Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಜ್ಯೋತಿಷ್ಯ > ASTRO ಯಾರೆಲ್ಲ ವಜ್ರ ಧರಿಸಿದರೆ ಅದೃಷ್ಟ? ಯಾರಿಗೆಲ್ಲ ಸಂಕಷ್ಟ?
ಪಂಚಾಂಗಜ್ಯೋತಿಷ್ಯಪ್ರಮುಖ

ASTRO ಯಾರೆಲ್ಲ ವಜ್ರ ಧರಿಸಿದರೆ ಅದೃಷ್ಟ? ಯಾರಿಗೆಲ್ಲ ಸಂಕಷ್ಟ?

Share
4 Min Read
SHARE

newsics.com/ನ್ಯೂಸಿಕ್ಸ್

ವಜ್ರವು ಶುಕ್ರ ಗ್ರಹದ ರತ್ನವಾಗಿದೆ. ಇದು ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರದಲ್ಲಿ ಐಶ್ವರ್ಯ, ಸೌಂದರ್ಯ, ಪ್ರೀತಿ, ಆಕರ್ಷಣೆ ಮತ್ತು ಸಮೃದ್ಧಿಯನ್ನು ಪ್ರತಿನಿಧಿಸುತ್ತದೆ. ವಜ್ರ ಧರಿಸುವುದರಿಂದ ಜೀವನದಲ್ಲಿ ಸಕಾರಾತ್ಮಕತೆ, ಆತ್ಮವಿಶ್ವಾಸ, ಆರ್ಥಿಕ ವೃದ್ದಿ ಮತ್ತು ಸಂಬಂಧಗಳಲ್ಲಿ ಸಾಮರಸ್ಯ ನೆಲೆಸುವುದು ಎಂದು ಹೇಳಲಾಗುತ್ತದೆ.

ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರದ ಪ್ರಕಾರ, ವಜ್ರ ಧರಿಸುವುದು ಎಲ್ಲರಿಗೂ ಉತ್ತಮ ಎಂದು ಹೇಳಲಾಗುವುದಿಲ್ಲ. ಕೆಲವು ಜನರಿಗೆ ವಜ್ರ ಧರಿಸುವುದು ಅದೃಷ್ಟವನ್ನುಂಟು ಮಾಡಿದರೆ, ಕೆಲವರಿಗೆ ದುರಾದೃಷ್ಟ ಎದುರಾಗಬಹುದು.

ವಜ್ರ ಧರಿಸುವುದು ಅದೃಷ್ಟವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಜ್ಯೋತಿಷ್ಯದ ಪ್ರಕಾರ, ಅದೃಷ್ಟವನ್ನು ಬದಲಾಯಿಸುವ ಶಕ್ತಿಯು ಇದರಲ್ಲಿದೆ. ಆದರೆ ಪ್ರತಿಯೊಬ್ಬ ವ್ಯಕ್ತಿಗೂ ಇದು ಶುಭವನ್ನು ಉಂಟು ಮಾಡುವುದಿಲ್ಲ.

ಸಂಖ್ಯಾ ಶಾಸ್ತ್ರದ ಪ್ರಕಾರ ಹಾಗೂ ಜಾತಕದಲ್ಲಿ ಶುಕ್ರನ ಸ್ಥಿತಿಯ ಆಧಾರದ ಮೇಲೆ ವಜ್ರ ಧರಿಸುವುದರ ಬಗ್ಗೆ ಸಲಹೆಯನ್ನು ನೀಡಲಾಗುತ್ತದೆ. ಸರಿಯಾದ ವ್ಯಕ್ತಿಯು ಸರಿಯಾದ ರೀತಿಯಲ್ಲಿ ವಜ್ರವನ್ನು ಧರಿಸುವುದರಿಂದ ಪ್ರಗತಿ, ಆಕರ್ಷಣೆ, ವೈವಾಹಿಕ ಸುಖ ಮತ್ತು ಆರ್ಥಿಕ ಲಾಭವನ್ನು ಪಡೆಯಬಹುದಾಗಿದೆ. ಹಾಗೆ ತಪ್ಪಾದ ವ್ಯಕ್ತಿಯು ವಜ್ರವನ್ನು ಧರಿಸಿದರೆ, ವಿವಾದ, ಸಾಲ, ಸಂಬಂಧದಲ್ಲಿ ಒತ್ತಡ ಹಾಗೂ ಮಾನಸಿಕ ಸಮಸ್ಯೆಗಳಲ್ಲಿ ಹೆಚ್ಚಳವನ್ನು ಹೊಂದಬಹುದು. ಹಾಗಾಗಿ

ಸಂಖ್ಯಾಶಾಸ್ತ್ರದ ಪ್ರಕಾರ, ನಿಮ್ಮ ಜನ್ಮ ದಿನಾಂಕದ ಆಧಾರದ ಮೇಲೆ ಯಾವ ಸಂಖ್ಯೆಯ ಜನರು ವಜ್ರವನ್ನು ಧರಿಸಬಹುದು ಮತ್ತು ಯಾವ ಸಂಖ್ಯೆಯ ಜನರು ವಜ್ರವನ್ನು ಧರಿಸದೆ ಇರುವುದು ಉತ್ತಮ?

ಸಂಖ್ಯೆ 1

ಯಾವುದೇ ತಿಂಗಳ 1, 10, 19 ಅಥವಾ 28ನೇ ದಿನಾಂಕಗಳಂದು ಜನಿಸಿದವರ ಸಂಖ್ಯೆ 1 ಆಗಿರುವುದು. ಸಂಖ್ಯೆ 1 ರ ಅಧಿಪತಿ, ಗ್ರಹಗಳ ರಾಜನಾದ ಸೂರ್ಯ ದೇವನಾಗಿದ್ದಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸಂಖ್ಯೆ 1 ನ್ನು ಹೊಂದಿರುವ ಜನರು ವಜ್ರವನ್ನು ಧರಿಸುವುದು ಸಾಕಷ್ಟು ಪ್ರಯೋಜನಕಾರಿ ಮತ್ತು ಲಾಭದಾಯಕ ಎಂದು ಹೇಳಲಾಗುತ್ತದೆ.
ವಜ್ರವನ್ನು ಧರಿಸುವುದರಿಂದ ಸಂಖ್ಯೆ 1ನ್ನು ಹೊಂದಿರುವ ಜನರ ಗೌರವ, ಖ್ಯಾತಿ ಹೆಚ್ಚಾಗುವುದರೊಂದಿಗೆ ನಾಯಕತ್ವ ಸಾಮರ್ಥ್ಯವು ಕೂಡ ವೃದ್ದಿಯಾಗುವುದು. ಹಾಗೆ ಸಕಾರಾತ್ಮಕತೆಯೂ ಕೂಡ ಹೆಚ್ಚಾಗಲಿದೆ. ಸೂರ್ಯನ ಅಧಿಪತ್ಯವಿರುವ ಸಂಖ್ಯೆ 1 ನ್ನು ಹೊಂದಿರುವ ಜನರು ವಜ್ರವನ್ನು ಧರಿಸುವುದರಿಂದ ಆತ್ಮವಿಶ್ವಾಸ ಹೆಚ್ಚಾಗುವುದರೊಂದಿಗೆ ಪರಿಸ್ಥಿತಿಯನ್ನು ಸಮತೋಲನದಲ್ಲಿ ಇರಿಸಲು ಸಾಧ್ಯವಾಗುವುದು.

ಸಂಖ್ಯೆ 2

ಯಾವುದೇ ತಿಂಗಳ 2, 11, 20 ಮತ್ತು 29ನೇ ದಿನಾಂಕಗಳಂದು ಜನಿಸಿದ ವ್ಯಕ್ತಿಯ ಸಂಖ್ಯೆ 2 ಆಗಿರುವುದು. ಸಂಖ್ಯೆ 2ರ ಅಧಿಪತಿ, ಮನಸ್ಸು ಮತ್ತು ತಾಯಿಯನ್ನು ಪ್ರತಿನಿಧಿಸುವ ಚಂದ್ರ ದೇವನಾಗಿದ್ದಾನೆ. ಹಾಗಾಗಿ ಸಂಖ್ಯೆ 2ನ್ನು ಹೊಂದಿರುವ ಜನರು ಚಂದ್ರನ ಪ್ರಭಾವದಿಂದಾಗಿ ಸಾಕಷ್ಟು ಸಂವೇದನಶೀಲರಾಗಿರುತ್ತಾರೆ ಎಂದು ಹೇಳಲಾಗುತ್ತದೆ.

ಸಂಖ್ಯಾಶಾಸ್ತ್ರದ ಪ್ರಕಾರ, ಸಂಖ್ಯೆ 2ನ್ನು ಹೊಂದಿರುವ ಜನರ ವಜ್ರವನ್ನು ಧರಿಸುವುದರಿಂದ ಭಾವನಾತ್ಮಕ ಸಮತೋಲನ, ಶಾಂತಿ, ಮಾನಸಿಕ ಸ್ಪಷ್ಟತೆ ಮತ್ತು ಆತ್ಮ ಸನ್ಮಾನ ದೊರಕುವುದು ಎಂದು ಹೇಳಲಾಗುತ್ತದೆ.

ಸಂಖ್ಯೆ 6

ಯಾವುದೇ ತಿಂಗಳ 6, 15 ಮತ್ತು 24ನೇ ದಿನಾಂಕಗಳಂದು ಜನಿಸಿದವರ ಸಂಖ್ಯೆ 6 ಆಗಿರುವುದು ಮತ್ತು ಈ ಸಂಖ್ಯೆಯ ಅಧಿಪತಿ ಸ್ವತಃ ಶುಕ್ರ ಗ್ರಹವಾಗಿದೆ. ಶುಕ್ರ ಗ್ರಹದ ಕಾರಣದಿಂದಾಗಿ, ಸಂಖ್ಯೆ 6 ನ್ನು ಹೊಂದಿರುವ ಜನರು ವಜ್ರವನ್ನು ಧರಿಸುವುದು ಬಹಳಷ್ಟು ಶುಭ ಎಂದು ಹೇಳಲಾಗುತ್ತದೆ. ಸಂಖ್ಯೆ 6 ನ್ನು ಹೊಂದಿರುವ ಜನರು ವಜ್ರ ಧರಿಸುವುದರಿಂದ ಆಕರ್ಷಣೆ, ರಚನಾತ್ಮಕತೆ, ಐಶ್ವರ್ಯ ಮತ್ತು ಸಂಬಂಧಗಳಲ್ಲಿ ಸ್ಥಿರತೆ ಹೆಚ್ಚಾಗುವುದು. ಹಾಗೆ ಸಂಖ್ಯೆ 6 ನ್ನು ಹೊಂದಿರುವ ಜನರು ವಜ್ರ ಧಾರಣೆ ಮಾಡುವುದರಿಂದ ಆತ್ಮವಿಶ್ವಾಸದಲ್ಲಿ ಹೆಚ್ಚಳವಾಗುವುದರೊಂದಿಗೆ ಯಶಸ್ಸನ್ನು ಗಳಿಸಲು ಸಾಕಷ್ಟು ಸಹಾಯ ದೊರಕುವುದು.

ಸಂಖ್ಯೆ 7

ಯಾವುದೇ ತಿಂಗಳ 7, 16 ಮತ್ತು 25ನೇ ದಿನಾಂಕಗಳಂದು ಜನಿಸಿದ ಜನರ ಸಂಖ್ಯೆ 7 ಆಗಿರುವುದು. ಹಾಗಾಗಿ ಸಂಖ್ಯೆ 7ನ್ನು ಹೊಂದಿರುವ ಜನರು ಆಧ್ಯಾತ್ಮಿಕ, ವಿಚಾರಶೀಲ ಮತ್ತು ಅಂತರ್ಜ್ಞಾನಿಗಳಾಗಿರುತ್ತಾರೆ ಎಂದು ಹೇಳಲಾಗುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ, ಸಂಖ್ಯೆ 7ನ್ನು ಹೊಂದಿರುವ ಜನರು ವಜ್ರ ಧರಿಸುವುದರಿಂದ ಇವರ ರಚನಾತ್ಮಕತೆ ಹೆಚ್ಚಾಗುವುದು ಮತ್ತು ಜೀವನದಲ್ಲಿ ಉತ್ತಮ ಅವಕಾಶವನ್ನು ಗಳಿಸುವುದರಿಂದ ಅನೇಕ ರೀತಿಯ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯಬಹುದಾಗಿದೆ.

ಸಂಖ್ಯೆ 8, 9

ಸಂಖ್ಯಾಶಾಸ್ತ್ರದ ಪ್ರಕಾರ, ಸಂಖ್ಯೆ 8 ಮತ್ತು ಸಂಖ್ಯೆ 9 ನ್ನು ಹೊಂದಿರುವ ಜನರು ವಜ್ರವನ್ನು ಧರಿಸುವ ಮೊದಲು ಉತ್ತಮ ಜ್ಯೋತಿಷಿ ಅಥವಾ ಸಂಖ್ಯಾಶಾಸ್ತ್ರಜ್ಞರ ಸಲಹೆಯನ್ನು ಪಡೆಯುವುದು ಉತ್ತಮ. ಈ ಎರಡು ಸಂಖ್ಯೆಗಳ ಅಧಿಪತಿ, ಕರ್ಮಫಲ ದಾತನಾದ ಶನಿ ಮತ್ತು ಗ್ರಹಗಳ ಸೇನಾಧಿಪತಿಯಾದ ಮಂಗಳ ದೇವನಾಗಿದ್ದಾನೆ ಹಾಗೂ ವಜ್ರ ಧರಿಸುವುದು ಇವರ ಉತ್ಸಾಹಕ್ಕೆ ಅಷ್ಟು ಅನುಕೂಲಕರವಾಗಿರುವುದಿಲ್ಲ ಎಂದು ಹೇಳಲಾಗುತ್ತದೆ.

ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರದ ಪ್ರಕಾರ, ಈ ಎರಡು ಸಂಖ್ಯೆಗಳನ್ನು ಹೊಂದಿರುವ ಜನರು ವಜ್ರವನ್ನು ಧರಿಸುವುದು ಉತ್ತಮವಲ್ಲ ಎಂದು ಹೇಳಲಾಗುತ್ತದೆ.
ಹಾಗೆ ಕೆಲವು ಜನರು ವಜ್ರವನ್ನು ಸೌಂದರ್ಯ ಮತ್ತು ಆಕರ್ಷಣೆಗೆ ಮಾತ್ರ ಧರಿಸುತ್ತಾರೆ. ಹಾಗೆ ವಜ್ರವು ಈಗಲೂ ಕೂಡ ಅತ್ಯಂತ ಹೆಚ್ಚಿನ ಪ್ರಸಿದ್ಧಿಯನ್ನು ಹೊಂದಿರುವ ರತ್ನವಾಗಿದ್ದು, ಪ್ರಪಂಚದಾದ್ಯಂತ ಆಧ್ಯಾತ್ಮಿಕ ಕಾರಣಗಳು ಅಥವಾ ಸೌಂದರ್ಯವನ್ನು ಹೆಚ್ಚಿಸಲು ಹೆಚ್ಚಿನ ಜನರು ವಜ್ರವನ್ನು ಧರಿಸುವುದನ್ನು ಇಷ್ಟಪಡುತ್ತಾರೆ. ಆದರೆ ಸರಿಯಾದ ಜ್ಯೋತಿಷಿಗಳ ಸಲಹೆಯನ್ನು ಪಡೆಯುವುದರಿಂದ ನೀವು ಇನ್ನಷ್ಟು ಶುಭಫಲಗಳನ್ನು ಗಳಿಸಬಹುದಾಗಿದೆ.

 

Almanac ಇಂದಿನಿಂದ ಅಧಿಕ ಜ್ಯೇಷ್ಠ ಮಾಸ: ಜೂನ್ 18ರವರೆಗಿಲ್ಲ ಶುಭ ಮುಹೂರ್ತ

TAGGED:is it good luck? Who has trouble?Who wears diamonds
Share This Article
Facebook Twitter Copy Link Print
Previous Article HP, Indane, Bharat ಗ್ಯಾಸ್‌ ಗ್ರಾಹಕರಿಗೆ ಮತ್ತೊಂದು ಬಿಗ್​ ಶಾಕ್! 2 ಸಂಪರ್ಕ ಇದ್ರೆ ಒಂದು ಕಟ್ : ಏನಿದು ಹೊಸ ರೂಲ್ಸ್​
Next Article ನೀಟ್ ಪರೀಕ್ಷೆ ರದ್ದಾಗಿದ್ದಕ್ಕೆ ಮನನೊಂದು ಬೆಂಗಳೂರಿನ ವಿದ್ಯಾರ್ಥಿ ಸೇರಿ ನಾಲ್ವರು ಆತ್ಮ*ಹತ್ಯೆ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?