Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಬಾಂಬ್‌ ಎಂದುಕೊಂಡು ಎದ್ನೋ ಬಿದ್ನೋ ಎಂದು ಓಡಿ ಹೋದ ವಿಜಯ್; ವೈರಲ್ ವಿಡಿಯೋ ನೋಡಿ
ಪ್ರಮುಖಮನರಂಜನೆವೈರಲ್

ಬಾಂಬ್‌ ಎಂದುಕೊಂಡು ಎದ್ನೋ ಬಿದ್ನೋ ಎಂದು ಓಡಿ ಹೋದ ವಿಜಯ್; ವೈರಲ್ ವಿಡಿಯೋ ನೋಡಿ

Share
2 Min Read
SHARE

ಎಲ್ಲರಿಗೆ ಗೊತ್ತಿರುವಂತೆ ವಿಜಯ್ ಈಗ ಕೇವಲ ಆಕ್ಟರ್ ಮಾತ್ರ ಅಲ್ಲ. ಪೊಲಿಟಿಕಲ್ ಲೀಡರ್ ಕೂಡ ಹೌದು. ಟಿವಿಕೆ ಪಕ್ಷವನ್ನು ಸ್ಥಾಪಿಸಿ ಕಣಕ್ಕಿಳಿದಿರುವ ವಿಜಯ್ ಮೊದಲ ಪ್ರಯತ್ನದಲ್ಲಿಯೇ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಉತ್ಸಾಹದಿಂದ ಪ್ರಚಾರವನ್ನು ಕೂಡ ಮಾಡುತ್ತಿದ್ದಾರೆ.

ಹೀಗೆ ಪ್ರಚಾರ ಮಾಡುತ್ತಾ ಮಾಡುತ್ತಾ ವಿಜಯ್ ಕನ್ಯಾಕುಮಾರಿ ಹೈವೇ ತಲುಪಿದ್ದಾರೆ. ಇನ್ನೂ ನಿಮಗೆ ಗೊತ್ತು. ರಾಜಕಾರಣದಲ್ಲಿ ಜನ ಮನ ಗೆಲ್ಲಲು, ಗಮನ ಸೆಳೆಯಲು ನಾನಾ ರೀತಿಯ ಕಸರತ್ತು ಮಾಡಬೇಕು. ಹೀಗಾಗಿಯೇ ವಿಜಯ್ ಕೂಡ ಹೈವೆಯಲ್ಲಿ ಸೈಕಲ್ ಓಡಿಸಿದ್ದಾರೆ.

ಇನ್ನು ವಿಜಯ್ ತಮಿಳುನಾಡಿನ ಚಿತ್ರರಂಗದ ದಳಪತಿ. ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಸ್ಟಾರ್. ಇಂತಹ ಸ್ಟಾರ್ ಹೈವೆಯಲ್ಲಿ ಕಣ್ಣೆದುರು ಸೈಕಲ್ ಸವಾರಿ ಮಾಡುತ್ತಿದ್ದಾಗ ಅಭಿಮಾನದ ಜಾತ್ರೆ ನಡೆಯದಿರಲು ಹೇಗೆ ಸಾಧ್ಯ..? ಅಭಿಮಾನದ ಹೂಮಳೆ ಬೀಳದಿರಲು ಹೇಗೆ ಸಾಧ್ಯ..?

ಹೀಗಾಗಿಯೇ ಹೈವೆಯಲ್ಲಿ ಕಣ್ಣು ಹಾಯಿಸಿದ ಕಡೆಯೆಲ್ಲಾ ಜನ ಕಂಡು ಬಂದರು. ಸೈಕಲ್ ರೈಡ್ ಮಾಡುತ್ತಿದ್ದ ವಿಜಯ್ ಕಡೆ ನುಗ್ಗುವ ಪ್ರಯತ್ನವನ್ನು ಕೂಡ ಮಾಡುತ್ತಿದ್ದರು. ವಿಜಯ್ ಅಭಿಮಾನದ ಈ ಸುಳಿಯಿಂದ ತಪ್ಪಿಸಿಕೊಳ್ಳುತ್ತಾ, ಕೈ ಬೀಸುತ್ತಾ, ಸೈಕಲ್ ಸವಾರಿಯನ್ನು ಮಾಡುತ್ತಿದ್ದರು.

ಇದೇ ಸಮಯದಲ್ಲಿ ಅಭಿಮಾನಿಯೊಬ್ಬರು ಕೈಯಲ್ಲಿ ಹೂವಿನ ಪಕ್ಕಳೆ ಹಿಡಿದುಕೊಂಡು ವಿಜಯ್ ಎದುರು ಓಡಿ ಬಂದಿದ್ದಾರೆ. ವಿಜಯ್ ಕೂಗಳತೆಯ ದೂರದಲ್ಲಿದ್ದಾಗ ತಮ್ಮ ಕೈಯಲ್ಲಿದ್ದ ಹೂವಿನ ಪಕ್ಕಳೆ ಎಸೆದಿದ್ದಾರೆ. ಇದನ್ನು ಕಂಡು ವಿಜಯ್ ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಅಭಿಮಾನಿ ಎಸೆದಿದ್ದು ಬಾಂಬ್ ಎಂದು ವಿಜಯ್ ಅಂದುಕೊಂಡರಾ ಗೊತ್ತಿಲ್ಲ. ಆದರೆ.. ವಿಜಯ್ ಮಾತ್ರ ಸೈಕಲ್‌ನ ಅಲ್ಲಿಯೇ ಬಿಟ್ಟು ಎದ್ನೋ ಬಿದ್ನೋ ಅಂತಾ ಓಡಿ ಹೋಗಿದ್ದಾರೆ. ಹಿಂದೆ ತಮ್ಮನ್ನು ಹಿಂಬಾಲಿಸುತ್ತಿದ್ದ ವ್ಯಾನ್‌ ಒಳಗೆ ಹೋಗಿದ್ದಾರೆ.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಯದ್ವಾ ತದ್ವಾ ವೈರಲ್ ಆಗಿದೆ. ಹಲವರು ವಿಜಯ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಜನರ ನಡುವೆ ಬೆರೆಯಲು ಹಿಂದೇಟು ಹಾಕುವ ಸ್ಟಾರ್ ಗಳು ಜನನಾಯಕನಾಗಲು ಹೇಗೆ ಸಾಧ್ಯ..? ಎಂಬ ಪ್ರಶ್ನೆಯನ್ನು ಹಲವರು ಮಾಡುತ್ತಿದ್ದು ವಿಜಯ್ ಅವರನ್ನು ಆಡಿಕೊಳ್ಳುತ್ತಿದ್ಧಾರೆ.

ಇನ್ನುಳಿದಂತೆ ರಾಜಕೀಯದ ಅಖಾಡಕ್ಕೆ ಧುಮುಕಿರುವ ವಿಜಯ್ ಅವರ ವೈಯಕ್ತಿಕ ಬದುಕು ಸದ್ಯ ಚರ್ಚೆಯಲ್ಲಿದೆ. ಸಂಗೀತಾ ಅವರ ಜೊತೆಗಿನ 27 ವರ್ಷಗಳ ದಾಂಪತ್ಯ ಜೀವನ ಮುರಿದು ಬಿದ್ದಿದೆ. ಈ ವಿಚಾರದಿಂದ ವಿಜಯ್‌ಗೆ ಚುನಾವಣೆಯಲ್ಲಿ ಹಿನ್ನೆಡೆಯಾಗುತ್ತಾ ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರೂ ಈ ವಿಚ್ಚೇದನ ಪ್ರಕರಣದ ವಿಚಾರಣೆ ಏಪ್ರಿಲ್ 20ರಂದು ನ್ಯಾಯಾಲಯದಲ್ಲಿ ನಡೆಯಲಿದೆ.

ಮತ್ತೊಂದು ಕಡೆ ವಿಜಯ್ ಅಭಿನಯದ ಮಹತ್ವಕಾಂಕ್ಷೆಯ ಚಿತ್ರ ”ಜನನಾಯಗನ್” ಬಿಡುಗಡೆಗೆ ಮುನ್ನವೇ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಈ ದುಷ್ಕ್ರತ್ಯದ ಹಿಂದೆ ಯಾರ ಕೈವಾಡ ಇದೆ ಎನ್ನುವ ವಿಚಾರ ಇನ್ನೂ ಗೊತ್ತಾಗದಿದ್ದರು ಕೂಡ ಈ ವಿಚಾರದಲ್ಲಿ ಚಿತ್ರರಂಗ ಒಗ್ಗಟ್ಟಾಗಿದೆ. ಧ್ವನಿ ಎತ್ತಿದೆ. ವಿಜಯ್ ಮತ್ತು ನಿರ್ಮಾಣ ಸಂಸ್ಥೆ ಕೆವಿಎನ್‌ಗೆ ಧೈರ್ಯವನ್ನು ಕೂಡ ತುಂಬಿದೆ.

https://x.com/CinemaPursuit/status/2043331636998394099?ref_src=twsrc%5Etfw%7Ctwcamp%5Etweetembed%7Ctwterm%5E2043331636998394099%7Ctwgr%5E9f38147492512a2cba822bb6163af629235c32c0%7Ctwcon%5Es1_c10&ref_url=https%3A%2F%2Fapi-news.dailyhunt.in%2F

 

ಗರ್ಲ್‌ಫ್ರೆಂಡ್‌ಗಾಗಿ ಪುಟ್ಟ ಮಗನನ್ನು 2 ವರ್ಷ ವ್ಯಾನ್ ಒಳಗೆ ಕೂಡಿಹಾಕಿದ್ದ ಪಾಪಿ ತಂದೆ!

TAGGED:Vijay runs away saying "Do or die"; watch the viral video
Share This Article
Facebook Twitter Copy Link Print
Previous Article ಹೋರ್ಮಝ್ ಜಲಸಂಧಿ ಮೇಲೆ ಹಿಡಿತಕ್ಕೆ ಮುಂದಾದ ಅಮೆರಿಕಕ್ಕೆ ಚೀನಾ ತಿರುಗೇಟು
Next Article ನಿದ್ರೆಯಲ್ಲೂ ಮೊಬೈಲ್ ಗುಂಗು: ವೈರಲ್ ವಿಡಿಯೋ ನೋಡಿ

Popular Posts

Gold-Silver Price Today ಚಿನ್ನ ಬೆಳ್ಳಿ ದರದಲ್ಲಿ ಇಳಿಕೆ : ಇಂದಿನ ಬೆಲೆ ಎಷ್ಟು?

1 Min Read

Panchak ನಾಳೆಯಿಂದ 5 ದಿನ ಈ ಕೆಲಸ ಮಾಡಬೇಡಿ, ಪಂಚಕದಿಂದ ಸಮಸ್ಯೆ ಫಿಕ್ಸ್

2 Min Read

KH Muniyappa ರಾಮಲಿಂಗಾರೆಡ್ಡಿ ಬೆನ್ನಲ್ಲೆ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಕೆ.ಎಚ್ ಮುನಿಯಪ್ಪ ಮುಂದು

1 Min Read

Bollywood ಕ್ಯಾಮೆರಾ ಕಂಡ ತಕ್ಷಣ ಗರ್ಲ್​ಫ್ರೆಂಡ್​ನ ತಳ್ಳಿದ ಸೈಫ್ ಮಗ : ವಿಡಿಯೋ ವೈರಲ್

1 Min Read

You Might Also Like

ದೇಶಪ್ರಮುಖ

RBI Repo Rate ಸಾಲಗಾರರಿಗೆ ಸಿಹಿಸುದ್ದಿ : RBI ರೆಪೋ ದರ ಯಥಾಸ್ಥಿತಿ (5.25%) ಮುಂದುವರಿಕೆ

1 Min Read
ದೇಶಪ್ರಮುಖ

Annamalai resigns ಬಿಜೆಪಿಗೆ ಕೆ.ಅಣ್ಣಾಮಲೈ ನೀಡಿದ್ದ ರಾಜೀನಾಮೆ ಅಂಗೀಕರಿಸಿದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್

1 Min Read
ಕರ್ನಾಟಕಪ್ರಮುಖ

ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ರಾಜೀನಾಮೆ

1 Min Read
ದೇಶಪ್ರಮುಖ

ನಿರ್ಮಾಣ ಹಂತದ ಫ್ಲೈಓವರ್ ಮುರಿದುಬಿದ್ದ ದೈತ್ಯ ಕ್ರೇನ್ : ಮೂವರು ಸಾವು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?