ನೀವು mAadhaar ಅಪ್ಲಿಕೇಶನ್ ಬಳಸುತ್ತಿದ್ದರೆ ನಿಮಗಾಗಿ ಕೆಲವು ಪ್ರಮುಖ ಮಾಹಿತಿ ಇಲ್ಲಿದೆ. UIDAI ತನ್ನ ಅಧಿಕೃತ X ಖಾತೆಯಿಂದ ಟ್ವೀಟ್ ಮೂಲಕ mAadhaar ಅಪ್ಲಿಕೇಶನ್ ಶೀಘ್ರದಲ್ಲೇ ನಿವೃತ್ತಿ ಹೊಂದಲಿದೆ ಎಂದು ಘೋಷಿಸಿದೆ. ಅಂದರೆ, ಸ್ಥಗಿತಗೊಳ್ಳಲಿದೆ. ಬಳಕೆದಾರರು ಈಗ ಹೊಸ ಆಧಾರ್ ಅಪ್ಲಿಕೇಶನ್‌ಗೆ ಬದಲಾಯಿಸಬೇಕು. ಅಲ್ಲಿ ಅವರು ಸ್ಮಾರ್ಟ್, ವೇಗವಾದ ಮತ್ತು ಹೆಚ್ಚು ಸುರಕ್ಷಿತ ಡಿಜಿಟಲ್ ಪ್ರಯಾಣವನ್ನು ಅನುಭವಿಸಬಹುದು.
ತನ್ನ ಟ್ವೀಟ್‌ನಲ್ಲಿ UIDAI ಅಪ್ಲಿಕೇಶನ್ ಏಕೆ ನಿವೃತ್ತಿಗೊಳಿಸಲಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿಲ್ಲ. mAadhaar ಅಪ್ಲಿಕೇಶನ್ ಸ್ವಲ್ಪ ಸಮಯದ ಹಿಂದೆಯಷ್ಟೇ ಪ್ರಾರಂಭಿಸಲಾಗಿತ್ತು. ಅದರ ಇಂಟರ್ಫೇಸ್ ಹಳೆಯದಾಗಿದೆ ಎಂದು ಊಹಿಸಲಾಗಿದೆ. ತಂತ್ರಜ್ಞಾನದ ಪ್ರಗತಿಯೊಂದಿಗೆ ಅಪ್ಲಿಕೇಶನ್ ವಿವಿಧ ತಾಂತ್ರಿಕ ದೋಷಗಳನ್ನು ಎದುರಿಸುತ್ತಿದೆ. ಪ್ರಸ್ತುತ ಸೈಬರ್ ವಂಚನೆ ಮತ್ತು ಡೇಟಾ ಸುರಕ್ಷತೆ ಈಗಿನ ಪ್ರಮುಖ ಸವಾಲುಗಳಾಗಿ ಹೊರಹೊಮ್ಮಿವೆ. ಪರಿಣಾಮವಾಗಿ ಬಳಕೆದಾರರು ಹೊಸ ಆಧಾರ್ ಅಪ್ಲಿಕೇಶನ್ ಮಾತ್ರ ಬಳಸುವುದನ್ನು ಖಚಿತಪಡಿಸಿಕೊಳ್ಳಲು UIDAI ಹಳೆಯ ಅಪ್ಲಿಕೇಶನ್ ಅನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.
ಹೊಸ ಆಧಾರ್ ಅಪ್ಲಿಕೇಶನ್ ಬಳಸಿ: ಬಳಕೆದಾರರು ಈಗ ಹೊಸ ಆಧಾರ್ ಅಪ್ಲಿಕೇಶನ್ ಬಳಸಲು ಬದಲಾಯಿಸಬೇಕು. ಹೊಸ QR-ಆಧಾರಿತ ಆಧಾರ್ ಅಪ್ಲಿಕೇಶನ್ ಉತ್ತಮ ಆಯ್ಕೆಯಾಗಿ ಕಾರ್ಯನಿರ್ವಹಿಸುತ್ತದೆ. ಸುಲಭ ಹಂಚಿಕೆ ಸಾಮರ್ಥ್ಯಗಳಿಂದ ಹಿಡಿದು ಹೆಚ್ಚಿನ ಗೌಪ್ಯತೆ ಮತ್ತು ವಿವಿಧ ಆಧಾರ್ ಸೇವೆಗಳಿಗೆ ಅನುಕೂಲಕರ ಪ್ರವೇಶದವರೆಗೆ ಎಲ್ಲವನ್ನೂ ನೀಡುತ್ತದೆ.
ಆಧಾರ್ ಅಪ್ಲಿಕೇಶನ್ ಸ್ಮಾರ್ಟ್ ಮತ್ತು ವೇಗವಾಗಿ ಕಾರ್ಯನಿರ್ವಹಿಸಲಿದೆ. ಇದು ಹೆಚ್ಚಿನ ಗೌಪ್ಯತೆಯನ್ನು ಕಾಪಾಡಿಕೊಳ್ಳುತ್ತದೆ ಮತ್ತು ನಿಮ್ಮ ಡೇಟಾವನ್ನು ಸುರಕ್ಷಿತವಾಗಿರಿಸುತ್ತದೆ.
ಹೊಸ ಅಪ್ಲಿಕೇಶನ್‌ನ ಸ್ಮಾರ್ಟ್ QR ಕೋಡ್ ನಿಮ್ಮ ಗುರುತನ್ನು ಸುರಕ್ಷಿತವಾಗಿ ಪರಿಶೀಲಿಸುತ್ತದೆ. ಇದರಿಂದಾಗಿ ಡೇಟಾ ಕಳ್ಳತನದ ಅಪಾಯವನ್ನು ನಿವಾರಿಸುತ್ತದೆ.
ಈ ಅಪ್ಲಿಕೇಶನ್ ಮೂಲಕ ನೀವು ನಿಮ್ಮ ಆಧಾರ್ ಡೌನ್‌ಲೋಡ್ ಮಾಡಬಹುದು, PVC ಕಾರ್ಡ್ ಆರ್ಡರ್ ಮಾಡಬಹುದು ಮತ್ತು ನಿಮ್ಮ ಪ್ರೊಫೈಲ್ ಅಪ್ಡೇಟ್ಸ್ ಸ್ಥಿತಿಯನ್ನು ಪರಿಶೀಲಿಸಬಹುದಾಗಿದೆ.
ಡೌನ್‌ಲೋಡ್ ಮಾಡುವುದು ಹೇಗೆ?
ಹಳೆಯ ಅಪ್ಲಿಕೇಶನ್ ಶೀಘ್ರದಲ್ಲೇ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ. ಆದ್ದರಿಂದ ನೀವು ಹೊಸ ಆವೃತ್ತಿಯನ್ನು Google Play Store ಅಥವಾ Apple App Store ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಡೌನ್‌ಲೋಡ್ ಮಾಡುವಾಗ, ನಕಲಿ ಅಪ್ಲಿಕೇಶನ್‌ಗೆ ಬಲಿಯಾಗುವುದನ್ನು ತಪ್ಪಿಸಲು ಡೆವಲಪರ್‌ನ ಹೆಸರು ‘UIDAI’ ಎಂದು ಖಚಿತಪಡಿಸಿಕೊಳ್ಳಿ.
ಅಪ್ಲಿಕೇಶನ್ ಸ್ಥಾಪಿಸಿದ ನಂತರ ಅದನ್ನು ಓಪನ್ ಮಾಡಿ..
ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ.
ಮುಂದೆ ನೋಂದಾಯಿಸಲು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
ಕ್ಯೂಆರ್ ಕೋಡ್ ಪ್ರಯೋಜನೆವೇನು?: ಈ ಹೊಸ ಅಪ್ಲಿಕೇಶನ್‌ನ ಅತ್ಯಂತ ಮಹತ್ವದ ಪ್ರಯೋಜನವೆಂದರೆ ಅದರ QR-ಆಧಾರಿತ ಗುರುತಿನ ಪರಿಶೀಲನಾ ವಿಧಾನ. ಒಬ್ಬರು ತಮ್ಮ ಆಧಾರ್ ಸಂಖ್ಯೆ, ಫೋನ್ ಸಂಖ್ಯೆ, ಜನ್ಮ ದಿನಾಂಕ ಅಥವಾ ವಿಳಾಸವನ್ನು ಬಹಿರಂಗಪಡಿಸದೆಯೇ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ತಮ್ಮ ಆಧಾರ್ ಗುರುತನ್ನು ಪರಿಶೀಲಿಸಬಹುದು.
ಆ್ಯಪ್ ಹೇಗೆ ಕಾರ್ಯನಿರ್ವಹಿಸುತ್ತದೆ?: ಭೌತಿಕ ಆಧಾರ್ ಕಾರ್ಡ್ ಅನ್ನು ಪ್ರಸ್ತುತಪಡಿಸುವುದು ಕಡ್ಡಾಯವಾಗಿರುವ ಸ್ಥಳಕ್ಕೆ ನೀವು ಭೇಟಿ ನೀಡುತ್ತೀರಿ ಎಂದು ಭಾವಿಸೋಣ. ಆದರೆ ನಿಮ್ಮ ಕಾರ್ಡ್ ಅನ್ನು ಯಾರಿಗಾದರೂ ತೋರಿಸುವುದರಿಂದ ನಿಮ್ಮ ವೈಯಕ್ತಿಕ ಮಾಹಿತಿ ಬಹಿರಂಗಗೊಳ್ಳಬಹುದೆಂಬ ಆತಂಕ ಇರುತ್ತದೆ. ಅಂತಹ ಸನ್ನಿವೇಶಗಳಲ್ಲಿ ಹೊಸ ಆಧಾರ್ ಅಪ್ಲಿಕೇಶನ್‌ನಲ್ಲಿ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಪರಿಶೀಲನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಹಳೆಯ mAadhaar ಅಪ್ಲಿಕೇಶನ್ ಅನ್ನು ಯಾವಾಗ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತದೆ ಎಂಬುದರ ಕುರಿತು ಯಾವುದೇ ನಿರ್ದಿಷ್ಟ ವಿವರಗಳನ್ನು ಒದಗಿಸಲಾಗಿಲ್ಲ.