾಶ ಬರುವುದು. ಇಂದು ವ್ಯಾಪಾರ ವಿಷಯಗಳಲ್ಲಿ ನೀವು ಅನುಭವಿಗಳ ಸಲಹೆಯನ್ನು ತೆಗೆದುಕೊಳ್ಳುವಿರಿ.

ಕನ್ಯಾ 

ನಿಮ್ಮ ಹಾಸ್ಯದ ಸ್ವಭಾವವು ಮನೆಯಲ್ಲಿ ಸಂತೋಷದ ವಾತಾವರಣವನ್ನು ಇರಿಸುತ್ತದೆ. ಹಣದ ಲಾಭಕ್ಕಾಗಿ ಹಿರಿಯರ ಆಶೀರ್ವಾದದಿಂದ ಶುಭ ಫಲ. ಪೋಷಕರ ಆರೋಗ್ಯದತ್ತ ಗಮನ ಅಗತ್ಯ. ಪ್ರೀತಿಯಲ್ಲಿ ಸಹನಶೀಲತೆ ಅಗತ್ಯ. ಬಾಕಿಯ ವಿಷಯಗಳ ತೀರ್ಮಾನಕ್ಕೆ ಒಳ್ಳೆಯ ಸಮಯ. ಸಮಯವನ್ನು ಸದುಪಯೋಗಪಡಿಸಿಕೊಳ್ಳುವುದು ಮುಖ್ಯ. ಲೆಕ್ಕಶೋಧಕರು ಇಂದು ಒತ್ತಡದಲ್ಲಿ ಇರುವರು. ಸಾಮಾಜಿಕವಾಗಿ ಗುರುತಿಸಿಕೊಳ್ಳಲು ಇಷ್ಟಪಡಲಾರಿರಿ.

ತುಲಾ 

ಹೂಡಿಕೆಯಲ್ಲಿ ಆದ ಲಾಭವನ್ನು ಅಸೂಯೆ ಪಡುವವರ ಜೊತೆ ಗೊತ್ತಿಲ್ಲದೇ ಹಂಚಿಕೊಳ್ಳುವಿರಿ. ಸ್ನೇಹಿತರ ಮೂಲಕ ಹೊಸ ಸಂಪರ್ಕಗಳು ದೊರೆಯಲಿವೆ. ಪ್ರೇಮ ಸಂಬಂಧದ ಗೊಂದಲಗಳು ತೀರಬಹುದು. ಹೊಸ ಉದ್ಯಮದ ಪ್ರಾರಂಭಕ್ಕೆ ಇದು ಉತ್ತಮ ದಿನ. ಒಮ್ಮೆ ನಂಬಿಕೆಯನ್ನು ಇಟ್ಟುಕೊಂಡ ಅನಂತರ ಅನುಮಾನ ಬೇಡ. ನೀವು ಇಂದು ಆಸ್ತಿಯನ್ನು ಖರೀದಿಸಲು ಪ್ರಯತ್ನಿಸುತ್ತಿದ್ದು ನೀವು ಅದನ್ನು ಸುಲಭವಾಗಿ ಸಾಧಿಸುವಿರಿ. ಕೆಟ್ಟ ಸ್ವಪ್ನದ ಚಿಂತೆಯಲ್ಲಿಯೇ ಇರುವಿರಿ.

ವೃಶ್ಚಿಕ 

ನಿಮ್ಮವರಿಂದ ಹೆಚ್ಚಿನದನ್ನು ನಿರೀಕ್ಷಿಸದಿರುವುದು ಒಳ್ಳೆಯದು. ಯಾವುದನ್ನೂ ಅಳುಕಿನಿಂದ ಮಾಡಲಾರಿರಿ. ಪ್ರೀತಿಯ ಮಹತ್ವವನ್ನು ನೀವು ಹೊಸದಾಗಿ ಅರಿಯುವಿರಿ. ಉತ್ತಮ ಯೋಜನೆಗಳ ಮೂಲಕ ಯಶಸ್ಸು ಗಳಿಸಬಹುದು. ವ್ಯವಹಾರ ಅಭಿವೃದ್ಧಿಗಾಗಿ ಹೊಸ ಯೋಜನೆಯನ್ನು ಪ್ರಯೋಗಕ್ಕೆ ತರುವಿರಿ. ನಿಮಗೆ ಇಷ್ಟವಾದವರ ಬಗ್ಗೆ ನಿಮಗೆ ಅನುಕಂಪ ಬರಬಹುದು. ಆರ್ಥಿಕ ವಿಚಾರವನ್ನು ಬಹಿರಂಗಪಡಿಸುವುದು ಬೇಡ. ದಾಂಪತ್ಯದಲ್ಲಿ ನಡೆಯುತ್ತಿದ್ದ ವಿವಾದವು ಪೂರ್ಣಗೊಂಡು ಹೊಂದಿಕೊಳ್ಳುವಿರಿ.

ಧನುಸ್ಸು 

ಆರ್ಥಿಕತೆಯ ದುರ್ಬಲದಿಂದಾಗಿ ದುರ್ಮಾರ್ಗವನ್ನು ಅನುಸರಿಸುವ ಯೋಚನೆ ಬರಲಿದೆ. ಹಾಗಾಗಿ ನಿಮ್ಮ ಆಲೋಚನೆಗಳು ಅನ್ಯ ಮಾರ್ಗದ ಕಡೆ ಹರಿಬಿಡದೇ ಸಕಾರಾತ್ಮಕವಾಗಿ ಇರಲಿ. ಹಣ ಮರಳಿ ಸಿಗುವ ಸಾಧ್ಯತೆ ಇದೆ. ಕಾರ್ಯಕ್ಷೇತ್ರದ ಕೆಲಸಗಳು ಮುಂದಿನ ದಿನಗಳಲ್ಲಿ ಫಲ ನೀಡಲಿವೆ. ಬಹುಕಾಲದ ನಿರೀಕ್ಷೆಯ ವಿಷಯದಲ್ಲಿ ಸಣ್ಣ ಕಂಡುಬರಬಹುದು. ನಿಮ್ಮ ಮನೆಯ ಕಾರ್ಯವು ಹಲವು ದಿನಗಳಿಂದ ನಿಂತಿದ್ದು ಮತ್ತೆ ಆರಂಭಿಸುವಿರಿ. ವೈಯಕ್ತಿಕ ಕಾರ್ಯದಲ್ಲಿ ಗಮನವು ಕಡಿಮೆ ಇರುವುದು.

ಮಕರ 

ನಿಮ್ಮ ಜೀವನದ ಪ್ರತಿಯೊಂದು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ನೀವು ಪ್ರಯತ್ನಿಸುತ್ತೀರಿ. ನಿಮ್ಮ ಕೋಪವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಮಕ್ಕಳಿಂದ ಹಣಕಾಸು ಲಾಭ ಸಾಧ್ಯ. ಮನೆಯಲ್ಲಿ ಖರ್ಚು ಅಥವಾ ಇತರೆ ವಿಚಾರದಿಂದ ಗಲಾಟೆ ಉಂಟಾಗಬಹುದು. ಇಂದು ನಿಮ್ಮ ಬಳಿ ಹಣವು ಬಂದು ಸೇರಿದರೂ ಮರುಪಾವತಿಗೆ ಮನಸ್ಸಾಗದು. ಬಂಧುಗಳಿಂದಾದ ನೋವನ್ನು ನೀವು ಹೇಳಿಕೊಳ್ಳಲಾರಿರಿ. ಅನವಶ್ಯಕ ಸಂಪರ್ಕವನ್ನು ಕಡಿದುಕೊಳ್ಳಲು ಇಚ್ಛಿಸುವಿರಿ.

ಕುಂಭ 

ನಿಮ್ಮ ಕಾರ್ಯಗಳು ಎಷ್ಟೇ ಶ್ರಮಿಸಿದರೂ ಅಪರಿಪೂರ್ಣವಾತ್ತದೆ ಎಂಬ ಭರವಸೆಯಿದ್ದರೆ ಅದನ್ನು ಬಿಟ್ಟುಬಿಡಿ‌. ಆಕರ್ಷಕ ವ್ಯಕ್ತಿತ್ವ ಇತರರ ಗಮನ ಸೆಳೆಯುತ್ತದೆ. ಸಾಲವಿದ್ದರೆ ಅದನ್ನು ತಿರುಗಿಸಿ ಮುಕ್ತಗೊಳ್ಳುವ ಅವಕಾಶವಿದೆ. ಮನೆಯವರೊಂದಿಗೆ ಕೆಲಸಗಳಲ್ಲಿ ನಿರತರಾಗುವ ದಿನ. ಪ್ರೇಮ ಜೀವನದಲ್ಲಿ ಹೊಸ ತಿರುವು ಮೂಡಲಿದೆ. ಕೆಲಸದ ಒತ್ತಡದಿಂದ ದೂರವಿದ್ದು ಸಂಬಂಧಗಳಿಗೆ ಹೆಚ್ಚು ಸಮಯ ನೀಡಲಾಗುವುದು. ದುಷ್ಕೃತ್ಯಕ್ಕೆ ಪ್ರೇರಣೆ ಸಿಗಬಹುದು. ಅಶುಭ ಸೂಚನೆಗಳನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಯದಲ್ಲಿ ಪ್ರವೃತ್ತರಾಗಿ.

ಮೀನ 

ಮನೆಯಲ್ಲಿ ಶಿಸ್ತಿನ ವಾತಾವರಣವು ಸಂತೋಷವನ್ನು ತರುವುದು. ದೀರ್ಘಕಾಲದ ಖಾಯಿಲೆಯು ಇಂದು ಸ್ವಲ್ಪ ಕಡಿಮೆಯಾಗಲಿದೆ. ಇಂದು ನಿಮ್ಮ ಮನಸ್ಸು ಶಾಂತವಾಗಿದ್ದು ಶ್ರೇಷ್ಠ ಚಿಂತನೆಗೆ ಇದು ಸೂಕ್ತ ಸಮಯವಾಗಿದೆ. ಹಣಕಾಸಿನ ವಿಷಯದಲ್ಲಿ ನಿರೀಕ್ಷಿಸದ ಲಾಭ ಸಾಧ್ಯವಿದೆ. ಬಹಳ ಹುಡುಕಾಟದ ಅನಂತರದ ಉತ್ತಮ‌ ವಿವಾಹ ಸಂಬಂಧವು ಬರುವುದು. ಕರ್ತವ್ಯದ ವಿಚಾರದಲ್ಲಿ ನಿಮ್ಮ ಆಲಸ್ಯವೋ ಬೇಜವಾಬ್ದಾರಿಯೋ ಒಳ್ಳೆಯದಲ್ಲ.

 

 

TAGGED:#almanac #zodiac #prediction #20-05-2026 #wednesday #horoscope #planetary #positions #news #newsics
Share This Article
Facebook Twitter Copy Link Print
Previous Article ಇನ್ನು ಕೆಲವೇ ದಿನಗಳಲ್ಲಿ mAadhaar ಆ್ಯಪ್​ ಬಂದ್!
Next Article Karnataka Weather ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಗುಡುಗು ಸಹಿತ ಮಳೆ : ಈ 5 ಜಿಲ್ಲೆಗಳ ಜನರೇ ಎಚ್ಚರ

Popular Posts

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read

You Might Also Like

ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read
ಪ್ರಮುಖದೇಶವೈರಲ್

Viral Video ಮದ್ಯದಂಗಡಿಗೆ ಎಂಟ್ರಿ ಕೊಟ್ಟ ಚಿರತೆ; ಮೂವರ ಮೇಲೆ ದಾಳಿ-ವಿಡಿಯೋ ನೋಡಿ

1 Min Read
ಪ್ರಮುಖCrimeಕರ್ನಾಟಕ

Crime Case ಘೋರ ದುರಂತ; ಹೆಂಡತಿ, ಇಬ್ಬರು ಮಕ್ಕಳನ್ನು ಕೊಂದು ವ್ಯಕ್ತಿ ಆತ್ಮಹತ್ಯೆ; ಡೆತ್‌ನೋಟ್ ಪತ್ತೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?