Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಕರ್ನಾಟಕ > ದುಬಾರೆ ಪ್ರವಾಸಿ ತಾಣಕ್ಕೆ ತೂಗು ಸೇತುವೆ ಭಾಗ್ಯ 7.30ಕೋಟಿ‌ ವೆಚ್ಚದ ಯೋಜನೆಗೆ ಅರಣ್ಯ ಸಚಿವರಿಂದ ಚಾಲನೆ
ಕರ್ನಾಟಕಪ್ರಮುಖ

ದುಬಾರೆ ಪ್ರವಾಸಿ ತಾಣಕ್ಕೆ ತೂಗು ಸೇತುವೆ ಭಾಗ್ಯ 7.30ಕೋಟಿ‌ ವೆಚ್ಚದ ಯೋಜನೆಗೆ ಅರಣ್ಯ ಸಚಿವರಿಂದ ಚಾಲನೆ

Share
2 Min Read
SHARE

newsics.com/ನ್ಯೂಸಿಕ್ಸ್

ಮಡಿಕೇರಿ: ಕೊಡಗಿನ ಪ್ರವಾಸಿ ತಾಣ ದುಬಾರೆಯ ಕಾವೇರಿ ಹೊಳೆಗೆ ಸುಮಾರು 7.30 ಕೋಟಿ ರೂ‌. ವೆಚ್ಚದಲ್ಲಿ ನಿರ್ಮಾಣವಾಗಲಿರುವ ‘ತೂಗು ಸೇತುವೆ’ ಕಾಮಗಾರಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಬುಧವಾರ ಭೂಮಿ ಪೂಜೆ ನೆರವೇರಿಸಿದರು.


ಕುಶಾಲನಗರ ತಾಲೂಕಿನ, ಕುಶಾಲನಗರ ವಲಯದ ನಂಜರಾಯಪಟ್ಟಣ ಗ್ರಾಮದ ದುಬಾರೆ ಹಾಡಿ ಜನಗಳಿಗೆ ತುರ್ತು ಸಂದರ್ಭದಲ್ಲಿ, ವೈದ್ಯಕೀಯ ಚಿಕಿತ್ಸೆಗೆ ಹಾಗೂ ಇನ್ನಿತರ ಕೆಲಸ ಕಾರ್ಯಗಳಿಗೆ ತೆರಳಲು ಹೊಳೆ ದಾಟುವ ಪರಿಸ್ಥಿತಿ ಇತ್ತು. ಇಲ್ಲವೇ ದುಬಾರೆ-ಮಾಲ್ದಾರೆ ಮಾರ್ಗವಾಗಿ ಮೀಸಲು ಅರಣ್ಯದ ಒಳಗಡೆ ಸುಮಾರು 10 ಕಿ.ಮೀ ಗಳು ತೆರಳಬೇಕಾಗಿತ್ತು. ಅಲ್ಲದೇ ಮಳೆಗಾಲದ ಸಂದರ್ಭದಲ್ಲಿ ಶಿಬಿರಕ್ಕೆ ಬರುವ ಪ್ರವಾಸಿಗರಿಗೂ ಅನಾನುಕೂಲವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ದುಬಾರೆಯಲ್ಲಿ ತೂಗುಸೇತುವೆ ನಿರ್ಮಿಸಬೇಕೆಂಬುದು ಆ ಭಾಗದ ಜನರ ಬಹು ವರ್ಷಗಳ ಬೇಡಿಕೆಯಾಗಿತ್ತು.
ಇದೀಗ ದುಬಾರೆಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಈ ತೂಗುಸೇತುವೆಯನ್ನು ಕೊಡಗು ಫೌಂಡೇಷನ್ ಯೋಜನೆಯಡಿ ಲೋಕೋಪಯೋಗಿ ಇಲಾಖೆಯ ವತಿಯಿಂದ ನಿರ್ಮಿಸಲಾಗುತ್ತಿದ್ದು, ಇದರಿಂದ ದುಬಾರೆ ಹಾಡಿಯಲ್ಲಿ ವಾಸಿಸುತ್ತಿರುವ 150 ಕ್ಕೂ ಅಧಿಕ‌ ಕುಟುಂಬಗಳ ಜನರಿಗೂ, ಸಾಕಾನೆ ಶಿಬಿರದ ಸಿಬ್ಬಂದಿಗಳಿಗೂ ಮತ್ತು ಪ್ರವಾಸಿಗರಿಗೂ ಹೆಚ್ಚು ಅನುಕೂಲವಾಗಲಿದೆ.
ವಸತಿ ಸಮುಚ್ಛಯ: ಕುಶಾಲನಗರ ವಲಯದ ಉಪ ವಲಯ ಅರಣ್ಯಾಧಿಕಾರಿಗಳಿಗಾಗಿ 2025-26ನೇ ಸಾಲಿನ ಕಾಂಪಾ ಯೋಜನೆಯಡಿ ಕುಶಾಲನಗರ ಪಟ್ಟಣದಲ್ಲಿರುವ ಸರ್ಕಾರಿ ನಾಟಾ ಸಂಗ್ರಹಾಲಯದ ಆವರಣದಲ್ಲಿ ಹೊಸದಾಗಿ 90 ಲಕ್ಷ ರೂ. ವೆಚ್ಚದಲ್ಲಿ 4 ವಸತಿ ಗೃಹಗಳನ್ನು ನಿರ್ಮಿಸಲಾಗಿದೆ.ಅಲ್ಲದೆ ಮಡಿಕೇರಿ ವಿಭಾಗದ ಕುಶಾಲನಗರ ವಲಯದ ದುಬಾರೆ ಸಾಕಾನೆ ಶಿಬಿರಕ್ಕೆ ಹೊಸದಾಗಿ ಕೊಡಗು ಫೌಂಡೇಷನ್ ಯೋಜನೆಯಡಿ 29 ಲಕ್ಷ ರೂ.ಗಳಿಗೆ ಅಶೋಕ್
ಲೈಲ್ಯಾಂಡ್ ಕಂಪೆನಿಯ 10 ಚಕ್ರದ ಒಂದು ಲಾರಿ, ಮಡಿಕೇರಿ ವಿಭಾಗಕ್ಕೆ ಕೊಡಗು ಫೌಂಡೇಷನ್ ಯೋಜನೆಯಡಿ, ಮಾನವ ಪ್ರಾಣಿ ಸಂಘರ್ಷ ನಿಯಂತ್ರಣಕ್ಕಾಗಿ 37.20 ಲಕ್ಷ ರೂ. ಗಳಲ್ಲಿ ಖರೀದಿಸಲಾದ ನಾಲ್ಕು, ಬೊಲೇರೋ ವಾಹನ, ಕಾಂಪಾ ಯೋಜನೆಯಡಿ 50,400 ರೂ.ವೆಚ್ಚದಲ್ಲಿ ನಾಲ್ಕು ಜನ ರೈತರಿಗೆ ಜೇನು ತೆಗೆಯುವ ಯಂತ್ರ, ಒಬ್ಬ ರೈತರಿಗೆ 25 ಸಾವಿರ ರೂ. ವೆಚ್ಚದಲ್ಲಿ ಜೇನು ಕೃಷಿ ಬಗ್ಗೆ ತರಬೇತಿ, ರೂ.15ಲಕ್ಷ ವೆಚ್ಚದಲ್ಲಿ ಕಾಡಂಚಿನ ಗ್ರಾಮದ 30 ಜನ ಫಲಾನುಭವಿಗಳಿಗೆ ಜೇನುಪೆಟ್ಟಿಗೆ, 15 ಜನ‌ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ ಹಾಗೂ ಚೆಟ್ಟಳ್ಳಿ ಮತ್ತು ಚಿಕ್ಕತ್ತೂರು ಸರ್ಕಾರಿ ಶಾಲೆಗಳಿಗೆ ಸಂವಾದನಾತ್ಮಕ ಫಲಕಗಳ ವಿತರಣೆಯೂ ಈ ಸಂದರ್ಭ ನಡೆಯಿತು.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕ ಕುಮಾರ್ ಪುಷ್ಕರ್, ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ, ಕಲ್ಲಹಳ್ಳಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಮತ್ತಿತರರು ಪಾಲ್ಗೊಂಡಿದ್ದರು.

ದಳಪತಿ ಪತ್ನಿ ಸಂಗೀತಾ ಮಿಸ್ಸಿಂಗ್​? 500 ಕೋಟಿ ಒಡತಿ ಹೋಗಿದ್ದೆಲ್ಲಿ?

TAGGED:Suspension bridge brings fortune to expensive tourist spot 7.30 crore project launched by Forest Minister
Share This Article
Facebook Twitter Copy Link Print
Previous Article ವಿದ್ಯುತ್ ತಗುಲಿ 9 ವರ್ಷದ ಬಾಲಕಿ ಸಾವು
Next Article ಸೋತರೂ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಆಗಬಹುದು! ಕಾನೂನು ಏನು ಹೇಳತ್ತೆ?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?