Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > Today’s Horoscope ರಾಶಿ‌ ಭವಿಷ್ಯ 27-04-2026, ಸೋಮವಾರ, ನಿಮ್ಮ ಇಂದಿನ ಗ್ರಹಗತಿ ಹೇಗಿದೆ?
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

Today’s Horoscope ರಾಶಿ‌ ಭವಿಷ್ಯ 27-04-2026, ಸೋಮವಾರ, ನಿಮ್ಮ ಇಂದಿನ ಗ್ರಹಗತಿ ಹೇಗಿದೆ?

Share
4 Min Read
SHARE

newsics.com/ನ್ಯೂಸಿಕ್ಸ್

ಶುಭ ದಿನ

ಇಂದಿನ ಪಂಚಾಂಗ

27-04-2026, ಸೋಮವಾರ

ಪರಾಭವ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ವೈಶಾಖ ಮಾಸ ಶುಕ್ಲಪಕ್ಷದ ಏಕಾದಶಿ.

* ಮೋಹಿನಿ ಏಕಾದಶಿ

—

ಶಾಲಿವಾಹನ ಶಕೆ 1949ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಅಶ್ವಿನೀ, ವಾರ : ಸೋಮ, ಪಕ್ಷ : ಶುಕ್ಲ, ತಿಥಿ : ಏಕಾದಶಿ ನಿತ್ಯನಕ್ಷತ್ರ : ಪೂರ್ವಾಫಲ್ಗುಣೀ, ಯೋಗ : ಶೂಲಿ, ಕರಣ : ಕೌಲವ, ಸೂರ್ಯೋದಯ – 06 – 05 am, ಸೂರ್ಯಾಸ್ತ – 06 – 38 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:40 – 09:14, ಯಮಗಂಡ ಕಾಲ 10:48 – 12:22, ಗುಳಿಕ ಕಾಲ 13:56 – 15:30.


ಇಂದಿನ ರಾಶಿ ಭವಿಷ್ಯ

ಮೇಷ

ನೀವು ಎಲ್ಲರಿಗಿಂತ ಉತ್ತಮವಾದ ಮಾರ್ಗದ ಅನ್ವೇಷಣೆಯಲ್ಲಿ ಇರುವಿರಿ. ಮುಖ್ಯಸ್ಥರನ್ನು ಖುಷಿಪಡಿಸಲು ಧಾರಾಳ ಖರ್ಚು ಮಾಡಬಹುದು. ಹಳೆಯ ಕೌಟುಂಬಿಕ ಸಮಸ್ಯೆಗಳಿಗೆ ನ್ಯಾಯ ವ್ಯವಸ್ಥೆಯ ದಾರಿ ಉಪಯುಕ್ತವಾಗಬಹುದು. ಇತರರ ಅಭಿಪ್ರಾಯವನ್ನೂ ಪರಿಗಣಿಸಿ. ಕೆಲಸಕ್ಕಾಗಿ ನೀವು ಹಾಕಿಕೊಂಡ ಸಮಯವು ವ್ಯತ್ಯಸವಾಗುವುದು. ಒಂಟಿಯಾಗಿ ಎಲ್ಲಿಗಾದರೂ ಹೋಗುವ ಮನಸ್ಸಾಗುವುದು.

ವೃಷಭ

ಇಂದು ತಂದೆಯ ಅನಾರೋಗ್ಯದ ಬಗ್ಗೆ ನಿಮ್ಮ ಅಧಿಕಾರದ ಗರ್ವವನ್ನು ಪಕ್ಕಕ್ಕಿರಿಸಿ. ಸಂಬಂಧ ಬಲವಾಗಿಸಲು ಪ್ರೀತಿಯವರಿಗೆ ಸಮಯ ಮೀಸಲಿಡಿ. ಕೆಲಸದ ಒತ್ತಡದಲ್ಲಿ ಸಹಜವಾಗಿ ದೂಡಲ್ಪಡುವಿರಿ. ಸಮಾರಂಭಗಳಿಗೆ ಆಹ್ವಾನ ಸಿಕ್ಕಿ ಸಂತಸ. ವಿದ್ಯಾರ್ಥಿಗಳು ಕೌಶಲಕ್ಕೆ ಪ್ರಶಂಸೆ ಲಭ್ಯವಾಗುವುದು. ಸಹೋದರರ‌ ನಡುವೆ ಸೌಹಾರ್ದತೆ ಇರಲಿದೆ. ನಿಮ್ಮ ಮೇಲಿಟ್ಟ ನಂಬಿಕೆಯನ್ನು ಕಷ್ಟಪಟ್ಟು ಉಳಿಸಿಕೊಳ್ಳಬೇಕಾದೀತು.

ಮಿಥುನ

ನಿಮಗೆ ಎಂತಹ ಆರೋಪವನ್ನೂ ಗೆಲ್ಲುವುದೂ ಗೊತ್ತಾಗಲಿದೆ. ಉದ್ಯೋಗದಲ್ಲಿ ತೊಂದರೆ ಬಂದರೂ ನಿರೀಕ್ಷೆಯ ಬೆಳಕು ಕಾಣುವಿರಿ. ಸುತ್ತಲಿರುವ ಜನರಿಂದ ದೂರವಿರಿ, ಅವರ ಮಾತುಗಳಿಗೆ ಕಿವಿಗೊಡಬೇಡಿ. ಮೋಸದ ಆಟದಿಂದ ಎಚ್ಚರಿಕೆಯಿಂದಿರಿ. ಧಾರ್ಮಿಕ ಕಾರ್ಯವನ್ನು ನಿರ್ಮಲ ಮನಸ್ಸಿನಿಂದ ಮಾಡುವಿರಿ. ಯಾರ ಜೊತೆಯೂ ಮಿತಿಮೀರಿದ ಸಲುಗೆ ಬೇಡ. ಆಪ್ತರು ನಿಮ್ಮನ್ನು ಬಿಡಬಹುದು. ಕೆಲವು ಔದ್ಯೋಗಿಕ ಸಮಸ್ಯೆಯನ್ನು ಮೇಲಧಿಕಾರಿಗಳ ಮೂಲಕ ಬಗೆ ಹರಿಸಿಕೊಳ್ಳಿ.

ಕರ್ಕಾಟಕ

ಫಲವನ್ನು ನಿರೀಕ್ಷಿಸದೇ ಕಾರ್ಯವನ್ನು ಮಾಡಿ. ಹಳೆಯ ವ್ಯಕ್ತಿಯೊಂದಿಗೆ ಮತ್ತೆ ಸಂಪರ್ಕ ಆಗಬಹುದು. ಈ ಬದಲಾವಣೆ ನಿಮ್ಮ ಜೀವನದಲ್ಲಿ ಹೊಸ ಬೆಳಕು ತರುತ್ತದೆ. ಅದೃಷ್ಟ ಸಹಾಯ ಮಾಡಲಿದೆ. ವಿಘ್ನನಿವಾರಕನಿಗೆ ನಮಸಿ ಹೊಸ ಕಾರ್ಯವನ್ನು ಆರಂಭಿಸಿ. ವ್ಯಾವಹಾರಿಕ ಜಂಜಾಟವು ನಿಮ್ಮ ಉದ್ವೇಗಕ್ಕೆ ಕಾರಣವಾಗುವುದು. ನೀವು ಇಂದು ಯಾವುದೇ ಅಪೇಕ್ಷೆ ಇಲ್ಲದೇ ಕೆಲಸವನ್ನು ಮಾಡಲಾರಿರಿ. ಸ್ಥಿರಾಸ್ತಿಯ ಭಾಗವನ್ನು ಉಳಿಸಿಕೊಳ್ಳುವುದು ಕಷ್ಟವಾಗುವುದು.

ಸಿಂಹ

ಆಪ್ತರ ಜತೆ ವಿದೇಶದ ವ್ಯಾಪಾರದ ಕುರಿತು ಚರ್ಚಿಸುವಿರಿ. ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯುವುದು ಉತ್ತಮ. ನಿಮ್ಮ ಕಷ್ಟಕ್ಕೆ ಆದವರೇ ಜೊತೆಯಲ್ಲಿ ಇರುವರು. ಸಂಬಂಧಗಳಲ್ಲಿ ನಿಷ್ಠೆ ಹಾಗೂ ಪ್ರಾಮಾಣಿಕತೆ ಇತರರ ನಂಬಿಕೆಗೆ ಕಾರಣವಾಗುತ್ತದೆ. ನಿಮ್ಮ ಆತ್ಮಸಾಕ್ಷಿಯಂತೆ ನಡೆದುಕೊಳ್ಳಿ. ನಿಮ್ಮ ಸ್ವಭಾವವನ್ನು ದುರುಪಯೋಗ ಮಾಡಿಕೊಳ್ಳಬಹುದು. ನಿಮ್ಮ ಮೌನವು ಕುಟುಂಬದಲ್ಲಿ ಭಯವನ್ನು ಉಂಟುಮಾಡೀತು. ನಿರಂತರ ಕಾರ್ಯದಿಂದ ದೇಹಕ್ಕೆ ಆಯಾಸವಾಗಬಹುದು. ಸುಖಜೀವನದ ನಿರೀಕ್ಷೆಯಲ್ಲಿ ಇರುವಿರಿ.

ಕನ್ಯಾ

ಹಿರಿಯರಿಂದ ಅವಮಾನವಾಗುವ ಸಾಧ್ಯತೆ ಇದೆ. ಹಣದ ವ್ಯವಹಾರ ಶುಭವಾಗುವ ದಿನ. ನಿಮ್ಮ ಮಾತುಗಳು ಗುಣಮಟ್ಟದ್ದಾಗಿರಲಿ.‌ ಸಂಗಾತಿಯೊಂದಿಗೆ ಗೌಪ್ಯ ವಿಷಯ ಹಂಚಿಕೆ ವೇಳೆ ಎಚ್ಚರಿಕೆ ಇರಲಿ. ಪ್ರೇಮ ನಿಖರತೆ ನೀಡುತ್ತದೆ. ಸ್ನೇಹಿತರಿಂದ ವೃತ್ತಿಯಲ್ಲಿ ಬೆಂಬಲ ಸಿಗಲಿದೆ. ಸಂಗಾತಿಯೊಂದಿಗೆ ಸಮಯ ಕಳೆಯುವುದು ಸಂತೋಷ ತಂದೀತು. ಅತಿಯಾದ ಕೋಪದ ಕಾರಣ ನೀವು ಒಂಟಿಯಾಗಬೇಕಾದೀತು. ಕಹಿ ಘಟನೆಯನ್ನು ಮರೆಯಲು ಬಹಳ ಶ್ರಮ ಪಡುವಿರಿ. ವಿದ್ಯಾಭ್ಯಾಸದಲ್ಲಿ ಹಿನ್ನಡೆಯನ್ನು ಕಾಣಲಿದ್ದು ಕುಟುಂಬದಲ್ಲಿ ಅಸಮಾಧಾನ ಇರಲಿದೆ.

ತುಲಾ

ಅಮೂಲ್ಯವಾದ ವಸ್ತುವೊಂದು ನಿಮ್ಮ ಸ್ನೇಹಿತರಿಂದ ಕೊಡುಗೆಯಾಗಿ ಸಿಗಲಿದೆ. ನಿಮ್ಮ ಸುತ್ತಮುತ್ತಲಿನವರ ಪ್ರಗತಿ ನಿಮಗೆ ಆಹ್ಲಾದವಾಗದು. ನಿಮ್ಮ ಕಲ್ಪನೆಯ ಪ್ರಪಂಚದಿಂದ ಹೊರಬರಲು ನಿಮಗೆ ನುರಿತ ವ್ಯಕ್ತಿಯ ಮಾರ್ಗದರ್ಶನ ಅಗತ್ಯವಿದೆ. ನಿಮ್ಮ ಹಿಂದೆ ಆಡುವ ಮಾತುಗಳಿಗೆ ಹೆಚ್ಚು ಬೆಲೆ ಕೊಡುವುದು ಬೇಡ. ಹಣದ ಹೂಡಿಕೆಯನ್ನು ಮಾಡುವ ಯೋಚನೆ ಇರಲಿದೆ. ಆಕಸ್ಮಿಕವಾಗಿ ಪ್ರೇಮದಲ್ಲಿ ಬೀಳುವಿರಿ. ವ್ಯಕ್ತಿಯ ಬಗ್ಗೆ ನಿಮಗೆ ಪೂರ್ಣ ವಿಶ್ವಾಸವಿರದು.

ವೃಶ್ಚಿಕ

ತಪ್ಪುಗಳು ನಿಮ್ಮ ಸ್ವಭಾವವನ್ನು ತೋರಿಸುವುದು. ರಚನಾತ್ಮಕ ನಿಮ್ಮ ಶೈಲಿ ಪ್ರೇರಣೆಯುಂಟುಮಾಡುತ್ತದೆ. ಹೊಸ ಯೋಜನೆಗಳಲ್ಲಿ ಶಕ್ತಿ ಹೂಡಲು ಇದು ಸೂಕ್ತ ಸಮಯ. ನೀವು ಮಾಡಿದ ತಪ್ಪುಗಳನ್ನು ಒಪ್ಪಿಕೊಳ್ಳಿ ಮತ್ತು ಕ್ಷಮೆ ಕೇಳಿ. ಸತಿ ತಪ್ಪುಗಳ ಗೊಂದಲಕ್ಕೆ ಸಿಲುಕುವಿರಿ. ಇದು ನಿಮಗೆ ಸಮಾಧಾನ ಮತ್ತು ಸ್ವೀಕಾರ ನೀಡುತ್ತದೆ. ನಿಮ್ಮ ವರ್ತನೆಗಳು ತಂದೆಯ ಅಸಮಾಧಾನಕ್ಕೆ ಕಾರಣವಾಗಬಹುದು. ಮನಶ್ಚಾಂಚಲ್ಯದಿಂದ ಕೆಲವು ಕಹಿಯಾದ ಅನುಭವಗಳು ಆಗಬಹುದು.

ಧನುಸ್ಸು

ಮಕ್ಕಳಿಂದ ಬಂದ ಅಶುಭವಾರ್ತೆಯನ್ನು ಸಹಿಸಲಾಗದು. ನಿಮ್ಮ ನಿಷ್ಠೆಯಿಂದ ಬಂಧುಗಳು ಬೆಂಬಲ ನೀಡುತ್ತಾರೆ. ಅವರಿಂದ ಪ್ರೀತಿ ಹಾಗೂ ಸಹಾಯ ದೊರೆಯಲಿದೆ. ನಿಜವಾಗಿಯೂ ನೀವು ಬೆಲೆಬಾಳುವವರಾಗಿದ್ದೀರಿ ಎಂಬ ಅನುಭವ ಬರುವುದು. ಹೊಸ ವ್ಯಕ್ತಿಯ ಪರಿಚಯ ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆ ತರಬಹುದು. ಯಾರನ್ನೂ ತಾರತಮ್ಯ ಭಾವದಿಂದ ನೋಡುವುದು ಬೇಡ. ಕಛೇರಿಯ ಕೆಲಸದಿಂದ ಸ್ವಲ್ಪ ವಿಶ್ರಾಂತಿಯನ್ನು ಪಡೆಯುವಿರಿ. ಮನೆಯಿಂದ ಹೊರ ಹೋಗುವುದು ನಿಮಗೆ ಇಷ್ಟವಾಗದು.

ಮಕರ

ಹಣಕಾಸಿನ ಕುರಿತು ಅತಿಯಾದ ಆಲೋಚನೆಯು ನಿಮ್ಮನ್ನು ಅತಿಯಾಗಿ ಕಾಡಬಹುದು. ಕೌಶಲ್ಯಕ್ಕೆ ಯೋಗ್ಯವಾದ ಸ್ಥಳ ಸಿಗುವುದು. ಗಡುವಿಗೆ ಮುನ್ನ ಕೆಲಸ ಪೂರ್ಣಗೊಳಿಸುವ ಸಾಧ್ಯತೆ ಇದೆ. ಹೂಡಿಕೆಯಲ್ಲಿ ಸರಿಯಾದ ಸಮಯವನ್ನು ನೋಡಿಕೊಳ್ಳಿ. ಸಮಯೋಚಿತವಾಗಿ ಕಾರ್ಯವನ್ನು ಮಾಡಿ. ದೂರಪ್ರಯಾಣವನ್ನು ಮೊಟಕುಗೊಳಿಸಿ. ವ್ಯಾಪರದಲ್ಲಿ ಲಾಭವಿದೆ. ನಿಮ್ಮ ಊಹೆಗಳು ಎಲ್ಲವೂ ವಾಸ್ತವಕ್ಕೆ ದೂರವಾದುದಾಗಿದೆ.

ಕುಂಭ

ಕಳೆದ ವಸ್ತುಗಳ ಬಗ್ಗೆ ಅಧಿಕ ಚಿಂತೆ ಉಂಟಾಗಲಿದೆ. ಎಷ್ಟೋ ದಿನದ ಸಾಲಗಳು ಇಂದು ಮುಕ್ತಾಯಗೊಳ್ಳುವುದು. ಯಶಸ್ಸಿಲ್ಲದ ಯೋಜನೆಯ ನೆನೆಪು ದಣಿವನ್ನು ಉಂಟುಮಾಡಬಹುದು. ನಿಮ್ಮ ಶಕ್ತಿಯನ್ನು ಹೊಸದಾಗಿ ಪ್ರೇರಣೆಯಾದ ಕೆಲಸಗಳಿಗೆ ತಿರುಗಿಸಿ. ರಾಜಕೀಯದ ಒತ್ತಡವು ಅಧಿಕಾರದಲ್ಲಿ ಇದ್ದವರಿಗೆ ಬರಲಿದೆ. ಆದಷ್ಟು ಸ್ವಂತಿಕೆಯನ್ನು ಇಟ್ಟುಕೊಂಡು ಕೆಲಸ ಮಾಡಿ. ಕಾರ್ಯದಲ್ಲಿ ಆಗುವ ತೊಂದರೆಗಳಿಗೆ ಹಿರಿಯರ ಮಾರ್ಗದರ್ಶನವನ್ನು ಪಡೆಯಿರಿ.

ಮೀನ

ನಿಮ್ಮ ತಮಾಷೆಯಿಂದ ಇನ್ನೊಬ್ಬರಿಗೆ ನೋವಾಂಟಾಗಬಹುದು. ಹಿರಿಯ ಹಾಗೂ ಪ್ರಮುಖವ್ಯಕ್ತಿಗಳನ್ನು ಇಂದು ಭೇಟಿಯಾಗುತ್ತೀರಿ. ಉದ್ಯೋಗದಲ್ಲಿ ಅಡಚಣೆಗಳಿರಬಹುದು, ಆದರೆ ಇವು ತಾತ್ಕಾಲಿಕ. ನಿಮ್ಮ ಸುತ್ತಲಿರುವ ಜನರಿಂದ ದೂರವಿರುವುದು ಒಳಿತು. ನಿಮ್ಮ ಹತ್ತಿರದರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಜಾಣ್ಮೆಯಿಂದ ಅದನ್ನು ಬಗೆಹರಿಸಬೇಕಾಗುವುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ಥಳವನ್ನು ಬದಲಿಸುವಿರಿ. ಇಂದು ಭೂಮಿಯ ಮಾರಾಟದಿಂದ ಕಲಹವಾಗುವುದು.

TAGGED:how is your planetary position today?MondayToday's Horoscope 27-04-2026
Share This Article
Facebook Twitter Copy Link Print
Previous Article ಮೆಣಸಿನಕಾಯಿ ಸೇವನೆಯಿಂದ ಆಯಸ್ಸು ಹೆಚ್ಚಾಗುತ್ತದೆ : ಸಂಶೋಧನೆಯಲ್ಲಿ ಬಹಿರಂಗ!
Next Article New rules ಮೇ 1 ರಿಂದ LPG ಬುಕಿಂಗ್‌ ಗೆ ಹೊಸ ನಿಯಮ ಜಾರಿ

Popular Posts

Toll Price Hike ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸವಾರರಿಗೆ ಶಾಕ್; ವರ್ಷದಲ್ಲೇ 2ನೇ ಬಾರಿ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸಿದ ಹೆದ್ದಾರಿ ಪ್ರಾಧಿಕಾರ

1 Min Read

Scholl van tragedy ಶಾಲಾ ವಾಹನದ ಮೇಲೆ ಮರ ಬಿದ್ದು ಬಾಲಕಿ ಸಾವು, ಮಗು ಸ್ಥಿತಿ‌ ಗಂಭೀರ

1 Min Read

Footpath Driving Fine ಫುಟ್‌ಪಾತ್‌ನಲ್ಲಿ ಗಾಡಿ ಓಡಿಸಿದರೆ ಬೀಳಲಿದೆ ₹5,000 ದಂಡ! ಸಾರಿಗೆ ಸಚಿವರಿಗೆ ಸಚಿವ ಕೃಷ್ಣ ಬೈರೇಗೌಡ ಪತ್ರ

1 Min Read

Soujanya Case ಸೌಜನ್ಯ ಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ಸುಪ್ರೀಂ ಅಸಮಾಧಾನ, ಮರುತನಿಖೆಯ ಆದೇಶ ಕಾಯ್ದಿರಿಸಿದ ಪೀಠ

1 Min Read

You Might Also Like

ಪ್ರಮುಖದೇಶ

Smriti Mandhana ಎಲ್‌ಎಸ್‌ಜಿ ಜರ್ಸಿಯಲ್ಲಿ ಆರ್‌ಸಿಬಿ ನಾಯಕಿ? ಸ್ಮೃತಿ ಮಂದಾನಾ ಹೊಸ ಫೋಟೋ ವೈರಲ್‌

1 Min Read
ಪ್ರಮುಖಲೈಫ್‌ಸ್ಟೈಲ್

Credit Card Limit ನಿಮಗೆ ಗೊತ್ತಾಗದಂತೆ ಕ್ರೆಡಿಟ್‌ ಕಾರ್ಡ್‌ ಲಿಮಿಟ್‌ ಕಟ್‌ ಆಯ್ತಾ? ಬ್ಯಾಂಕುಗಳ ಈ ನಿರ್ಧಾರಕ್ಕೆ ಅಸಲಿ ಕಾರಣ ಇಲ್ಲಿದೆ

2 Min Read
ಪ್ರಮುಖದೇಶಮನರಂಜನೆ

Spider-Man: Brand New Day ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಹೊಸ ದಾಖಲೆ ಬರೆದ ‘ಸ್ಪೈಡರ್‌ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’

1 Min Read
ಪ್ರಮುಖಮನರಂಜನೆವಿದೇಶ

Kaylee Hottle no more ಗಾಡ್ಜಿಲ್ಲಾ ಚಿತ್ರದ 18 ವರ್ಷದ ನಟಿ ಕಾರು ಅಪಘಾತದಲ್ಲಿ ಸಾವು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?