Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಸೋತರೂ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಆಗಬಹುದು! ಕಾನೂನು ಏನು ಹೇಳತ್ತೆ?
ಪ್ರಮುಖ

ಸೋತರೂ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಆಗಬಹುದು! ಕಾನೂನು ಏನು ಹೇಳತ್ತೆ?

Share
2 Min Read
SHARE

newsics.com/ನ್ಯೂಸಿಕ್ಸ್

ಪಶ್ಚಿಮ ಬಂಗಾಳ ಮಾತ್ರವಲ್ಲದೇ ತಮ್ಮ ಕ್ಷೇತ್ರವನ್ನೂ ಉಳಿಸಿಕೊಳ್ಳಲಾಗದೇ ಹೈರಾಣಾಗಿರುವ ಪಶ್ಚಿಮ ಬಂಗಾಳದ ‘ಮುಖ್ಯಮಂತ್ರಿ’ ಮಮತಾ ಬ್ಯಾನರ್ಜಿ ಇದೀಗ ತಮ್ಮ ಸ್ಥಾನವನ್ನು ತ್ಯಜಿಸಲು ರೆಡಿ ಇಲ್ಲ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ರಾಜ್ಯಗಳಲ್ಲೆಲ್ಲಾ ಕಾಂಗ್ರೆಸ್ಸಿಗರು ಇವಿಎಂ ದೂರುವುದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ತಾವು ಗೆದ್ದಿರುವ ರಾಜ್ಯಗಳು ಬಿಟ್ಟರೆ ಉಳಿದ ಕಡೆಗಳಲ್ಲಿ ಯಾವತ್ತಿಗೂ ಅವರಿಗೆ ಇವಿಎಂ ಸರಿ ಇರುವುದೇ ಇಲ್ಲ. ಇದೊಂದು ರೀತಿಯಲ್ಲಿ ಅಪಹಾಸ್ಯಕ್ಕೂ ಕಾರಣವಾಗಿದ್ದರೂ ಕಾಂಗ್ರೆಸ್​ ಮುಖಂಡರು ಸೇರಿದಂತೆ ಬಿಜೆಪಿಯೇತರರು ಇದನ್ನು ಹೇಳುತ್ತಲೇ ಟ್ರೋಲ್​ ಆಗುವುದೂ ಇದೆ.

ಚುನಾವಣಾ ಆಯೋಗದ ಮೇಲೆ ಆರೋಪ
ಮಮತಾ ಬ್ಯಾನರ್ಜಿ ಸದ್ಯ ನೇರಾನೇರ ಚುನಾವಣಾ ಆಯೋಗದ ಮೇಲೆಯೇ ಆರೋಪ ಹೊರಿಸುತ್ತಿದ್ದಾರೆ. ತಾವೇ ಮುಖ್ಯಮಂತ್ರಿ, ನಾನು ರಿಸೈನ್ ಮಾಡುವುದೇ ಇಲ್ಲ, ಏನು ಬೇಕಾದ್ರೂ ಮಾಡಿಕೊಳ್ಳಿ ಎಂದಿರುವ ಮಮತಾಗೆ ಕೊನೆಯ ಪಕ್ಷ ಶಾಸಕಿಯ ಸ್ಥಾನವೂ ಇಲ್ಲದ ಬಗ್ಗೆ ತೀವ್ರ ಕುಗ್ಗಿ ಹೋಗಿದ್ದಾರೆ. ಸಮೀಕ್ಷೆಯ ಫಲಿತಾಂಶಗಳು ರಾಜ್ಯದ 294 ಸ್ಥಾನಗಳಲ್ಲಿ 207 ಸ್ಥಾನಗಳನ್ನು ನೀಡಿವೆ – ಇದು ಕೇಸರಿ ಪಕ್ಷದ ಜೊತೆಗೂಡಿ ಚುನಾವಣಾ ಆಯೋಗವು ಆಯೋಜಿಸಿದ ಅಕ್ರಮ ಪ್ರಚಾರದ ಪರಿಣಾಮವಾಗಿದೆ ಎಂದು ಆರೋಪಿಸಿದ್ದಾರೆ. “ನಾನು ಸೋತಿಲ್ಲ… ಆದ್ದರಿಂದ ನಾನು ರಾಜಭವನಕ್ಕೆ (ರಾಜ್ಯಪಾಲರ ನಿವಾಸ) ಹೋಗುವುದಿಲ್ಲ. ನಾನು ರಾಜೀನಾಮೆ ನೀಡುವುದಿಲ್ಲ” ಎಂದಿದ್ದಾರೆ.

ಇದರಿಂದಾಗಿ ಸದ್ಯ ಪಶ್ಚಿಮ ಬಂಗಾಳದಲ್ಲಿ ಅಸಾಧಾರಣ ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ. ಈ ಹಿಂದೆ ಭಾರತದಲ್ಲಿ ಇಂಥ ಯಾವುದೇ ಪರಿಸ್ಥಿತಿ ಬಂದಿರಲಿಲ್ಲ. ಇದೇ ಮೊದಲ ಬಾರಿಗೆ ಸೋತರೂ ಮುಖ್ಯಮಂತ್ರಿ ರಾಜೀನಾಮೆ ನೀಡಲ್ಲ ಎಂದು ಪಟ್ಟುಹಿಡಿದಿರುವುದು ಎಂದಿರುವ ತಜ್ಞರು, ಈ ಮೂಲಕ ಸೋಲಿನಲ್ಲಿಯೂ ದೀದಿ ದಾಖಲೆ ಬರೆದಿದ್ದಾರೆ ಎನ್ನಲಾಗಿದೆ.

ಚುನಾವಣೆಯಲ್ಲಿ ಸೋತ ನಂತರ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕೆಂದು ಸಂವಿಧಾನದಲ್ಲಿ ಯಾವುದೇ ಸ್ಪಷ್ಟ ನಿಬಂಧನೆ ಇಲ್ಲ. ಚುನಾವಣಾ ಸೋಲಿನ ನಂತರ ರಾಜೀನಾಮೆ ನೀಡುವುದು, ಶಾಂತಿಯುತ ಅಧಿಕಾರ ವರ್ಗಾವಣೆಯ ಮೂಲತತ್ವ . ಇದು ನಿಯಮಕ್ಕಿಂತ ಹೆಚ್ಚಾಗಿ ಒಂದು ಸಂಪ್ರದಾಯವಾಗಿದೆ. ಆದರೆ ಇದೀಗ ಬೇರೆಯದ್ದೇ ಪರಿಸ್ಥಿತಿ ತಲೆದೋರಿದೆ. ಮುಖ್ಯಮಂತ್ರಿಯೊಬ್ಬರು ತಮ್ಮ ಸ್ಥಾನದಲ್ಲಿ ಮುಂದುವರಿಯಲು ಶಾಸಕಾಂಗ ಸಭೆಯ ವಿಶ್ವಾಸವನ್ನು ಹೊಂದಿರಬೇಕು ಎಂಬುದು ನಿಯಮ. ಚುನಾವಣಾ ಆಯೋಗ ಫಲಿತಾಂಶ ಪ್ರಕಟಿಸಿದ ಬಳಿಕ, ಸಂಪ್ರದಾಯದ ಪ್ರಕಾರ ರಾಜೀನಾಮೆ ನೀಡಲೇಬೇಕು. ಒಂದು ವೇಳೆ ದೀದಿ ಮಾಡಿದಂತೆ ಅವರು ನಿರಾಕರಿಸಿದರೆ, ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡುವುದು, ಅಂದರೆ ಶಾಸಕಾಂಗವನ್ನು ಅಮಾನತುಗೊಳಿಸುವುದು ಮತ್ತು ರಾಜ್ಯವನ್ನು ಫೆಡರಲ್ ಸರ್ಕಾರದ ನೇರ ನಿಯಂತ್ರಣಕ್ಕೆ ತರುವುದು ಸೇರಿದಂತೆ ರಾಜ್ಯಪಾಲರು ತಮ್ಮ ಬಳಿ ಕೆಲವು ಕ್ರಮಗಳನ್ನು ಹೊಂದಿರುತ್ತಾರೆ.

ಇನ್ನೊಂದು ಸಾಧ್ಯತೆ ಎಂದರೆ, ರಾಜ್ಯಪಾಲರು ಮಮತಾ ಬ್ಯಾನರ್ಜಿ ಅವರಿಗೆ ವಿಧಾನ ಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಸೂಚಿಸುತ್ತಾರೆ. ಒಂದು ವೇಳೆ ಮಮತಾ ಬಹುಮತ ಸಾಧಿಸುವಲ್ಲಿ ಯಶಸ್ವಿಯಾದರೆ, ಅವರು ಮುಖ್ಯಮಂತ್ರಿಯಾಗಿ ಮುಂದುವರೆಯುವ ಅವಕಾಶವಿದೆ. ಅವರು ಹಾಗೆ ಮಾಡಲು ಸಾಧ್ಯವಾಗದೇ ಹೋದರೆ, ಅವರನ್ನು ವಜಾಗೊಳಿಸುವ ಅಧಿಕಾರ ರಾಜ್ಯಪಾಲರಿಗೆ ಇದೆ ಎನ್ನುವುದು ತಜ್ಞರ ಅಭಿಮತ. ಇನ್ನು ಸದ್ಯದ ಸ್ಥಿತಿ ನೋಡುವುದಾದರೆ, ತೃಣಮೂಲ ಕಾಂಗ್ರೆಸ್​ಗೆ 80 ಸ್ಥಾನಗಳು ಬಂದಿವೆ. ಬಹುಮತಕ್ಕೆ 68 ಸ್ಥಾನಗಳ ಕೊರತೆಯಿದೆ. ಆದ್ದರಿಂದ ಈ 68 ಸ್ಥಾನವನ್ನು ಪಡೆಯುವಲ್ಲಿ ಮಮತಾ ಯಶಸ್ವಿಯಾದರೆ ಮುಖ್ಯಮಂತ್ರಿ ಆಗಬಹುದು. ಪರಿಸ್ಥಿತಿ ಕೈಮೀರಿದರೆ, ಮುಖ್ಯಮಂತ್ರಿಯನ್ನು ವಜಾ ಮಾಡುವ ಅಧಿಕಾರ ರಾಜ್ಯಪಾಲರಿಗೆ ಇದೆ. ಇಲ್ಲವೇ ಸುಪ್ರೀಂಕೋರ್ಟ್​ಗೆ ಅವರು ಹೋಗಬಹುದು.

ದಳಪತಿ ಪತ್ನಿ ಸಂಗೀತಾ ಮಿಸ್ಸಿಂಗ್​? 500 ಕೋಟಿ ಒಡತಿ ಹೋಗಿದ್ದೆಲ್ಲಿ?

TAGGED:Mamata Banerjee can become the Chief Minister even if she loses! What does the law say?
Share This Article
Facebook Twitter Copy Link Print
Previous Article ದುಬಾರೆ ಪ್ರವಾಸಿ ತಾಣಕ್ಕೆ ತೂಗು ಸೇತುವೆ ಭಾಗ್ಯ 7.30ಕೋಟಿ‌ ವೆಚ್ಚದ ಯೋಜನೆಗೆ ಅರಣ್ಯ ಸಚಿವರಿಂದ ಚಾಲನೆ
Next Article ತಮಿಳುನಾಡು ರಾಜ್ಯಪಾಲರನ್ನು ಭೇಟಿ ಮಾಡಿ ನೂತನ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ದಳಪತಿ ವಿಜಯ್; ನಾಳೆಯೇ  ಪ್ರಮಾಣವಚನ ಸಾಧ್ಯತೆ

Popular Posts

Elephant in garbage dump ಎಂಎಂ ಹಿಲ್ಸ್‌ನ ಕಸದ ರಾಶಿಯಲ್ಲಿ ಆಹಾರ ಅರಸುತ್ತಿದೆ ಈ ಆನೆ! ವೈರಲ್ ವಿಡಿಯೋ ನೋಡಿ

1 Min Read

ಕಲಿಯುಗದ ಅಂತಿಮ ಹಂತ ಪ್ರಾರಂಭವಾಗಿದೆಯೇ?; ನಿಜವಾಗ್ತಿದೆ 500 ವರ್ಷಗಳ ಹಿಂದಿನ ಭವಿಷ್ಯವಾಣಿ.

2 Min Read

ನನ್ನ ಪತ್ನಿ ನನ್ನ ಜೊತೆ ಮಲಗಲು ರೆಡಿಯಿರಲಿಲ್ಲ ಎಂದ ಖ್ಯಾತ ನಟ!

1 Min Read

Alert from Police ಅನುಮತಿಯಿಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಿಯ ಖಾಸಗಿ ಚಿತ್ರ ಹಂಚಿದರೆ ಕಠಿಣ ಕ್ರಮ: ರಾಜ್ಯ ಪೊಲೀಸರಿಂದ ಮಾರ್ಗಸೂಚಿ

3 Min Read

You Might Also Like

ಕರ್ನಾಟಕಪ್ರಮುಖ

ಧರ್ಮಸ್ಥಳ ಕೇಸ್ ತನಿಖೆ ನಡೆಸುತ್ತಿದ್ದ ‘SIT’ ಎಸ್.ಪಿ ಪ್ರಯಾಣಿಸುತ್ತಿದ್ದ ಕಾರು ಪಲ್ಟಿ

2 Min Read
ಪ್ರಮುಖ

ರೈತರಿಗೆ ಬಿಗ್‌ ಗಿಫ್ಟ್‌ ಕೊಟ್ಟ ಸಿಎಂ ವಿಜಯ್‌; 75,000 ರೂ. ವರೆಗಿನ ಬೆಳೆ ಸಾಲ ಮನ್ನಾ 

1 Min Read
ಪ್ರಮುಖ

ಪತಿ ಜೊತೆ ವೀಕೆಂಡ್ ಗೆ ಹೋಗಿದ್ದ ಪತ್ನಿ ಹೋಂಸ್ಟೇಯಲ್ಲೇ ನಿಗೂಢ ಸಾವು

2 Min Read
ಪ್ರಮುಖ

ಶಾಲೆಗಳಲ್ಲಿ `ಲಿಪ್ ಸ್ಟಿಕ್’ ನಿಷೇಧಿಸಿದ ಕೇರಳ; ಕಾರಣವೇನು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?