Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Almanac ಇಂದಿನಿಂದ ಅಧಿಕ ಜ್ಯೇಷ್ಠ ಮಾಸ: ಜೂನ್ 18ರವರೆಗಿಲ್ಲ ಶುಭ ಮುಹೂರ್ತ
ಕರ್ನಾಟಕದೇಶಪಂಚಾಂಗಪ್ರಮುಖ

Almanac ಇಂದಿನಿಂದ ಅಧಿಕ ಜ್ಯೇಷ್ಠ ಮಾಸ: ಜೂನ್ 18ರವರೆಗಿಲ್ಲ ಶುಭ ಮುಹೂರ್ತ

Share
2 Min Read
SHARE

newsics.com/ನ್ಯೂಸಿಕ್ಸ್

ಶುಭ ಮುಹೂರ್ತಗಳಿಗೆ ಸದ್ಯ ವಿರಾಮ ಬಿದ್ದಿದೆ. ಮುಂಬರುವ ಜೂನ್ 18ರವರೆಗೆ ಯಾವುದೇ ಶುಭ ಮುಹೂರ್ತಗಳಿಲ್ಲ ಎಂದು ವಿದ್ವಾಂಸರು ತಿಳಿಸಿದ್ದಾರೆ. ‘ಪರಾಭವ’ ನಾಮ ಸಂವತ್ಸರದಲ್ಲಿ ಮುಂದಿನ 36 ದಿನ ಶುಭ ಮುಹೂರ್ತಗಳು ಇಲ್ಲದಿರುವುದರಿಂದ ಮದುವೆ ಸಮಾರಂಭಗಳು ಹಾಗೂ ಗೃಹಪ್ರವೇಶಗಳಿಗೆ ಬ್ರೇಕ್ ಬಿದ್ದಿದೆ.

ಅಧಿಕ ಜ್ಯೇಷ್ಠ ಮಾಸದ ಪ್ರಭಾವದಿಂದಾಗಿ ಸತತ 36 ದಿನಗಳ ಕಾಲ ಯಾವುದೇ ಒಳ್ಳೆಯ ಮುಹೂರ್ತಗಳಿಲ್ಲ. ಕಳೆದ ಎರಡು ತಿಂಗಳುಗಳಿಂದ ಮದುವೆ ಸಮಾರಂಭಗಳು, ಬ್ಯಾಂಡ್-ಬಾಜಾಗಳಿಂದ ಕಳೆಗಟ್ಟಿದ್ದ ಕಲ್ಯಾಣ ಮಂಟಪಗಳು 36 ದಿನ ಜನರಿಲ್ಲದೆ ಕಳೆಗುಂದಲಿವೆ. ಮೇ 14ರಿಂದಲೇ ಶುಭ ಕಾರ್ಯಗಳಿಗೆ ಒಳ್ಳೆಯ ಮುಹೂರ್ತಗಳು ಇರಲಿಲ್ಲ. ಈ ತಿಂಗಳಿನಲ್ಲಿ ದೈವಿಕ ಕಾರ್ಯಕ್ರಮಗಳಿಗೆ ಪ್ರಾಧಾನ್ಯತೆ ಇದ್ದರೂ ಶುಭ ಕಾರ್ಯಗಳು, ವಿವಾಹಗಳು ಮತ್ತು ಗೃಹಪ್ರವೇಶಗಳನ್ನು ಮಾಡುವುದು ಶಾಸ್ತ್ರದ ಪ್ರಕಾರ ಸೂಕ್ತವಲ್ಲ ಎಂದು ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಗ್ರಹಗಳ ಸ್ಥಿತಿ, ತಿಥಿಗಳ ಸಂಯೋಜನೆ ಮತ್ತು ಸೂರ್ಯನ ಸಂಚಾರದಂತಹ ಅಂಶಗಳನ್ನು ಪರಿಗಣಿಸಿ ಪಂಡಿತರು ಈ ಸಲಹೆಗಳನ್ನು ನೀಡಿದ್ದಾರೆ.

ಶುಭ ಮುಹೂರ್ತಗಳಿಗೆ ಬ್ರೇಕ್ ಬಿದ್ದಿರುವುದರಿಂದ ವಿವಿಧ ವ್ಯಾಪಾರ ವ್ಯವಹಾರಗಳ ಮೇಲೆಯೂ ತೀವ್ರ ಪರಿಣಾಮ ಬೀರಲಿದೆ. ಮದುವೆಗಳು, ಗೃಹಪ್ರವೇಶಗಳು ಸೇರಿದಂತೆ ಇತರೆಲ್ಲಾ ಶುಭ ಕಾರ್ಯಗಳು ಸ್ಥಗಿತಗೊಳ್ಳಲಿವೆ. ಇದರಿಂದಾಗಿ ಕಲ್ಯಾಣ ಮಂಟಪಗಳು (ಫಂಕ್ಷನ್ ಹಾಲ್), ಕ್ಯಾಟರಿಂಗ್, ಫೋಟೋಗ್ರಫಿ, ಬ್ಯಾಂಡ್ ಸೆಟ್, ಡೆಕೋರೇಷನ್, ಟೆಂಟ್ ಹೌಸ್, ಬ್ಯೂಟಿ ಪಾರ್ಲರ್, ಟ್ರಾವೆಲ್ಸ್ ಮತ್ತು ಲಾಜಿಸ್ಟಿಕ್ಸ್‌ನಂತಹ ವ್ಯಾಪಾರ ಕ್ಷೇತ್ರಗಳಿಗೆ ಈ ಒಂದು ತಿಂಗಳ ಕಾಲ ಮಂಕು ಕವಿಯಲಿವೆ.

ಜೂನ್ 19ರಿಂದ ಮತ್ತೆ ಶುಭ ದಿನ:

ಬರುವ ಜೂನ್ 19ರಿಂದ ಮತ್ತೆ ಶುಭ ಮುಹೂರ್ತಗಳು ಪ್ರಾರಂಭವಾಗುತ್ತಿವೆ. ಜೂನ್ 19, 20, 21, 24, 25, 26, 27, 28 ರಂದು ಅನುಕೂಲಕರ ಶುಭ ಮುಹೂರ್ತಗಳಿವೆ ಎಂದು ಪಂಡಿತರು ತಿಳಿಸಿದ್ದಾರೆ.

ಹಾಗೆಯೇ ಜುಲೈನಲ್ಲಿಯೂ 1ನೇ ತಾರೀಖಿನಿಂದ 9ನೇ ತಾರೀಖಿನವರೆಗೆ ಒಳ್ಳೆಯ ಮುಹೂರ್ತಗಳಿವೆ. ಆಗಸ್ಟ್ ತಿಂಗಳಿನ 16, 20, 21, 22, 23, 24, 25, 26, 27, 28 ಮತ್ತು 30 ರಂದು ಸರಣಿ ಶುಭ ಮುಹೂರ್ತಗಳು ಲಭ್ಯವಿವೆ ಎಂದು ಪಂಡಿತರು ಮಾಹಿತಿ ನೀಡಿದ್ದಾರೆ.

ಮದುವೆ ಹಾಗೂ ಇತರೆ ಶುಭ ಕಾರ್ಯಗಳಿಗೆ ಜೂನ್‌ನಲ್ಲಿ ಒಳ್ಳೆಯ ಮುಹೂರ್ತಗಳು ಇರುವುದರಿಂದ, ಜನರು ಇಂದಿನಿಂದಲೇ ಫಂಕ್ಷನ್ ಹಾಲ್‌ಗಳನ್ನು ಮುಂಗಡವಾಗಿ ಬುಕಿಂಗ್ (ಅಡ್ವಾನ್ಸ್ ಬುಕಿಂಗ್) ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ತಮ್ಮ ಮಕ್ಕಳ ಮದುವೆ ನಿಶ್ಚಯ ಮಾಡಿಕೊಂಡಿರುವ ಪೋಷಕರು ಜೂನ್ ತಿಂಗಳಿನ ವಿವಾಹ ಮಹೋತ್ಸವಗಳಿಗೆ ಭರದಿಂದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಜೂನ್ 19ರ ನಂತರ ಮದುವೆ ಮನೆಗಳಲ್ಲಿ ಮತ್ತೆ ಸಂಭ್ರಮದ ಕಳೆಬರಲಿದೆ.

ಯುದ್ಧದ ಬಿಸಿ : ಈಗ ಮದುವೆ ಕೂಡ ದುಬಾರಿ!

Chanakya Niti: ಈ ಗುಣಗಳಿರುವ ಹುಡುಗಿಯನ್ನು ಮದುವೆ ಆಗಬಾರದು!

ಒಂದು ವರ್ಷ ಚಿನ್ನ ಖರೀದಿಸದಿದ್ದರೆ ಏನಾಗುತ್ತೆ? ;ಆರ್ಥಿಕತೆಯ ಮೇಲಾಗುವ ಪರಿಣಾಮಗಳೇನು?

Groom Arrested ಮದುವೆ ಮಂಟಪಕ್ಕೆ ಬಂದ ಯುವತಿ ನೇರ ಪೊಲೀಸ್ ಠಾಣೆಗೆ – ಕಾರಣವೇನು?

Relationship- Obstacles to s*ex life ಸುಖಮಯ ಲೈಂಗಿಕ ಜೀವನಕ್ಕೆ ಈ‌ ಅಭ್ಯಾಸಗಳೇ ಅಡ್ಡಿ!

TAGGED:The month of Adhika Jeyeshtha will begin from today: Auspicious time will not be till June 18th
Share This Article
Facebook Twitter Copy Link Print
Previous Article Relationship- Obstacles to s*ex life ಸುಖಮಯ ಲೈಂಗಿಕ ಜೀವನಕ್ಕೆ ಈ‌ ಅಭ್ಯಾಸಗಳೇ ಅಡ್ಡಿ!
Next Article House rent issue ಬಾಡಿಗೆ ಪಾವತಿಸಲಾರದೆ ಹೆಂಡತಿ, ಮಗಳನ್ನೇ ಮನೆ ಮಾಲೀಕನಿಗೆ ಒಪ್ಪಿಸಿದ ಭೂಪ! ಹಲವು ಬಾರಿ ರೇ*ಪ್ ಮಾಡಿದ ಓನರ್

Popular Posts

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

You Might Also Like

ಕರ್ನಾಟಕಪ್ರಮುಖ

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read
ಕರ್ನಾಟಕದೇಶಪ್ರಮುಖಮನರಂಜನೆ

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read
ಕರ್ನಾಟಕಪ್ರಮುಖ

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?