Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ನೆದರ್‌ಲ್ಯಾಂಡ್ಸ್‌ಗೆ ಬರಲಿದೆ ಮಾರಕ ‘ಹಂಟಾವೈರಸ್’ ಪೀಡಿತ ಐಷಾರಾಮಿ ಹಡಗು!
ಪ್ರಮುಖವಿದೇಶ

ನೆದರ್‌ಲ್ಯಾಂಡ್ಸ್‌ಗೆ ಬರಲಿದೆ ಮಾರಕ ‘ಹಂಟಾವೈರಸ್’ ಪೀಡಿತ ಐಷಾರಾಮಿ ಹಡಗು!

Share
2 Min Read
SHARE

newsics.com/ನ್ಯೂಸಿಕ್ಸ್

ಮಾರಕ ‘ಹಂಟಾವೈರಸ್ ಸೋಂಕಿನಿಂದ ತತ್ತರಿಸಿರುವ ‘ಎಂಬಿ ಹೊಂಡಿಯಸ್’ ಐಷಾರಾಮಿ ಪ್ರವಾಸಿ ಹಡಗು ಸೋಮವಾರ ನೆದರ್‌ಲ್ಯಾಂಡ್ಸ್‌ನ ಪ್ರಮುಖ ಬಂದರು ನಗರಿ ರೋಟರ್‌ಡ್ಯಾಮ್ ತಲುಪುವ ನಿರೀಕ್ಷೆಯಿದೆ.

ಕಳೆದ ಆರು ದಿನಗಳ ಹಿಂದೆ ಕ್ಯಾನರಿ ದ್ವೀಪದಿಂದ ಹೊರಟಿದ್ದ ಈ ಹಡಗಿನಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಈಗಾಗಲೇ ಸಂಪೂರ್ಣ ಸುರಕ್ಷತಾ ಕವಚ ಧರಿಸಿದ ಸಿಬ್ಬಂದಿ ಸುರಕ್ಷಿತವಾಗಿ ಹೊರಗೆ ಕರೆತಂದಿದ್ದಾರೆ. ಅವರನ್ನು ಸುಮಾರು 20ಕ್ಕೂ ಹೆಚ್ಚು ದೇಶಗಳಿಗೆ ವಿಮಾನಗಳ ಮೂಲಕ ಕಳುಹಿಸಿಕೊಡಲಾಗಿದ್ದು, ಅಲ್ಲಿ ಅವರು ಕಡ್ಡಾಯ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

ಮೂವರ ಸಾವು, 11 ಜನರಿಗೆ ಸೋಂಕು: ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ, ಹಡಗಿನಲ್ಲಿ ಇದುವರೆಗೆ 11 ಹಂಟಾವೈರಸ್ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 9 ದೃಢಪಟ್ಟಿವೆ. ಸೋಂಕಿಗೆ ತುತ್ತಾಗಿ ನೆದರ್‌ಲ್ಯಾಂಡ್ಸ್‌ನ ದಂಪತಿ ಸೇರಿದಂತೆ ಒಟ್ಟು ಮೂವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ದಕ್ಷಿಣ ಅಮೆರಿಕಾ ಪ್ರವಾಸದ ವೇಳೆ ಈ ದಂಪತಿಗೆ ಮೊದಲ ಬಾರಿಗೆ ವೈರಸ್ ತಗುಲಿರಬಹುದು ಎಂದು ಶಂಕಿಸಲಾಗಿದೆ.

ಸದ್ಯ ಈ ಹಡಗಿನಲ್ಲಿ ಕೇವಲ 25 ಜನ ಸಿಬ್ಬಂದಿ ಹಾಗೂ ಇಬ್ಬರು ವೈದ್ಯಕೀಯ ಸಿಬ್ಬಂದಿ ಮಾತ್ರ ಇದ್ದಾರೆ. ಹಡಗಿನ ನಿರ್ವಾಹಕ ಸಂಸ್ಥೆಯಾದ ‘ಓಷನ್‌ವೈಡ್ ಎಕ್ಸ್‌ಪೆಡಿಶನ್ಸ್’ ನೀಡಿರುವ ಮಾಹಿತಿ ಪ್ರಕಾರ, ಪ್ರಸ್ತುತ ಹಡಗಿನಲ್ಲಿರುವ ಯಾರಿಗೂ ಸೋಂಕಿನ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ.

ವಿಶ್ವದಾದ್ಯಂತ ಕಟ್ಟೆಚ್ಚರ: ಹಡಗಿನಿಂದ ತಾಯ್ನಾಡಿಗೆ ಮರಳಿರುವ ಕೆನಡಾದ ಒಬ್ಬರು ಹಾಗೂ ಅಮೆರಿಕಾದ 18 ಪ್ರಯಾಣಿಕರನ್ನು ವಿಶೇಷ ಸಾಂಕ್ರಾಮಿಕ ರೋಗಗಳ ಚಿಕಿತ್ಸಾ ಆಸ್ಪತ್ರೆಯಲ್ಲಿ ನಿಗಾದಲ್ಲಿಡಲಾಗಿದೆ. ಕೆನಡಾದ ಪ್ರಯಾಣಿಕರೊಬ್ಬರಲ್ಲಿ ಪ್ರಾಥಮಿಕ ಪರೀಕ್ಷೆಯ ವೇಳೆ ಸೋಂಕು ಪತ್ತೆಯಾಗಿದೆ.

ಹಡಗು ರೋಟರ್‌ಡ್ಯಾಮ್ ಬಂದರಿಗೆ ಬಂದಿಳಿಯುತ್ತಿದ್ದಂತೆ ಅದರಲ್ಲೇ ಉಳಿದುಕೊಂಡಿರುವ ಸಿಬ್ಬಂದಿಯನ್ನು ನೆದರ್‌ಲ್ಯಾಂಡ್ಸ್‌ನಲ್ಲಿ ಕ್ವಾರಂಟೈನ್ ಮಾಡಲಾಗುವುದು. ತದನಂತರ ನೆದರ್‌ಲ್ಯಾಂಡ್ಸ್ ಆರೋಗ್ಯ ಇಲಾಖೆಯ ಕಟ್ಟುನಿಟ್ಟಿನ ಮಾರ್ಗಸೂಚಿಗಳ ಅಡಿಯಲ್ಲಿ ಇಡೀ ಹಡಗನ್ನು ಸಂಪೂರ್ಣವಾಗಿ ರಾಸಾಯನಿಕ ಮುಕ್ತ ಗೊಳಿಸಲಾಗುವುದು. ಆರೋಗ್ಯ ಅಧಿಕಾರಿಗಳು ಹಡಗನ್ನು ಸಂಪೂರ್ಣವಾಗಿ ತಪಾಸಣೆ ನಡೆಸಿ ಹಸಿರು ನಿಶಾನೆ ನೀಡಿದ ಬಳಿಕವಷ್ಟೇ ಅದಕ್ಕೆ ಮತ್ತೆ ಪ್ರಯಾಣ ಬೆಳೆಸಲು ಅನುಮತಿ ನೀಡಲಾಗುವುದು ಎಂದು ಡಚ್ ಆರೋಗ್ಯ ಸಚಿವಾಲಯ ತಿಳಿಸಿದೆ.

ಪ್ರವಾಸಿ ಹಡಗೊಂದರಲ್ಲಿ ಹಂಟಾವೈರಸ್ ಸಾಂಕ್ರಾಮಿಕ ಹರಡಿರುವುದು ಜಾಗತಿಕ ಇತಿಹಾಸದಲ್ಲೇ ಇದೇ ಮೊದಲು ಎನ್ನಲಾಗಿದೆ. ಫ್ರಾನ್ಸ್‌ನ ಪಾಶ್ಚರ್ ಸಂಸ್ಥೆಯು ಈ ವೈರಸ್‌ನ ರೂಪಾಂತರವನ್ನು ಪರೀಕ್ಷಿಸಿದ್ದು, ಇದು ದಕ್ಷಿಣ ಅಮೆರಿಕಾದಲ್ಲಿ ಕಂಡುಬರುವ ಸಾಮಾನ್ಯ ‘ಆಂಡಿಸ್ ವೈರಸ್’ ತಳಿಯಾಗಿದ್ದು, ಹೆಚ್ಚು ಅಪಾಯಕಾರಿ ಅಥವಾ ಹೊಸ ರೂಪಾಂತರದ ಲಕ್ಷಣಗಳನ್ನೇನೂ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ.

 

ಪ್ರೀತಿಸಿದ್ದಕ್ಕೆ, ಹೆತ್ತ ಮಗಳನ್ನು ಕೊಂದು, ಹಳ್ಳದಲ್ಲಿ ಶವ ಹೂತು ಹಾಕಿದ ತಂದೆ!

TAGGED:A luxury ship infected with deadly 'Hantavirus' is coming to the Netherlands!
Share This Article
Facebook Twitter Copy Link Print
Previous Article ಪ್ರೀತಿಸಿದ್ದಕ್ಕೆ, ಹೆತ್ತ ಮಗಳನ್ನು ಕೊಂದು, ಹಳ್ಳದಲ್ಲಿ ಶವ ಹೂತು ಹಾಕಿದ ತಂದೆ!
Next Article ರೈಲಿನಲ್ಲಿ ಬಾಲಕಿಯ ಖಾಸಗಿ ಅಂಗಾಂಗ ಸ್ಪರ್ಶಿಸಿ ಕಿರುಕುಳ ನೀಡಿದ ವ್ಯಕ್ತಿ; ವೈರಲ್ ವಿಡಿಯೋ ನೋಡಿ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?