newsics.com
ಮೈಸೂರು: ಚಿರತೆಯೊಂದು ಮೈಸೂರಿನ ಸಿದ್ಧಾರ್ಥ ನಗರದ ಮನೆಯೊಳಗೆ ಬಂದು ವೃದ್ಧೆ ಮಲಗಿದ್ದ ಮಂಚದಡಿ ಕುಳಿತ ಘಟನೆ ಶುಕ್ರವಾರ ನಡೆದಿದೆ.
ಮನೆಯವರ ಸಮಯಪ್ರಜ್ಞೆಯಿಂದ ವೃದ್ಧೆಯ ಜೀವ ಉಳಿದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಸ್ಥಳಕ್ಕಾಗಮಿಸಿ ಅರವಳಿಕೆ ನೀಡಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ.
ಮನೆಯ ಹೊರಗಿದ್ದ ಮಾಲೀಕರು ಹಾಗೂ ಅವರ ಪತ್ನಿ ಮನೆಯೊಳಗೆ ಬಂದು ನೋಡಿದಾಗ ಮಂಚದ ಕೆಳಗೆ ಚಿರತೆ ಇರುವುದು ಗೊತ್ತಾಗಿದೆ. ತಕ್ಷಣ ವೃದ್ಧೆಯನ್ನು ಧೈರ್ಯದಿಂದ ರಕ್ಷಿಸಿ ನಂತರ ರೂಮಿನ ಬಾಗಿಲು ಹಾಕಿಕೊಂಡು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕಾಗಮಿಸಿ, ಚಿರತೆಗೆ ಅರವಳಿಕೆ ಮದ್ದು ನೀಡಿ ಸೆರೆ ಹಿಡಿದು, ಹೆಚ್ಚಿನ ಚಿಕಿತ್ಸೆಗೆ ಮೃಗಾಲಯದ ಪುನರ್ವಸತಿ ಕೇಂದ್ರಕ್ಕೆ ರವಾನಿಸಿದ್ದಾರೆ.
ಕಳೆದ ಎರಡ್ಮೂರು ತಿಂಗಳಿಂದ ಚಿರತೆ ನಗರದ ಸಿದ್ಧಾರ್ಥ ಬಡಾವಣೆಯ ಸುತ್ತ ರಾತ್ರಿ ಹೊತ್ತು ಕಾಣಿಸಿಕೊಳ್ಳುತ್ತಿತ್ತು.
ಚಿರತೆ ಬೀದಿನಾಯಿಗಳ ಬೇಟೆಗಾಗಿ ಚಾಮುಂಡಿ ಬೆಟ್ಟ ಅಥವಾ ಕಾರಂಜಿ ಕೆರೆ ಪ್ರದೇಶದಿಂದ ಬಂದಿರಬಹುದು ಎಂದು ಅರಣ್ಯ ಇಲಾಖೆ ತಿಳಿಸಿದೆ.
ಬೇಟೆಗೆ ಬಂದ ಚಿರತೆಯೇ ಮುಳ್ಳುಹಂದಿ ದಾಳಿಗೆ ಸಾವು:
ತನ್ನನ್ನು ಬೇಟೆಯಾಡಲು ಬಂದ ಚಿರತೆ ಮೇಲೆ ಮುಳ್ಳುಹಂದಿ ಪ್ರತಿದಾಳಿ ನಡೆಸಿದ್ದರಿಂದ ತೀವ್ರವಾಗಿ ಗಾಯಗೊಂಡು ಚಿರತೆ ಮೃತಪಟ್ಟ ಘಟನೆ ಇತ್ತೀಚೆಗೆ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ.
ಬೊಮ್ಮನಹಳ್ಳಿ ಗ್ರಾಮದ ಜಮೀನೊಂದರ ಸಮೀಪ ಅಂದಾಜು 1-2 ವರ್ಷದ ಗಂಡು ಚಿರತೆಯ ಕಳೇಬರ ಪತ್ತೆಯಾಗಿತ್ತು. ಚಿರತೆಯ ಎದೆ, ಪಕ್ಕೆಲುಬು, ಮುಖಕ್ಕೆ ಮುಳ್ಳುಹಂದಿಯ ಮುಳ್ಳುಗಳು ಚುಚ್ಚಿಕೊಂಡಿದ್ದವು.
ಸೋಪ್ ಕಂಪನಿ ಜಾಹೀರಾತು ಪ್ರಕರಣದಲ್ಲಿ ಕೋರ್ಟ್ಗೆ ಹೋದ ತಮನ್ನಾಗೆ ಹಿನ್ನಡೆ
ಬಹು ಕೋಟಿ ರೂಪಾಯಿ ವಂಚನೆ ಪ್ರಕರಣ: ಅಪ್ರೂವರ್ ಆಗಲು ಜಾಕ್ವೆಲಿನ್ ಫರ್ನಾಂಡಿಸ್ ನಿರ್ಧಾರ