newsics.com
ಬೆಂಗಳೂರು: ನಗರದ ವಿದ್ಯಾರಣ್ಯಪುರದಲ್ಲಿ ಪಿಯುಸಿ ಓದುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ತನಿಷ್ಕಾ (Tanishka) ಹಾಗೂ ತೇಜಸ್ವಿನಿ (Tejaswini) ಎಂಬ ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆಯಾಗಿ ಬರೋಬ್ಬರಿ 75 ದಿನಗಳು ಕಳೆದಿವೆ.
ಸಣ್ಣ ಕುರುಹೂ ಸಿಗದ ಹಾಗೆ ಇಬ್ಬರು ವಿದ್ಯಾರ್ಥಿನಿಯರು ಓಡಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇಬ್ಬರು ವಿದ್ಯಾರ್ಥಿನಿಯರ ಪತ್ತೆಗೆ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ಹುಡುಕಾಟ ನಡೆಸುತ್ತಿದ್ದಾರೆ.
ವಿದ್ಯಾರ್ಥಿನಿಯರು ಯಾವುದೇ ಮೊಬೈಲ್ ಫೋನ್ ಬಳಸುತ್ತಿಲ್ಲ ಮತ್ತು ಎಟಿಎಂ ಕಾರ್ಡ್‌ಗಳನ್ನೂ ಉಪಯೋಗಿಸುತ್ತಿಲ್ಲ. ಕುಟುಂಬಸ್ಥರು ಅಥವಾ ಸ್ನೇಹಿತರನ್ನೂ ಅವರು ಸಂಪರ್ಕಿಸಿಲ್ಲ. ಕೇವಲ 3,000 ರೂಪಾಯಿ ನಗದು ಹಿಡಿದು ಮನೆ ಬಿಟ್ಟಿರುವ ಇವರು, ಆಧಾರ್ ಕಾರ್ಡ್ ಬಳಸಿಕೊಂಡು ‘ಶಕ್ತಿ’ ಯೋಜನೆಯಲ್ಲಿ ಉಚಿತ ಬಸ್ ಪ್ರಯಾಣ ಮಾಡಿರುವುದು ತಿಳಿದುಬಂದಿದೆ. ಮಲೆಮಹದೇಶ್ವರ ಬೆಟ್ಟದವರೆಗೂ ಇವರ ಸುಳಿವು ಸಿಕ್ಕಿತ್ತಾದರೂ, ಪೊಲೀಸರು ಅಲ್ಲಿಗೆ ತಲುಪುವಷ್ಟರಲ್ಲಿ ಇಬ್ಬರು ಅಲ್ಲಿಂದ ಜಾಗ ಖಾಲಿ ಮಾಡಿದ್ದರು.
ಎಲ್ಲಿದ್ದಾರೆ ವಿದ್ಯಾರ್ಥಿನಿಯರು?
ಕಳೆದ ಜನವರಿ 31 ರಂದು ದ್ವಿತೀಯ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿ ತನಿಷ್ಕಾ, ಪ್ರಥಮ ಪಿಯುಸಿ ಓದುತ್ತಿದ್ದ ತೇಜಸ್ವಿನಿ ಇಬ್ಬರು ನಾಪತ್ತೆಯಾಗಿದ್ದಾರೆ. ಕೈಯಲ್ಲಿ ಕೇವಲ ಮೂರು ಸಾವಿರ ರೂಪಾಯಿ ಇಟ್ಟುಕೊಂಡು ಇಬ್ಬರು ಮನೆ ಬಿಟ್ಟು ಬಂದಿದ್ದಾರೆ. ಅಲ್ಲದೆ ಇಬ್ಬರು ವಿದ್ಯಾರ್ಥಿನಿಯರು ಫೋನ್ ಮತ್ತು ಎಟಿಎಂ ಕಾರ್ಡ್‌ಗಳನ್ನು ಬಳಸುತ್ತಿಲ್ಲ, ಇದಷ್ಟೇ ಅಲ್ಲದೆ ಯಾರನ್ನೂ ಕೂಡ ಸಂಪರ್ಕ ಮಾಡಿಲ್ಲ ಎಂಬ ಮಾಹಿತಿ ಲಭ್ಯವಾಗಿದ್ದು, ಆಧಾರ್ ಕಾರ್ಡ್ ಬಳಸಿ ಫ್ರೀ ಬಸ್‌ನಲ್ಲಿ ಪ್ರಯಾಣ ಮಾಡಿದ್ದಾರೆ ಎಂಬ ಸುಳಿವು ಸಿಕ್ಕಿದೆ.
ಗಂಭೀರವಾಗಿ ಪರಿಗಣಿಸಿದ ಪೊಲೀಸರು:
ವಿದ್ಯಾರಣ್ಯಪುರದ ಇಬ್ಬರು ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರ ಪತ್ತೆಗೆ ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ. ವಿಶೇಷ ತಂಡಗಳನ್ನು ರಚಿಸಿ ಪೊಲೀಸರು ಹುಡುಕಾಡುತ್ತಿದ್ದಾರೆ. ಈಗಾಗಲೇ ನಾಲ್ಕು ರಾಜ್ಯಗಳಲ್ಲಿ ಹುಡುಕಾಟ ನಡೆಸಿದ ಪೊಲೀಸರು, ತನಿಷ್ಕಾ ಹಾಗೂ ತೇಜಸ್ವಿನಿ ಬಗ್ಗೆ ಹೊರ ರಾಜ್ಯದ ಪೊಲೀಸರಿಗೂ ಮಾಹಿತಿ ರವಾನಿಸಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರ ಬಗ್ಗೆ ಮಾಹಿತಿ ಹಂಚಿಕೆ ಮಾಡಲಾಗಿದ್ದು, ಸ್ಥಳೀಯ ಪೊಲೀಸರ ನೆರವಿನಿಂದ ನಾಲ್ಕು ರಾಜ್ಯಗಳಲ್ಲಿ ಪತ್ತೆ ಕಾರ್ಯ ನಡೆಸುತ್ತಿದ್ದಾರೆ.
ಇದೀಗ ಪಶ್ಚಿಮ ಬಂಗಾಳ ಮತ್ತು ದೆಹಲಿಯಲ್ಲಿ ಹುಡುಕಾಟ ನಡೆಸಲು ರಾಜ್ಯ ಪೊಲೀಸರು ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಿ ಹುಡುಕಾಟ ನಡೆಸಲು ಸಿದ್ಧತೆ ನಡೆಸಿದ್ದಾರೆ. ಶೀಘ್ರದಲ್ಲೇ ಸ್ಪೆಷಲ್ ಟೀಮ್ ಒಂದು ಎರಡು ರಾಜ್ಯಗಳಿಗೆ ತೆರಳಲಿದೆ. ಧಾರ್ಮಿಕ ಕ್ಷೇತ್ರಗಳು, ದೇವಸ್ಥಾನ, ಆಧ್ಯಾತ್ಮಿಕ ಕೇಂದ್ರಗಳು, ಪ್ರವಾಸಿ ಕೇಂದ್ರಗಳಲ್ಲಿ ನಿಗಾ ಇಡಲು ಮುಂದಾಗಿದ್ದಾರೆ.
ಹೇಬಿಯಸ್ ಕಾರ್ಪಸ್:
ತನಿಷ್ಕಾ ಮತ್ತು ತೇಜಸ್ವಿನಿ ಸುಳಿವು ಸಿಗದ ಹಿನ್ನೆಲೆ ಪೊಲೀಸರು ಕಂಗಲಾಗಿದ್ದಾರೆ. ಎಷ್ಟೇ ಹುಡುಕಿದರೂ ಇಬ್ಬರುಟಠಟ ಅರಸ ಆ ದಡದ ಸಿಗದ ಹಿನ್ನೆಲೆ ಪೋಷಕರು ವಿದ್ಯಾರ್ಥಿನಿಯರ ಪತ್ತೆಗೆ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಸಲ್ಲಿಸಿದ್ದರು. ವಿದ್ಯಾರ್ಥಿನಿಯರ ಪತ್ತೆಗೆ ಕೈಗೊಂಡ ಕ್ರಮಗಳ ಬಗ್ಗೆ ಕೋರ್ಟ್‌ಗೆ ಪೊಲೀಸರು ಮಾಹಿತಿ ನೀಡಿದ್ದು, ವಿದ್ಯಾರಣ್ಯಪುರ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ. ತಾಂತ್ರಿಕವಾಗಿ ಹಾಗೂ ಹೊರ ರಾಜ್ಯದ ಪೊಲೀಸರ ನೆರವಿನಿಂದ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಸೀರೆ ಪ್ರಿಯರೇ ಹುಷಾರ್! ಈ ತಪ್ಪು ಮಾಡಿದ್ರೆ ಸ್ಯಾರಿ ಕ್ಯಾನ್ಸರ್ ಬರಬಹುದು