Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಈ ಗ್ರಾಮದಲ್ಲಿ ಸತ್ತವರ ಶವಗಳನ್ನು ಹೂಳುವುದಿಲ್ಲ, ಸುಡುವುದೂ ಇಲ್ಲ
ಪ್ರಮುಖವಿದೇಶ

ಈ ಗ್ರಾಮದಲ್ಲಿ ಸತ್ತವರ ಶವಗಳನ್ನು ಹೂಳುವುದಿಲ್ಲ, ಸುಡುವುದೂ ಇಲ್ಲ

Share
2 Min Read
SHARE

 

newsics.com

ಈ ಗ್ರಾಮದಲ್ಲಿ ಸತ್ತವರ ಶವಗಳನ್ನು ಹೂಳುವುದಿಲ್ಲ, ಸುಡುವುದೂ ಇಲ್ಲ, ಪ್ರಾಣಿಗಳಿಗೂ ಸಹ ನೀಡಲ್ಲ. ಜಗತ್ತಿನಲ್ಲಿ ಬೇರೆಲ್ಲಿಯೂ ಇಂತಹ ಅಂತ್ಯಕ್ರಿಯೆ ಪದ್ಧತಿ ಇಲ್ಲ.

ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ, ಟ್ರುನ್ಯಾನ್ ಎಂಬ ಗ್ರಾಮವಿದೆ. ಇಲ್ಲಿ ವಾಸಿಸುವ ಜನರನ್ನು ‘ಬಾಲಿ ಅಗಾ’ ಎಂದು ಕರೆಯಲಾಗುತ್ತದೆ.

ಬೃಹತ್ ಪರ್ವತಗಳ ಮಧ್ಯೆ ಇರುವ ಸಣ್ಣ ಗ್ರಾಮದಲ್ಲಿ ವಾಸಿಸುವ ಇವರು ಸಂಪ್ರದಾಯ ಆಚರಣೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಅವರಿಗೆ ತಮ್ಮದೇ ಆದ ನಿಯಮಗಳು ಮತ್ತು ನಿಬಂಧನೆಗಳಿವೆ. ಇದರಲ್ಲಿ ಅತ್ಯಂತ ಗಮನಾರ್ಹವಾಗಿರುವುದು ಈ ಜನರ ಅಂತ್ಯಕ್ರಿಯೆ ಪದ್ಧತಿ.

ಪಾರ್ಸಿ ಸಮುದಾಯದಲ್ಲಿ ಮೃತ ದೇಹವನ್ನು ರಣಹದ್ದುಗಳಿಗೆ ತಿನ್ನಲು ಬಿಡಲಾಗುತ್ತದೆ. ಆದರೆ, ಬಾಲಿ ಅಗಾ ಸಮುದಾಯವು ಸತ್ತವರ ಮೃತದೇಹವನ್ನು ಕಾಡಿನಲ್ಲಿ ಕೊಳೆಯಲು ಬಿಡುತ್ತಾರೆ. ಅಷ್ಟೇ ಅಲ್ಲದೆ ಮೃತದೇಹವನ್ನು ರಣಹದ್ದುಗಳು, ಕಾಗೆಗಳು ಇತರ ಪ್ರಾಣಿಪಕ್ಷಿಗಳು ತಿನ್ನದ ಹಾಗೆ ನೋಡಿಕೊಳ್ಳುತ್ತಾರೆ.

ಬಿದಿರಿನ ಪಂಜರಗಳಲ್ಲಿ ದೇಹವನ್ನು ರಕ್ಷಿಸಿ ಕೊಳೆಯಲು ಬಿಡುತ್ತಾರೆ. ಏಕೆಂದರೆ ಬೇರೆ ಜೀವಿಯನ್ನು ತಿನ್ನುವುದು ಸತ್ತವರಿಗೆ ಅವಮಾನ ಮಾಡಿದಂತೆ ಆಗುತ್ತದೆ ಎಂದು ಇಲ್ಲಿನ ಜನರು ನಂಬುತ್ತಾರೆ.

ವರದಿಯ ಪ್ರಕಾರ, ದೇಹದಿಂದ ಮಾಂಸ ಸಂಪೂರ್ಣವಾಗಿ ಕೊಳೆತು ಹೋದ ನಂತರ, ಬಾಲಿ ಅಗಾ ಸಮುದಾಯ ಜನರು ತಲೆಬುರುಡೆ ಮತ್ತು ಇತರ ಮೂಳೆಗಳನ್ನು ಸಂಗ್ರಹಿಸಿ ಒಂದು ಕಡೆ ಜೋಡಿಸುತ್ತಾರೆ.

ಆತ್ಮಹತ್ಯೆ ಮಾಡಿಕೊಂಡವರಿಗೆ ಅವಕಾಶವಿಲ್ಲ

ಟ್ರುನಿಯನ್ ಗ್ರಾಮದ ಬಳಿ ಈ ರೀತಿಯ ಒಟ್ಟು ಮೂರು ಸ್ಮಶಾನಗಳಿವೆ, ಆದರೆ ಒಂದು ಮಾತ್ರ ಪ್ರವಾಸಿಗರಿಗೆ ಮುಕ್ತವಾಗಿದೆ. ಸಹಜವಾಗಿ ಸಾವನ್ನಪ್ಪಿದವರ ಶವಗಳನ್ನು ಮಾತ್ರ ಇಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತದೆ. ಆದರೆ, ಅಪಘಾತ ಅಥವಾ ಆತ್ಮಹತ್ಯೆಯಿಂದ ಸಾವನ್ನಪ್ಪಿದವರನ್ನು ಸಮಾಧಿ ಮಾಡಲು ಅರ್ಹರೆಂದು ಪರಿಗಣಿಸಲಾಗುವುದಿಲ್ಲ. ಅವರನ್ನು ಬೇರೆಡೆ ಹೂಳಲಾಗುತ್ತದೆ. ಇದಲ್ಲದೆ, ಇಲ್ಲಿ ಮಕ್ಕಳ ಭೇಟಿಗೆ ಅವಕಾಶವಿಲ್ಲ. ವಿವಾಹಿತರ ಶವಗಳನ್ನು ಮಾತ್ರ ಇಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

ಇನ್ನು, ಸ್ಮಶಾನವು ಶವಗಳಿಂದ ತುಂಬಿದಾಗ, ಹಳೆಯ ಶವದ ಮೂಳೆಗಳನ್ನು ತೆಗೆದು, ನೆಲದ ಮೇಲೆ ಹರಡಲಾಗುತ್ತದೆ. ಶವಗಳನ್ನು ಶುಭ ದಿನಗಳಲ್ಲಿ ಮಾತ್ರ ಇಲ್ಲಿ ಹೂಳಲಾಗುತ್ತದೆ. ಕುಟುಂಬಗಳು ಅಂತ್ಯಕ್ರಿಯೆಗಾಗಿ ಹಣವನ್ನು ಸಂಗ್ರಹಿಸಬೇಕು ಎಂಬ ನಿಯಮ ಕೂಡ ಇದೆ. ಇದಲ್ಲದೆ, ಸ್ಥಳಾವಕಾಶದ ಕೊರತೆಯಿಂದಾಗಿ ಕೆಲವು ಶವಗಳನ್ನು ದಿನ ಅಥವಾ ವಾರಗಟ್ಟಲೆ ಮನೆಯಲ್ಲಿಯೇ ಇಡಲಾಗುತ್ತದೆ. ಕೊಳೆಯುವಿಕೆಯನ್ನು ತಡೆಗಟ್ಟಲು, ಅವುಗಳನ್ನು ಫಾರ್ಮಾಲ್ಡಿಹೈಡ್‌ನಲ್ಲಿ ಸುತ್ತಿಡಲಾಗುತ್ತದೆ.

ಸ್ಥಳೀಯರ ಪ್ರಕಾರ, ಬಾಲಿ ಅಗಾ ಜನರು ಜ್ವಾಲಾಮುಖಿಯನ್ನು ಕೆರಳಿಸುವುದನ್ನು ತಪ್ಪಿಸಲು ಮೃತರ ದೇಹಗಳನ್ನು ಈ ರೀತಿ ಅಂತ್ಯಕ್ರಿಯೆ ಮಾಡುತ್ತಾರಂತೆ. ಈ ಜ್ವಾಲಾಮುಖಿಯನ್ನು ದೇವರು ಎಂದು ಪರಿಗಣಿಸುವ ಇವರು ಸಮಾಧಾನಪಡಿಸಲು, ಸ್ಮಶಾನದಲ್ಲಿ ಹನ್ನೊಂದು ಪಗೋಡಗಳನ್ನು ನಿರ್ಮಿಸಿದ್ದಾರೆ. ಗ್ರಾಮದಲ್ಲಿ ಒಂದು ದೇವಾಲಯವನ್ನು ಸಹ ಕಟ್ಟಿಸಿದ್ದಾರೆ.

ಮೂವರು ಮಕ್ಕಳ ಜೊತೆ ಕೋರ್ಟ್‌ ಹಾಲ್‌ನಲ್ಲೇ ಕಣ್ಣೀರಿಟ್ಟ ಶಾಸಕ ವಿನಯ್‌ ಕುಲಕರ್ಣಿ

 

TAGGED:The bodies of the dead are not buried or cremated in the village.
Share This Article
Facebook Twitter Copy Link Print
Previous Article 75 ದಿನ ಕಳೆದರೂ ಪತ್ತೆಯಾಗದ ಇಬ್ಬರು ವಿದ್ಯಾರ್ಥಿನಿಯರು! ಪೊಲೀಸರೇ ಕಂಗಾಲು
Next Article ಮಂತ್ರಾಲಯ ಬಳಿ ಭೀಕರ ರಸ್ತೆ ಅಪಘಾತ: ಕರ್ನಾಟಕದ 8 ಭಕ್ತರ ಸಾವು

Popular Posts

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

You Might Also Like

ಕರ್ನಾಟಕಪ್ರಮುಖ

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read
ಕರ್ನಾಟಕಪ್ರಮುಖ

ಧರ್ಮದ ಕಾರಣಕ್ಕೆ ಜಾಬ್ ರಿಜೆಕ್ಟ್: ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆ!

1 Min Read
ಕರ್ನಾಟಕಪ್ರಮುಖಮನರಂಜನೆ

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read
ಕರ್ನಾಟಕಪ್ರಮುಖ

ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?