Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಬಹು ಕೋಟಿ ರೂಪಾಯಿ ವಂಚನೆ ಪ್ರಕರಣ: ಅಪ್ರೂವರ್ ಆಗಲು ಜಾಕ್ವೆಲಿನ್ ಫರ್ನಾಂಡಿಸ್ ನಿರ್ಧಾರ
ಪ್ರಮುಖಮನರಂಜನೆ

ಬಹು ಕೋಟಿ ರೂಪಾಯಿ ವಂಚನೆ ಪ್ರಕರಣ: ಅಪ್ರೂವರ್ ಆಗಲು ಜಾಕ್ವೆಲಿನ್ ಫರ್ನಾಂಡಿಸ್ ನಿರ್ಧಾರ

Share
2 Min Read
SHARE

ಬಹುಕೋಟಿ ರೂಪಾಯಿಗಳ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್, ಈಗ ಈ ಪ್ರಕರಣದಲ್ಲಿ ಅಪ್ರೂವರ್ ಆಗಲು ಇಚ್ಛಿಸಿದ್ದಾರೆ. ದೆಹಲಿ ನ್ಯಾಯಾಲಯದ ಮುಂದೆ ಅವರು ಈ ವಿಷಯ ತಿಳಿಸಿದ್ದಾರೆ. ಇದರಿಂದ ಪ್ರಕರಣದ ಗತಿಯೇ ಬದಲಾಗುವ ಸಾಧ್ಯತೆ ಇದೆ. ಜಾಕ್ವೆಲಿನ್  ಅವರ ಮನವಿಯನ್ನು ಆಲಿಸಿದ ನ್ಯಾಯಾಲಯ, ಮೊದಲು ಜಾರಿ ನಿರ್ದೇಶನಾಲಯಕ್ಕೆ (ED) ಈ ಬಗ್ಗೆ ಅಧಿಕೃತವಾಗಿ ವಿನಂತಿ ಸಲ್ಲಿಸುವಂತೆ ಸೂಚಿಸಿದೆ. ಈ ಪ್ರಕರಣದ ಪ್ರಮುಖ ಆರೋಪಿ ಸುಕೇಶ್ ಚಂದ್ರಶೇಖರ್ ಈಗ ಜೈಲಿನಲ್ಲಿದ್ದಾನೆ.

ನಿಯಮದ ಪ್ರಕಾರ, ತನಿಖಾ ಸಂಸ್ಥೆಯು ಮೊದಲು ಜಾಕ್ವೆಲಿನ್ ಫರ್ನಾಂಡಿಸ್ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಬೇಕು. ನಂತರ ಅವರನ್ನು ಅಪ್ರೂವರ್ ಆಗಿ ಪರಿಗಣಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದೆ. ಸುಕೇಶ್ ಚಂದ್ರಶೇಖರ್ ಕಡೆಯಿಂದ ಜಾಕ್ವೆಲಿನ್ ಸುಮಾರು 7 ಕೋಟಿ ರೂಪಾಯಿ ಮೌಲ್ಯದ ದುಬಾರಿ ಆಭರಣಗಳು, ಬಟ್ಟೆ ಮತ್ತು ವಾಹನಗಳನ್ನು ಉಡುಗೊರೆಯಾಗಿ ಪಡೆದಿದ್ದಾರೆ ಎಂಬ ಆರೋಪ ಇದೆ.

ಬಹುಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್ ಬಂಧನವಾದ ನಂತರ ಜಾಕ್ವೆಲಿನ್ ಅವರು ತಮ್ಮ ಮೊಬೈಲ್‌ನಲ್ಲಿದ್ದ ಡೇಟಾವನ್ನು ಡಿಲೀಟ್ ಮಾಡಿದ್ದಾರೆ ಮತ್ತು ಹಣಕಾಸಿನ ವಹಿವಾಟಿನ ಬಗ್ಗೆ ಮಾಹಿತಿ ಮುಚ್ಚಿಟ್ಟಿದ್ದರು ಎಂದು ತನಿಖಾ ಸಂಸ್ಥೆ ಹೇಳಿದೆ. ಹೈ ಪ್ರೊಫೈಲ್ ವ್ಯಕ್ತಿಗಳಿಗೆ ವಂಚಿಸಿ ಸುಕೇಶ್ ಒಟ್ಟು 215 ಕೋಟಿ ರೂಪಾಯಿಗಳನ್ನು ಲೂಟಿ ಮಾಡಿದ್ದ ಎನ್ನಲಾಗಿದೆ.

ಸುಕೇಶ್ ಚಂದ್ರಶೇಖರ್ ಒಬ್ಬ ಉದ್ಯಮಿ ಎಂದು ನಂಬಿಸಿ ನನಗೆ ಮೋಸ ಮಾಡಿದ್ದಾನೆ. ಆತನ ಅಪರಾಧ ಹಿನ್ನೆಲೆಯ ಬಗ್ಗೆ ನನಗೆ ಯಾವುದೇ ಅರಿವಿರಲಿಲ್ಲ’ ಎಂದು ಜಾಕ್ವೆಲಿನ್ ಆರಂಭದಿಂದಲೂ ವಾದಿಸುತ್ತಿದ್ದಾರೆ. ಆದರೆ, ಇಡಿ ಮಾತ್ರ ಅವರನ್ನು ಈ ಪ್ರಕರಣದಲ್ಲಿ ಸಹ-ಆರೋಪಿ ಎಂದು ಹೆಸರಿಸಿದೆ. ಈಗ ಅಪ್ರೂವರ್ ಆಗಲು ಜಾಕ್ವೆಲಿನ್ ಫರ್ನಾಂಡಿಸ್ ನಿರ್ಧರಿಸಿದ್ದಾರೆ.

ಜೈಲಿನಲ್ಲಿದ್ದರೂ ಸುಕೇಶ್ ಪದೇ ಪದೇ ಜಾಕ್ವೆಲಿನ್‌ಗೆ ಪ್ರೇಮ ಪತ್ರಗಳನ್ನು ಬರೆಯುವ ಮೂಲಕ ತಾನು ಆಕೆಯ ಬಾಯ್‌ಫ್ರೆಂಡ್ ಎಂದು ಹೇಳಿಕೊಳ್ಳುತ್ತಿದ್ದಾನೆ. ಕಳೆದ ವರ್ಷ ಜಾಕ್ವೆಲಿನ್ ವಿರುದ್ಧದ ಕ್ರಿಮಿನಲ್ ವಿಚಾರಣೆಯನ್ನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಈಗ ಜಾಕ್ವೆಲಿನ್ ಅವರೇ ಸಾಕ್ಷಿಯಾಗಲು ಮುಂದೆ ಬಂದಿರುವುದರಿಂದ ಸುಕೇಶ್‌ಗೆ ಸಂಕಷ್ಟ ತಂದೊಡ್ಡುವ ಲಕ್ಷಣಗಳಿವೆ.

ರಾಮಾಯಣದ ಬಗ್ಗೆ ವಿವಾದಾತ್ಮಕ ಹೇಳಿಕೆ; ನಟ ಪ್ರಕಾಶ್ ರಾಜ್ ವಿರುದ್ಧ FIR ದಾಖಲು

TAGGED:Multi-crore fraud case: Jacqueline Fernandez decides to become approver
Share This Article
Facebook Twitter Copy Link Print
Previous Article ರಾಮಾಯಣದ ಬಗ್ಗೆ ವಿವಾದಾತ್ಮಕ ಹೇಳಿಕೆ; ನಟ ಪ್ರಕಾಶ್ ರಾಜ್ ವಿರುದ್ಧ FIR ದಾಖಲು
Next Article ವಿದ್ಯುತ್ ಗ್ರಾಹಕರಿಗೆ ಮತ್ತೊಮ್ಮೆ ದರ ಏರಿಕೆಯ ಶಾಕ್

Popular Posts

Fast Track Court For Exam Paper Leak | ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್: ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ

1 Min Read

Gokarn Temple New Rules | ಗೋಕರ್ಣ ಮಹಾಗಣಪತಿ ದೇವಸ್ಥಾನದಲ್ಲಿ ಇನ್ಮುಂದೆ ಸ್ಪರ್ಶ ದರ್ಶನ ಇಲ್ಲ; ಭಕ್ತರಿಗೆ ಹೊಸ ನಿಯಮ

1 Min Read

Daily Horoscope ಇಂದಿನ ದಿನ ಭವಿಷ್ಯ – 23 ಜುಲೈ 2026

2 Min Read

Commonwealth Bharatanatyam ಕಾಮನ್‌ವೆಲ್ತ್ ಉದ್ಘಾಟನಾ ಸಮಾರಂಭದಲ್ಲಿಂದು ಕಲಬುರಗಿ ಯುವತಿಯ ಭರತನಾಟ್ಯ!

1 Min Read

You Might Also Like

ಮನರಂಜನೆಕರ್ನಾಟಕದೇಶಪ್ರಮುಖ

CM Vijay’s Last Film ಬೆಂಗಳೂರಿನಲ್ಲೂ ‘ಜನ ನಾಯಗನ್’ ಜ್ವರ: ವಿಜಯ್ ಕೊನೆಯ ಸಿನಿಮಾಗೆ ಅಭಿಮಾನಿಗಳ ಅದ್ಧೂರಿ ಸ್ವಾಗತ

2 Min Read
ಕರ್ನಾಟಕದೇಶಪ್ರಮುಖ

Channamma samadhi ರಾಜಘಾಟ್ ಮಾದರಿಯಲ್ಲಿ ಚನ್ನಮ್ಮ ಸಮಾಧಿ: 300 ಕೋಟಿ‌ ವೆಚ್ಚದ ಯೋಜನೆ

3 Min Read
ಕರ್ನಾಟಕದೇಶಪ್ರಮುಖ

Price hike shock ಜನರಿಗೆ ಮತ್ತೆ ಬೆಲೆ ಏರಿಕೆಯ ಶಾಕ್: ಮತ್ತೆ ದುಬಾರಿಯಾಯ್ತು ಅಡುಗೆ ಎಣ್ಣೆ, ಕಂಗಾಲಾದ ಮಧ್ಯಮ ವರ್ಗ

1 Min Read
ಕರ್ನಾಟಕಪ್ರಮುಖ

Fake PhD Certificates ಸರ್ಕಾರಿ ಪದವಿ ಕಾಲೇಜುಗಳಲ್ಲಿ 249 ಅತಿಥಿ ಉಪನ್ಯಾಸಕರಿಂದ ನಕಲಿ ಪಿಎಚ್‌.ಡಿ ಪ್ರಮಾಣಪತ್ರ ಸಲ್ಲಿಕೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?