newsics.com
ಉಗಾಂಡಾ: ಇರಾನ್, ಅಮೆರಿಕ ಹಾಗೂ ಇಸ್ರೇಲ್ ನಡುವೆ ಸಂಘರ್ಷ ಮತ್ತು ಶಾಂತಿ ಒಪ್ಪಂದದ ಮಾತುಕತೆ ನಡೆಯುತ್ತಿದೆ. ಇದರ ನಡುವೆ ಉಗಾಂಡಾದ ಸೇನಾ ಮುಖ್ಯಸ್ಥ ಮುಹೂಜಿ ಕೈನೆರುಗಾಬಾ ಟರ್ಕಿ ದೇಶಕ್ಕೆ ವಿಚಿತ್ರವಾದ ವಾರ್ನಿಂಗ್ ನೀಡಿದ್ದಾನೆ.
ಉಗಾಂಡಾದ ಅಧ್ಯಕ್ಷ ಯೊವೆರಿ ಮುಸೆವೇನಿ ಅವರ ಪುತ್ರ ಹಾಗೂ ಉಗಾಂಡಾದ ಮಿಲಿಟರಿ ಮುಖ್ಯಸ್ಥನಾಗಿರುವ ಮುಹೂಜಿ ಕೈನೆರುಗಾಬಾ ಟರ್ಕಿ ದೇಶಕ್ಕೆ, ನಮಗೆ 30 ದಿನದ ಒಳಗಾಗಿ ಒಂದು ಬಿಲಿಯನ್ ಡಾಲರ್ ಜೊತೆಗೆ ನಿಮ್ಮ ದೇಶದ ಸುಂದರ ಯುವತಿಯರನ್ನು ನನ್ನ ಬಳಿ ಕಳುಹಿಸಿ, ಅವರನ್ನು ನನ್ನ ಹೆಂಡತಿಯರನ್ನಾಗಿ ಮಾಡಿಕೊಳ್ಳುತ್ತೆನೆ.
ಇದನ್ನು ನೀವು ಒಪ್ಪದೆ ಹೋದರೆ ನಮ್ಮ ಮತ್ತು ನಿಮ್ಮ ದೇಶದ ರಾಜತಾಂತ್ರಿಕ ಸಂಬಂಧ ಮುರಿದು ಬೀಳಲಿದೆ ಎಂದು ಎಚ್ಚರಿಕೆ ನೀಡಿದ್ದಾನೆ. ನಮ್ಮೊಂದಿಗೆ ಹೊಂದಿರುವ ಮೂಲಸೌಕರ್ಯ ಹಾಗೂ ಬಂದರು ಒಪ್ಪಂದದಿಂದ ಟರ್ಕಿ ಅಪಾರವಾದ ಲಾಭಗಳಿಸುತ್ತಿದೆ ಹೀಗಾಗಿ ನಾನು ಒಂದು ಬಿಲಿಯನ್ ಡಾಲರ್ನ್ನು ಕೇಳುತ್ತಿದ್ದೆನೆ ಎಂದು ಅವರು ಟ್ವಿಟ್ ಮಾಡಿದ್ದಾರೆ.
ಹಾಗೆಯೇ ಹಣದ ಜೊತೆಗೆ ಆ ದೇಶದ ಅತ್ಯಂತ ಸುಂದರ ಯುವತಿಯನ್ನು ನಾನು ನನ್ನ ಹೆಂಡತಿಯಾಗಿ ಸ್ವೀಕರಿಸ ಬಯಸಿದ್ದೆನೆ. ನನ್ನ ಈ ಷರತ್ತನ್ನು ಟರ್ಕಿ ಒಪ್ಪಿಕೊಳ್ಳದೆ ಹೋದರೆ, ನಮ್ಮ-ಅವರ ರಾಜತಾಂತ್ರಿಕ ಒಪ್ಪಂದ ಕೊನೆಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
https://www.newsics.com/2026/04/13/six-killed-in-collision-between-bus-and-truck/