newsics.com
ಬಹುಭಾಷಾ ನಟಿ ಇಲಿಯಾನಾ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಫಿಟ್ನೆಸ್ ಹಾಗೂ ಬಳುಕುವ ಬಳ್ಳಿಯಂತಹ ನಡುವಿಗೆ ಖ್ಯಾತರಾದವರು. ತೆಲುಗಿನಲ್ಲಿ ಮಹೇಶ್ ಬಾಬು, ಅಲ್ಲು ಅರ್ಜುನ್, ಪ್ರಭಾಸ್, ಎನ್‌ಟಿಆರ್, ಪವನ್ ಕಲ್ಯಾಣ್, ರಾಮ್, ರವಿತೇಜ, ತರುಣ್ ಅವರಂತಹ ಎಲ್ಲಾ ಪ್ರಮುಖ ನಟರ ಜೊತೆ ಈ ಸುಂದರಿ ನಟಿಸಿದ್ದರು. ಆದರೆ ಇಂತಹ ಇಲಿಯಾನಾ
ನಂತರ ಬಹಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದ , ಸ್ವಲ್ಪ ಸಮಯ ಬ್ಯಾನ್ ಕೂಡ ಎದುರಿಸಿದ್ದರು. ಚಿತ್ರರಂಗ ಇಲಿಯಾನಾ ಅವರನ್ನು ಬ್ಯಾನ್ ಮಾಡಲು ಕಾರಣ ಏನೆಂದು ನಿಮಗೆ ಗೊತ್ತೇ? ಒಬ್ಬ ನಿರ್ಮಾಪಕನಿಗೆ ಮೋಸ ಮಾಡಿದ ಆರೋಪದ ಮೇಲೆ, ಅವರು ಸಿನಿಮಾ ಮಾಡಬಾರದೆಂದು ನಿಷೇಧ ಹೇರಲಾಗಿತ್ತು. ಈ ವಿಷಯವನ್ನು ನಿರ್ಮಾಪಕರ ಮಂಡಳಿಯ ಮಾಜಿ ಅಧ್ಯಕ್ಷರೊಬ್ಬರು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು.
ಇಲಿಯಾನಾ ತಮಿಳು ನಿರ್ಮಾಪಕರಿಗೆ ಮೋಸ ಮಾಡಿದ್ದರು. ಸಿನಿಮಾ ಮಾಡುವುದಾಗಿ ಹೇಳಿ ಅವರಿಂದ ಸುಮಾರು 40 ಲಕ್ಷ ರೂಪಾಯಿ ಹಣ ಪಡೆದಿದ್ದರು. ಆದರೆ ಡೇಟ್ಸ್ ಕೊಡಲಿಲ್ಲ, ಹಣವನ್ನೂ ವಾಪಸ್ ನೀಡಲಿಲ್ಲ. ಇದರಿಂದ ಆ ನಿರ್ಮಾಪಕರು ಚೇಂಬರ್‌ನಲ್ಲಿ ದೂರು ದಾಖಲಿಸಿದರು. ನಾವು ಆಕೆಯನ್ನು ಕರೆಸಿ ಮಾತನಾಡಿದೆವು. ಆಗ ಆಕೆ, ‘ನಾನು ಡೇಟ್ಸ್ ಕೊಟ್ಟಿದ್ದೆ, ಆದರೆ ನಿರ್ಮಾಪಕರು ಬಳಸಿಕೊಳ್ಳಲಿಲ್ಲ’ ಎಂದು ವಾದಿಸಿದರು.
ಡೇಟ್ಸ್ ಕೊಡುವುದು ಮಾತ್ರವಲ್ಲ, ಶೂಟಿಂಗ್‌ಗೆ ಬಂದು ಒಂದು ದಿನ ಮೇಕಪ್ ಹಾಕಿಕೊಂಡಿದ್ದರೂ ಆ 40 ಲಕ್ಷ ಕೊಡಬೇಕಾಗಿರಲಿಲ್ಲ. ಆದರೆ ಶೂಟಿಂಗ್‌ಗೇ ಬಾರದೆ, ‘ನಾನು ಡೇಟ್ಸ್ ಕೊಟ್ಟೆ, ನಿರ್ಮಾಪಕ ಬಳಸಿಕೊಳ್ಳಲಿಲ್ಲ, ಅಡ್ವಾನ್ಸ್ ವಾಪಸ್ ಕೊಡಲ್ಲ’ ಎಂದರೆ ಹೇಗೆ? ಎಂದಿದ್ದರು.
ಇಲಿಯಾನಾ ಶೂಟಿಂಗ್‌ಗೆ ಬಂದಿದ್ದಾರಾ ಇಲ್ಲವಾ ಎಂದು ನಾವು ಪರಿಶೀಲಿಸಿದೆವು. ಅವರು ಕೊಟ್ಟ ಡೇಟ್ಸ್‌ನಲ್ಲಿ ಒಮ್ಮೆಯೂ ಶೂಟಿಂಗ್‌ಗೆ ಬಂದಿರಲಿಲ್ಲ. ಬದಲಾಗಿ, ಬೇರೆ ಸಿನಿಮಾದಲ್ಲಿ ಕೆಲಸ ಮಾಡಿದ್ದರು. ಅದಕ್ಕಾಗಿಯೇ, ಅವರು ಖಂಡಿತ 40 ಲಕ್ಷ ಕಟ್ಟಲೇಬೇಕು ಎಂದು ನಾವು ಒತ್ತಾಯಿಸಿದೆವು. ಕಟ್ಟದಿದ್ದರೆ ಬ್ಯಾನ್ ಮಾಡುತ್ತೇವೆ ಎಂದು ಎಚ್ಚರಿಸಿದೆವು.
ಬ್ಯಾನ್ ಆದ ಮೇಲೂ ಅವರು ಇನ್ನೊಂದು ಸಿನಿಮಾ ಮಾಡಲು ಹೋದರು. ಆದರೆ ನಾವು ಆ ಸಿನಿಮಾ ನಿರ್ಮಾಪಕರನ್ನು ಭೇಟಿಯಾಗಿ, ‘ನೀವು ಆ 40 ಲಕ್ಷ ಕಟ್ಟಿ ಆಕೆಯನ್ನು ಸಿನಿಮಾಗೆ ತೆಗೆದುಕೊಳ್ಳಿ, ಇಲ್ಲವೇ ಅವರಿಂದಲೇ ಕಟ್ಟಿಸಿ. ಸದ್ಯಕ್ಕೆ ಈ ಸಿನಿಮಾದಲ್ಲಿ ಅವರು ನಟಿಸುವಂತಿಲ್ಲ, ಚಿತ್ರರಂಗ ಇಲಿಯಾನಾ ಮೇಲೆ ಬ್ಯಾನ್ ಹಾಕಿದೆ’ ಎಂದು ತಿಳಿಸಿದೆವು’ಎಂದಿದ್ದರು.